ಬಿಸಿ ಬಿಸಿ ಸುದ್ದಿ

ಆರ್ಥಿಕ ಸ್ಥಿತಿಯಲ್ಲಿ 2047ಕ್ಕೆ ನಮ್ಮ ದೇಶ ವಿಶ್ವದಲ್ಲಿಯೇ ಮೊದಲು: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಬೆಂಗಳೂರು: ಭಾರತದ ಬೆಳವಣಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದಿನೇ ದಿನೇ ಬೆಳೆಯುತ್ತಾ ಸಾಗುತ್ತಿದೆ. 2027ಕ್ಕೆ ನಮ್ಮ ದೇಶ ಆರ್ಥಿಕ ಸ್ಥಿತಿಯಲ್ಲಿ ವಿಶ್ವದಲ್ಲಿ 3ನೇ ಸ್ಥಾನಕ್ಕೆ ಬರಲಿದ್ದು, 2047 ಕ್ಕೆ ವಿಶ್ವದಲ್ಲಿಯೇ ಮೊದಲ ಸ್ಥಾನ ಗಳಿಸುವುದು ಖಚಿತ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದರು.

ಇಂದು ಎ.ಎಸ್.ಸಿ ಸೆಂಟರ್ ದಕ್ಷಿಣ ಇಲ್ಲಿ ಆಯೋಜಿಸಲಾದ 75ನೇ ಸೇನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ರಕ್ಷಣಾ ಸಚಿವರು, ಜನವರಿ 15, 1949 ರಂದು, ಭಾರತೀಯ ಸೇನೆಯ ಆಜ್ಞೆಯು ಬ್ರಿಟಿμï ಜನರಲ್ ಫ್ರಾನ್ಸಿಸ್ ಬುತ್ಚೆರ್ ಅವರಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕರಿಯಪ್ಪ ಅವರ ಕೈಗೆ ಬಂದಿತು. ಇದರೊಂದಿಗೆ, ಬ್ರಿಟಿμï ಪದವನ್ನು ಬ್ರಿಟಿμï ಭಾರತೀಯ ಸೇನೆಯಿಂದ ಶಾಶ್ವತವಾಗಿ ತೆಗೆದುಹಾಕಲಾಯಿತು ಮತ್ತು ಅದನ್ನು ಭಾರತೀಯ ಸೇನೆ ಎಂದು ಕರೆಯಲಾಯಿತು ಎಂದು ತಿಳಿಸಿದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕರಿಯಪ್ಪ ಅವರು ಸ್ವಾತಂತ್ರ್ಯ ಭಾರತದ ಮೊದಲ ಸೇನಾ ಮುಖ್ಯಸ್ಥರಾದರು. ಅಂದಿನಿಂದ, ಪ್ರತಿ ವರ್ಷ ಜನವರಿ 15 ರಂದು ಸೇನಾ ದಿನವೆಂದು ಆಚರಿಸಲಾಗುತ್ತದೆ. ಭಾರತೀಯ ಸೇನೆಯನ್ನು ಸ್ವಾತಂತ್ರ್ಯದವರೆಗೂ ಬ್ರಿಟಿμï ಭಾರತೀಯ ಸೇನೆ ಎಂದು ಕರೆಯಲಾಗುತ್ತಿತ್ತು. ಆದರೆ ಜನವರಿ 15, 1949 ರಂದು, ಭಾರತೀಯ ಸೇನೆಯು ತನ್ನ ಮೊದಲ ಭಾರತೀಯ ಕಮಾಂಡರ್ ಇನ್ ಚೀಫ್ ಅನ್ನು ಪಡೆದುಕೊಂಡಿತು.

ಇದೇ ಮೊದಲ ಬಾರಿಗೆ ಸೇನಾ ದಿನಾಚರಣೆಯನ್ನು ದೆಹಲಿಯಿಂದ ಹೊರಗೆ ಅಚಿದರೆ ಕರ್ನಾಟಕದ, ಬೆಂಗಳ್ರರಿನಲ್ಲಿ ಆಚರಿಸಲಾಗುತ್ತಿದೆ ಎಂದು ತಿಳಿಸದ ಅವರು, ಯುದ್ಧಸಾಮಗ್ರಿ ಮತ್ತು ಶಸ್ತ್ರಾಸ್ತ್ರಗಳ ವಿಷಯದಲ್ಲಿ ಭಾರತೀಯ ಸೇನೆಯು ವಿಶ್ವದಲ್ಲಿ ಉನ್ನತ ಸ್ಥಾನದಲ್ಲಿದೆ. ಭಾರತೀಯ ಸೇನೆಯು ನಿಖರ ಅಗ್ನಿ ಮತ್ತು ಪೃಥ್ವಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾಗೂ ಸ್ವದೇಶಿ ನಿರ್ಮಿತ ಯುದ್ದ ಸಲಕರಣೆಗಳನ್ನು ಹೊಂದಿರುವ  ಹೆಲಿಕ್ಯಾಪ್ಟರ್ ಹೊಂದಿದ್ದು, ಇದು ಶಕ್ತಿಯುತವಾಗಿದೆ.  ಭಾರತೀಯ ಸೈನ್ಯವು ತನ್ನ ಶತ್ರುಗಳ ದಾಳಿಗೆ ಮಾತ್ರ ಪ್ರತಿಕ್ರಿಯಿಸುವ ವಿಶ್ವದ ಏಕೈಕ ಸೈನ್ಯವಾಗಿದೆ. ಎರುರಾಳಿ ಸೈನ್ಯವನ್ನು ಒಡೆದುರಿಳಿಸುವ ಎಲ್ಲಾ ಶಕ್ತಿಯನ್ನು ನಮ್ಮ ಸೇನೆ ಹೊಂದಿದೆ ಎಂದು ತಿಳಿಸಿದರು.

ದೇಶದ ಜನರನ್ನು ರಕ್ಷಿಸಲು ಭಾರತೀಯ ಸೇನೆಯು ಎಷ್ಟು ಸಿದ್ಧವಾಗಿದೆಯೋ, ಜಗತ್ತು ಅದನ್ನು ಕಬ್ಬಿಣದμÉ್ಟೀ ಬಲಿಷ್ಠ ಎಂದು ಪರಿಗಣಿಸುತ್ತದೆ. ಭಾರತೀಯ ಸೇನೆಯ ಹೆಸರು ವಿಶ್ವದ ಅತ್ಯುನ್ನತ ಸ್ಥಳದಲ್ಲಿ ಸೇತುವೆಯನ್ನು ನಿರ್ಮಿಸಿದ ದಾಖಲೆಯನ್ನು ಸಹ ಹೊಂದಿದೆ. ಬದಲಾದ ದಿನಗಳಲ್ಲಿ ನಮ್ಮ ಸೇನೆಯು ಬದಲಾವಣೆಗಳನ್ನು ಅಳವಡಿಸಿಕೊಂಡು ತನ್ನ ಶಕ್ತಿ ಸಾವ್ಮಥ್ರ್ಯವನ್ನು ತೋರಿಸುತ್ತಾ ಬಂದಿದೆ. ಅನೇಕ ಸಮಯದಲ್ಲಿ ಯುದ್ದ ಮಾಡುವುದಲ್ಲದೇ ಸಹಾಯವನ್ನು ಸಹ ಮಾಡುತ್ತಾ ಬಂದಿದೆ ಎಮದು ಸೇನೆಯ ಶಕ್ತಿ ಸಾಮಥ್ರ್ಯವನ್ನು ಶ್ಲಾಘಿಸಿದರು.

ಉಕ್ರೇನ್ ಯುದ್ದ ಸಮಯದಲ್ಲಿ ನಮ್ಮ ದೇಶದ ಪ್ರಧಾನ ಮಂತ್ರಿಗಳು ಉಕ್ರೇನ್ ಅಧ್ಯಕ್ಷರು, ರಷ್ಯಾ ಅಧ್ಯಕ್ಷರು ಮತ್ತು ಅಮೇರಿಕಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿ ಸ್ವಲ್ಪ ಸಮಯದ ವರೆಗೆ ಯುದ್ದ ನಿಲ್ಲಿಸುವಲ್ಲಿ ಸಪಲರಾದರು ಇದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

ಸೇನೆಯು ಸಹ ಇಂದಿನ ದಿನಗಳನ್ನು ಯೋಚಿಸದೆ ನಾಳೆ, ನಾಡಿದ್ದು, ಇನ್ನು ಮುಂದಿನ ಇಪ್ಪತ್ತೈದು ವರ್ಷಗಳ ಬಗ್ಗೆ ಯೋಚಿಸಿ, ಹೊಸ ಹೊಸ ಬದಲಾವಣೆಗಳನ್ನು ಅಳವಡಿಸಿಕೊಂಡು, ಹೊಸ ಹೊಸ ಅವಿಕ್ಷಾರಗಳನ್ನು ಮಾಡಿ, ಕೆಲಸ ನಿರ್ವಹಿಸಬೇಕು. ಸಮಸ್ತ ದೇಶದ, ನಾಡಿನ ಜನರ ಯೋಗ ಕ್ಷೇಮ ರಕ್ಷಣೆಗೆ ಒತ್ತುಕೊಡುವುದರ ಜೊತೆಗೆ ದೇಶವನ್ನು ರಕ್ಷಿಸಬೇಕು, ಇದಕ್ಕಾಗಿ ನಾವು ಎಲ್ಲಾ ಸಹಕಾರಗಳನ್ನು ನೀಡಲು ಸಿದ್ದರಿದ್ದೇವೆ ಎಂದು ತಿಳಿಸಿದರು.  Iಟಿಜiಚಿಟಿ ಂಡಿmಥಿ is ಈuಣuಡಿe ಖeಚಿಜಥಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆಶ್ವಯೋಧರಿಂದ ಟೆಂಟ್ ಪೆಗ್ಗಿಂಗ್, ಬಾರು ಪ್ರದರ್ಶನ, ಅಸ್ಸಾಂ ರೆಜಿಮೆಂಟ್‍ನಿಂದ ಮಾರ್ಷಲ್ ಆಟ್ರ್ಸ್ ಪ್ರದರ್ಶನ, ಸ್ಕೈ ಡೈವ್ ಪ್ರದರ್ಶನ, ಹೆಚ್.ಎ.ಎಲ್ ನಿಂದ ನಿರ್ಮಾಣ ಮಾಡಲಾಗಿರುವ ರುದ್ರ ಹೆಲಿಕ್ಯಾಪ್ಟರ್ ಪ್ರದರ್ಶನ, ಮೈ ರೋಮಾಂಚನ ನೀಡಿತು. ಅಲ್ಲದೆ, ಯೋದರಿಂದ ಮೈಕ್ರೋಲೈಟ್ ವಿಮಾನ ಹಾರಾಟ, ದಕ್ಷಿಣ ಕೊರಿಯಾದ ಮಾರ್ಷಲ್ ಆಟ್ರ್ಸ್ ಎದೆ ಜಿಲ್ ಎಂಬಂತೆ ಮೂಡಿ ಬಂತು. 3 ರಾಷ್ಟ್ರಧ್ವಜ ಮತ್ತು ಸೇನಾ ಧ್ವಜ ಹೊತ್ತ ಪ್ಯಾರಾಚೂಟ್ ಪ್ರದರ್ಶನ,  ಮೊಟಾರ್ ಸೈಕಲ್ ಪ್ರದರ್ಶನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಲೆಪ್ಟಿನೆಂಟ್ ಜನರಲ್ ಮನೋಜ್ ಕುಮಾರ್ ಪಾಂಡೆ, ಡಿಪೆನ್ಸ್ ಸ್ಟಾಪ್ ಜನರಲ್ ಅನೀಲ್ ಚೌಹ್ಹಾಣ್, ಮೇಜರ್ ಜನರಲ್ ಎಂ.ಕೆ. ಖಾನ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕರ್ನಾಟಕ ಪೊಲೀಸ ಮಹಾ ನಿರ್ದೇಶಕ ಪ್ರವೀಣ್ ಸೂದ್, ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು, ಸರ್ಕಾರದ ಹಿರಿಯ ಅಧಿಕಾರಿಗಳು, ಯೋಧರು, ನಿವೃತ್ತ ಯೋಧರು ಉಪಸ್ಥಿತರಿದ್ದು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

7 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

7 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

9 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

9 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

9 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

9 hours ago