ಬೆಳೆ ವಿಮೆಯೂ ಇಲ್ಲ ತೊಗರಿ ಪರಿಹಾರವೂ ಇಲ್ಲ
ಆಳಂದ: ತಾಲೂಕಿನ ರೈತರ ಬೆಳೆ ಹಾನಿಯಾದ ಕುರಿತು ಬಾಕಿ 16 ಕೋಟಿ ಬೆಳೆ ವಿಮೆ ಪರಿಹಾರ ಮೊತ್ತ ಹಾಗೂ ಸರ್ಕಾರ ಘೋಷಿಸಿದ ತೊಗರಿ ನೆಟೆರೋಗ ಹಾನಿಗೆ ಸುಮಾರು 32 ಕೋಟಿ ರೂಪಾಯಿ ಪರಿಹಾರ ಬಾರದಿರುವುದು ಸಾವಿರಾರು ರೈತರನ್ನು ಚಿಂತೆಗಿಡು ಮಾಡಿದೆ.
ಪ್ರಸಕ್ತ ಸಾಲಿನಲ್ಲಿ ಬೆಳೆಯನ್ನೇ ಕಳೆದಕೊಂಡ ರೈತರು ವಿಮೆ ಹಾಗೂ ಸರ್ಕಾರದ ಪರಿಹಾರವನ್ನೇ ಕೈಚಾಚುವಂತೆ ಮಾಡಿದೆ. ಆದರೆ ಕಳೆದ ಮುಂಗಾರು ಹಂಗಾಮಿನ ಬೆಳೆ ಹಾನಿ ಪರಿಹಾರ ನೀಡಿದ ಸರ್ಕಾರ ನಂತರ ಘೋಷಿಸಿದ ನೆಟೆ ರೋಗದಿಂದ ಒಣಗಿ ನಷ್ಟವಾದ ತೊಗರಿ ಬೆಳೆಗೆ ಘೋಷಿಸಿದ ಪರಿಹಾರ ಇನ್ನೂ ಕೈಸೇರಿಲ್ಲ. ಅಲ್ಲದೆ, ಬೆಳೆ ವಿಮೆ ಪಾವತಿಸಿದ ರೈತರಿಗೂ ಪರಿಹಾರ ಬಾರದೆ ಇರುವುದು ಸಂಕಷ್ಟಕ್ಕೆ ಸಿಲುಕಿಸಿದೆ.
ಈ ಕುರಿತು ವಿಮೆ ಹಾಗೂ ಪರಿಹಾರ ಯಾವಾಗ ಬರುತ್ತದೆ ಎಂದು ನಿತ್ಯ ಕೃಷಿ, ಕಂದಾಯ, ವಿಮಾ ಕಚೇರಿಗೆ ರೈತರು ಎಡತಾಕಿ ಹಾಕಿ ಸುಸ್ತಾಗಿ ಹೋಗಿದ್ದಾರೆ.
ಈಗಾಗಲೇ ಪ್ರಕೃತಿ ವಿಕೋಪದಡಿ ತಾಲೂಕಿನಲ್ಲಿ ಜುಲೈ ತಿಂಗಳಲ್ಲಿ ಹೆಚ್ಚಿನ ಮಳೆಯಿಂದ ಕಳೆದುಕೊಂಡ ಸೋಯಾ, ಹೆಸರು, ಉದ್ದು 38 ಸಾವಿರ ರೈತರು ಪ್ರಧಾನ ಮಂತ್ರಿ ಫಸಲು ಭಿಮಾ ವಿಮೆ ಪಾವತಿಸಿ ಬೆಳೆ ಹಾನಿಯಾದ ಮೇಲೆ ಕಂಪನಿಗೆ ದೂರು ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಕೃಷಿ ಇಲಾಖೆಯ ಮಾಹಿತಿಯಂತೆ 12599 ರೈತರಿಗೆ ಮಾತ್ರ ವಿಮೆಯ 8.15ಕೋಟಿ ರೂಪಾಯಿ ಮಾತ್ರ ರೈತರ ಖಾತೆಗೆ ಜಮಾಗೊಂಡಿದೆ. ಇನ್ನೂ 25 ಸಾವಿರ ರೈತರಿಗೆ ವಿಮಾ ಪರಿಹಾರ ಮೊತ್ತ ಬರುವುದು ಬಾಕಿ ಉಳಿದುಕೊಂಡಿದೆ. ಹೀಗಾಗಿ ರೈತರು ಸಂಬಂಧಿತ ಕಚೇರಿಗಳಿಗೆ ಅಲೆದಾಡಿ ಆಡಳಿತ ವ್ಯವಸ್ಥೆಯ ಮೇಲೆ ಆಕ್ರೋಶ ಹೊರಹಾಕತೊಡಗಿದ್ದಾರೆ.
ಅಲ್ಲದೆ, ಈಗಾಗಲೇ ಬೆಳೆ ಕಟಾವು ಪ್ರಯೋಗದಿಂದ ಸಿಗುವಂತಹ ವಿಮೆ ಪರಿಹಾರ ಹೆಸರು, ಉದ್ದು, ಸೋಯಾಭಿನ್ ಬೆಳೆ ಕಟಾವು ಅವಧಿ ಮೂರುವರೆ ತಿಂಗಳಾದರು ಸಹ ಹಾನಿಯಾದ ಬೆಳೆಗೆ ವಿಮಾ ಪರಿಹಾರ ಮೊತ್ತ ದೊರೆಯದೆ ಇರುವುದು ರೈತ ಸಮುದಾಯಕ್ಕೆ ನಿರಾಸೆ ಮೂಡಿಸಿದೆ.
ಮತ್ತೊಂದಡೆ ರಾಜ್ಯ ಸರ್ಕಾರ ತೊಗರಿ ನೆಟೆರೋಗಕ್ಕೆ ಎಕರೆ 10 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದೆ ಆದರೆ. ಇನ್ನೂ ಈ ಕುರಿತು ಸಂಬಂಧಿತ ಕಚೇರಿಗೆ ಯಾವುದೇ ಆದೇಶ ನೀಡದೆ ಇರುವುದು ಪರಿಹಾರ ಯಾವ ಆಧಾರದ ಮೇಲೆ ಮತ್ತು ಯಾವಾಗ ನೀಡುವರು ಎಂಬುದು ತೊಗರಿ ಹಾನಿಗೊಳಗಾದ ರೈತರಿಗೆ ದಿನಗಳೆಯುವಂತೆ ಮಾಡಿದೆ.
ತೊಗರಿ ನೆಟೆ ರೋಗದ ಪರಿಹಾರದ ಕುರಿತು ಕೃಷಿ, ಕಂದಾಯ ಇಲಾಖೆಗೆ ಸರ್ಕಾರದ ಯಾವುದೇ ನಿರ್ದೇಶನವೇ ಬಂದಿಲ್ಲ. ಹೀಗಾಗಿ ನೆಟೆರೋಗದ ಪರಿಹಾರಕ್ಕೆ ಸಂತ್ರಸ್ತ ರೈತರು ಬಕಪಕ್ಷಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ.
ಜಿಲ್ಲೆಯ ತೊಗರಿ ಸೇರಿ ಇನ್ನುಳಿದ ಎಲ್ಲಾ ಬೆಳೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಇದಕ್ಕೆ ಪರಿಹಾರ ನೀಡಲು ಆಗ್ರಹಿಸಿ ಹಲವಾರು ಹೋರಾಟಗಳು ನಡೆದಿವೆ. ರಾಜ್ಯಾದ್ಯಂತ ಪ್ರಸಕ್ತ ಸಾಲಿನಲ್ಲಿ ಸುಮಾರು 11 ಲಕ್ಷ ಹೆಕ್ಟರ್ ತೊಗರಿ ಬಿತ್ತನೆಯಾಗಿದ್ದು, ಅದರಲ್ಲಿ ಕಲಬುರಗಿ ಒಂದೇ ಜಿಲ್ಲೆಯಲ್ಲಿ ಸರಿಸುಮಾರು 5.30 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ ಅಂದರೆ ರಾಜ್ಯಾದ್ಯಂತ ಬೆಳೆಯುವ ತೊಗರಿ ಪ್ರದೇಶದ ಪೈಕಿ ಶೇಕಡ 50% ರಷ್ಟು ತೊಗರಿ ಬೆಳೆ ಕಲಬುರಗಿ ಜಿಲ್ಲೆ ಒಂದರಲ್ಲಿಯೇ ಬೆಳೆಯುತ್ತಾರೆ. ಆದಕಾರಣ ತೊಗರಿ ನಮ್ಮ ಜಿಲ್ಲೆಯ ಆರ್ಥಿಕ ಬೆಳೆಯೂ ಆಗಿದೆ.
ಸದರಿ ತೊಗರಿ ಬೆಳೆಯನ್ನು ರೈತರು ನಂಬಿಕೊಂಡು ಬ್ಯಾಂಕುಗಳಿಂದ, ಸಹಕಾರಿ ಸಂಸ್ಥೆಗಳಿಂದ ಸಾಲ ಪಡೆದು ಬೀಜ, ಗೊಬ್ಬರ ತಂದು ಬಿತ್ತನೆ ಮಾಡಿದ್ದಾರೆ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ರೈತ ಕಷ್ಟಪಟ್ಟು ಬಿತ್ತನೆ ಮಾಡಿದ ಬೆಳೆಗಳೆಲ್ಲವೂ ಪ್ರಕೃತಿ ವಿಕೋಪದಿಂದ ಸಂಪೂರ್ಣವಾಗಿ ನಾಶವಾಗಿರುವುದರಿಂದ ರೈತ ಇಂದು ಕಂಗಾಲಾಗಿದ್ದಾನೆ. ಇಂತಹ ಸಂಕಷ್ಟದ ಸಮಯದಲ್ಲಿ ರೈತರ ಹಿತಾಸಕ್ತಿ ಕಾಪದದೆ, ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ದಾಮ್ ದುಪ್ಪಟ್ಟು ಮಾಡುವುದಾಗಿ ಹೇಳಿ, ಬೆಳೆದ ಬೆಳೆಗಳಿಗೆ ವೈಜ್ಞಾನಿಕ ರೀತಿಯಿಂದ ಬೆಂಬಲ ಬೆಲೆ ನೀಡದೆ ಈ ಡಬಲ್ ಇಂಜಿನ್ ಸರ್ಕಾರ ಸಂಕಷ್ಟದಲ್ಲಿರುವ ರೈತರಿಗೆ ರೂ 2000/-, 3000/-, 4000/-, 5000/- ಪರಿಹಾರ ನೀಡುವ ಮೂಲಕ ರೈತರನ್ನು ಬೀದಿಗೆ ತಂದು ನಿಲ್ಲಿಸಿಬಿಟ್ಟಿದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…