ಬಿಸಿ ಬಿಸಿ ಸುದ್ದಿ

ಕಾರ್ಮಿಕ ಅಧಿಕಾರಿ ವಿರುದ್ದ ಶಾಸಕ ಮತ್ತಿಮುಡ ಗರಂ

  • ಮಹಾಗಾAವ ಕ್ರಾಸ್‌ನಲ್ಲಿಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಆಕ್ರೋಶ

ಕಮಲಾಪುರ : ತಾಲೂಕಿನ ಅಸಂಘಟಿತ ವಲಯದ ಕಾರ್ಮಿಕರಿಗೆ ಸರಕಾರದ ಅಗತ್ಯ ಸೌ;ಲಭ್ಯಗಳನ್ನು ಒದಗಿಸುವಲ್ಲಿ ಲೋಪ ಎಸಗುತ್ತಿರುವ ಕಲಬುರಗಿ ಕಾರ್ಮಿಕ ಇಲಾಖೆಯ ಅಧಿಕರಿ ರಮೇಶ ಸುಂಬಡ ಅವರ ಮೇಲೆ ಗ್ರಾಮೀಣ ಶಾಸಕ ಬಸವರಾಜ ಮತ್ತಿಮುಡ ಗರಮ ಆದ ಪ್ರಸಂಗ ಮಹಾಗಾಂವ ಕ್ರಾಸ್‌ನಲ್ಲಿ ಜರುಗಿತು.

ಸೋಮವಾರ ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್‌ನಲ್ಲಿ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕಮಲಾಪುರ ತಾಲೂಕು ಅಸಂಘಟಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ವಿವಿಧ ಕಿಟ್‌ಗಳು ಮತ್ತು ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಾಲೂಕಿನ ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆಯ ಸೌಲಭ್ಯಗಳ ಕುರಿತು ತಿಳುವಳಿಕೆ ಮೂಡಿಸಬೇಕು ಅಗತ್ಯ ಫಲಾನುಭವಿಗಳಿಗೆ ಕಿಟ್ ವಿತರಣೆ ಮಾಡಬೇಕು.

ಅಲ್ಲದೇ ಪ್ರತಿ ಫಲಾನುಭವಿಯ ಕುರಿತು ಮಾಹಿತಿ ಕಲೆ ಹಾಕುವಂತೆ ತಿಳಿಸಿದ್ದೆ ಇವುಗಳಿಲ್ಲದೆ ಯಾವ ಕೆಲಸವು ಮಾಡಿಲ್ಲ, ಕಾರ್ಮಿಕ ಭವನ ನಿರ್ಮಾಣಕ್ಕೆ 2 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿಸಿದ್ದೇನೆ, ಸ್ವಮತ 2 ಲಕ್ಷ ರೂಪಾಯಿ ಹಣ ನೀಡಿ 2 ಎಕರೆ ಜಮೀನು ಒದಗಿಸಿದ್ದೇನೆ, ನಿಮ್ಮ ಹೆಸರಿಗೆ ನೊಂದಣಿ ಮಾಡಿಸಿಕೊಳ್ಳಿ ಎಂದರೆ ಇಲ್ಲಿಯ ವರೆಗೆ ಮಾಡಿಕೊಂಡಿಲ್ಲ, ಕೆಲಸ ಮಾಡದಿದ್ದರೆ ಮನೆಗೆ ಹೊಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು,

ಜಿಲ್ಲಾ ಕಾರ್ಮಿಕ ಮುಖಂಡ ಸುನೀಲ ಮಾನಪಡೆ ಮಾತನಾಡಿ, ಸಮಸ್ತ ಅಸಂಘಟಿತ ಕಟ್ಟಡ ಕಾರ್ಮಿಕರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳು ಶ್ರೀಮಂತರ, ಸರಕಾರಿ,ಅರೆ ಸರ್ಕಾರಿ ನೌಕರರ ಪಾಲಾಗುತ್ತಿವೆ, ಈ ಕುರಿತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇನೆ, ಇಲಾಖೆಯು ಮದುವೆ ಕೇವಲ 70 ಸಾವಿರ ರೂಪಾಯಿ ಸಹಾಯಧನ ನೀಡುತ್ತಿದ್ದು ಈ ಮೊತ್ತ ಒಂದು ಲಕ್ಷ ರೂಪಾಯಿಗೆ, ಕಟ್ಟಡ ಕಾರ್ಮಿಕರಿಗೆ ಅಪಘಾತ ವಿಮೆ 5 ಲಕ್ಷ ರುಪಾಯಿ ನಿಡುತ್ತಿದ್ದು 8 ಲಕ್ಷ ರೂಗೆ, ಹೆರಿಗೆ ವೆಚ್ಚ 50 ಸಾವಿರ ರೂಪಾಯಿ ನೀಡುತ್ತಿದ್ದು 70 ಸಾವಿರ ರೂಪಾಯಿಗೆ ಹಾಗೂ ವೈದ್ಯಕೀಯ ವೆಚ್ಚವನ್ನು ಯಾವುದೇ ಆಸ್ಪತ್ರೆ ಬಿಲ್ಲುಗಳು ಇದ್ದರೂ ಮಂಜೂರು ನೀಡಬೇಕು ಅಂತಿಮ ಸಂಸ್ಕಾರ ಸಹಾಯ ಧನ ರಾಶಿ 50 ಸಾವಿರದಿಂದ ಒಂದು ಲಕ್ಷಕೇ ಏರಿಸಬೇಕು ಎಂದರು.

ಜಿಲ್ಲ ಕಾರ್ಮಿಕ ಇಲಾಖೆಯ ಅಧಿಕಾರಿ ರಮೇಶ ಸುಂಬಡ ಮಾತನಾಡಿ ವಾರದಲ್ಲಿ ಕಾರ್ಮಿಕ ಬವನ ನಿರ್ಮಾಣಕ್ಕೆ ಚಾಲನೆ ನೀಡಲು ಕ್ರಮ ಕೈಗೊಳ್ಳುತ್ತೇನೆ, ಕೆಲಸದ ಒತ್ತಡದಲ್ಲಿ ತಾಲೂಕಿನ ವ್ಯಾಪ್ತಿಯಲ್ಲಿ ಶಾಸಕರು ಹೇಳಿದ ಕೆಲಸ ಮಾಡಲಾಗಿಲ್ಲ, ಮುಂಬರುವ ದಿನಗಳಲ್ಲಿ ಹೆಚ್ಚುಶ್ರಮ ವಹಿಸಿ ಕಾರ್ಯ ನಿರ್ವಹಿಸುತ್ತೇನೆ ಎಂದರು.

ಹಿರಿಯ ದಲಿತ ಮುಖಂಡ ಸೂರ್ಯಕಾಂತ ನಿಂಬಾಳಕರ, ಜಿಲ್ಲಾ ಕಾರ್ಮಿಕ ನಿರಿಕ್ಷರಾದ ಪರಶುರಾಮ ಸುಲ್ತಾನಪೂರ ಕಮಲಪುರ ಕಸಾಪ ಅಧ್ಯಕ್ಷ ಸುರೇಶ ಲೇಂಗಟಿ, ಜಿಲ್ಲಾ ಕಾರ್ಮಿಕ ಮುಖಂಡ ಸುನೀಲ ಮಾನಪಡೆ ಮಾತನಾಡಿದರು.

ಜಿಪಂ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ, ಮಾಹಾಂಗಾವ ಗ್ರಾಪಂ ಅಧ್ಯಕ್ಷೇ ಮನಿಷಾ ಹರಸೂರಕರ, ಶಿಕ್ಷಕರ ಸಂಘದ ಮಾಜಿ ತಾಲೂಕು ಅಧ್ಯಕ್ಷ ಮುರುಗೇಂಧ್ರ ವೀರಶೆಟ್ಟಿ, ಮಹಾಗಾಂವ ಪಿಕೆಪಿಎಸ್ ಮಾಜಿ ಅಧ್ಯಕ್ಷ ಗಿರೀಶ ಪಾಟೀಲ, ಪ್ರಮುಖರಾದ ಮಲ್ಲಿಕಾರ್ಜುನ ಮರತೂರಕರ, ದಿಗಂಬರ ಕೂಡಿ, ದಿಲೀಪ ಚಿನ್ನಾ ಬಸವರಾಜ ಕಲಶೆಟ್ಟಿ, ಕಮಲಾಪುರ ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ ಹೊಳಕುಂದಾ, ಸಿದ್ದಲಿಂಗ ಪಾಳಾ, , ಶ್ರೀಮಂತ ಚಂದ್ರನಗರ, ರಂಜಾನ ಮುರಡಿ, ಅರ್ಜುನ ಚಂದ್ರನಗರ, ಜಗನ್ನಾಥ ಬಜಂತ್ರಿ ,ಭೀಮಶಾ ಅಂಬಲಗಾ, ಇತರರು ಇದ್ದರು.
ಕಮಲಾಪುರದಲ್ಲಿ ಕಿಟ್ ವಿತರಣೆ ಸಮಯದಲ್ಲಿ ಕಾಮಿಕ ಇಲಾಖೆ ಅಧಿಕಾರಿ ನೀಡಿರುವ ಬರವಸೆಗಳೆಲ್ಲ ಸುಳ್ಳಾಗಿದೆ, ಗ್ರಾಮೀಣರು ಕಲಬುರಗಿ ಕಛೇರಿಗೆ ಹೋದರೆ ಸೂಕ್ತ ಸ್ಪಂದನೆ ಸಹ ಸಿಗುತ್ತಿಲ್ಲ ಎಂಬ ದೂರುಗಳು ಸಾವರ್ಜನಿಕ ವಲಯದಿಂದ ಬಂದಿವೆ, ಕಮಲಾಪುರದಲ್ಲಿ ಕಾರ್ಮಿಕ ಕಛೇರಿ ಆರಂಬಿಸಿದ್ದು ಸ್ವಾಗತಾರ್ಹ ಎಂದು ಸುರೇಶ ಲೇಂಗಟಿ ಕಾಸಾಪ ತಾಲೂಕು ಅಧ್ಯಕ್ಷರು ಹೇಳಿದರು ತದ ನಂತರ ಕಾರ್ಮಿಕರಿಗೆ ವೃತ್ತಿ ಆಧಾರಿತ 300 ಕಿಟ್ ಗಳನ್ನು ಹಾಗೂ ಆಯಿದ ಕಾರ್ಮಿಕರ ಮಕ್ಕಳಿಗೆ 30 ಶಾಲಾ ಕಿಟ್ ವಿತರಿಸಲಾಯಿತು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

11 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

20 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

21 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

21 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago