ಕಲಬುರಗಿ: ನಗರದ ಕೆಪಿಇ ಶಿಕ್ಷಣ ಸಂಸ್ಥೆಯ ಡಾ. ಅಂಬೇಡ್ಕರ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯ ಕಲಬುರಗಿಯಲ್ಲಿ ಕಾಲೇಜಿನ ಗ್ರಂಥಪಾಲಕರಾದ ಆನಂದರಾಜ ಪಾಟೀಲ ಅವರಿಗೆ ವಯೋನಿವೃತ್ತಿ ಸನ್ಮಾನ ಸಮಾರಂಭ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಗುಲಬರ್ಗಾ ವಿಶ್ವವಿದ್ಯಾಲಯದ ಮುಖ್ಯ ಗ್ರಂಥಪಾಲಕರಾದ ಡಾ.ಸುರೇಶ ಜಂಗೆ ಅವರು ಮಾತನಾಡಿ ಆನಂದರಾಜ ಪಾಟೀಲರು ಕಾಲೇಜಿನ ಗ್ರಂಥಪಾಲಕರಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಸಮ್ಮೇಳನದಲ್ಲಿ ಪಾಲ್ಗೋಂಡ ಏಕೈಕ ವ್ಯಕ್ತಿ ಕಾಲೇಜಿನ ಹೃದಯಭಾಗವಾದ ಗ್ರಂಥಾಲಯದ ಬೆಳವಣಿಗೆಗಾಗಿ ತೊಡಗಿಸಿಕೊಂಡವರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಗ್ರಂಥಪಾಲಕರೊಂದಿಗೆ ಅತ್ಯಂತ ಆತ್ಮಿಯತೆ ಹೊಂದಿದ ಗುಣ ಹೊಂದಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಮುಖ್ಯಅಥಿತಿಯಾದ ಕೆ.ಪಿ.ಇ. ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಡಾ.ಚಂದ್ರಶೇಖರ ಶೀಲವಂತರವರು ಮಾತನಾಡುತ್ತಾ ಆನಂದರಾಜ ಪಾಟೀಲ ಸದಾ ಆನಂದವಾಗಿ ಎಲ್ಲರೊಂದಿಗೆ ನಗುನಗುತ್ತಾ ಬೆರೆಯುತ್ತಾ ಎನ್ನಗಿಂತ ಕಿರಿಯರಿಲ್ಲ ಶಿವಭಕ್ತಿರಿಗಿಂತ ಹಿರಿಯರಿಲ್ಲ ಎಂಬ ವಾಣಿಯಂತೆ ತನ್ನ ಜೀವನದಲ್ಲಿ ಹೃದಯ ವೈಶಾಲ್ಯತೆಯನ್ನು ಹೊಂದಿದ್ದಾರೆ.
ಈ ಕಾರ್ಯಾಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೆ.ಪಿ.ಇ.ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶಾಂತಪ್ಪ ಸೂರನ ಅವರು ಮಾತನಾಡುತ್ತಾ ಇವನಾರವ ಇವನಾರವ ಇವನಮ್ಮವ ಇವನಮ್ಮವ ಎಂಬ ವಚನದಂತೆ ಹಿರಿಯ ಕಿರಿಯ ಎಲ್ಲರನ್ನು ಅಪ್ಪಿಕೊಳ್ಳುವ ಸದ್ಗುಣಹೊಂದಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಆನಂದರಾಜ ಪಾಟೀಲ ಸುಮಾರು 41 ವರ್ಷಗಳ ಕಾಲ ಸೇವೆ ಸಲ್ಲಿಸಿ ಕಾಲೇಜಿನ ಬೆಳವಣಿಗೆಗೆ ಕಾರಣರಾಗಿದ್ದಾರೆ. ಇವರ ವಯೋನಿವೃತ್ತಿ ಜೀವನ ಸಖಕರವಾಗಲಿ ಬುದ್ದ ಬಸವ ಡಾ.ಅಂಬೇಡ್ಕರರು ಇವರನ್ನು ಕರುಣಿಸಲಿ ಎಂದು ಹಾರೈಸಿದರು.
ಕಾಲೇಜಿನ ಪ್ರಾಚಾರ್ಯರಾದ ಪ್ರೊ. ವಿಜಯಕುಮಾರ ಡಿ. ಅವರು ಮಾತನಾಡುತ್ತ ಆನಂದರಾಜರವರ ವ್ಯಕ್ತಿತ್ವ ಮತ್ತು ಆತ್ಮೀಯ ಸಂಬಂಧ ಕುರಿತು ಮಾತನಾಡಿದರು. ಇದೆ ಸಂದರ್ಭದಲ್ಲಿ ವಯೋನಿವೃತ್ತರಾದ ಆನಂದರಾಜ ಪಾಟೀಲ ದಂಪತಿಗಳಿಗೆ ಗೌರವ ಸನ್ಮಾನಿಸಲಾಯಿತು. ಹಾಗೂ ಕಾಲೇಜಿನ ನಿವೃತ್ತ ಪ್ರಾಚಾರ್ಯರಿಗೆ, ಸಿಬ್ಬಂದಿಗಳಿಗೆ ಮತ್ತು ಆನಂದರಾಜ ಪಾಟೀಲರ ಒಡನಾಡಿಗಳಿಗೆ ಸನ್ಮಾನಿಸಲಾಯಿತು.
ಡಾ. ಅಂಬೇಡ್ಕರ ವಿಚಾರ ವೇದಿಕೆಯ ಸಂಯೋಜಕರಾದ ಡಾ. ಗಾಂಧೀಜಿ ಮೋಳಕೆರೆಯವರು ಸ್ವಾಗತ ಮತ್ತು ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಸಮಾರಂಭದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಭುವನೇಶ್ವರಿ. ಚಿಮಕೊಡ, ಪ್ರೊ.ಪಿ.ಡಿ. ಕುಲಕರ್ಣಿ, ಪ್ರೊ.ಪಿ.ಎಂ. ಚೌದರಿ,ಪ್ರೊ.ಎಸ್.ಎಸ್.ಮಾಂತಗೋಳ ಡಾ.ಹರ್ಷವಧರ್ನ ಬಿ , ನರೇಂದ್ರ ಪಾಟೀಲ , ಡಾ.ಸುರೇಶ ಹೊಸಮನಿ, ಡಾ. ರಾಜಕುಮಾರ ಮಾಳಗೆ ಹಾಗೂ ಶಿಕ್ಷಕೇತ್ತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿಗಳಾದ ಡಾ.ವಸಂತ ನಾಶಿ ನಿರೂಪಿಸಿದರು ಪ್ರೋ. ಸಿದ್ಧಪ್ಪ ಎಂ.ಕಾಂತ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…