ಸುರಪುರ : ನಾರಾಯಣಪುರ ಸ್ಕಾಡಾ ಗೇಟ್ ನಮ್ಮ ಪರಿಕಲ್ಪನೆ. ಸ್ಕಾಟ್ ಗೇಟ್ ಮಾಡಿದ್ದು ನಾವು. ಆದರೆ ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆ ತಂದು ಉದ್ಘಾಟಿಸಿದರು. ಬಿಜೆಪಿ ಮಾನ ಮಾರ್ಯಾದೆ ಇಲ್ಲದ ಸುಳ್ಳಿನ ಸರಕಾರ ಎಂದು ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸ್ಕಾಡಾ ಗೇಟ್‍ಗೆ 4200 ಕೋಟಿ ಕೊಟ್ಟದ್ದು ನಮ್ಮ ಸರಕಾರ. 2017 ರಲ್ಲಿಯೇ ನಾವು ನೀರು ಕೊಟ್ಟಿದ್ದೇವೆ. ಅಂದು ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ್‍ರೆ ಸಾಕ್ಷಿ ಹೊರತು ಬಿಜೆಪಿ ಸರಕಾರ ಅಲ್ಲ. ಬಿಜೆಪಿಗೆ ಅದರ ಪರಿಕಲ್ಪನೆಯೆ ಇರಲಿಲ್ಲ. ಅದನ್ನು ಸೇರಿಸಿದ್ದು, ಬಿಲ್ ಕೊಟ್ಟದ್ದು ನಮ್ಮ ಸರಕಾರ. ನರೇಂದ್ರ ಮೋದಿ ಅಲ್ಲ, ಬಿಜೆಪಿ ಸರಕಾರ ಅಲ್ಲ, ರಾಜೂಗೌಡ ಅಲ್ಲ. ಬಿಜೆಪಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಸುಳ್ಳು ಹೇಳಲು ಇತಿಮಿತಿ ಇರಬೇಕು ಎಂದು ತಿವಿದರು.
ನಾನು ಮುಖ್ಯ ಮಂತ್ರಿಯಾಗಿದ್ದಾಗ ಜನತೆಗೆ ಕೊಟ್ಟ 165 ರ ಪೈಕಿ 158 ಭರವಸೆ ಮತ್ತು ಹೊಸದಾಗಿ 35 ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇನೆ. ಬಿಜೆಪಿ 2018 ರ ಪ್ರಣಾಳಿಕೆಯಲ್ಲಿ 600 ಭರವಸೆ ಪೈಕಿ 50 ಮಾತ್ರ ಈಡೇರಿಸಿದೆ. ನಾನು ಚುನಾವಣಾ ಪ್ರಚಾರಕ್ಕೋಸ್ಕರ ಈ ಮಾತು ಆಡುತ್ತಿಲ್ಲ. ಈ ಬಗ್ಗೆ ಒಂದು ವೇದಿಕೆಯಲ್ಲಿ ಚರ್ಚಿಸೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಗೆ ಹೇಳಿದ್ದೆ. ಆದರೆ ಅವರು ಇವತ್ತಿಗೂ ಉತ್ತರ ಕೊಟ್ಟಿಲ್ಲ. ಅವರಿಗೆ ಧಮ್ಮು ಇಲ್ಲಾ ತಾಕುತ್ತು ಇಲ್ಲ ಎಂದು ವ್ಯಂಗವಾಡಿದರು.
ನಾನು ಮುಖ್ಯ ಮಂತ್ರಿಯಾಗಿದ್ದಾಗ 5 ವರ್ಷದಲ್ಲಿ 15 ಲಕ್ಷ ಮನೆಗಳನ್ನು ಕಟ್ಟಿಸಿದ್ದೇವು. ಬಿಜೆಪಿ ಇದುವರೆಗೂ ಹೊಸದಾಗಿ ಒಂದು ಮನೆ ಮಂಜೂರು ಮಾಡಿಲ್ಲ ಇವರ ಮನೆ ಹಾಳಾಗ ಎಂದು ಕುಟುಕಿದರು. ಲಂಬಾಣಿ ತಾಂಡಾ ,ಕುರುಬರ ಹಟ್ಟಿ, ನಾಯಕನ ಹಟ್ಟಿ ಇನ್ನಿತರವುಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕು ಎಂದು ಕಾನೂನು ಮಾಡಿದ್ದು ನಮ್ಮ ಸರಕಾರ. ಇದನ್ನು ಸಾಬೀತು ಮಾಡಲು ಎಲ್ಲಿಯಾದರೂ ಸರಿ ನಾನು ಸಿದ್ಧ ಎಂದು ಸವಾಲು ಹಾಕಿದರು.
ನಾನು ಮುಖ್ಯಮಂತ್ರಿಯಾಗಿದ್ಧಾಗ 50 ಸಾವಿರವರೆಗೆ ಸೊಸೈಟಿ ಸಾ¯ 22 ಲಕ್ಷದ 27 ಸಾವಿರ ರೈತರಿಗೆ 8165 ಕೋಟಿ ಸಾಲ ಮನ್ನಾ ಮಾಡಿದೆ. ರೈತರು ಇಂದು ಕಷ್ಟದಲ್ಲಿದರೂ ಕೂಡ ಬಿಜೆಪಿ ಸರಕಾರ ಒಂದು ನೈಯಾ ಪೈಸ್ ಸಾಲ ಮನ್ನಾ ಮಾಡಿಲ್ಲ. ಎಲ್ಲ ಅಭಿವೃದ್ದಿ ನಿಗಮ ಮಂಡಳಿಗಳಿಗೆ ನೇರ ಸಾಲ ನಿಲ್ಲಿಸಿದ್ದಾರೆ ಎಂದು ದೂರಿದ ಅವರು, ನಮ್ಮನ್ನು ನಂಬಿದವರಿಗೆ ದ್ರೋಹ ಮಾಡಲ್ಲ. ಯಾರು ನಮಗೆ ನಂಬಿ ಚುನಾಯಿಸಿ ಕಳುಹಿಸುತ್ತಾರೆ ಅವರ ಸೇವೆ ಮಾಡಲು ನೂರಕ್ಕೂ ನೂರು ಸಿದ್ಧ. ಈ ಬಾರಿ ತಿರ್ಮಾನಿಸಿ ಬದಲಾವಣೆ ಮಾಡಿ ಬಿಜೆಪಿಯನ್ನು ತೆಗೆದು ಹಾಕಿ ಕಾಂಗ್ರೆಸ್‍ಗೆ ಮತ್ತೊಮ್ಮೆ ಅವಕಾಶ ಕೊಡುವುದರ ಮೂಲಕ ನಮ್ಮ ಕೈಗೆ ಅಧಿಕಾರ ಕೊಡುವ ಕೆಲಸ ಮಾಡಿ ಎಂದರು.
ನಾನು ಮುಖ್ಯಮಂತ್ರಿ ಆಗಿದ್ಧಾಗ ಎಸ್ಸಿ ಮತ್ತು ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಎಸ್‍ಸಿಪಿ ಮತ್ತು ಟಿಎಸ್‍ಪಿ ಹಣ ಖರ್ಚು ಮಾಡಬೇಕು ಎಂದು ಕಾನೂನು ಮಾಡಿದ್ದು ಕರ್ನಾಟಕದ ಇತಿಹಾಸದಲ್ಲಿ ಮೊದಲು. 88 ಸಾವಿರ ಕೋಟಿ ಹಣ ಖರ್ಚು ಮಾಡಿರುತ್ತೇವೆ. ಎಸ್ಸಿ, ಎಸ್ಸಿ ಜನರಿಗೆ ಬಡ್ತಿಯಲ್ಲಿ ಮೀಸಲಾತಿ ಕೊಡಬೇಕು ಎಂದು ಕಾನೂನು ಮಾಡಿದ್ದು ನಮ್ಮ ಸರಕಾರ. ಬೀದರ್, ಗುಲ್ಬರ್ಗ್, ಯಾದಗಿರಿ, ಕೊಡುಗು ಜಿಲ್ಲೆಗಳ ಕುರುಬರಿಗೆ ಎಸ್ಟಿಗೆ ಶಿಫಾರಸ್ಸು ಮಾಡಿ ಕೇಂದ್ರ ಸರಕಾರಕ್ಕೆ ಕಳುಹಿಸಿದೇವೆ. ಕುಲಶಾಸ್ತ್ರಿ ಅಧ್ಯಯನ ಶಿಫಾರಸ್ತು ಮಾಡಲಾಗಿದೆ. ಕೂಲಿ ಕಬ್ಬಲಿಗ ಸಮಾಜ ಅವರನ್ನು ಮೂರು ಬಾರಿ ಶಿಫಾರಸು ಮಾಡಿದ್ದೆ ಆದರೆ ಮಾಡಲಿಲ್ಲ. ಡಬಲ್ ಇಂಜಿನ್ ಸರಕಾರ ಇವತ್ತಿನವರೆಗೂ ಏನು ಮಾಡಿಲ್ಲ. ಡಬಲ್ ಎಂಜಿನ್ ಸರಕಾರ ಯಾಕೆ ಬೇಕು ಎಂದು ಸಿದ್ದರಾಮಯ್ಯ ಪ್ರಶ್ನೀಸಿದರು.
ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸಜ್ಜನ ರಾಜಕಾರಣಿ. ಬಡವರ ಪರವಾದ ವ್ಯಕ್ತಿ. ಜಾತ್ಯಾತೀತ ಮನೋಭಾವ, ಅಭಿವೃದ್ದಿ ಪರ ವ್ಯಕ್ತಿತ್ವ ಅವರದು. ಇಂತವರು ಎಂಎಲ್‍ಎ ಆಗಬೇಕು.. ಅವರ ಎಂಎಲ್‍ಎ ಇದ್ದಾಗ ಏನು ಕೇಳಿದರು ಎಲ್ಲವನ್ನು ಮಾಡಿ ಕೊಟ್ಟಿರುವೆ. ಯಾವತ್ತು ಕೂಡ ನನಗೆ ಇಂತಹದೆ ಬೇಕಂತ ಕೇಳಲಿಲ್ಲ. ಈ ಬಾರಿ ನಿಮ್ಮ ಪ್ರತಿನಿಧಿಯಾಗಿ ಇವರನ್ನು ವಿಧಾನಸಭೆ ಕಳುಹಿಸಿಕೊಡಿ. ಈ ಕ್ಷೇತ್ರ ಅಭಿವೃದ್ಧಿ ಪಡಿಸುವುದು ನಮ್ಮ ಜವಾಬ್ದಾರಿ. ಏನೆ ಕೆಲಸಗಳು ಬಂದರು ಎಲ್ಲವನ್ನು ಮಾಡಿಸಿಕೊಡುವ ಜವಾಬ್ದಾರಿ ನಾನು ಹೊತ್ತುಕೊಳ್ಳುವೆ. ಇವರಿಗೆ ಕೊಡುವ ವೋಟ್ ನನಗೆ ಕೊಟ್ಟಂತೆ. ಎಲ್ಲರು ಕೈಯತ್ತಿ ನೋಡಾಣೊ ಎಂದು ಸಿದ್ದರಾಮಯ್ಯ ಹೇಳಿದಾಗ ರಾಜಾ ವೆಂಕಟಪ್ಪ ನಾಯಕರ ಪರ ಜಯ ಘೋಷಗಳು ಮೊಳಗಿದವು.
ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಮೂರು ಬಾರಿ ಶಾಸಕನಾಗಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿರುವೆ. ಬಿಜೆಪಿ ಸರಕಾರದ ದುರಾಡಳಿತ ಮತ್ತು ಭ್ರಷ್ಟಾಚಾರಕ್ಕೆ ಜನರು ರೋಸಿ ಹೋಗಿದ್ದು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಸಿದ್ಧರಾಗಿದ್ಧಾರೆ. ಬಿಜೆಪಿಗೆ ಈಗಾಗಲೇ ನಡುಕು ಹುಟ್ಟಿದೆ. ಗುರುವಾರ ರಾತ್ರಿ ಈ ಕಾರ್ಯಕ್ರಮದ ಪೋಸ್ಟರ್ ಹರಿದು ಹಾಕಿ ಸಣ್ಣ ತನ ಪ್ರದರ್ಶಿಸಿದ್ದಾರೆ ಎಂದ ಅವರು, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದರು.
ಶಾಸಕರಾದ ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್, ಜಮೀರ್ ಅಹ್ಮದ್, ಎಂಎಲ್‍ಸಿ ಪ್ರಕಾಶ ರಾಠೋಡ, ಮಾಜಿ ಸಚಿವ ಹೆಚ್.ಸಿ.ಮಹಾದೇವಪ್ಪ ಮಾತನಾಡಿದರು. ಎಂಎಲ್‍ಸಿ ಶರಣಪ್ಪ ಮಟ್ಟರೂ, ಜಿಲ್ಲಾಧ್ಯಕ್ಷ ಬಸವರಡ್ಡಿ ಅನಪುರ, ಯುತ್ ಕಾಂಗ್ರೆಸ್ ಅಧ್ಯಕ್ಷ ರಾಜಾ ಕುಮಾರ ನಾಯಕ, ಬ್ಲಾಕ್ ಅಧ್ಯಕ್ಷ ನಿಂಗರಾಜ್ ಬಾಚಿಮಟ್ಟಿ, ಮುಖಂಡರಾದ ವಿಠ್ಠಲ ಯಾದವ, ರಾಜಶೇಖರ ಪಾಟೀಲ್ ವಜ್ಜಲ್, ನಾಗಣ್ಣ ಸಾಹು ದಂಡಿನ್, ಭೀಮರಾಯ ಮೂಲಿಮನಿ, ಮಲ್ಲಣ್ಣ ಸಾಹು ಮಧೋಳ, ಸೂಗೂರೇಶ ವಾರದ ಸೇರಿ ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…