ಕಲಬುರಗಿ: ನಾಡಿನ ಕಲೆ ಮತ್ತು ಸಂಸ್ಕøತಿಗಳನ್ನು ಉಳಿಸಿ ಬೆಳೆಸುವಲ್ಲಿ ನಿರಂತರ ಶ್ರಮಿಸುತ್ತಿರುವ ಜನಪದ ಕಲಾವಿದರಿಗೆ ಆರ್ಥಿಕ ಸಹಾಯ ಸಹಕಾರ ಅಗತ್ಯವಾಗಿದೆ ಎಂದು ಕಲಾವಿದ, ಸಾಹಿತಿ ಎಂ ಎನ್ ಸುಗಂಧಿ ರಾಜಾಪೂರ ಹೇಳಿದರು.
ಜಿಲ್ಲೆಯ ಕಾಳಗಿ ತಾಲ್ಲೂಕಿನ ಕೋರವಾರ ಗ್ರಾಮದ ಅಣವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಮಾಯಾ ವೆಲಫರ್ ಸೋಸಾಯಿಟಿ ಕಲಬುರಗಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಿದ ‘ಜನಪದ ಮತ್ತು ಸಂಗೀತ’ ಕಾರ್ಯಕ್ರಮದಲ್ಲಿ ಕಲಾವಿದರಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ಜನಪದ ಕಲೆಗಳಲ್ಲಿ ಜನಸಾಮಾನ್ಯರ ಸಂಸ್ಕøತಿ ಬದುಕನ್ನು ಕಾಣಬಹುದು. ಪ್ರತಿಯೊಂದು ಉಸಿರಲ್ಲಿ ಕಲೆಗಳು ಉಸಿರಾಡುತ್ತವೆ. ಈ ಹಿನ್ನಲೆಯಲ್ಲಿ ಕಲಾವಿದರಿಗೆ ಗುರುತಿಸಿ ಸಹಾಯ ಸಹಕಾರ ಕೊಡಬೇಕು ಎಂದರು.
ಮಾಯಾ ವೆಲಫರ್ ಸೋಸಾಯಿಟಿ ಅಧ್ಯಕ್ಷ ವೀರಣ್ಣ ಬೆಣ್ಣೆಶಿರೂರ ಅಧ್ಯಕ್ಷತೆ ವಹಿಸಿ, ಗ್ರಾಮೀಣ ಭಾಗದ ಜನಪದ ಮತ್ತು ಸಂಗೀತದ ಸೊಗಡನ್ನು ಉಳಿಸಿ ಬೆಳೆಸುವಲ್ಲಿ ಕಾರ್ಯನಿರತವಾಗಿದೆ. ಕಲೆ ಉಳಿಸಿದರೆ ಕಲಾವಿದರು ಉಳಿಯಬಹುದು ಎಂದರು.
ಮುಖಂಡ ಬಾಬುಮಿಯಾ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಅಣವೀರಭದ್ರೇಶ್ವರ ದೇವಸ್ಥಾನದ ಆರ್ಚಕರಾದ ಪೂಜ್ಯ ಧನಂಜಯ್ಯ ಸಾನಿಧ್ಯ ವಹಿಸಿದರು.
ಗ್ರಾಪಂ ಸದಸ್ಯರಾದ ಮಲ್ಕಮ್ಮ, ಸಂಗಯ್ಯ ಸ್ವಾಮಿ, ಬಸವರಾಜ ಬಸಲಿಂಗ, ನಿರ್ಮಲಾ ದೊಡ್ಡಮನಿ ಮತ್ತಿತರರು ಪಾಲ್ಗಿಒಂಡಿದರು.
ನಂತರ ಕಲಾವಿದರಾದ ದೇವೇಂದ್ರಪ್ಪ ಸಜ್ಜನ, ಚಂದ್ರಶ್ಯಾ ಹಾಸಪ್ಪ, ಮಲ್ಲಿಕಾರ್ಜುನ ಶ್ರೀಶೈಲಪ್ಪ, ಶ್ರೀನಾಥ, ಶ್ರೀಧರ ಎಂ, ಮಲ್ಲಿಕಾರ್ಜುನ ಎಂ ಹೊನ್ನಳ್ಳಿ, ಚಂದ್ರಶೇಖರ, ಶಿವಶರಣಪ್ಪ, ಸುನೀಲ ಮೇಲಿನಕೇರಿ, ಜಗನ್ನಾಥ ಟೆಂಗಳಿ, ರೇವಣಸಿದ್ದಪ್ಪ ಕಲಶೆಟ್ಟಿ ಇತರರಿಂದ ಸಂಗೀತ ಕಾರ್ಯಕ್ರಮಮ ನಡೆಸಿ ಕೊಟ್ಟರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…