ಸುರಪುರ:ನಗರದ ಪ್ರಭು ಕಾಲೇಜು ಮೈದಾನದಲ್ಲಿ ಆರ್‍ಕೆಎನ್ ಕ್ರಿಕೆಟ್ ಕ್ಲಬ್ ವತಿಯಿಂದ ರಾಜಾ ಶ್ರೀರಾಮ ನಾಯಕ ಅವರ ಸ್ಮರ್ಣಾರ್ಥವಾಗಿ ಪ್ರಥಮ ಬಹುಮಾನ 2 ಲಕ್ಷ ರೂಪಾಯಿ ಟ್ರೋಪಿ,ದ್ವೀತಿಯ ಬಹುಮಾನ 1 ಲಕ್ಷ ರೂಪಾಯಿ ಮತ್ತು ಟ್ರೋಪಿ ಇರುವ ರಾಜ್ಯ ಮಟ್ಟದ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆರಂಭಿಸಲಾಯಿತು.
ಪಂದ್ಯಾವಳಿ ಉದ್ಘಾಟಿಸಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಸುರಪುರ ನಗರವು ಕ್ರೀಡೆಗಳಲ್ಲಿ ಪ್ರಸಿದ್ಧಿಯಾಗಿದ್ದು ಇಲ್ಲಿ ಅನೇಕ ಪ್ರತಿಭಾವಂತ ಹಾಕಿ ಮತ್ತು ಕ್ರಿಕೆಟ್ ಆಟಗಾರರು ಇದ್ದಾರೆ ಸಹೋದರ ದಿ.ರಾಜಾ ಶ್ರೀರಾಮ ನಾಯಕ ಉತ್ತಮ ಆಟಗಾರರರಾಗಿದ್ದರು ಎಂದು ನೆನಪಿಸಿಕೊಂಡ ಅವರು ಟೂರ್ನಾಮೆಂಟ್‍ನಲ್ಲಿ ಅಂಪೈರುಗಳು ಉತ್ತಮ ನಿರ್ಣಯ ನೀಡಬೇಕು ಹಾಗೂ ಕ್ರೀಡಾಪಟುಗಳು ಕೂಡಾ ಯಾರೇ ಸೋಲಲಿ ಗೆಲ್ಲಲಿ ಕ್ರೀಡಾಸ್ಪೂರ್ತಿಯಿಂದ ಆಡಬೇಕು ಎಂದ ಕಿವಿಮಾತು ಹೇಳಿದರು.ಅಲ್ಲದೆ ಇಂದಿನ ದಿನಮಾನಗಳಲ್ಲಿ ಮಕ್ಕಳಲ್ಲಿ ಆಟವಾಡುವ ಪ್ರವೃತ್ತಿ ಕಡಿಮೆಯಾಗುತ್ತಿದೆ ಮಕ್ಕಳು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು, ಜೀವನದಲ್ಲಿ ಮನುಷ್ಯನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ತುಂಬಾ ಅವಶ್ಯ ಎಂದರು.
ಹೆಚ್‍ಕೆಇ ಸಂಸ್ಥೆಯ ಸಂಯೋಜಕರು ಹಾಗೂ ಕ್ರೀಡಾಪಟುಗಳಾದ ವೇಣುಗೋಪಾಲ ಜೇವರ್ಗಿ ಮಾತನಾಡಿ ಕ್ರೀಡೆಯಲ್ಲಿ ಸುರಪುರ ತುಂಬಾ ಪ್ರಸಿದ್ಧಿಯಾಗಿದ್ದು ಇಲ್ಲಿನ ರಾಜಕೀಯ ಮುಖಂಡರುಗಳು ಕ್ರೀಡೆಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ ಟೂರ್ನಿಯಲ್ಲಿ ಉತ್ತಮವಾಗಿ ಆಡುವ ಮೂಲಕ ಇಲ್ಲಿನ ಆಟಗಾರರು ರಾಜ್ಯ ಮಟ್ಟದಲ್ಲಿ ಬೆಳಕಿಗೆ ಬರುವಂತಾಗಬೇಕು ಬೆಟ್ಟಿಂಗ್‍ಗೆ ಯಾರೂ ಬಲಿಯಾಗಬಾರದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಭು ಕಾಲೇಜಿನ ಪ್ರಾಂಶುಪಾಲ ಮಹ್ಮದ ವಾರಿಸ್ ಕುಂಡಾಲೆ ಮಾತನಾಡಿದರು. ಪ್ರಮುಖರಾದ ವಿಠಲ್ ಯಾದವ್, ಬಸವರಾಜ ಜಮದ್ರಖಾನಿ, ರಾಜಶೇಖರಗೌಡ ಪಾಟೀಲ ವಜ್ಜಲ್, ವೆಂಕೋಬ ಯಾದವ್, ಮಲ್ಲಣ್ಣ ಸಾಹುಕಾರ, ಅಬ್ದುಲ್ ಗಫಾರ ನಗನೂರಿ, ಭೀಮರಾಯ ಮೂಲಿಮನಿ, ಗುಂಡಪ್ಪ ಸೊಲ್ಲಾಪುರ, ಶಿವರಾಯ ಕಾಡ್ಲೂರು, ನಿಂಗಯ್ಯ ಬೂದಗುಂಪಿ, ನಗರಸಭೆ ವಿರೋಧ ಪಕ್ಷದ ನಾಯಕ ರಾಜಾ ಪಿಡ್ಡನಾಯಕ(ತಾತಾ), ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸುವರ್ಣಾ ಸಿದ್ರಾಮ ಎಲಿಗಾರ, ಶೇಖ ಮಹಿಬೂಬ ಒಂಟಿ, ಅಬ್ದುಲ್ ಅಲೀಂ ಗೋಗಿ, ಬೀರಲಿಂಗ ಬಾದ್ಯಾಪುರ, ನಿಂಗರಾಜ ಬಾಚಿಮಟ್ಟಿ, ಭಂಡಾರೆಪ್ಪ ನಾಟೀಕಾರ, ಆಯೋಜಕ ಕಮೀಟಿಯ ರಜಾ ವೇಣುಗೋಪಾಲ ನಾಯಕ, ರಾಜಾ ಕುಮಾರ ನಾಯಕ, ರಾಜಾ ಸಂತೋಷ ನಾಯಕ, ರಾಜಾ ವಿಜಯಕುಮಾರ ನಾಯಕ, ರಾಜಾ ಸುಶಾಂತ ನಯಕ ಸೇರಿದಂತೆ ಇತರರಿದ್ದರು, ಅಬ್ದುಲ್ ಪಟೇಲ ನಿರೂಪಿಸಿದರು ಚಂದ್ರಕಾಂತ ಕೊಣ್ಣೂರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ದಿ. ರಾಜಾ ಕುಮಾರ ನಾಯಕ ಹಾಗೂ ದಿ.ರಾಜಾ ಶ್ರೀರಾಮ ನಾಯಕರವರ ಭಾವಚಿತ್ರಗಳಿಗೆ ಪೂಜೆ ಮುಖಂಡರು ಪೂಜೆ ನೆರವೇರಿಸಿದರು. ನಂತರ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರವರು ಬ್ಯಾಟಿಂಗ ಮಾಡುವ ಮೂಲಕ ಟೂರ್ನಿಗೆ ಚಾಲನೆ ನೀಡಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…