ಸುರಪುರ: ನಗರದ ಡಾ.ಬಾಬಾ ಸಾಹೇಬ ಅಂಬೇಡ್ಕರ ಅನುದಾನಿತ ಪದವಿ ಮಹಾವಿದ್ಯಾಲಯದಲ್ಲಿ ನ್ಯಾಕ್ ಸಮಿತಿಯ ತಯಾರಿ ಕಾರ್ಯಾಗಾರವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲಬುರಗಿಯ ಡಾ.ಬಿ.ಆರ್ ಅಂಬೇಡ್ಕರ ಡಿಗ್ರಿ ಕಾಲೇಜಿನ ಪ್ರಾಂಶುಪಾಲ ವಿಜಯಕುಮಾರ ಕೆ.ಡಿ.ಮಾತನಾಡಿ, ಸ್ವಾತಂತ್ರ್ಯ ಬಂದ ಸಮಯದಲ್ಲಿ ಓದು ಹಾಗೂ ಬರಹ ಕಲಿಸಿ ಅಕ್ಷರಸ್ಥರನ್ನಾಗಿ ಮಾಡುವುದು ಶಿಕ್ಷಣದ ಉದ್ದೇಶ ಆಗಿತ್ತು ಈಗ ಶಿಕ್ಷಣದ ಉದ್ದೇಶ ಬದಲಾವಣೆ ಆಗಿದ್ದು ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯ ಪೂರಕ ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ಪರಿಪೂರ್ಣ ವ್ಯಕ್ತಿತ್ವ ಬೆಳೆಸಿ ಸಂವಹನ ಕೌಶಲ್ಯ ಬೆಳೆಸುವುದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಉದ್ದೇಶವಾಗಿದೆ ಎಂದರು.
ಬದಲಾಗುವ ಶಿಕ್ಷಣದ ಉದ್ದೇಶಗಳು ಪೂರೈಸಿ ಮಕ್ಕಳು ಭವಿಷ್ಯದಲ್ಲಿ ಬದುಕು ರೂಪಿಸುವ ದೃಷ್ಟಿಯಿಂದÀ ಗುಣಾತ್ಮಕ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವುದು ಅವಶ್ಯ ಈ ದಿಸೆಯಲ್ಲಿ ಉಪನ್ಯಾಸಕರು ಕೂಡಾ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಬಂದ ಸಮಯದಲ್ಲಿ ದೇಶದಲ್ಲಿ ಕೆಲವೇ ಉನ್ನತ ಶಿಕ್ಷಣ ಸಂಸ್ಥೆಗಳು ಇದ್ದವು ಸಾಕ್ಷರತೆ ಪ್ರಮಾಣ ತುಂಬಾ ಕಡಿಮೆ ಇತ್ತು ಆದರೆ ಈಗ ಕಾಲ ಬದಲಾಗಿದೆ ಸಾಕ್ಷರತಾ ಪ್ರಮಾಣ ಹೆಚ್ಚಾಗಿದ್ದು ಸಮಯಕ್ಕೆ ಅನುಸಾರವಾಗಿ ಕಾಲಕಾಲಕ್ಕೆ ಶಿಕ್ಷಣ ನೀತಿ ಬದಲಾಗಬೇಕು ಈ ದಿಸೆಯಲ್ಲಿ ಉನ್ನತ ಶಿಕ್ಷಣ ಪಠ್ಯಕ್ರಮ ರೂಪಿಸಲು 1999ರಲ್ಲಿ ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಮಾನ್ಯತಾ ಪರಿಷತ್ (ನ್ಯಾಕ್) ಹುಟ್ಟಿಕೊಂಡಿತು ಎಂದು ತಿಳಿಸಿದರು.
ಮಕ್ಕಳನ್ನು ಸ್ಥಳೀಯ ದಿಂದ ಜಗತ್ತಿನ ಕಡೆಗೆ ಸಾಗುವಂತೆ ಲೋಕಲ್ ಟು ಗ್ಲೋಬಲ್ ಎಂಬ ಪರಿಕಲ್ಪನೆ ಬೆಳೆಸಬೇಕಾಗಿದೆ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳನ್ನು ಸಮಗ್ರವಾಗಿ ನೀಡಬೇಕು. ಮೂರು ವರ್ಷದಲ್ಲಿ ಏನನ್ನು ಕಲಿತಿದ್ದಾರೆ ಎಂಬುದನ್ನು ಸಂವಹನ ಮತ್ತು ಲಿಖಿತದ ಮೂಲಕ ಪರಿಣಿತರನ್ನಾಗಿಸಬೇಕು. ಇದನ್ನು ಅಳೆಯಲು ಈ ನ್ಯಾಕ್ ಕಮಿಟಿ ರಚಿಸಲಾಗಿದೆ, ಈ ನ್ಯಾಕ್ ಸಮಿತಿಯ ಏಳು ಮಾನದಂಡಗಳು ಇರುವ ಯೋಜನೆಯನ್ನು ರೂಪಿಸಿದೆ ಮಕ್ಕಳಲ್ಲಿ ಕೌಶಲ್ಯ ಅಭಿವೃದ್ಧಿಯ ಜೊತೆಗೆ ತನ್ನ ಕಾಲ ಮೇಲೆ ತಾನು ನಿಲ್ಲುವಂತಾಗಬೇಕು ಸರಾಗಾಗಿ ಇಂಗ್ಲಿಷ್ ಮಾತನಾಡುವಂತಾಗಬೇಕು ಗುಣಾತ್ಮಕ ಶಿಕ್ಷಣವೇ ನಮ್ಮ ಪ್ರಮುಖ ಗುರಿಯಾಗಬೇಕು ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಡಾ.ಐಎಸ್.ವಿದ್ಯಾಸಾಗರ ಮಾತನಾಡಿ ಉಪನ್ಯಾಸಕರು ಸಮರ್ಪಣಾ ಮನೋಭಾವದಿಂದ ಸಂಸ್ಥೆಯ ಏಳ್ಗೆಗಾಗಿ ದುಡಿಯಬೇಕು ಇದರಲ್ಲಿ ಕಲಿಯುವ ಮಕ್ಕಳ ಜೊತೆಗೆ ನಿಮ್ಮ ಸಂಸಾರದ ಭವಿಷ್ಯ ಕೂಡಾ ಅಡಗಿದೆ ಎಂದು ಹೇಳಿದರು.
ಅಂಬೇಡ್ಕರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಭೀಮಣ್ಣ ಬಿಲ್ಲವ, ಪ್ರಾಚಾರ್ಯ ಡಾ. ನಾಗಣ್ಣ ಪಿ ಪೂಜಾರಿ, ಐಕ್ಯೂಎಸಿ ಸಹಾಯಕ ನಿರ್ದೇಶಕ ಚಂದ್ರಶೇಖರ್ ಡೋಲೆ, ಪ್ರಾಂಶುಪಾಲ ಮಲ್ಲಿಕಾರ್ಜುನ ಕುಲಕರ್ಣಿ, ಹಿರಿಯ ಉಪನ್ಯಾಸಕರಾದ ಉಮಾದೇವಿ ಮಟ್ಟಿ, ಡಾ. ಈಶ್ವರಪ್ಪ ತಳವಾರ, ಬಸವರಾಜ ಮಾಲಿ ಪಾಟೀಲ್, ತಿರುಪತಿ ನೀರಡಗಿ, ಗಂಗಾಧರ ರುಮಾಲ, ಮಲ್ಲಿಕಾರ್ಜುನ ಹೊಸಮನಿ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಚಾರ್ಯ ಹಾಗೂ ಉಪನ್ಯಾಸಕರು ಇದ್ದರು. ಉಮಾದೇವಿ ಮಟ್ಟಿ ನಿರೂಪಿಸಿ ವಂದಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…