ಕಲಬುರಗಿ: ಶೈಕ್ಷಣಿಕ ಕ್ಷೇತ್ರದ ಕಾಳಜಿ,ಕಕುಲಾತಿ ಹಾಗೂ ಧನಾತ್ಮಕ ಅಂಶಗಳನ್ನು ಅತ್ಯಂತ ಸಂಶೋಧನಾ ಹಾಗೂ ಅಧ್ಯಯನದ ನೆಲೆಯಲ್ಲಿ ಬಿಂಬಿಸಿರುವ ಲೇಖನಗಳನ್ನು ಒಳಗೊಂಡ ಪುಸ್ತಕ “ಭರವಸೆಯ ಬೆಳಕು” ಎಂದು ಖ್ಯಾತ ಚಿಂತಕ, ಪ್ರಕಾಶಕ ಎಸ್.ಎಸ್.ಹಿರೆಮಠ ಅಭಿಮತ ವ್ಯಕ್ತಪಡಿಸಿದರು.
ಇತ್ತೀಚೆಗೆ ಕಲಬುರಗಿಯಲ್ಲಿ ಯುವ ಬರಹಗಾರ, ಶಿಜ್ಷಣ ತಜ್ಞರಾದ ಕೆ.ಎಂ.ವಿಶ್ವನಾಥ ಮರತೂರ ಅವರ “ಭರವಸೆಯ ಬೆಳಕು” ಎಂಬ ಪುಸ್ತಕದ ಮುಖಮುಟ ಅನಾವರಣಗೊಳಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನಮ್ಮ ಕಲ್ಯಾಣ ಕರ್ನಾಟಕದ ಹೆಮ್ಮೆಯಂತಿರುವ ಲೇಖಕರಾದ ಕೆ.ಎಂ.ವಿಶ್ವನಾಥ ಮರತೂರ ಅವರ ಪುಸ್ತಕ ಅತ್ಯಂತ ಪ್ರಮುಖವಾದ ಪುಸ್ತಕವಾಗಿದೆ. ಪ್ರತಿಯೊಂದು ಲೇಖನವು ಶಿಕ್ಷಣದ ಕಾಳಜಿ, ಧನಾತ್ಮಕ ಅಂಶಗಳ ಮೇಲೆ ಬೆಳಕು ಚೆಲ್ಲುತ್ತದೆ. ಮಕ್ಕಳು, ಶಿಕ್ಷಕರು, ಸಮುದಾಯದ ಪಾಲಕರು, ಅಧಿಕಾರಿಗಳು, ಯುವಕರು ಅವಶ್ಯವಾಗಿ ಓದಲೇಬೇಕಾದ ಪುಸ್ತಕವಿದು. ಇಲ್ಲಿ ಒಳಗೊಂಡಿರುವ ಅನೇಕ ಮಾಹಿತಿಯನ್ನು ಅತ್ಯಂತ ಅಧ್ಯಯನ, ಅನುಭವ ಹಾಗೂ ಸಂಶೋಧನಾ ನೆಲೆಯಲ್ಲಿ ರಚಿಸಲಾಗಿದೆ. ಪ್ರತಿಯೊಂದು ಲೇಖನವು ಮಾಹಿತಿಪೂರ್ಣವಾಗಿದ್ದು ಓದುಗರನ್ನು ಸೆಳೆಯುತ್ತವೆ. ಶೈಕ್ಷಣಿಕ ಚಿಂತನೆಗಳಿಂದ ಕೂಡಿವೆ. ಜನರ ಮನದೊಳಗೆ ಮೂಡಬಹುದಾದ ಅನೇಕ ಸವಾಲುಗಳಿಗೆ ಸಮಸ್ಯೆಗಳಿಗೆ ಪರಿಹಾರ ಶೈಕ್ಷಣಿಕವಾಗಿ ಕೊಡಲಿವೆ ಎಂದರು.
ಕಾರ್ಯಕ್ರಮದಲ್ಲಿ ಹಾಜರಿದ್ದ, ಬರಹಗಾರ ಕೆ.ಎಂ.ವಿಶ್ವನಾಥ ಮರತೂರ ಮಾತನಾಡುತ್ತಾ, ಈ ಪುಸ್ತಕವು ಶೈಕ್ಷಣಿಕ ಕ್ಷೇತ್ರದ ಮಹತ್ವ, ಸ್ಥೂಲವಾದ ಪರಿಚಯ, ಪ್ರಸ್ತುತ ಶೈಕ್ಷಣಿಕ ಕ್ಷೇತ್ರದ ವಿನೂತನ ಪ್ರಯೋಗಗಳು ಒಳಗೊಂಡಿದೆ. ನನ್ನ ಕ್ಷೇತ್ರಮಟ್ಟದಲ್ಲಿ ಕೆಲಸಗಳ ಜೊತೆಗೆ ಅಲ್ಲಿರುವ ಧನಾತ್ಮಕ ಅನುಭವಗಳನ್ನು ಅಕ್ಷರ ರೂಪಕ್ಕಿಳಿಸುವ ಪ್ರಮಾಣಿಕ ಪ್ರಯತ್ನ ಮಾಡಲಾಗಿದೆ. ಎಲ್ಲರೂ ಓದಿ ಆಸ್ವಾದಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಮಹಾನಂದಾ ದಿಗ್ಗಾಂವಕರ ಒಳಗೊಂಡಂತೆ ಇತರ ಸಾಹಿತ್ಯಾಸಕ್ತರು “ಭರವಸೆಯ ಬೆಳಕು” ಪುಸ್ತಕದ ಆಕರ್ಷಕ ಮುಖಪುಟದ ಬಿಡುಗಡೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…