ಐದುವರೆ ತಾಸಿನ ಮ್ಯಾರಥಾನ್ ಆಪರೇಷನ್: ಲಿವರ್ ಒಳಗೆ ಅತ್ಯಂತ ಸೂಕ್ಷ್ಮ ರಕ್ತನಾಳಗಳು ಇರುತ್ತವೆ. ಒಂದು ರಕ್ತನಾಳಕ್ಕೆ ಹಾನಿಯಾದರೆ ಒಂದು ನಿಮಿಷದಲ್ಲಿ ಎರಡು- ಮೂರು ಲೀಟರ್ ರಕ್ತಸ್ರಾವ ಉಂಟಾಗುತ್ತದೆ. ಇಷ್ಟೊಂದು ಅಪಾಯ ಇರುವ ಈ ಶಸ್ತ್ರಚಿಕಿತ್ಸೆಯನ್ನು ಐದು ತಾಸು ಕೈಗೊಳ್ಳಲಾಗಿದೆ. ಈ ಪ್ರಕ್ರಿಯೆಯಲ್ಲಿ ಕೇವಲ 600 ಮಿಲಿ ಲೀಟರ್ ರಕ್ತಸ್ರಾವ ಆಗುವಂತೆ ಎಚ್ಚರ ವಹಿಸಲಾಗಿದೆ ಎಂದು ಡಾ.ಸಲ್ಮಾನ್ ಪಟೇಲ್ ಹಾಗೂ ಡಾ.ಅರುಣ ಬಾರಾಡ್ ಹೆಮ್ಮೆಯಿಂದ ಹೇಳಿದರು.
ಕಲಬುರಗಿ: 60 ವರ್ಷದ ಮಹಿಳೆಯೊಬ್ಬರ ಯಕೃತ್ತಿನಲ್ಲಿ (ಲಿವರ್) ಬೆಳೆದಿದ್ದ ಸುಮಾರು ನಾಲ್ಕುವರೆ ಕಿಲೋಗ್ರಾಂ ತೂಕದ ಗಡ್ಡೆಯೊಂದನ್ನು ಇಲ್ಲಿನ ಸನ್ ರೈಸ್ ಆಸ್ಪತ್ರೆಯ ತಜ್ಞ ವೈದ್ಯರು ಯಶಸ್ವೀ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸನ್ ರೈಸ್ ಆಸ್ಪತ್ರೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಮುಖ್ಯಸ್ಥ ಡಾ.ಸಲ್ಮಾನ್ ಪಟೇಲ್ ಹಾಗೂ ಖ್ಯಾತ ಕ್ಯಾನ್ಸರ್ ತಜ್ಞ ಡಾ.ಅರುಣ್ ಬಾರಾಡ್ ಈ ಕುರಿತು ಮಾಹಿತಿ ಹಂಚಿಕೊಂಡರು. ಕಳೆದ 15 ದಿನಗಳ ಹಿಂದೆ ಕಿಬ್ಬೊಟ್ಟೆಯಲ್ಲಿ (ಕೆಳಭಾಗದ ಹೊಟ್ಟೆ) ತೀವ್ರ ಸ್ವರೂಪದ ಹೊಟ್ಟೆನೋವು ಮತ್ತು ಉಸಿರಾಟದ ತೊಂದರೆ ಸಮಸ್ಯೆಯೊಂದಿಗೆ ಬಂದಿದ್ದ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಮಹಿಳೆಯನ್ನು ದಾಖಲಿಸಿಕೊಂಡು ತಪಾಸಣೆಗೆ ಒಳಪಡಿಸಲಾಗಿತ್ತು.
ಆಕೆಯ ಯಕೃತ್ತಿನಲ್ಲಿ ರಕ್ತನಾಳಗಳ ಜೀವಕೋಶಗಳಿಂದ ಉದ್ಭವಿಸಿದ್ದ ಬೃಹತ್ ಗಡ್ಡೆಯೊಂದು ಪತ್ತೆಯಾಗಿತ್ತು. ವೈದ್ಯಕೀಯ ಪರಿಭಾಷೆಯಲ್ಲಿ ಲಿವರ್ ಹಿಮೊಜಿಮಾ ಎಂದು ಕರೆಯಲಾಗುವ ಈ ಗಡ್ಡೆ ಸುಮಾರು ನಾಲ್ಕುವರೆ ಕೆ.ಜಿ.ಯಷ್ಟಿತ್ತು. ಆಸ್ಪತ್ರೆಯ ಎಲ್ಲ ತಜ್ಞ ವೈದ್ಯರ ಆಳವಾದ ಸಮಾಲೋಚನೆಯ ಬಳಿಕ ಡಿಸೆಂಬರ್ 30ರಂದು ಮಹಿಳೆಯ ಹೊಟ್ಟೆಯಲ್ಲಿದ್ದ ಬೃಹತ್ ಗಡ್ಡೆ ಹೊರತೆಗೆಯಲಾಗಿದೆ ಎಂದರು.
ಸನ್ ರೈಸ್ ಆಸ್ಪತ್ರೆಗೆ ರೋಗಿಯನ್ನು ಕರೆತರುವುದಕ್ಕಿಂತಲೂ ಮುಂಚೆ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ನಮ್ಮ ಆಸ್ಪತ್ರೆಗೆ ಬಂದ ಬಳಿಕ ಸುದೀರ್ಘ ತಪಾಸಣೆಯ ಬಳಿಕ ಇದೊಂದು ಲಿವರ್ ಹಿಮಾಜಿಮಾ ಪ್ರಕರಣ ಎಂಬುದು ಪತ್ತೆಯಾಯಿತು ಎಂದು ಡಾ.ಅರುಣ್ ಹೇಳಿದರು.
ಹೈದರಬಾದ್ ಮತ್ತು ಬೆಂಗಳೂರಿನಂತಹ ಮೆಟ್ರೊ ನಗರಗಳಲ್ಲಿ ಇಂತಹ ಅಪರೂಪದ ಆಪರೇಷನ್ ಮಾಡಲು ಸುಮಾರು 10 ಲಕ್ಷಕ್ಕಿಂತಲೂ ಹೆಚ್ಚು ಬಿಲ್ ಮಾಡಲಾಗುತ್ತದೆ. ಆದರೆ ನಮ್ಮಲ್ಲಿ ಅತ್ಯಂತ ಕಡಿಮೆ ದರದಲ್ಲಿ ಈ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ ಎಂದರು.
ಅರಿವಳಿಕೆ ತಜ್ಞರಾದ ಡಾ.ಅಜೀಮುದ್ದೀನ್ ಮೈದರ್ಗಿ, ಡಾ.ಹಸೀಬ್ ಸೋಹೆರ್ ವಾರ್ದಿ ಹಾಗೂ ಡಾ.ಪ್ರೇಮಾ ಬನಗೊಂಡ ಸುದ್ದಿಗೋಷ್ಠಿಯಲ್ಲಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…