ಶಹಾಬಾದ: ನಗರದ ಶಮ್ಸ್ ಸಭಾಂಗಣದಲ್ಲಿ ಜನವರಿ 22 ಬೆಳಿಗ್ಗೆ 10.30 ಗಂಟೆಗೆ ದಲಿತ ಸಾಹಿತ್ಯ ಪರಿಷತ್ ಶಹಾಬಾದ ತಾಲೂಕ ಘಟಕದ ಉದ್ಘಾಟನಾ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ತಾಲೂಕಿನ ತಹಶೀಲ್ದಾರರಾದ ಸುರೇಶ್ ವರ್ಮಾ ಉದ್ಘಾಟಿಸಲಿದ್ದಾರೆ. ಕನ್ನಡ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಹನುಮಂತರಾವ. ಬಿ. ದೊಡ್ಡಮನಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ್, ಕರ್ನಾಟಕ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಡಾ. ಶಾಂತಮಲ್ಲಪ್ಪ.ವಾಯ್. ಹೊನ್ನುಂಗರ, ಕರ್ನಾಟಕ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಸಹಕಾರದರ್ಶಿ ಡಾ. ಕೈಲಾಸ್ ಎಸ್. ಡೋಣಿ. ದಲಿತ ಚಳುವಳಿ ನಾಯಕ ಸುರೇಶ ಮೆಂಗನ, ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕಾಧ್ಯಕ್ಷ ರಘುವೀರಸಿಂಗ್ ಠಾಕೂರ್, ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಶಿವಪುತ್ರ ಕರಣಿಕ್ ಆಗಮಿಸಲಿದ್ದಾರೆ.
ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಗಪ್ಪ ಬೆಳಮಗಿ (ಸಾಹಿತ್ಯ ಕ್ಷೇತ್ರ), ಡಾ. ಮಲ್ಲೇಶಿ ಸಜ್ಜನ್ (ಸಂಘಟನೆ ಕ್ಷೇತ್ರ), ರಮೇಶ್ ಭಟ್ (ಪತ್ರಿಕಾ ಕ್ಷೇತ್ರ), ಕು.ಯಶೋಧ.ಎ.ಮಸ್ಕಿ (ಸಂಗೀತ ಕ್ಷೇತ್ರ), ಡಾ.ಪಿಎಂ ಸಜ್ಜನ್ (ವೈದ್ಯಕೀಯ ಕ್ಷೇತ್ರ), ವರುಣ ಕುಮಾರ ಘಾಣದಾಳ (ಶಿಕ್ಷಣ ಕ್ಷೇತ್ರ), ಗುರುಪುತ್ರ ಕರಣಿಕ್ (ಕೃಷಿ ಕ್ಷೇತ್ರ), ಶಿವಯೋಗಿ ಮೇತ್ರೆ (ಕ್ರಾಂತಿ ಗೀತೆ) ಪ್ರಮೋದ.ಎ.ನಾಟಿಕರ್ (ನೃತ್ಯ) ಇವರನ್ನು ವಿಶೇಷ ಸನ್ಮಾನ ಮಾಡಲಾಗುತ್ತಿದೆ ಎಂದು ಕನ್ನಡ ದಲಿತ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಶಂಕರ ಜಾನಾ ತಿಳಿಸಿದ್ದಾರೆ.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…