ಕಲಬುರಗಿ ಕಸಾಪದಿಂದ ಒಂದು ದಿನದ ಪ್ರಥಮ ಯುವ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಕಲಬುರಗಿ: ಸುಮಾರು ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕನ್ನಡವು ಜನಮನರ ಭಾಷೆಯಾಗಬೇಕು ಎಂದು ನಗರ ಪೊಲಿಸ್ ಆಯುಕ್ತ ಆರ್. ಚೇತನ ಅವರು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದೇ ಮೊದಲ ಬಾರಿಗೆ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶನಿವಾರ ಪರೋಪಕಾರಿ ಪ್ರೊ. ಎಂ.ಬಿ.ಅಂಬಲಗಿ ವೇದಿಕೆಯಡಿಯಲ್ಲಿ ಆಯೋಜಿಸಿದ ಒಂದು ದಿನದ ಪ್ರಥಮ ಯುವ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಆಂಗ್ಲ ಭಾಷೆಯ ಪ್ರಭಾವದ ಇಂದಿನ ದಿನಗಳಲ್ಲಿ ಎಲ್ಲರೂ ಕನ್ನಡ ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಕನ್ನಡ ಬಳಸಿದರೆ ಎಲ್ಲಿ ಮರ್ಯಾದೆಗೆ ಕುತ್ತು ಬರುತ್ತದೆ ಎಂಬ ಸಂಕುಚಿತ ಮನೋಭಾವನೆಯಿಂದ ಯುವ ಜನತೆ ಹೊರ ಬರಬೇಕು. ಕನ್ನಡವನ್ನು ತಾಂತ್ರಿಕವಾಗಿ ಬಳಕೆಮಾಡಬೇಕು. ಕಂಪ್ಯೂಟರ್ ಯುಗದಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಕಂಪ್ಯೂಟರ್ ನಲ್ಲೂ ಕೂಡ ಕನ್ನಡ ಸಾಹಿತ್ಯ ಓದುವ ಅವಕಾಶ ಲಭ್ಯವಿದೆ. ಯುವಕರು ತಂತ್ರಜ್ಞಾನ ಬಳಸಿಕೊಂಡು ಸಾಹಿತ್ಯ ಬಗ್ಗೆ ಆಸಕ್ತಿ ಬಳಸಿಕೊಂಡು ಕನ್ನಡ ಭಾಷೆ ಉಳಿಸಲು ಕಂಕಣಬದ್ಧರಾಗಬೇಕು ಎಂದು ಯುವಕರಿಗೆ ಸಲಹೆ ನೀಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಬರಹಗಾರನಾದವನಿಗೆ ಸಾಮಾಜಿಕ ಬದ್ಧತೆ ಇರಬೇಕು. ತನ್ನ ಸುತ್ತಮುತ್ತಲಿನ ಸಮಾಜದ ಬಗ್ಗೆ ಕಾಳಜಿ ಹೊಂದಿರುವುದಲ್ಲದೆ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ಗುಣವಿರಬೇಕು. ಕವಿ-ಸಾಹಿತಿಗಳು ಕೇವಲ ಬರವಣಿಗೆಗೆ ಸೀಮಿತವಾಗದೆ ಪ್ರಸ್ತುತ ಸಮಾಜದ ಸವiಸ್ಯೆಗಳಿಗೆ ತನ್ನ ಬರಹದ ಮೂಲಕ ಪರಿಹಾರ ಕಂಡುಕೊಳ್ಳುವ ಕಾರ್ಯ ಮಾಡಬೇಕು. ಜತೆಗೆ ನಮ್ಮ ಬರವಣಿಗೆಗೆ ತಕ್ಕಂತೆ ನಮ್ಮ ನಡವಳಿಕೆಯೂ ಹಾಗೆಯೇ ಇರಬೇಕು. ಇಂದಿನ ಸಮಾಜಕ್ಕೆ ಪೂರಕವಾದುದನ್ನು ಬರೆದು ಹೊಸ ಬದುಕಿನೆಡೆಗೆ ಯುಕರನ್ನು ಮುನ್ನಡೆಸಬೇಕಾಗಿದೆ ಎಂದ ಅವರು, ಪರಿಷತ್ತು ಸಾಂದರ್ಭಿಕವಾಗಿ ಅನೇಕ ವೈವಿದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಂಸ್ಕøತಿಕ ಪರಿಸರವನ್ನು ನಿರ್ಮಿಸುತ್ತಿದೆ ಎಂದರು.

ಸಮ್ಮೇಳನಾಧ್ಯಕ್ಷ ಯುವ ಸಾಹಿತಿ ಡಾ. ಮಲ್ಲಿನಾಥ ಎಸ್ ತಳವಾರ ಅವರ ಬಿಚ್ಚು ನುಡಿಗಳು: ಸೃಜನ ಪ್ರಕ್ರಿಯೆಯು ಸಾಹಿತ್ಯ ರಚನೆಯ ಸುಪ್ತ ಪ್ರಜ್ಞೆ. ಇದೊಂದು ಸಾಮಾಜಿಕ ಸಂಸ್ಥೆ. ಅಂತೆಯೇ ಇದು ಸದಾ ಜೀವನ’ವನ್ನು ಅನುಕರಿಸುತ್ತದೆ ಎಂದು ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಮಲ್ಲಿನಾಥ ತಳವಾರ ಅಭಿಮತ ವ್ಯಕ್ತಪಡಿಸಿದರು.

ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಶನಿವಾರ ಜರುಗಿದ ಪ್ರಥಮ ಜಿಲ್ಲಾ ಯುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, . ಸಾಹಿತ್ಯ ಸಾಮಾನ್ಯವಾಗಿ ನಿರ್ದಿಷ್ಟ ಸಾಮಾಜಿಕ ಸಂಸ್ಥೆಗಳಿಗೆ ನಿಕಟವಾಗಿ ಸಂಬಂಧಿಸಿದಂತೆಯೇ ಉದ್ಭವಗೊಂಡಿದೆ. ಈ ಕಾರಣಕ್ಕಾಗಿಯೇ ಸಾಹಿತ್ಯಕ್ಕೊಂದು ಸಾಮಾಜಿಕ ಕರ್ತವ್ಯವೂ ಇದೆ. ಯುವ ಮನಸ್ಸುಗಳನ್ನು ಸೆಳೆಯುವ, ಬೆಸೆಯುವ ಮಹತ್ತರವಾದ ಕಾರ್ಯವನ್ನು ಸಾಹಿತ್ಯ ಮಾಡುತ್ತ ಬಂದಿದೆ, ಮುಂದೆಯೂ ಮಾಡುತ್ತದೆ; ಮಾಡಬೇಕು ಸಹ! ‘ಯೌವ್ವನ’ ಎನ್ನುವುದು ನಾಗಾಲೋಟದ ಪ್ರತಿನಿಧಿ. ಇದನ್ನು ನಿಯಂತ್ರಿಸುವ, ಸರಿಯಾದ ಮಾರ್ಗದಲ್ಲಿ ಮುನ್ನಡೆಸುವ ಗುರುತರವಾದ ಜವಾಬ್ದಾರಿ ಸಾರಸ್ವತ ಲೋಕದ ಮೇಲಿದೆ ಎಂದರು.

ಸಾಹಿತ್ಯ ಎನ್ನುವಂತದ್ದು ಮಾನವೀಯತೆಯ ಅತ್ಯಂತ ಆಸಕ್ತಿದಾಯಕ ಮತ್ತು ಮಹತ್ವದ ಅಭಿವ್ಯಕ್ತಿಗಳಲ್ಲಿ ಒಂದು. ಇದು ಸಾಮಾನ್ಯ ಜನರ ಬಗ್ಗೆ ಅಸಾಧಾರಣವಾದದ್ದನ್ನು ಕಂಡುಹಿಡಿಯುವ ಮತ್ತು ಸಾಮಾನ್ಯ ಪದಗಳಿಂದ ಅಸಾಮಾನ್ಯವಾದದ್ದನ್ನು ಹೇಳುವ ಒಂದು ಅದ್ಭುತ ಕಲೆಯಾಗಿದೆ. ಇಂಥಹ ಶ್ರೇಷ್ಠ ಸಾಹಿತ್ಯವು ಓದುವ ಮನುಷ್ಯನನ್ನು ಬರೆದ ಮನುಷ್ಯನ ಸ್ಥಿತಿಗೆ ಪರಿವರ್ತಿಸುತ್ತದೆ. ಇದುವೆ ಸಾಹಿತ್ಯದ ಮೂಲ ಆಶಯ! ಸಾಹಿತ್ಯದ ಮೂಲತತ್ವವೆಂದರೆ ಭಾವನೆ ಮತ್ತು ಬುದ್ಧಿಯ ನಡುವಿನ ಯುದ್ಧ, ಜೀವನ ಮತ್ತು ಸಾವಿನ ನಡುವಿನ ಯುದ್ಧವಾಗಿದೆ. ಈ ನೆಲೆಯಲ್ಲಿ ಗಮನಿಸಿದಾಗ ಸಾಹಿತ್ಯವೆಂದರೆ ಬೇರೇನೂ ಅಲ್ಲ, ಅಂದಂದಿನ ಸಮಾಜದ ಸ್ಪಷ್ಟವಾದ ಹೆಜ್ಜೆ ಗುರುತುಗಳೆ. ಅಂತೆಯೇ ಬರೀ ಟೀಕೆಗಳು ಸಾಹಿತ್ಯವಾಗಲಾರದು ಎನ್ನಲಾಗುತ್ತದೆ. ತನ್ನ ಕಾಲಕ್ಕೆ ತಕ್ಕಂತೆ ಮಾತನಾಡದ ರಂಗಭೂಮಿ, ಸಾಹಿತ್ಯ, ಕಲಾತ್ಮಕ ಅಭಿವ್ಯಕ್ತಿಗೆ ಯಾವುದೇ ಪ್ರಸ್ತುತತೆ ಇರುವುದಿಲ್ಲ. ಒಂದು ಸಾಹಿತ್ಯದ ಅವನತಿಯೆಂದರೆ ಅದು ನಮ್ಮ ಸಮಾಜದ ಅವನತಿಯೆ ಸರಿ! ಹಾಗಂತ ಬರೆದುದೆಲ್ಲವೂ ಸಾಹಿತ್ಯ ಆಗಲಾರದು ಎಂದು ಅವರು ಪ್ರತಿಪಾದಿಸಿದರು.

ಸಾಹಿತ್ಯದೊಂದಿಗೆ ಭಾಷೆ, ಕಲೆ, ಸಂಸ್ಕøತಿ, ನಾಡು-ನುಡಿಯನ್ನು ರಕ್ಷಿಸಲು ಕಂಕಣಬದ್ಧವಾಗಿರುವ ಸಂಸ್ಥೆಯೇ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು. ಶತಮಾನಕ್ಕೂ ಹೆಚ್ಚು ವಸಂತಗಳನ್ನು ಪೂರೈಸಿರುವ ಕನ್ನಡ ಸಾಹಿತ್ಯ ಪರಿಷತ್ತು ನಾಡು, ನುಡಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯವಾಗಿದ್ದು ಅಸಂಖ್ಯಾತ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ಕಾರ್ಯಭಾರದ ವಿಕೇಂದ್ರೀಕರಣವಾಗಿ ಜಿಲ್ಲಾ, ತಾಲ್ಲೂಕು ಹಾಗೂ ವಲಯ ಮಟ್ಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಜೀವಂತಿಕೆಯನ್ನು ಉಳಿಸಿಕೊಂಡು ಬಂದಿದೆ, ಬರುತ್ತಿದೆ. ಇನ್ನೂ ನಮ್ಮ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕುರಿತು ಮಾತಾಡುವುದಾದರೆ ಇಲ್ಲಿಯವರೆಗೆ ಹದಿನೆಂಟು ಯಶಸ್ವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸಿದೆ. ಸದಾ ಹೊಸತನಕ್ಕೆ ತುಡಿಯುವ ಸಹೋದರ, ಈ ಪರಿಷತ್ತಿನ ಅಧ್ಯಕ್ಷರಾದ ಶ್ರೀ ವಿಜಯಕುಮಾರ ಪಾಟೀಲ ತೇಗಲತಿಪ್ಪಿಯವರು ಇದೆ ಮೊದಲ ಬಾರಿಗೆ ‘ಕಲಬುರಗಿ ಜಿಲ್ಲಾ ಪ್ರಥಮ ಯುವ ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ಆಯೋಜಿಸಿರುವುದಕ್ಕೆ ಅವರು ಮತ್ತು ಅವರ ಬಳಗದವರೆಲ್ಲರೂ ನಿಜಕ್ಕೂ ಅಭಿನಂದನಾರ್ಹರು.

ಯುವ ಜನಾಂಗವೆ ನಮ್ಮ ಭವಿಷ್ಯದ ಭರವಸೆ. ಯೌವನದಲ್ಲಿ ರೂಪುಗೊಂಡ ಒಳ್ಳೆಯ ಅಭ್ಯಾಸಗಳು ಎಲ್ಲಾ ವ್ಯತ್ಯಾಸಗಳನ್ನು ಮಾಡುತ್ತವೆ, ಅಂದರೆ ಪರಿವರ್ತನೆಗಳನ್ನು ಸಾಧ್ಯವಾಗಿಸುತ್ತವೆ. ಯಾರು ಸೌಂದರ್ಯವನ್ನು ನೋಡುವ ಸಾಮಥ್ರ್ಯ ಹೊಂದಿರುತ್ತಾರೊ ಅವರು ತಮ್ಮ ಜೀವನದುದ್ದಕ್ಕೂ ಸಂತೋಷವಾಗಿರಬಲ್ಲರು. ಈ ಕಾರಣಕ್ಕಾಗಿಯೇ ಸೌಂದರ್ಯವನ್ನು ನೋಡುವ ಸಾಮಥ್ರ್ಯವನ್ನು ಹೊಂದಿರುವ ಯಾರಿಗಾದರೂ ಸಾಹಿತ್ಯಕ್ಕೊಂದು ಸಾಮಾಜಿಕ ಕರ್ತವ್ಯವೂ ಇದೆ. ಯುವ ಮನಸ್ಸುಗಳನ್ನು ಸೆಳೆಯುವ, ಬೆಸೆಯುವ ಮಹತ್ತರವಾದ ಕಾರ್ಯವನ್ನು ಸಾಹಿತ್ಯ ಮಾಡುತ್ತ ಬಂದಿದೆ, ಮುಂದೆಯೂ ಮಾಡುತ್ತದೆ; ಮಾಡಬೇಕು ಸಹ! ‘ಯೌವ್ವನ’ ಎನ್ನುವುದು ನಾಗಾಲೋಟದ ಪ್ರತಿನಿಧಿ. ಇದನ್ನು ನಿಯಂತ್ರಿಸುವ, ಸರಿಯಾದ ಮಾರ್ಗದಲ್ಲಿ ಮುನ್ನಡೆಸುವ ಗುರುತರವಾದ ಜವಾಬ್ದಾರಿ ಸಾರಸ್ವತ ಲೋಕದ ಮೇಲಿದೆ. ಸಾವಿರ ಪುಸ್ತಕಗಳನ್ನು ಓದಿದಾಗ ನಮ್ಮ ಮಾತುಗಳು ನದಿಯಂತೆ ಹರಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಸಂಪಾದಕತ್ವದ `ಕವಲೊಡೆದ ದಾರಿ ಮತ್ತು ಬದುಕು’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಡಾ. ಜ್ಯೋತಿ ತೆಗನುರ, ಚೇತನ ಸೋಮಶೇಖರ ಗೋನಾಯಕ, ರಾಜಶೇಖರ ಚೌಧರಿ, ಜ್ಯೋತ್ಸ್ನಾ ಹೇರೂರ, ಶಿವರಾಜ ಅಂಡಗಿ, ಶರಣರಾಜ ಛಪ್ಪರಬಂದಿ, ಶರಣಬಸಪ್ಪ ನರೂಣಿ, ವಿಶ್ವನಾಥ ತೊಟ್ನಳ್ಳಿ, ರವೀಂದ್ರಕುಮಾರ ಭಂಟನಳ್ಳಿ, ಬಾಬುರಾವ ಪಾಟೀಲ, ವಿನೋದ ಜೇನವೇರಿ, ರಾಜೇಂದ್ರ ಮಾಡಬೂಳ ವೇದಿಕೆ ಮೇಲಿದ್ದರು.

ಗಮನ ಸೆಳೆದ ಹೊಸ ತಲೆಮಾರಿನ ಸಾಹಿತ್ಯ ಸ್ಪಂದನೆ ಗೋಷ್ಠಿ: ಹವ್ಯಾಸ ಬದಲಿಸು-ಹಣೆ ಬರಹ ಬದಲಾದೀತು ಕುರಿತು ಮಾತನಾಡಿದ ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ, ನಮ್ಮ ಹಣೆಬರಹದಲ್ಲಿ ಇದ್ದಂತೆ ನಡೆಯುತ್ತದೆ ಎಂದು ಕುಳಿತುಕೊಮಡರೆ ಬದುಕು ಬದಲಾಗುವುದಿಲ್ಲ. ಹವ್ಯಾಸ ಬದಲಿಸಿಕೊಂಡರೆ ಬದುಕು ಸುಂದರವಾಗುತ್ತದೆ. ಜೀವನದಲ್ಲಿ ಹವ್ಯಾಸ ಬದಲಿಸಿಕೊಳ್ಳುವುದು ಅಗತ್ಯವಾಗಿದೆ. ಹವ್ಯಾಸ ಕಲಿಕಾ ರೂಪದಲ್ಲಿ ವಿದ್ಯಾರ್ಥಿಗಳು ತಿಳಿಸಿಕೊಡಬೇಕು. ಯಾವುದೇ ವಸ್ತು ಖರೀದಿಸುವ ಮುನ್ನ ಬದುಕಿಗೆ ಆ ವಸ್ತು ಅಗತ್ಯವೇ?, ಅನಿವಾರ್ಯವೇ ಎಂದು ಯೋಚನೆ ಮಾಡಿ ಖರೀದಿಸಬೇಕು. ಮೊಬೈಲ್ ಬಳಕೆ ಸೀಮಿತಗೊಳಿಸಬೇಕು ಎಂದು ಸಲಹೆ ನೀಡಿದರು.

ಕಲೆ, ಸಾಹಿತ್ಯ-ಬದುಕಿಗೆ ಬಲ ಮತ್ತು ಬೆಲೆ ವಿಷಯದ ಕುರಿತು ಮಾತನಾಡಿದ ಆಕಾಶವಾಣಿ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ, ದೇಶ ಪ್ರಗತಿಯಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ. ಭಾರತ ವಿಕಾಸದತ್ತ ಸಾಗಲು ಯುವಕರು ಹವ್ಯಾಸ ಬದಲಿಸಿಕೊಳ್ಳಬೇಕು. ಸಾಹಿತ್ಯವನ್ನು ತಿಳಿದುಕೊಳ್ಳಬೇಕು ಎಂದು ಯುವ ಜನತೆಗೆ ಸಲಹೆ ನಿಡಿದರು.

ಯುವ ಲೇಖಕ-ಪತ್ರಕರ್ತ ಮಡಿವಾಳಪ್ಪ ಹೇರೂರ ಅಧ್ಯಕ್ಷತೆ ವಹಿಸಿದ್ದರು. ಧರ್ಮರಾಯ ಜವಳಿ, ಮಲ್ಲಿಕಾರ್ಜುನ ಕುಪನೂರ, ಎಸ್.ಕೆ.ಬಿರಾದಾರ, ಪೂಜಾ ಬಂಕಲಗಿ, ಪ್ರಭು ಫುಲಾರಿ, ಸುರೇಶ ದೇಶಪಾಂಡೆ ವೇದಿಕೆ ಮೇಲಿದ್ದರು.

ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ ಯುವ ಕವಿಗೋಷ್ಠಿ: ಯುವ ಲೇಖಕಿ ಡಾ. ಗೀತಾ ಎಸ್ ಪಾಟೀಲ ಅಧ್ಯಕ್ಷತೆಯಲ್ಲಿ ಜರುಗಿದ ಯುವ ಕವಿಗೋಷ್ಠಿಯಲ್ಲಿ ಕವಿಗಳಾದ ಶಂಕರಲಿಂಗ ಗುರನಂಜಿ, ಮಾಲಾ ಕಣ್ಣಿ, ಅನುಪಮಾ ಅಪಗುಂಡೆ, ರಾಜಕುಮಾರ ಉದನೂರ, ಆರ್ ಹೆಚ್.ಪಾಟೀಲ, ಲಕ್ಷ್ಮಣ ರಂಜೋಳಕರ್, ಹಣಮಂತರಾವ ಘಂಟೇಕರ್, ರಜನಿಕಾಂತ ಬರೂಡೆ, ಕವಿತಾ ಕವಳೆ, ಮಂಜುಳಾ ಪಾಟೀಲ, ಪ್ರಮೋದ ಪಾಂಚಾಳ, ಕಾವೇರಿ ಗಂಗಾ, ಪ್ರಭುಲಿಂಗ ಮೂಲಗೆ, ಜಯಶ್ರೀ ಜಮಾದಾರ, ಬಿ ಶಿವಶಂಕರ, ರವೀಂದ್ರ ಬಿ.ಕೆ., ಗೋದಾವರಿ ಪಡಶೆಟ್ಟಿ ಸೇರಿದಂತೆ ಅನೇಕ ಯುವ ಕವಿಗಳು ತಮ್ಮ ಕವಿತೆಗಳು ವಾಚಿಸುವ ಮೂಲಕ ಪ್ರಚಲಿತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದರು.

ಯುವ ಸಾಹಿತಿ ಡಾ. ರಾಜಶೇಖರ ಮಾಂಗ್ ಆಶಯ ನುಡಿಗಳನ್ನಾಡಿದರು. ವಿಶ್ವನಾಥ ಭಕರೆ, ಸಂತೋಷ ಗಂಗು, ಪ್ರಭಾವತಿ ಮೇತ್ರೆ, ಹಣಮಂತ ಶೇರಿ, ಸಂತೋಷ ಕುಡಳ್ಳಿ, ಸುರೇಶ ಲೇಂಗಟಿ ವೇದಿಕೆ ಮೇಲಿದ್ದರು.

ಹಾಸ್ಯ ಕಲಾವಿದ ಗುಂಡಣ್ಣಾ ಡಿಗ್ಗಿ ಸಮಾರೋಪ ನುಡಿಗಳನ್ನಾಡಿದರು. ಯುವ ಲೇಖಕ-ಪತ್ರಕರ್ತ ಚಂದ್ರಶೇಖರ ಕೌಲಗಾ ಅಧ್ಯಕ್ಷತೆ ವಹಿಸಿದ್ದರು. ಚಂದ್ರಕಾಂತ ಬಿರಾದಾರ, ಜಿ.ಎಸ್.ರಿಜ್ವಾನ್, ರಮೇಶ ಯಾಳಗಿ, ಗುರುನಾಥ ಪೂಜಾರಿ, ಮಲ್ಲಿಕಾರ್ಜುನ ಇಬ್ರಹಿಂಪುರ, ಸುಮಾ ಚಿಮ್ಮನಚೋಡಕರ್, ನಾಗಪ್ಪ ಸಜ್ಜನ್, ವೀರೇಂದ್ರಕುಮಾರ ಕೊಲ್ಲೂರ ವೇದಿಕೆ ಮೇಲಿದ್ದರು.

ವಿವಿಧ ಕ್ಷೇತ್ರದ ಯುವ ಸಾಧಕರಾದ ಡಾ. ಚಂದ್ರಶೇಖರ ದೊಡ್ಮನಿ, ಡಾ. ಶಿವಶರಣಪ್ಪ ಕೋಡ್ಲಿ, ಡಾ. ಶರಣಬಸಪ್ಪ ವಡ್ಡನಕೇರಿ, ಸಿದ್ಧಾರ್ಥ ಚಿಮ್ಮಾಇದಲಾಯಿ, ರಾಮಶೆಟ್ಟಿ ಕೋಡ್ಲಿ, ಶಾಂಸುಂದರ ಕುಲಕರ್ಣೀ, ಸದಾನಂದ ಪಾಟೀಲ, ಶಿವಶಂಕರ ಬಿರಾದಾರ, ಜಿ ಜಿ ವಣಿಕ್ಯಾಳ, ಕೆ.ಎಂ.ವಿಶ್ವನಾತ ಮರತೂರ, ಶೈಲಜಾ ಪೋಮಾಜಿ, ಶಾಂತಾ ಮಾಲೆರ, ಸಾಗರ ಕಿಚ್ಚ, ಮಲ್ಲಿಕಾರ್ಜುನ ವಣದೆ, ನೀಲಪ್ಪ ಇಟಕಾಲ, ಗಾಯತ್ರಿ ಸುತಾರ ಅವರನ್ನು ಸತ್ಕರಿಸಲಾಯಿತು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

6 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

8 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

8 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

9 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

9 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420