ಬಿಸಿ ಬಿಸಿ ಸುದ್ದಿ

ಸುರೇಶ ಮಹಾಗಾವಕರ್ ಗೆ ಚಿತ್ತಾಪೂರ ಮೀಸಲು ಕ್ಷೇತ್ರಕ್ಕೆ ಟಿಕೇಟ್ ನೀಡಿ

ಕಲಬುರಗಿ: ನಗರದ ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸುರೇಶ ಮಹಾಗಾವಕರ್ ಅವರಿಗೆ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹಣಮಂತ ಕಂದಳ್ಳಿ ವಕೀಲರು ಇವರಿಗೆ ಚಿತ್ತಾಪೂರ ಮೀಸಲು ಕ್ಷೇತ್ರಕ್ಕೆ ಟಿಕೆಟ್ ನೀಬೇಕೆಂದು ಮನವಿ ಮಾಡಿದರು.

ಹಣಮಂತ ಕಂದಳ್ಳಿ ಅವರು 1994 ರಲ್ಲಿ ಜನತಾದಳದ ಕಾರ್ಯಕರ್ತನಾಗಿ ಸದರಿ ಈಗ ಮೂರನೆಯ ಬಾರಿಗೆ ರಾಜ್ಯ ಕಾರ್ಯದರ್ಶಿಯಾಗಿ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು 2012 ರಲ್ಲಿ ಕುಮಾರಸ್ವಾಮಿ ರಾಜ್ಯಾಧ್ಯಕ್ಷತೆಯಲ್ಲಿ ರಾಜ್ಯ ಕಾರ್ಯದರ್ಶಿಯಾಗಿ ಹಾಗೂ 2014 ರಲ್ಲಿ ಕೃಷ್ಣಪ್ಪ ರವರ ಅಧ್ಯಕ್ಷತೆಯಲ್ಲಿ ಹಾಗೂ ಈಗ ಸದರಿ ಸಿ.ಎಮ್ ಇಬ್ರಾಹಿಂ ರವರ ರಾಜಾಧ್ಯಕ್ಷತೆಯಲ್ಲಿ ರಾಜ್ಯ ಕಾರ್ಯದರ್ಶಿಯಾಗಿ ಪಕ್ಷಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಜಿಲ್ಲಾ ಯುವ ಜನತಾದಳ ಹಾಗೂ ಜಿಲ್ಲಾ ಎಸ್.ಸಿ ಘಟಕ, ಜಿಲ್ಲಾ ಮಾತೃ ಘಟಕ ಸಂಘಟನಾ ಕಾರ್ಯದರ್ಶಿಯಾಗಿ ಘಟಕಗಳಲ್ಲಿ ಪದಾಧಿಕಾರಿಯಾಗಿ ಜಿಲ್ಲಾವಾರು ಕೂಡ ಸೇವೆ ಸಲ್ಲಿಸಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷದ ಅಭಿಮಾನಿಯಾಗಿದ್ದೇನೆ. ಅದಕ್ಕಾಗಿ ತಾವುಗಳು ಈ ಬಾರಿ ಚಿತ್ತಾಪೂರ ಮೀಸಲು ಕ್ಷೇತ್ರಕ್ಕೆ ಮಾದಿಗ ಸಮುದಾಯಕ್ಕೆ ಟಿಕೇಟ್ ನೀಡಿದರೆ ನಮ್ಮ ಸಮುದಾಯ ಸಂಪೂರ್ಣ ಬೆಂಬಲ ಸಿಕ್ಕಂತಾಗುತ್ತದೆ. ಹಾಗೂ ನಮ್ಮ ಸಮುದಾಯಕ್ಕೆ ನಮ್ಮ ಪಕ್ಷದವರು ಬೆಂಬಲ ಸೂಚಿಸಿ ಟಿಕೇಟ್ ನೀಡಿದರೆ ಗೆಲುವಿಗಾಗಿ ಪಕ್ಷಕ್ಕಾಗಿ ಸ್ಪರ್ಧಿಸುತ್ತೇನೆಂದು ಮನವಿ ಮಾಡಿದ್ದಾರೆ.

ಮಹಾಪ್ರದಾನ ಕಾರ್ಯದರ್ಶಿ ಸಿದ್ದಣ್ಣ ಪಾಟೀಲ, ಕಾಯಾಧ್ಯಕ್ಷ ಶಂಕರ್ ಕಟ್ಟಿ ಸಂಗಾವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಎಸ್.ರೆಹಮತ್, ಕಾರ್ಯದರ್ಶಿ ಜಿಹಾದ್ದೋದಿನ್, ಎಸ್‍ಸಿ ಘಟಕದ ಅಧ್ಯಕ್ಷ ಸುನೀಲ ಗಾಜರೆ, ಎಸ್‍ಸಿ ದಕ್ಷೀಣ ಅಧ್ಯಕ್ಷ ಸುಮಿತ್ ನಾಗನಹಳ್ಳಿ, ಭವಾನಿಕುಮಾರ ಒಳಕೇರಿ, ಮಾರುತಿ ಜಿ.ಆರ್, ಸುನಾಥ ಎಸ್.ನಂಬಿ, ರಾಮಚಂದ್ರ ಅಟ್ಟೂರ, ಶ್ರೀಮಂತ ಅಟ್ಟೂರ, ಮರಲಿಂಗಪ್ಪ ಕಿಣಿಕೇರಿ, ದೇವಿಂದ್ರ ಹಸನಾಪೂರ, ವಿದ್ಯಾಧರ ಹುಗ್ಗಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

8 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

8 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

10 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

10 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

10 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

10 hours ago