ಬಿಸಿ ಬಿಸಿ ಸುದ್ದಿ

ಫೆ. 25, 26 ರಂದು `ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’; ಕಲಬುರಗಿಯಲ್ಲಿ 6ನೇ ಬಾರಿ ಆಯೋಜನೆ

ಕಲಬುರಗಿ, ಫೆ.12- ಮನೋಮಯ ಪ್ರೊಡಕ್ಷನ್ಸ್ ಕಲಬುರಗಿ ಹಾಗೂ ರಂಗಾಯಣ ಸಹಯೋಗದಲ್ಲಿ ಫೆಬ್ರವರಿ 25 ಮತ್ತು 26 ರಂದು ಎರಡು ದಿನಗಳ `ಕಲಬುರಗಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ವನ್ನು ಆಯೋಜಿಸಲಾಗಿದೆ ಎಂದು ಫಿಲಂ ಫೆಸ್ಟಿವಲ್ ಸಂಘಟಕರಾದ ಮಹಿಪಾಲರೆಡ್ಡಿ ಮುನ್ನೂರ್ ಮತ್ತು ವೈಭವ ಕೇಸ್ಕರ್ ತಿಳಿಸಿದ್ದಾರೆ.

ಕಲಬುರಗಿ ರಂಗಾಯಣದ ಸಭಾಂಗಣದಲ್ಲಿ ನಡೆಯಲಿರುವ ಫಿಲ್ಮ್ ಫೆಸ್ಟಿವಲ್ ಈ ಬಾರಿ ಆರನೇ ವರ್ಷದ ಸಂಭ್ರಮಿಸುತ್ತಿದೆ. ಕಳೆದ ವರ್ಷ 2022 ಮಾರ್ಚ 25 ರಂದು ಎರಡು ದಿನ ಚಿತ್ರೋತ್ಸವವನ್ನು ನಡೆಸಲಾಗಿತ್ತು. ಈ ಫೆಸ್ಟಿವಲ್‍ನ ಅಭೂತಪೂರ್ವ ಯಶಸ್ಸು ಮತ್ತು ಕಲಬುರಗಿಯ ಸಾರ್ವಜನಿಕ ಹಾಗೂ ಮಾಧ್ಯಮದ ಸಹಕಾರದಿಂದ ಜರುಗಿತ್ತು. ಆ ಯಶಸ್ಸಿನಿಂದಾಗಿ ಈ ಬಾರಿ ಎರಡು ದಿನಗಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮೊದಲ ಫಿಲಂ ಫೆಸ್ಟಿವಲ್‍ನಲ್ಲಿ ಎಂಟು ರಾಜ್ಯಗಳಿಂದ 54 ಸಿನಿಮಾ, ಎರಡನೇ ಫೆಸ್ಟಿವಲ್ ನಲ್ಲಿ 272, 3 ನೇ ವರ್ಷದಲ್ಲಿ 220, 4ನೇ ಸಿನಿ ಹಬ್ಬದಲ್ಲಿ 240 ಮತ್ತು 5 ನೇ ವರ್ಷದ ಸಿನಿಮಾ ಉತ್ಸವದಲ್ಲಿ 282 ಸಿನಿಮಾಗಳು ಸ್ಪರ್ಧೆಗೆ ಬಂದಿದ್ದನ್ನು ಸ್ಮರಿಸಿಕೊಂಡು, ಇದುವರೆಗೂ ಚಿತ್ರೋತ್ಸವದ ಜ್ಯೂರಿ ಸದಸ್ಯರಾಗಿ ಅನೇಕ ಸಾಧಕರು ಆಗಮಿಸಿದ್ದರು. 60 ಕ್ಕಿಂತ ಹೆಚ್ಚು ಸಿನಿಮಾಗಳ ನಿರ್ದೇಶಕರಾದ ಹಿರಿಯ ಚಲನಚಿತ್ರ ನಿರ್ದೆಶಕರು ಬಿ. ರಾಮಮೂರ್ತಿ, ಹಿರಿಯ ನಟಿ ಚಿತ್ಕಳಾ ಬಿರಾದಾರ, ರಂಗಭೂಮಿ ಹಿರಿಯ ನಟ, ನಿರ್ದೇಶಕ ಯಶವಂತ ಸರ್‍ದೇಶಪಾಂಡೆ, ನಿರ್ದೇಶಕಿ ರೂಪಾರಾವ, ಹೈದ್ರಾಬಾದನ ರಾಮನಾಯ್ಟು ಫಿಲ್ಮಸ್ಕೂಲನ ಪ್ರೊಫೆಸರ್ ರಾಜಕುಮಾರ ರಾಯ್, ಹಿರಿಯ ನಿರ್ದೇಶಕರಾದ ದಿನೇಶಬಾಬು, ನಟ ರಾಕೇಶ ಅಡಿಗ, ತೆಲುಗು ನಟಿ ಪ್ರಿಯಾನ್ಶಾ ದುಬೆ, ತೆಲುಗು ನಟ ಫಾರುಖ್ ಖಾನ್, ನಿರ್ಮಾಪಕರಾದ ತ್ರಿವಿಕ್ರಮ ಜೋಶಿ, ನಟ ರಾಮಾಚಾರಿ ಜೋಶಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಈ ಬಾರಿ ಚಿತ್ರೋತ್ಸವದಲ್ಲಿ ಜನಪ್ರಿಯ ಕಾರ್ಡಿಯೋಲಾಜಿಸ್ಟ್ ಡಾ.ಎಂ.ಆನಂದಕುಮಾರ ಬೆಂಗಳೂರು, ಚಿತ್ರರಂಗದ ನಿರ್ಮಾಪಕರು ಮತ್ತು ಲೇಖಕರಾದ ಎಸ್.ರಾಮಕೃಷ್ಣ, ಅಂತರರಾಷ್ಟ್ರೀಯ ಭರತನಾಟ್ಯ ಕಲಾವಿದರಾದ ರೋಹಿಣಿ ಅನಂತ್, `ಗುರು ಶಿಷ್ಯರು’ ನಿರ್ದೇಶಕರಾದ ಜಡೇಶಕುಮಾರ ಹಂಪಿ, ಕ್ಯಾಮರಾಮನ್ ಅರೂರ್ ಸುಧಾಕರ ಶೆಟ್ಟಿ, ನಟ ಅವಿನಾಶ ಹೊಯ್ಸಳ, ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್ ರಾಜ್ಯ ಅಧ್ಯಕ್ಷರಾದ ಸಂತೋಷ ಅಂಗಡಿ, `ಮಿಸೆಸ್ ಇಂಡಿಯಾ-2021’ ವಿಜೇತೆ ಡಾ.ಸ್ಮಿತಾ ಪ್ರಭು, ಕವಿತಾ ರಮೇಶ, ಸುಮ ಬಸವರಾಜಯ್ಯ, ರಮೇಶ ಟಕ್ಕಳಕಿ ಸೇರಿದಂತೆ ಅನೇಕರು ಆಗಮಿಸುವರು ಎಂದು ತಿಳಿಸಿದ್ದಾರೆ.

ನಿರ್ವಹಣಾ ಮಂಡಳಿ: ಆರನೇ ವರ್ಷದ ಕಲಬುರಗಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಿರ್ವಹಣಾ ಮಂಡಳಿಯನ್ನು ರಚಿಸಲಾಗಿದೆ. ರಂಗಾಯಣ ನಿರ್ದೇಶಕರಾದ ಪ್ರಭಾಕರ ಜೋಶಿ, ಹಿರಿಯ ಪತ್ರಕರ್ತ, ಸಾಹಿತಿ, ನಟ ಮಹಿಪಾಲರೆಡ್ಡಿ ಮುನ್ನೂರ್ ಹಾಗೂ ಮನೋಮಯ ಮಲ್ಟಿಮೀಡಿಯಾ ಸಿಇಓ ವಿಶಾಲ ಗಡಾಳೆ ಹಾಗೂ ಮನೋಮಯ ಪ್ರೊಡಕ್ಷನ್ಸ್ ಎಲ್‍ಎಲ್‍ಪಿ ಸಂಸ್ತಾಪಕರಾದ ವೈಭವ್ ಕೆಸ್ಕರ್ ಅವರು ಸಂಚಾಲಕರನ್ನಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕಲಬುರಗಿಗೆ `ಅಂಬಿ ಅಳಿಯ ಅಭಿಷೇಕ’: ಈ ಬಾರಿಯ ಸಿನಿಮಾ ಹಬ್ಬದಲ್ಲಿ ಹಿರಿಯ ನಟ ಅಂಬರೀಷ ಅವರ ಅಳಿಯ ನೂತನ ನಟ `ಅಭಿ’ ಭಾಗವಹಿಸಲಿದ್ದಾರೆ. ಅಂಬರೀಷ ಅಳಿಯ ಸಿ.ಕೆ.ಅಭಿಷೇಕ ಅವರು ಅಭಿನಯಿಸಿದ `ನಿರ್ಮುಕ್ತ’ ಸಿನಿಮಾದ ಪ್ರಮೋಷನ್ ಗಾಗಿ ಕಲಬುರಗಿಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲಿದ್ದು, ಈ ಬಾರಿಯ ಫಿಲಂ ಫೆಸ್ಟಿವಲ್‍ನ ವಿಶೇಷ ಆಕರ್ಷಣೆಯಾಗಲಿದ್ದಾರೆ. ಅವರೊಂದಿಗೆ `ನಿರ್ಮುಕ್ತ’ ಸಿನಿಮಾ ತಂಡ ಆಗಮಿಸಲಿದೆ.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

10 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

10 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

12 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

12 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

12 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

12 hours ago