ಬೆಂಗಳೂರು: ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಆರ್ಟ್ ಕ್ಯಾನ್ಸರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿರುವ “ಕನ್ನಡದ ಬಣ್ಣಗಳು” (ಕಲರ್ಸ್ ಕನ್ನಡ) ಚಿತ್ರಕಲಾ ಪ್ರದರ್ಶನಕ್ಕೆ ಮಂಗಳವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಭಾರತದಲ್ಲಿ ಚಿತ್ರಕಲೆಯ ಇತಿಹಾಸ ಬಹಳ ಹಳೆಯದು. ಭಾರತೀಯ ಚಿತ್ರಕಲೆಯಲ್ಲಿ, ಭಾರತೀಯ ಸಂಸ್ಕøತಿಯಂತೆ, ಪ್ರಾಚೀನ ಕಾಲದಿಂದ ಇಂದಿನವರೆಗೆ ವಿಶೇಷ ರೀತಿಯ ಏಕತೆಯ ದೃಷ್ಟಿ ಇದೆ. ಇಂದು ಭಾರತೀಯ ಚಿತ್ರಕಲೆ ಜನಪದ ಬದುಕಿನ ವಿಷಯಗಳನ್ನು ಕೈಗೆತ್ತಿಕೊಂಡು ಅವುಗಳಿಗೆ ಮೂರ್ತ ರೂಪ ನೀಡುತ್ತಿದೆ ಎಂದರು.
ದೇಶದಲ್ಲಿ ಕಂಡುಬರುವ ಅವಶೇಷಗಳು ಮತ್ತು ಸಾಹಿತ್ಯಿಕ ಮೂಲಗಳ ಆಧಾರದ ಮೇಲೆ, ಭಾರತದಲ್ಲಿ ಕಲೆಯಾಗಿ ‘ಚಿತ್ರಕಲೆ’ ಬಹಳ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿದೆ ಎಂದು ಸ್ಪಷ್ಟವಾಗುತ್ತದೆ. ಭಾರತೀಯ ಚಿತ್ರಕಲೆ ಪ್ರಾಚೀನತೆಗೆ ಅನೇಕ ಉದಾಹರಣೆಗಳಿವೆ. ಇತಿಹಾಸಪೂರ್ವ ಕಾಲದಲ್ಲಿ ಮಾನವರು ಗುಹೆಗಳ ಗೋಡೆಗಳ ಮೇಲೆ ಚಿತ್ರಿಸಿದ ಉದಾಹರಣೆಗಳಿವೆ. ಭೀಮೇಟ್ಕಾದ ಗುಹೆಗಳಲ್ಲಿ ಮಾಡಿದ ವರ್ಣಚಿತ್ರಗಳು 5500 ಃ.ಅ.ಗಿಂತ ಹಳೆಯದು. 7 ನೇ ಶತಮಾನದಲ್ಲಿ ಅಜಂತಾ ಮತ್ತು ಎಲ್ಲೋರಾ ಗುಹೆಗಳ ವರ್ಣಚಿತ್ರಗಳು ಭಾರತೀಯ ಚಿತ್ರಕಲೆಯ ಅತ್ಯುತ್ತಮವಾಗಿದೆ ಎಂದು ತಿಳಿಸಿದರು.
ಭಾರತೀಯ ಜನರ ಕಲಾತ್ಮಕ ಅಭಿವ್ಯಕ್ತಿ ಕೇವಲ ಕಾಗದ ಅಥವಾ ಹಲಗೆಯ ಮೇಲೆ ಚಿತ್ರಗಳನ್ನು ಮಾಡಲು ಸೀಮಿತವಾಗಿಲ್ಲ. ಮನೆಗಳ ಗೋಡೆಗಳ ಮೇಲೆ ಅಲಂಕಾರಿಕ ಕಲೆ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ದೃಶ್ಯವಾಗಿದೆ. ಹಬ್ಬಗಳಂತಹ ವಿವಿಧ ಸಂದರ್ಭಗಳಲ್ಲಿ, ರಂಗೋಲಿ ಅಥವಾ ವಿಸ್ತಾರವಾದ ಚಿತ್ರಕಲೆ ವಿನ್ಯಾಸಗಳನ್ನು ನೆಲದ ಮೇಲೆ ‘ರಂಗೋಲಿ’ ಇತ್ಯಾದಿ ರೂಪದಲ್ಲಿ ಮಾಡಲಾಗುತ್ತದೆ. ಯಾವುದೇ ನೈಜ ಅಥವಾ ಕಾಲ್ಪನಿಕ ವಸ್ತುವನ್ನು ಕಾಂಕ್ರೀಟ್ ರೂಪದಲ್ಲಿ ಪ್ರಸ್ತುತಪಡಿಸುವುದು ವರ್ಣಚಿತ್ರಕಾರನ ವಿಶೇಷತೆಯಾಗಿದೆ ಎಂದು ಹೇಳಿದರು.
ಈ ಪ್ರದರ್ಶನವು ನಮ್ಮ ಮತ್ತು ನಮ್ಮ ಸಮುದಾಯದ ಪ್ರತಿಭಾವಂತ ಕಲಾವಿದರ ಕಲಾಕೃತಿಗಳನ್ನು ಮತ್ತು ನಮ್ಮ ಐತಿಹಾಸಿಕ ಪರಂಪರೆಯೊಂದಿಗೆ ಕರ್ನಾಟಕದ ಅಭಿವೃದ್ಧಿಯನ್ನು ಪ್ರದರ್ಶಿಸುತ್ತಿದೆ. ಪ್ರದರ್ಶನದಲ್ಲಿ ಕವಿ ಮತ್ತು ಸಮಾಜ ಸುಧಾರಕ ಸಂತ ಬಸವೇಶ್ವರ, ಕರ್ನಾಟಕ ಸಂಗೀತದ ಮಹಾನ್ ಪುರಂದರದಾಸರು, ಕೃಷ್ಣ ರಾಜ ಒಡೆಯರ್, ಭಾರತದ ಮಹಾನ್ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ, ರಾಷ್ಟ್ರಕವಿ ಕುವೆಂಪು, ಪ್ರಸಿದ್ಧ ಭರತನಾಟ್ಯ ನೃತ್ಯಗಾರ್ತಿ ಶ್ರೀಮತಿ ವೆಂಕಟ ಲಕ್ಷ್ಮಮ್ಮ ಮತ್ತು ಕನ್ನಡದ ಜನಪ್ರಿಯ ನಟ ರಾಜಕುಮಾರ್ ಅವರನ್ನು ಇಂದಿನ ಕಲಾವಿದರ ಸೃಜನಾತ್ಮಕ ವಿಧಾನದಲ್ಲಿ ಚಿತ್ರಿಸಲಾಗಿದೆ. ವರ್ಣಚಿತ್ರಗಳ ಮೂಲಕ ಕರ್ನಾಟಕದ ಇತಿಹಾಸಕ್ಕೆ ಕಲಾತ್ಮಕ ರೂಪ ನೀಡಲು ಎಂಟು ಮಹಿಳಾ ಕಲಾವಿದರು ಮಾಡಿದ ಪ್ರಯತ್ನ ಶ್ಲಾಘನೀಯ.
ಈ ಪ್ರದರ್ಶನದಿಂದ ಬರುವ ಆದಾಯದ ಒಂದು ಭಾಗವನ್ನು ಆರ್ಟ್ ಕ್ಯಾನ್ಸರ್ ಚಾರಿಟೇಬಲ್ ಟ್ರಸ್ಟ್ ಮೂಲಕ ಕ್ಯಾನ್ಸರ್ ತಡೆಗಟ್ಟುವಿಕೆಗೆ ಬಳಸಲಾಗುವುದು ಎಂದು ತಿಳಿಸಲಾಗಿದೆ. ಈ ಕಾರ್ಯಕ್ಕೆ ಟ್ರಸ್ಟ್ ಗೆ ಹಾಗೂ ಇತಿಹಾಸದ ಪುಟಗಳನ್ನು ಅತ್ಯಂತ ಸುಂದರವಾಗಿ ಪ್ರದರ್ಶಿಸಿದ ಕಲಾವಿದರಿಗೆ ಮತ್ತು ಅವರ ಗುರುಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆಂದರು.
ಕಾರ್ಯಕ್ರಮದಲ್ಲಿ ಕಲಾ ಇತಿಹಾಸಕಾರ ಮತ್ತು UNESCO ಫೆಲೋ ಡಾ. ಚೂಡಾಮಣಿ ನಂದಗೋಪಾಲ್, ಶ್ರೀ ಎಬಿಎನ್ ಜೋಸೆಫ್, ಶಶಿಧರ್, ಅಮರೇಗೌಡ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…