ಬಿಸಿ ಬಿಸಿ ಸುದ್ದಿ

ಹೊನ್ನ ಕಿರಣಗಿಯಲ್ಲಿ ನವಲಗುಂದ ನಾಗಲಿಂಗನ ಪುರಾಣ ಪ್ರಾರಂಭ

ಫರತಾಬಾದ: ಕಲಬುರಗಿ ತಾಲೂಕಿನ ಹೊನ್ನ ಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಲಿಂಗೈಕ್ಯ ಶ್ರೀ ಕರಿಬಸವೇಶ್ವರ ಶಿವಾಚಾರ್ಯರ ಏಳನೇ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ನವಲಗುಂದ ನಾಗಲಿಂಗ ಶಿವಯೋಗಿಗಳ ಪುರಾಣ ಪ್ರಾರಂಭವಾಯಿತು.

ಇಂದಿನಿಂದ 11ದಿನಗಳ ಕಾಲ ಜನವರಿ 26ರವರೆಗೆ ಜರುಗಲಿದೆ. 26ರಂದು ಸಾಯಂಕಾಲ 6ಗಂಟೆಗೆ ರಥೋತ್ಸವ ಜರುಗಲಿದೆ. ಪುರಾಣ ಪ್ರಾರಂಭವನ್ನು ತೊನಸನಹಳ್ಳಿ ಶ್ರೀಗಳಾದ ಶ್ರೀ.ಷ.ಬ್ರ.ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ನೇತೃತ್ವವನ್ನು ರಾಚೋಟೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ.ಷ.ಬ್ರ.ಚಂದ್ರಗುಂಡ ಶಿವಾಚಾರ್ಯರು ವಹಿಸಿ ಸಮಾಜದಲ್ಲಿ ಶಿಕ್ಷಣ ಮತ್ತು ಸಂಸ್ಕಾರ ಕೊಡುವಂತಹ ಕೇಂದ್ರಗಳು ಮಠಗಳು ಆಗಿರುತ್ತವೆ, ಶರಣರ ಮಹತ್ವವನ್ನು ತಿಳಿದುಕೊಳ್ಳಬೇಕು ಅವರು ಹಾಕಿಕೊಟ್ಟ ದಾರಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ವೇದಿಕೆ ಮೇಲೆ ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿ ತಾಲೂಕು ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ ಮಾತನಾಡಿ ನಮ್ಮ ಮಠವು ಗ್ರಾಮದ ಜನರ ಏಳಿಗೆಗಾಗಿ ಕಾರ್ಯಕ್ರಮಗಳು ಹಮ್ಮಿಕೊಳ್ಳುತ್ತಿದ್ದಾರೆ. ಜನರಿಗೆ ಸಂಸ್ಕಾರದ ಜೊತೆಗೆ ಶಿಕ್ಷಣವೂ ನೀಡುತ್ತಿದ್ದಾರೆ ಎಂದು ಹೇಳಿದರು.

ವಿಶ್ವನಾಥ ವಾರಕರ, ಶಾಂತಯ್ಯ ಡೆಂಗಿಮಠ, ಜಗನ್ಣ ಆಲಮೇಲಕರ್ ಇದ್ದರು. ಪ್ರವಚನಕಾರರಾದ ಪಂಡಿತ ರತ್ನ ಸಿದ್ದರಾಮ ಸ್ವಾಮಿಗಳು, ವಿಶ್ವರಾಧ್ಯ ಗೃಹಸ್ಥಾಶ್ರಮ ಬ್ಯಾಡಗಿಹಾಳ ಅವರು ನೇರವೇರಿಸಿಕೊಟ್ಟ್ರು. ಸಂಗೀತ ಸೇವೆಯನ್ನು ಭೀಮನಗೌಡ ಯರಗಲ, ತಬಲ ವಾದಕರಾದ ವೀರೇಶ್ ಕಟ್ಟಿ ಸಂಗಾವಿ, ಕಾರ್ಯಕ್ರಮದಲ್ಲಿ ಅಖಂಡಪ್ಪ ಸಿರವಾಳ, ಶಿವಕುಮಾರ ತುಪ್ಪದ, ಕಲ್ಯಾಣಕುಮಾರ ನಂದಿಕೋಲ, ಮಲ್ಲಕಾರ್ಜುನ ಸಜ್ಜನ, ಮುರುಗೇಂದ್ರ ಸಿರನೂರ, ರಾಮು ಹೂಗಾರ್, ಶರಣು ಮುಸಾವಳಗಿ, ಪ್ರಕಾಶ್ ಮುಡ್ಡಿ, ಬಸವರಾಜ್ ಬಸ್ತಾಳ, ತೊನಸನಹಳ್ಳಿ ಭಕ್ತರು, ಹೊನಗುಂಟಿ ಭಕ್ತರು ಇನ್ನು ಇತರರು ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮಠದ ಭಕ್ತರಾದ ಬಸವರಾಜ ಚಟ್ಟಿ ಅವರು ಮಾಡಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

12 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

12 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago