ಕಲಬುರಗಿ: ಆತ್ಮಕತೆ ದಾಟಿಯಲ್ಲಿ ಇವರ ಕಥೆಗಳಿದ್ದು, ತಲ್ಲಣ ಇವರ ಕಥೆಗಳ ಕೇಂದ್ರ ಪ್ರಜ್ಞೆಯಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ ಅವರು ಅಭಿಪ್ರಾಯಪಟ್ಟರು.
ನಗರದ ಚಿತ್ರಣ ನೀಡುವ ಮಹಾಂತೇಶ ನವಲಕಲ್, ಗ್ರಾಮ ಚಿತ್ರಣ ನೀಡುವ ಬಸವರಾಜ ಡೋಣೂರ ಅವರು ಕಥೆಗಳು ಒಟ್ಟು 752 ಪುಟಗಳು ಹೊಂದಿವೆ ಎಂದು ಹೇಳಿದರು.
ಜಾಗತೀಕರಣದ ಪ್ರಭಾವ, ಸಾಮಾಜಿಕ ಸಮಸ್ಯೆಗಳು ಹಾಗೂ ಅವುಗಳಿಂದಾದ ಪರಿಣಾಮವನ್ನು ವಿವರಿಸುತ್ತವೆ. ಅನುಭವ ಜನ್ಯ ಮನದಾಳದ ಮಾತುಗಳು ಇವರಿಬ್ಬರ ಕಥೆಗಳಲ್ಲಿವೆ ಎಂದು ಕಥೆಗಾರ ಹಾಗೂ ಅವರ ಕಥೆಗಳ ಇತಿಮಿತಿ ವಿವರಿಸಿದರು. ನಗರದ ಜಿಲ್ಲಾವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಕೇಂದ್ರ ಸಾಹಿತ್ಯ ಅಕಾದೆಮಿ ದೆಹಲಿ ಹಾಗೂ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಭಾನುವಾರ ನಡೆದ ಕನ್ನಡ ಸಣ್ಣ ಕತೆಗಳ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಉತ್ತರ ಕರ್ನಾಟಕದ ಕಥೆಗಳನ್ನು ಓದುವಾಗ ಸಾಮಾನ್ಯವಾಗಿ ವಿಶಿಷ್ಟ ಭಾಷಾ ಜಗತ್ತು, ಪ್ರಾದೇಶಿಕತೆಯ ಸೊಗಡು ಇರುತ್ತದೆ. ಆದರೆ ಇವರ ಕಥೆಗಳಲ್ಲಿ ಇದು ಕಾಣುವುದಿಲ್ಲ. ವರ್ತಮಾನ, ಸಮಕಾಲೀನ ಬದುಕಿಗೆ ಅವರು ತೆರೆದುಕೊಂಡಿರುವುದೇ ಇದಕ್ಕೆ ಕಾರಣವಿರಬಹುದು ಎಂದು ತಮ್ಮ ಅಭಿಪ್ರಾಯ ಮಂಡಿಸಿದರು. ಡಾ. ಬಸವರಾಜ ಡೋಣೂರ ಹಾಗೂ ಮಹಾಂತೇಶ ನವಲಕಲ್ ಅವರು ತಮ್ಮ ಕಥೆಗಳ ಹಿನ್ನೆಲೆ ಹೇಳಿ ತಮ್ಮ ಪರಿಸರ ಇತ್ಯಾದಿಗಳನ್ನು ನೆನಪಿಸಿಕೊಂಡು ತಮ್ಮ ಹೊಸ ಕಥೆಗಳನ್ನು ಪ್ರಸ್ತುತಪಡಿಸಿದರು.
ಸಾಹಿತ್ಯ ಅಕಾದೆಮಿ ಸಹಯೋಗದಲ್ಲಿ ನಮ್ಮ ಭಾಗದ ಮಹಾಂತೇಶ ನವಲಕಲ್ ಹಾಗೂ ಬಸವರಾಜ ಡೋಣೂರ ಅವರ ಕಥೆಗಳ ಜೊತೆಗೆ ಸಮಕಾಲೀನ ಕನ್ನಡ ಸಣ್ಣ ಕತೆಗಳು ಕುರಿತು ಸಂವಾದ ನಡೆಯಿತು. ಜ್ಯೋತಿ ಕುಲಕರ್ಣಿ, ಡಾ.ಗಣೇಶ ಪವಾರ, ಸಂಧ್ಯಾ ಹೊನಗುಂಟಿಕರ್,ಮಹೇಂದ್ರ ಎಂ. ಸಂವಾದ ಕಾರ್ಯಕ್ರಮದ ವೇದಿಕೆಯಲ್ಲಿದ್ದರು.
ಕೇಂದ್ರ ಸಾಹಿತ್ಯ ಅಕಾದೆಮಿ ಸದಸ್ಯ ಡಾ.ಬಾಳಾಸಾಹೇಬ ಲೋಕಾಪುರ ಪ್ರಾಸ್ತಾವಿಕ ಮಾತನಾಡಿ, ಅಕಾಡೆಮಿ ಕಾರ್ಯಕ್ರಮ ಹಾಗೂ ಅವುಗಳ ಸ್ವರೂಪ ಕುರಿತು ತಿಳಿಸಿದರು. ಅನುವಾದಕ ಪ್ರಭಾಕರ ನಿಂಬರ್ಗಿ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಮಹಿಪಾಲರೆಡ್ಡಿ ಮುನ್ನೂರ ನಿರೂಪಿಸಿದರು. ಪ್ರತಿಷ್ಠಾನದ ಅಧ್ತಕ್ಷ ಬಿ.ಎಚ್. ನಿರಗುಡಿ ಸ್ವಾಗತಿಸಿದರು.
ಕಥಾ ಸಂವಾದ ಎಂಬ ಈ ವಿಶೇಷ ಮತ್ತು ಅಪರೂಪದ ಕಾರ್ಯಕ್ರಮದಲ್ಲಿ ಎ.ಕೆ. ರಾಮೇಶ್ವರ, ಚಂದ್ರಕಾಂತ ಕರದಳ್ಳಿ, ಡಾ. ಎಚ್.ಟಿ. ಪೋತೆ, ಡಾ. ವಿಕ್ರಮ ವಿಸಾಜಿ, ಶಂಕರಯ್ಯ ಆರ್. ಘಂಟಿ, ಸಿದ್ಧರಾಮ ಹೊನ್ಕಲ್, ಪ್ರೇಮಾ ಹೂಗಾರ, ಶಾಂತಾ ಭೀಮಸೇನರಾವ, ಆಶಾದೇವಿ ಖೂಬಾ, ಡಾ.ಸುಜಾತಾ ಜಂಗಮಶೆಟ್ಟಿ, ಚಿತ್ರಶೇಖರ ಕಂಠಿ, ಎನ್.ಎಸ್. ಹಿರೇಮಠ, ಸಿದ್ಧರಾಮ ಬೇತಾಳೆ, ಚಾಮರಾಜ ದೊಡ್ಡಮನಿ, ಕಿರಣ ಪಾಟೀಲ ಇತರರು ಭಾಗವಹಿಸಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…