ಬಿಸಿ ಬಿಸಿ ಸುದ್ದಿ

ಕಾರಂಜಾ ಸಂತ್ರಸ್ತರಿಗೆ ಸಮರ್ಪಕ ಪರಿಹಾರಕ್ಕೆ ಸಿಎಂ ಪರಿಗಣಿಸಬೇಕು: ಲಕ್ಷ್ಮಣ ದಸ್ತಿ ಅಗ್ರಹ

ಕಲಬುರಗಿ: ಗೋದಾವರಿ ಕಣಿವೆ ಪ್ರದೇಶದ ನೀರು ಬಳಿಸಿ ಕೊಳ್ಳುಲು ಮತ್ತು ಕಾರಂಜಾ ನೀರಾವರಿ ಯೋಜನೆಗಾಗಿತಮ್ಮ ಜಮೀನು ಮನೆ ಮಠ ಕಳೆದುಕೊಂಡ ರೈತ ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ನೀಡುವ ವಿಷಯಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಗಂಭೀರವಾಗಿ ಪರಿಗಣಿಸಿ ತಕ್ಷಣ ಸ್ಪಂದಿಸಬೇಕೆಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಯವರು ಅಗ್ರಹಿಸಿದ್ದಾರೆ.

ಅಖಂಡ ಕರ್ನಾಟಕ ರಾಜ್ಯ ರಚನೆಯ ನಂತರ ಮೂರುವರೆ ದಶಕಗಳ ವರೆಗೆ ಬಹುತೇಕ ಎಲ್ಲಾ ಸರ್ಕಾರಗಳು ಕಾವೇರಿ ಜಲಾನಯನ ಪ್ರದೇಶಕ್ಕೆ ಮೊದಲನೇ ಆದ್ಯತೆ ನೀಡಿದವು ನಂತರ ನಮ್ಮ ಕೂಗಿಗೆ ಮಣಿದು 1992 ನಂತರ ಕೃಷ್ಣಾಕಣಿವೆ ಪ್ರದೇಶಕ್ಕೆ ಪರಿಗಣಿಸಲಾಯಿತು. ಇಷ್ಟಾದರೂ ಇನ್ನು ನಮ್ಮ ಪಾಲಿನ ಕೃಷ್ಣಾ ಕಣಿವೆ ಪ್ರದೇಶದ ನೀರು ಬಳಿಸಿಕೊಂಡಿಲ್ಲಾ.

ಗೋದಾವರಿ ಕಣಿವೆ ಪ್ರದೇಶದ ನೀರು ಬಳಿಸಿಕೊಳ್ಳುವಲ್ಲಿ ಎಲ್ಲಾ ಸರ್ಕಾರಗಳು ನಿರ್ಲಕ್ಷ ಮತ್ತು ಮಲತಾಯಿ ಧೋರಣೆ ಮಾಡಿವೆ. ಗೋದಾವರಿ ಕಣಿವೆ ಪ್ರದೇಶದ ನಮ್ಮ ಪಾಲಿನ 22.37 ಟಿ ಎಮ್ ಸಿ ನೀರಿನಲ್ಲಿ ಅರ್ಧ ನೀರು ಬಳಿಸಿಕೊಂಡರು ಗುರಿಯಂತೆ ರೈತರ ಜಮೀನಿಗೆ ನೀರು ಮುಟ್ಟಿಲ್ಲಾ 9 ಕೋಟಿಯಲ್ಲಿ ಪೂರ್ಣಗೊಳ್ಳಬೇಕಾದ ಕಾರಂಜಾ ಯೋಜನೆ 700 ಕೋಟಿಗೆ ತಲುಪಿದರೂ ಯೋಜನೆ ಪೂರ್ಣಗೊಳ್ಳದೆ ಯೋಜನೆಗೆಜಮೀನು ನೀಡಿದ ಸಂತ್ರಸ್ತರಿಗೆ ಸಮರ್ಪಕವಾಗಿ ಇನ್ನು ಪರಿಹಾರ ಸಿಗದೆ ಇರುವದು ಖೇಧಕರವಾದ ವಿಷಯವಾಗಿದೆ.

ಗೋದಾವರಿ ಕಣಿವೆ ಪ್ರದೇಶದ ನೀರು ಬಳಿಸಿಕೊಳ್ಳುಲು ಮತ್ತು ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ನೀಡುವ ವಿಷಯಕ್ಕೆ ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿ ತಕ್ಷಣ ದಿಟ್ಟತನದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲು ಸಮಿತಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದೆ.

emedialine

Recent Posts

ಮಹಿಳೆಯರ ಘನತೆ ಹಾಗೂ ಮಾನವ ಮೌಲ್ಯ ಉಳಿಸಿ ಪುಸ್ತಕ ಬಿಡುಗಡೆ

ಶಹಾಬಾದ: ಮಾನವೀಯ ಮೌಲ್ಯಗಳು ವಿದ್ಯಾರ್ಥಿ ಯುವಜನರ ಬೆಳೆಸಿಕೊಂಡು ಉತ್ತಮ ನಾಗರಿಕರಾಗಬೇಕೆಂದು ಎಸ್ಎಸ್ ಮರುಗೋಳ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಕೆ.ಬಿ. ಬಿಲ್ಲವ…

3 mins ago

ಅರಿವಿಂಗೆ ಹಿರಿದು ಕಿರಿದುಂಟೆ ?: ತಿಂಗಳ ಬಸವ ಬೆಳಕು 120 ವಿಶೇಷ ಉಪನ್ಯಾಸ

ಶಹಾಪುರ : 26 : ಚಿಕ್ಕ ವಯಸ್ಸಿನಲ್ಲಿಯೆ ಹಿರಿದಾದ ಜ್ಞಾನವನ್ನು ಹೊಂದಿದ್ದ ಚೆನ್ನಬಸವಣ್ಣ ಷಟಸ್ಥಲ ಜ್ಞಾನಿ ಎಂದು ಕರೆಯಿಸಿಕೊಂಡರು. ಬಸವಣ್ಣನವರ…

7 mins ago

ನಗರಸಭೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಗೆಲುವು

ಶಹಾಬಾದ: ನಗರಸಭೆಯ ವಾರ್ಡ ನಂ.3 ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಾಜೀದ್ ಖಾನ್ ಜಮಾದಾರ ಅವರು ಗೆಲುವು ಸಾಧಿಸಿದ್ದಾರೆ. ನಗರದ…

12 mins ago

ಸರ್ವರಿಗೂ ಬದುಕುವ ಮೂಲಭೂತ ಹಕ್ಕನ್ನು ನೀಡಿದ್ದು ಸಂವಿಧಾನ: ಮೇತ್ರಿ

ಶಹಾಬಾದ: ಜಾತಿ-ಬೇಧ ಎನ್ನದೇ ಸರ್ವರಿಗೂ ಮೂಲಭೂತ ಹಕ್ಕನ್ನು ಒದಗಿಸಿ, ಬದುಕುವ ವಾತಾವರಣ ಸೃಷ್ಠಿಸಿದ್ದೇ ಡಾ. ಬಿ .ಆರ್. ಅಂಬೇಡ್ಕರ್ ಬರೆದ…

15 mins ago

ಸಂವಿಧಾನ ಮೌಲ್ಯ ಅರಿತು ನಡೆದರೆ ದೇಶ ಉನ್ನತ ಸ್ಥಾನದಲ್ಲಿರುತ್ತದೆ: ನಿಂಗಣ್ಣ

ಶಹಾಬಾದ: ಸಂವಿಧಾನದ ಆಶೋತ್ತರಗಳು, ಮೌಲ್ಯಗಳನ್ನು ಅರಿತು ಅದರಂತೆ ಎಲ್ಲರೂ ನಡೆದರೆ ನಮ್ಮ ದೇಶ ಜಗತ್ತಿನಲ್ಲಿಯೇ ಉನ್ನತ ಸ್ಥಾನದಲ್ಲಿರುತ್ತದೆ ಎಂದು ಬಿಜೆಪಿ…

17 mins ago

ಇ.ಪಿ.ಎಫ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ: ಕನ್ನಡ ನಮ್ಮ ಹೃದಯದ ಭಾಷೆ – ಗುಂಡಣ್ಣ ಡಿಗ್ಗಿ

ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಇ.ಪಿ.ಎಫ್ ಕ್ಷೇತ್ರೀಯ ಕಾರ್ಯಾಲಯದಲ್ಲಿ ಮಂಗಳವಾರ 69ನೇ ಕನ್ನಡ ರಾಜ್ಯೋತ್ಸವವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಕಲ್ಯಾಣ…

22 mins ago