ಬಿಸಿ ಬಿಸಿ ಸುದ್ದಿ

ಶರಣರು ಎಲ್ಲ ಜಾತಿ ಪಂಥದವರ ಪುಣ್ಯ ದೇವರು

ಶರಣಬಸವೇಶ್ವರರು ಎಲ್ಲಾ ಜಾತಿ ಪಂಥದವರ ಪುಣ್ಯ ದೇವರಾಗಿದ್ದರು ಎಂದು ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ನಾನಾಸಾಹೇಬ ಹಚ್ಚಡದ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಶುಕ್ರವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.

ಸೋದೆಯ ಸದಾಶಿವ ಅರಸನು ಶರಣಬಸವರ ಆರಾಧ್ಯ ಭಕ್ತನಾಗಿದ್ದನು. ಶರಣ ದರ್ಶನಕ್ಕೆ ಬಂದಾಗ ಶರಣರು ಅವನಿಗೆ ವಿಭೂತಿ ಉಂಡೆಯನ್ನು ಕೊಡುತ್ತಾರೆ. ಅದನ್ನು ಶಲ್ಯಯಲ್ಲಿ ಕಟ್ಟಿಕೊಂಡು ಹೋಗುತ್ತಾನೆ. ಒಂದು ಅರಸನಿಗೆ ನಾಗರಹಾವೊಂದು ರಾಜನ ಕಾಲಿಗೆ ಕಚ್ಚುತ್ತದೆ. ಆಗ ಅರಸ ಜೋರಾಗಿ ’ಶರಣಾ’ ಎಂದು ಕೂಗುತ್ತಾನೆ. ಮನೆಯವರೆಲ್ಲ ಬಂದು ನೋಡಿದಾಗ ಕರಿಸರ್ಪವೊಂದು ಹೊರಟು ಹೋಗುತ್ತದೆ. ರಾಜ ಮಡದಿಗೆ ಶಲ್ಯಬಿಚ್ಚಿ ಶರಣರು ಕೊಟ್ಟ ಭಸ್ಮದ ಉಂಡೆಯನ್ನು ರಾಜನ ಬಾಯೊಳಗೆ ಹಾಕುತ್ತಾಳೆ. ಕಚ್ಚಿದ ಸ್ಥಳಕ್ಕೆ ವಿಭೂತಿ ಹಚ್ಚುತ್ತಾರೆ. ಶರಣಬಸವರನ್ನು ನೆನೆಸುತ್ತಾ ತಕ್ಷಣವೇ ವಿಷ ಅಳಿದು ಹೋಗಿ ರಾಜ ನೋವು ಕಡಿಮೆಯಾಗಿ ಮೊದಲಿನಂತಾಗುತ್ತಾನೆ. ಶರಣರಲ್ಲಿಗೆ ಬಂದು ’ ಜೀವ ಬದುಕಿಸಿದ ಪರಮಾತ್ಮ’ ಎನ್ನುತ್ತಾ ಕಾಲಿಗೆರಗುತ್ತಾನೆ.

ಸುರಪುರ ರಾಜನೊ ಶರಣರ ಭಕ್ತಾನೊ
ಸೇವಕಗ ಅಟ್ಟ್ಯಾನ ಕಲಬುರ್ಗಿಗೆ | ನಾಯಕ
ಭಕ್ತೀಲಿ ಕಳುಹಿಸಿ ಕಾಣಿಕೆ
ಮಂಗಳ ದಿನದಂದ ಶರಣರು ತಾಕುಂತು
ಮಂಗಳ ಮಾಡಿಸಿ ಪುರಾಣ | ಶರಣರು
ಕಂಟಕ ಬಿಡಿಸಿದ ಮಹಾದೇವ

ಕೋರಿಸಿದ್ಧರು ಮತ್ತು ಶರಣಬಸವರು ಜೀವದ ಗೆಳೆಯರಾಗಿದ್ದರೆನ್ನುತ್ತಾರೆ ಜನಪದರು. ಒಂದು ಸಲ ಕೋರಿಸಿದ್ಧರು ತಮ್ಮ ರೂಪ ಬದಲಾಯಿಸಿ ಮುಪ್ಪಾನ ಮುದುಕನಾಗಿ ಕಲಬುರ್ಗಿ ಬ್ರಹ್ಮಪುರಕ್ಕೆ ಬಂದು ಅಲ್ಲಿರುವ ಹೆಣ್ಣು ಮಕ್ಕಳಿಗೆ ’ ಶರಣರ ಮಠ’ ಎಲ್ಲಿದೆಯೆಂದು ಪ್ರಶ್ನಿಸುತ್ತಾರೆ. ಆ ಹೆಂಗಳೆಯರು ’ ಕೈಲಾಸದಂತಹ ಮಠಕ್ಕೆ ಆರು ಮೆಟ್ಟುಲುಗಳು, ಎಂಟು ಬಾಗಿಲುಗಳು, ಮೂವತ್ತಾರು ಕಂಬದ ನಡುವೆ ದಾಸೋಹ ಭಂಡಾರಿ ಶರಣರು ಕೂತಿರುತ್ತಾರೆಂದು’ ಅವರು ಹೇಳುತ್ತಾರೆ. ಅಲ್ಲಿಗೆ ಬಂದ ಕೋರಿಸಿದ್ಧರು ಮಠದ ಬಾಗಿಲಿನಲ್ಲಿಯೇ ನಿಂತು ಹಸಿವು ಹಸಿವು ಎನ್ನುತ್ತಾ ’ ಪ್ರಾಣ ನಡದಿದೆ, ಪ್ರಸಾದ ಕೊಡಿರಿ. ಮಠದ ಮೆಟ್ಟಿಲುಗಳು ಏರಲು ಬರುತ್ತಿಲ್ಲ’ವೆಂದು ಕೂಗಲು ಪ್ರಾರಂಭಿಸುತ್ತಾರೆ. ಇದನ್ನರಿತ ಶರಣಬಸವರು ’ ಬಾರಪ್ಪ ಕೋರಿಸಿದ್ಧ ಬಾರಪ್ಪ ಮಠದೊಳಗೆ ನನ್ನದಲ್ಲ ನಿನ್ನದು ಈ ಮಠ’ ಎಂದಾಗ ಭಕ್ತರು ದಂಗಾಗುತ್ತಾರೆ. ಶರಣಬಸವರು ಕೋರಿಸಿದ್ಧರನ್ನು ಆಶೀರ್ವದಿಸುತ್ತಾರೆ.

ಕಲಬುರಗಿಯಲ್ಲಿ ಖಾಜಾ ಬಂದೇ ನವಾಜರು ಶರಣರಿಗಿಂತ ಮೊದಲು ಆಗಿ ಹೋದ ಸೂಫಿಸಂತರು . ಒಂದು ಸಲ ಶರಣರು ಬಂದೇನವಾಜ ದರ್ಗಾಕ್ಕೆ ಬಂದಾಗ ಅಲ್ಲಿರುವ ಮುಲ್ಲಾಗಳು ಅವರನ್ನು ಒಳಗೆ ಬಿಡುವುದಿಲ್ಲ. ಒಳಗೆ ಜನರು ಬಂದೇನವಾಜರ ಗದ್ದುಗೆಗೆ ಗಂಧ ಹಚ್ಚುತ್ತಿರುತ್ತಾರೆ. ಅವರ ಡಂಭಾಚಾರದ ಭಕ್ತಿಯನ್ನು ಶರಣರು ನೋಡುತ್ತಿದ್ದಾರೆ. ಆಗ ಶರಣರು ’ ಗದ್ದುಗೆ ಬಲದಲ್ಲಿ ಅಂಗೈ ಅಗಲದ ಸ್ಥಳದಲ್ಲಿ ಗಂಧ ಹಚ್ಚಿಲ್ಲ, ಸರಿಯಾಗಿ ಹಚ್ಚಿರಿ’ ಎನ್ನುತ್ತಾರೆ. ಆ ಮುಲ್ಲಾಗಳು ಅಟ್ಟಹಾಸದಿಂದ ನಗುತ್ತಾ ಇವನೇನು ಮಹಾ ಎನ್ನುವಂತೆ ವರ್ತನೆ ಮಾಡುತ್ತಾರೆ. ಅವರಲ್ಲಿ ಒಬ್ಬ ಸರಿಸಿ ನೋಡುತ್ತಾನೆ. ಶರಣರು ಹೇಳಿದಂಗೆ ಆಗಿದೆ. ಎಲ್ಲರೂ ಗಾಬರಿಯಾಗುತ್ತಾರೆ. ಬಾಗಿಲಿನ ಚೀಲಕ ಹಾಗೆ ಇದೆ. ಮುಲ್ಲಾಗಳು ಬಾಗಿಲು ತೆಗೆದು ಹೊರಗೆ ಬರುತ್ತಾರೆ. ಶರಣರು ನಿಂತಿದ್ದಾರೆ. ಹಾಗೆಯೇ ಎಲ್ಲಾ ಮುಲ್ಲಾಗಳು ಅವರ ಪಾದಕ್ಕೆ ಎರಗಿ ತಮ್ಮ ತಪ್ಪನ್ನು ಕ್ಷಮೀಸಲು ಕೇಳಿಕೊಳ್ಳುತ್ತಾರೆ ಎಂದು ಹೇಳಿದರು.

ಡಾ. ನಾನಾಸಾಹೇಬ ಹಚ್ಚಡದ, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ
emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

3 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

13 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

13 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago