ಶಹಾಬಾದ : ಯುವಕರಿಗೆ ಒಳ್ಳೆಯ ಬದುಕನ್ನು ಕೊಡುವುದು ಮತ್ತು ಒಳ್ಳೆಯ ಭವಿಷ್ಯವನ್ನು ರೂಪಿಸುವುದಕ್ಕಾಗಿಯೇ ಸೈನ್ಯ ಕಟ್ಟಿ ಸಮವಸ್ತ್ರ ಧರಿಸಿ ಹೋರಾಡಿದವರು ನೇತಾಜಿ ಎಂದು ಎಸ್.ಎಸ್.ಮರಗೋಳ ಕಾಲೇಜಿನ ಪ್ರಾಂಶುಪಾಲ ಕೆ.ಬಿ.ಬಿಲ್ಲವ ಹೇಳಿದರು.
ಅವರು ನಗರದ ಎಸ್.ಎಸ್.ಮರಗೋಳ ಕಾಲೇಜಿನಲ್ಲಿ ಎಐಡಿಎಸ್‍ಓ ಸಂಘಟನೆಯ ವತಿಯಿಂದ ಆಯೋಜಿಸಲಾದ ನೇತಾಜಿ ಸುಭಾಷಚಂದ್ರಬೋಸ್ ಅವರ 126ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾನ್ ವ್ಯಕ್ತಿ ಒಬ್ಬನ ಜೀವನವನ್ನು ಅರಿಯುವುದು ಮಮತ್ತೋರ್ವ ವ್ಯಕ್ತಿಗೆ ಶಿಕ್ಷಣವಾಗುತ್ತದೆ. ಈ ನಿಟ್ಟಿನಲ್ಲಿ ನೇತಾಜಿಯವರ ಜೀವನ ಆದರ್ಶಗಳನ್ನು ಯುವಜನತೆಗೆ ಪರಿಚಯ ಮಾಡಿಕೊಡುವಲ್ಲಿ ಎಐಡಿಎಸ್‍ಓ ಸಂಘಟನೆಯ ಪ್ರಯತ್ನ ಅಭಿನಂದನೀಯ ಎಂದು ಹೇಳಿದರು.
ಎಐಡಿವಾಯ್‍ಓ ಜಿಲ್ಲಾಧ್ಯಕ್ಷ ಜಗನ್ನಾಥ.ಎಸ್.ಹೆಚ್ ಮಾತನಾಡಿ,ಅನ್ಯಾಯ ಸತ್ಯದೊಂದಿಗೆ ರಾಜಿ ಮಾಡಿಕೊಳ್ಳುವುದು ದೊಡ್ಡ ಅಪರಾಧ ಎಂದು ನಂಬಿದ ನೇತಾಜಿಯವರು ವ್ಯಕ್ತಿಯೊಬ್ಬನ ಅವಕಾಶವನ್ನು ಕಿತ್ತುಕೊಳ್ಳುವುದು ಸಹ ಅನ್ಯಾಯವಾಗುತ್ತದೆ. ಎಲ್ಲರಿಗೂ ಸಮಾನವಾದ ಅವಕಾಶ ಇರುವ ಸಮ ಸಮಾಜವೇ ನೇತಾಜಿಯ ಕನಸಾಗಿತ್ತು. ನಾವು ಯುವಕರು ಇಂತಹ ಆಡಂಬರ ಜೀವನಕ್ಕೆ ಮರುಳಾಗದೆ ನೇತಾಜಿಯವರ ನೈಜ ಉತ್ತರ ಅಧಿಕಾರಿಗಳಾಗಿ ಅವರ ಹೋರಾಟದ ಮಾರ್ಗವನ್ನು ಅನುಸರಿಸಿ ಇಂದು ನಮ್ಮ ಕಣ್ಣೆದುರು ನಡೆಯುತ್ತಿರುವ ಅನ್ಯಾಯ ಭ್ರμÁ್ಟಚಾರ ನಿರುದ್ಯೋಗಗಳ ವಿರುದ್ಧ ಹೋರಾಡಬೇಕೆಂದು ಎಂದು ಹೇಳಿದರು.
ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ತುಳಜಾರಾಮ.ಎನ್.ಕೆ ಮಾತನಾಡಿ, ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರು ದೇಶವಾಸಿಗಳ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಆಗಿದೆ ಶಿಕ್ಷಣ ಉದ್ಯೋಗ ಆರೋಗ್ಯ ಬಡವರ ಪಾಲಿಗೆ ಇಲ್ಲವಾಗಿದೆ. ನೇತಾಜಿಯವರ ಕನಸಿನ ಭಾರತ ಕನಸಾಗಿ ಉಳಿದಿದೆ. ಅದನ್ನು ನನಸು ಮಾಡುವ ಹೋರಾಟಕ್ಕೆ ನೀವೆಲ್ಲರೂ ಕಿಡಿಗಳಾಗಿ ಹೊರಹೊಮ್ಮಬೇಕು ಎಂದು ಹೇಳಿದರು.
ಪ್ರಾಧ್ಯಾಪಕರಾದ ಡಾ.ವೆಂಕಟೇಶ ಪೂಜಾರಿ,ಡಾ.ಚಂದ್ರಶೇಖರ ಗಂದಿಗುಡಿ, ಎಮ್.ಕೆ.ಬೋತಗಿ, ಉಪನ್ಯಾಸಕ ರಾಮಣ್ಣ ಇಬ್ರಾಹಿಂಪೂರ, ವೇದಿಕೆಯ ಮೇಲಿದ್ದರು. ಎಐಡಿಎಸ್‍ಓ ಅಧ್ಯಕ್ಷ ಕಿರಣ ಮಾನೆ ನಿರೂಪಿಸಿದರು,ಸಾಕ್ಷಿ ಮಾನೆ ಸ್ವಾಗತಿಸಿದರು,ಯಶೋಧಾ ವಂದಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…