ಬಿಸಿ ಬಿಸಿ ಸುದ್ದಿ

ಮಹಾಗಾಂವ ಗ್ರಾಮದಲ್ಲಿ ಮಂಗಗಳ ಕಾಟ

ಕಮಲಾಪೂರ: ತಾಲೂಕಿನ‌ ಮಹಾಗಾಂವ ಗ್ರಾಮದ ಗ್ರಾಮಸ್ಥರಿಗೆ ಮಂಗಗಳದ್ದೇ ದೊಡ್ಡ ತಲೆನೋವು. ಇಲ್ಲಿನ ಶಾಲಾ ಮಕ್ಕಳು ಶಾಲೆಗೆ ಹೋಗಿ ಬರುವಾಗ ಮಂಗಗಳ(ಕೋತಿ)ನ್ನು ಕಂಡು ಓಡಿಹೋಗುವಂಥ ಭಯದ ಸನ್ನಿವೇಶ ಇದೆ.. ಇನ್ನೂ ಗ್ರಾಮಸ್ಥರು ಕಳೆದ ಒಂದು ವರ್ಷಗಳಿಂದ ಮಂಗಗಳ ಕಾಟಕ್ಕೆ ಬೇಸತ್ತು ಹೋಗಿದ್ದಾರೆ.

ಅರಣ್ಯ ಇಲಾಖೆಯವರು ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಗ್ರಾಮಸ್ಥರು ಕಳೆದ ಸುಮಾರು ವರ್ಷಗಳಿಂದಲೂ ಊರಿನಲ್ಲಿ ಬೀಡು ಬಿಟ್ಟಿರುವ 50ಕ್ಕೂ ಹೆಚ್ಚು ಮಂಗಗಳು ಗ್ರಾಮದ ಜನತೆಗೆ ಒಂದಿಲ್ಲೊಂದು ಕಾಟ ನೀಡುತ್ತಾ ಬಂದಿವೆ. ಊರಿನ ಜನರೆಲ್ಲ ಮಂಗಗಳ ಕಾಟಕ್ಕೆ ಬೇಸತ್ತು ಹೋಗಿದ್ದಾರೆ. ಮಕ್ಕಳನ್ನು ರಸ್ತೆಯಲ್ಲಿ ಬಿಡಲಾಗುತ್ತಿಲ್ಲ. ಹೊಲಗಳಲ್ಲಿ ಹಣ್ಣಿನ ಬೆಳೆ ತೆಗೆಯಲಾಗುತ್ತಿಲ್ಲ ಎಂಬುದು ಊರ ಜನರ ಗೋಳು. ಗ್ರಾಮದಲ್ಲಿ ಸುಮಾರು 400ಕ್ಕೂ ಹೆಚ್ಚು ಮನೆಗಳಿವೆ.

ಅಲ್ಲಿರುವ ಜನರು ಹಗಲು ರಾತ್ರಿ ಎನ್ನದೆ ಸದಾಕಾಲ ಬಾಗಿಲು ಮುಚ್ಚಿಕೊಂಡಿರಬೇಕು ಇನ್ನೂ ಮನೆಗಳ ಮೇಲೆ ಹೊದಿಸಿರುವ ಜಿಂಕ್‌ಶೀಟೆ(ತಗಡು) ಮೇಲೆ ಜಿಗಿಯುತ್ತಿರುವುದರಿಂದ ಶೀಟ್‌ಗಳು ಬೆಂಡಾಗುತ್ತಿವೆ. ಮಂಗಗಳ ಉಪಟಳವನ್ನು ತಪ್ಪಿಸಲು ಗ್ರಾಮಸ್ಥರು ಮನೆಗಳ ಮಾಳಿಗೆ ಏರಿದರೆ. ಜನರನ್ನೇ ಮಂಗಗಳು ಹೆದ್ದರುಸುತ್ತಿವೆ. ಮನೆಗಳ ಮುಂದೇ ಒಣಗಿಸಲು ಇಡುವ ನಾನಾ ಪದಾರ್ಥಗಳನ್ನು ನಿರಾತಂಕವಾಗಿ ಮಂಗಗಳು ಎತ್ತಿಕೊಂಡು ಒಯ್ಯುತ್ತವೆ ಈ ಬಗ್ಗೆ ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಮನೆ ಲೂಟಿ: ಬೆಳಗಾದಂತೆ ಮಂಗಗಳು ಕೆಲವು ಗುಂಪುಗಳಾಗಿ ಗ್ರಾಮದ ಎಲ್ಲಾ ಮನೆಯ ಮೇಲೆ ಸವಾರಿ ಹೊರಡುತ್ತವೆ. ಇಲ್ಲಿನ ಅಷ್ಟೂ ಮನೆಗಳ ಅಡುಗೆ ಕೋಣೆಗಳು ಎಲ್ಲಾ ಕೋತಿಗಳಿಗೂ ಚಿರಪರಿಚಿತವಾಗಿಬಿಟ್ಟಿದೆ. ಮನೆಯವರು ಬಾಗಿಲನ್ನು ತೆರೆದು ಕೆಲಸದಲ್ಲಿ ತೊಡಗಿದ್ದರೆ ಅಡುಗೆ ಮನೆಗೆ ನುಗ್ಗಿ ಎಲ್ಲವನ್ನು ಸೂರೆ ಮಾಡುವುದರೊಂದಿಗೆ ತಮ್ಮ ಕೈಗೆ ಸಿಕ್ಕ ವಸ್ತುಗಳನ್ನು ಹಿಡಿದುಕೊಂಡು ಹೋಗುತ್ತವೆ. ಅಲ್ಲದೇ ಮನೆಯ ಮೇಲಿನ ಹಂಚು ತೆರೆದು ಒಳ ಪ್ರವೇಶಿಸಿ ಎಲ್ಲವನ್ನು ಹಾಳು ಮಾಡುತ್ತಿವೆ. ಇವುಗಳನ್ನು ಓಡಿಸಲು ಮುಂದಾದರೆ ಬೆದರಿಸುವಷ್ಟು ಗಟ್ಟಿಯಾಗಿ ಬೇರೂರಿವೆ. ನಾವೇನಾದರೂ ಓಡಿಸಲು ಮುಂದಾದರೆ ನಮ್ಮ ಮೇಲೂ ಗುರ್ ಎಂದು ಅಟ್ಟಿ ಬರುತ್ತವೆ. ಹಾಗಾಗಿ ನಾವುಗಳು ಕೈಯಲ್ಲಿ ದೊಣ್ಣೆ ಹಿಡಿದು ಓಡಾಡ ಬೇಕಿದೆ ಎಂದು ಗ್ರಾಮಸ್ಥರು ಅಲವತ್ತುಕೊಳ್ಳುತ್ತಾರೆ.

ಇನ್ನೂ ಮನೆಗಳ ಮೇಲೆ ಹೊದಿಸಿರುವ ಜಿಂಕ್‌ಶೀಟೆ(ತಗಡು) ಮೇಲೆ ಜಿಗಿಯುತ್ತಿರುವುದರಿಂದ ಶೀಟ್‌ಗಳು ಬೆಂಡಾಗುತ್ತಿವೆ. ಜನರನ್ನೇ ಮಂಗಗಳು ಹೆದ್ದರುಸುತ್ತಿವೆ. ಗ್ರಾಮದಲ್ಲಿ ಮಂಗಗಳ ಉಪಟಳ ಹೆಚ್ಚಿಗಿದು ಗ್ರಾಮಸ್ಥರಿಗೆ ಸಾಕಾಗಿದೆ. ಹೀಗಾಗಿ ಅರಣ್ಯ ಇಲಾಖೆಯವರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರ ಪರವಾಗಿ ಕರವೇ (ಪ್ರವೀಣ ಶೆಟ್ಟಿ) ಬಣದ ತಾಲೂಕು ಅಧ್ಯಕ್ಷ ನಾಗರಾಜ ಕಟ್ಟಿಮನಿ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

15 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago