ಕಲಬುರಗಿ: ನೆಟೆ ರೋಗದಿಂದ ಹಾನಿಗೊಳಗಾಗಿ ತೀವ್ರ ಸಂಕಷ್ಟದಲ್ಲಿರುವ ತೊಗರಿ ರೈತರಿಗೆ ರಾಜ್ಯ ಸರ್ಕಾರ ಇದೀಗ ಹೆಕ್ಟರ್‍ಗೆ 10 ಸಾ. ರು ನಂತೆ 2 ಹೆಕ್ಟರ್‍ಗೆ ಸೀಮಿತವಾಗಿ ಮಾಡಿರುವ ಪರಿಹಾರ ಘೋಷಣೆಯನ್ನೇನೋ ಮಾಡಿದೆ. ಇದರಿಂದ ತೊಂದರೆಯಲ್ಲಿರುವ ರೈತರಿಗೆ ಹೆಚ್ಚಿನ ಅನುಕೂಲವಾಗದು. ಎಕರೆಗೆ 25 ಸಾವಿರ ರು ನಂತೆ ಪರಿಹಾರ ನೀಡಬೇಕು ಎಂಬುದು ರೈತರ ಬೇಡಿಕೆಯಾಗಿತ್ತು. ಈ ಬಗ್ಗೆ ಬೆಳಗಾವಿ ಸದನದಲ್ಲಿಯೂ ಪ್ರಸ್ತಾಪ ಮಾಡಲಾಗಿತ್ತು. ಆದರೀಗ ಎಕರೆಗೆ 4 ಸಾ. ರು ನಂತೆ ಹೆಕ್ಟರ್‍ಗೆ 10 ಸಾ. ರು ಪರಿಹಾರ ಘೋಷಣೆ ಮಾಡಿರೋದು ರೈತರಿಗೆ ಅನುಕೂಲವಾಗದು, ಆದಷ್ಟು ಬೇಗ ಹೆಚ್ಚುವರಿ ಪರಿಹಾರ ಪ್ಯಾಕೇಜ್ ರಾಜ್ಯ ಸರ್ಕಾರ ಘೋಷಣೆ ಮಾಡಲಿ ಎಂದು ವಿರೋಧ ಪಕ್ಷ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರಾಗಿರುವ ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.
ಹೇಳಿಕೆ ನೀಡಿರುವ ಅವರು ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆ ಸೇರಿದಂತೆ 2 ಲಕ್ಷಕ್ಕೂ ಹೆಚ್ಚು ಹೆಕ್ಟರ್ ತೊಗರಿ ನೆಟೆ ರೋಗಕ್ಕೆ ಹಾಳಾಗಿದೆ. ಇದರಿಂದ ಸಾವಿರಾರು ರೈತ ಕುಟುಂಬಳು ಬೀದಿಗೆ ಬಿದ್ದಿವೆ. ರಾಜ್ಯ ಸರ್ಕಾರದ ಪರಿಹಾರದಿಂದ ರೈತರ ರಸಗೊಬ್ಬರ, ಬೀಜದ ವೆಚ್ಚವೂ ಆಗೋದಿಲ್ಲ. ಸಾವಿರ ಕೋಟಿ ರು ಪರಿಹಾರ ಪ್ಯಾಕೇಜ್ ನೀಡುವಂತೆ ಆಗ್ರಹಿಸಲಾಗಿತ್ತು. ಹೀಗಾಗಿ ಪರಿಹಾರದ ಮೊತ್ತ ಹೆಚ್ಚಿಗೆ ಮಾಡುವ ಮೂಲಕ ರೈತರಿಗೆ ನೆರವಿಗೆ ಬರಬೇಕು. ಈಗಿನಕ್ಕಿಂತ ಹೆಚ್ಚುವರಿ ಪರಿಹಾರ ಘೋಷಣೆ ಮಾಡಲು ಸರ್ಕಾರ ಪುನಃ ಚಿಂತನೆ ಮಾಡಿ ನಿರ್ಣಯಕ್ಕೆ ಬರಬೇಕು ಎಂದು ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.
ಸರ್ಕಾರದ ಪರಿಹಾರ ಗೋಷಣೆ ಕ್ರಮ ಸ್ವಾಗತಿಸುತ್ತೇನೆ. ಆದರೆ ಸರಾಸರಿಯಾಗಿ 1 ಎಕರೆಯಲ್ಲಿ ರೈತರು 4 ರಿಂದ 6 ಕ್ವಿಟಾಂಲ್ ತೊಗರಿ ಬೆಳೆಯುತ್ತಿದ್ದರು. ಸರಾಸಿರ 6, 500 ರು ಗೆ ಕ್ವಿಂಟಾಲ್ ತೊಗರಿ ಎಂದು ಲೆಕ್ಕ ಹಾಕಿದರು 38 ಸಾವಿರ ರುಪಾಯಿ ಲಾಭ ರೈತರದಾಗುತ್ತಿತ್ತು. ಹಾಳಾಗಿರುವ ತೊಗರಿಗೆ ರೈತರ ಲೆಕ್ಕದಂತೆ 38 ಸಾವಿರ ಬೇಡ, ಕೊನೆ ಪಕ್ಷ 25 ಸಾವಿರ ರುಪಾಯಿ ಎಕರೆಗಾದರೂ ನೀಡಲು ಸರ್ಕಾರ ಮುಂದಾಗಲಿ. ರೈತರ ಸಂಕಟ- ನೋವು ಅರಿತು ರೈಪರ ನಿಲುವಿಗೆ ಮುಂದೆ ಬರಲಿ ಎಂದೂ ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…