ಬಿಸಿ ಬಿಸಿ ಸುದ್ದಿ

ಬಿಜೆಪಿ ದುರಾಡಳಿತ, ಹಿಂಸಾಚಾರ ಕೊನೆಗೊಳಿಸಲು ಆಗ್ರಹ

ಕಲಬುರಗಿ: ಕಾರ್ಯಕ್ರಮದಲ್ಲಿ ಕಾಂ.ಮೀನಾಕ್ಷಿ ಬಾಳಿ ಇವರು ಉಪನ್ಯಾಸಕರಾಗಿ ಮಾತನಾಡಿದರು. ಕಾಂ.ಶಾಂತಾ ಘಂಟಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಾಂ.ನಾಗಯ್ಯಾ ಸ್ವಾಮಿಯವರು ಎಲ್ಲರಿಗೂ ಸ್ವಾಗತ ಕೋರಿದರು. ಜಿಲ್ಲಾ ಕಾರ್ಯದರ್ಶಿ ಕಾಂ.ಕೆ ನೀಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.

“ಈಗ ತ್ರಿಪುರಾದ ವಿಧಾನ ಸಭೆ ಚುನಾವಣೆಗಳು ನಡೆದಿವೆ. ಐದು ವರ್ಷಗಳ ಹಿಂದೆ ಎಡ ರಂಗದ ಆಡಳಿತ ಇರುವಾಗ  ಪ್ರತಿ ಚುನಾವಣೆಯ ಸಂದರ್ಭದಲ್ಲಿ ಅಲ್ಲಿನ ಜನತೆಯು ಅತ್ಯಂತ ಸಂಭ್ರಮದಿಂದ ಚುನಾವಣೆ, ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದರು. ಮತದಾನದ ದಿನವಂತೂ ಅದೊಂದು ಹಬ್ಬದ ಸ್ವರೂಪವೇ ಆಗಿರುತ್ತಿತ್ತು. ಅತ್ಯಂತ ನಿರ್ಭಯದ ಪ್ರಜಾಪ್ರಭುತ್ವೀಯ ನೆಲೆಯಲ್ಲಿ ಚುನಾವಣೆಗಳು ನಡೆದುಕೊಂಡು ಬಂದ ಪರಂಪರೆ ಅಲ್ಲಿಯದು. ಆದರೆ ಕಳೆದ ಬಾರಿ ಚುನಾವಣೆಯಿಂದ ಈವರೆಗೆ ತ್ರಿಪುರ ರಾಜ್ಯವು ಇನ್ನಿಲ್ಲದಂತೆ ಗಾಯಗೊಂಡು ನರಳುತ್ತಿದೆ. ಈಗಲೂ ಎಡ ಪಕ್ಷಗಳು ಹಾಗೂ ಅದರ ಮೈತ್ರಿಕೂಟ, ಇತರೆ ವಿರೋಧ ಪಕ್ಷಗಳು ಚುನಾವಣೆ ಪ್ರಚಾರ ನಡೆಸದಂತೆ ಭಾರಿ ಪ್ರಮಾಣದ ಗುಂಡಾಗಿರಿ ಹಿಂಸಾಚಾರ ನಡೆಸಲಾಗುತ್ತಿದೆ. ಚುನಾಯಿತ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಮತದಾರರನ್ನು ಭೇಟಿಯಾಗದಂತೆ ತಡೆಯಲಾಗುತ್ತಿದೆ. ಸ್ಥಳೀಯವಾಗಿ ಸಮಾಜಘಾತಕ ಶಕ್ತಿಗಳು ಮತ್ತು ಸರ್ಕಾರದ ಆಡಳಿತ ಯಂತ್ರದ ಬಲದಿಂದ ಯಾವುದೇ ಕ್ಷಣದಲ್ಲಿ ಹಿಂಸಾಚಾರ ಭುಗಿಲೇಳಬಹುದು, ಜನತೆ ಮತದಾನ ಮಾಡದಂತೆ ತಡೆಯಬಹುದು ಎನ್ನುವ ಆತಂಕ ನಿರಂತರವಾಗಿ ಕಾಡುತ್ತಿದೆ ಎಂದರು.

ಬಿಜೆಪಿ ಆಡಳಿತದಲ್ಲಿ ಎಲ್ಲಾ ರಂಗದಲ್ಲಿಯೂ ಕುಸಿತ ಮತ್ತು ಅರಾಜಕತೆ ತಾಂಡವ ಆಡುತ್ತಿದೆ. ಶಿಕ್ಷಣ, ಆರೋಗ್ಯ, ಗ್ರಾಮೀಣ ಅಭಿವೃದ್ಧಿ, ಮಹಿಳೆ, ಆದಿವಾಸಿಗಳ ಸಬಲೀಕರಣ, ಉದ್ಯೋಗದಲ್ಲಿ ಅತ್ಯಂತ ಮುಂದುವರೆದ ರಾಜ್ಯವು ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಕುಸಿತ ಕಾಣುತ್ತಿದೆ. ಐದು ವರ್ಷಗಳ ಹಿಂದೆ ಅಲ್ಲಿ ಎಡಪಕ್ಷಗಳ ನೇತೃತ್ವದ ಸರಕಾರವಿತ್ತು. ಜನಪರವಾದ ಆಡಳಿತಕ್ಕೆ ಹೆಸರುವಾಸಿಯಾಗಿತ್ತು. ಆದಿವಾಸಿ ಬುಡಕಟ್ಟು ಜನತೆಯ ಸಮಗ್ರ ಅಭಿವೃದ್ಧಿಗಾಗಿ ಶಾಸಕಾಂಗದಷ್ಟೇ  ಹಕ್ಕು ಬಾದ್ಯತೆ ಕರ್ತವ್ಯಗಳು ಮತ್ತು ವಿಶೇಷ ಬಜೆಟ್ಟನ್ನು ಜನಾಭಿವೃದ್ಧಿಗೆ ಬಳಸುತ್ತಾ, ಬುಡಕಟ್ಟು ಸ್ವಾಯತ್ತ ಮಂಡಳಿ ರಚಿಸಿ ಪ್ರಜಾಸತ್ತಾತ್ಮಕ ವಿಕೇಂದ್ರೀಕರಣದ ಆಡಳಿತ ನಡೆಸಲಾಗುತ್ತಿತ್ತು. ಭ್ರಷ್ಟಾಚಾರವಿಲ್ಲದ ಜನಪರವಾದ ಸರಕಾರವೆಂದೇ ಅಂದಿನ ಮುಖ್ಯ ಮಂತ್ರಿಗಳಾಗಿದ್ದ ಕಾ.ಮಾಣಿಕ್ ಸರಕಾರ್ ಅವರು, ಅವರ ಸರಕಾರ ಹೆಸರುವಾಸಿಯಾಗಿತ್ತು. ಆದರೀಗ ತ್ರಿಪುರವನ್ನು ಕೈವಶ ಮಾಡಿಕೊಳ್ಳಲು ಮತೀಯತೆಯ ನಗ್ನ ನರ್ತನ ನಡೆಸಲಾಗುತ್ತಿದೆ” ಎಂದು ಹೇಳಿದರು.

ಕಾಂ.ಮೀನಾಕ್ಷಿ ಬಾಳಿಯವರು ಮಾತನಾಡುತ್ತ ತ್ರಿಪುರದ ಚಿತ್ರಣ ವಿವರಿಸಿದರು. “ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೆ ಕಾರಣರಾಗಿದ್ದು ಎಡಪಕ್ಷಗಳು. ಅಂತೆಯೇ ಉದ್ಯೋಗ ಖಾತ್ರಿಯನ್ನು ನೂರಕ್ಕೆ ನೂರರಷ್ಟು ಭ್ರಷ್ಟಾಚಾರವಿಲ್ಲದೆ ಜನತೆಗೆ ತಲುಪಿಸಿದ್ದು ಅಂದಿನ ಎಡಪಕ್ಷಗಳ ಸರಕಾರ. ಕೇಂದ್ರ ಸರಕಾರ ಮಾತ್ರ ತ್ರಿಪುರ ರಾಜ್ಯಕ್ಕೆ ಕೊಡಬೇಕಾದಷ್ಟು ಅನುದಾನ ಕೊಡದೆ ಸತಾಯಿಸಿದ್ದು ಇದೆ. ಈ ಬಾರಿಯಂತೂ ಉದ್ಯೋಗ ಖಾತ್ರಿಗಾಗಿ ಕೇವಲ ರೂ.60,000 ಕೋಟಿ ಅನುದಾನ ಘೋಷಿಸಲಾಗಿದೆ. ಹಿಂದಿಗಿಂತ ಶೇ.33 ಕಡಿತವಾಗಿದೆ. ಅದರಲ್ಲಿ ಖಂಡಿತ ತ್ರಿಪುರಾದ ಪಾಲು ದೊರೆಯದೆ ಗ್ರಾಮೀಣ ಪ್ರದೇಶದ ನಿರುದ್ಯೋಗ ಹೆಚ್ಚಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹಿಂದಿನ ಎಡಪಕ್ಷಗಳ ಸರಕಾರವು ರಾಜ್ಯದ ಒಟ್ಟು ಆದಾಯವನ್ನು ಜನತೆಯ ಕೊಳ್ಳುವ ಶಕ್ತಿ ಹೆಚ್ಚು ಮಾಡಲು, ಉತ್ಪಾದನಾ ಪ್ರಕ್ರಿಯೆಯಲ್ಲಿ ಜನತೆಯನ್ನು ತೊಡಗಿಸಲು ಮತ್ತು ಜನಕೇಂದ್ರಿತವಾದ ಸಂಪನ್ಮೂಲ ಸೃಷ್ಟಿಗೆ ಬಳಸಿದ್ದು ಚಾರಿತ್ರಿಕ ದಾಖಲೆ. ಅದರಲ್ಲಿಯೂ ತ್ರಿಪುರಾ ರಾಜ್ಯವು ಶಾಂತಿ, ಕೋಮು ಸೌಹಾರ್ದತೆಗೆ ಹೆಸರಾಗಿದ್ದ ರಾಜ್ಯ. ಬಾಬರಿ ಮಸೀದಿ ಕೆಡವಿದ ಸಂಘಪರಿವಾರಿಗಳು ದೇಶದಲ್ಲಿ ದಂಗೆ ಆರಂಭಿಸಿದ್ದರು. ಆದರೆ ತ್ರಿಪುರಾದ ಅಂದಿನ ಮುಖ್ಯ ಮಂತ್ರಿಗಳು ಮೊಹಲ್ಲಾ ಮಸೀದಿ ದರ್ಗಾಗಳಿಗೆ ಭೇಟಿಯಿತ್ತು ಮುಸ್ಲಿಂ ಸಮುದಾಯಕ್ಕೆ ನಿರ್ಭಯದ ನೆಮ್ಮದಿಯು ಬದುಕು ಕೊಟ್ಟಿದ್ದರು. ಆದ್ದರಿಂದಲೇ ತ್ರಿಪುರದಲ್ಲಿ ಕೋಮುದಂಗೆಗಳಿಗೆ ಜಾಗವೇ ಇರಲಿಲ್ಲ. ಆದರೆ ಯಾವಾಗ ಬಿಜೆಪಿಯು ತ್ರಿಪುರವನ್ನು ಗುರಿಯಾಗಿಸಿಕೊಂಡು ತನ್ನ ಕೋಮುವಾದಿ ಆಟ ಆಡಲು ಆರಂಭಿಸಿತೋ ಅಂದಿನಿಂದ ತ್ರಿಪುರ ರಾಜ್ಯದ ಜನತೆಯ ನೆಮ್ಮದಿಯನ್ನು ಕಸಿದುಕೊಂಡಿದೆ ಎಂದು ಆರೋಪಿಸಿದರು.

ಆದರೀಗ ತ್ರಿಪುರದ ರಾಜ್ಯವು ಬಿಜೆಪಿಯ-ಐಪಿಎಫ್ಟಿ ಆಡಳಿತದಲ್ಲಿ ಅಕ್ಷರಶಃ ಸಂಕಟದಲ್ಲಿ ಬೇಯುತ್ತಿದೆ. ಚುನಾವಣಾ ಪ್ರಕ್ರಿಯೆಯಲ್ಲಿಯೇ ಬೂತ್ ವಶಪಡಿಸಿಕೊಂಡು, ದೊಂಬಿ ಗಲಭೆಗಳನ್ನು ಸೃಷ್ಟಿಸಿ, ಜನರು ಮತ ಹಾಕದಂತೆ ತಡೆಯೊಡ್ಡಿ, ಜನರ ಮೇಲೆ ಮಾರಣಾಂತಿಕ ಹಲ್ಲೆ, ಕೊಲೆಗಳನ್ನು ಮಾಡಿ, ಭಯೋತ್ಪಾದನೆ ನಡೆಸಿ ಐದು ವರ್ಷಗಳ ಹಿಂದೆ ಬಿಜೆಪಿಯು ಅಧಿಕಾರಕ್ಕೆ ಬಂದಿತು. ಅದೀಗ ಅರಾಜಕತೆಯ ತಾಣವಾಗಿದೆ ಎಂದು ಟಿಕಿಸಿದರು.

ಜನ ಸಮಸ್ಯೆಗಳೂ ಹೆಚ್ಚಿವೆ. ಈಗ ತ್ರಿಪುರ ರಾಜ್ಯವು ತೀವ್ರ ನಿರುದ್ಯೋಗದಿಂದ ನರಳುತ್ತಿದೆ. ಶೇಕಡ 7% ರಷ್ಟು ನಿರುದ್ಯೋಗದಲ್ಲಿ ಹೆಚ್ಚಳವಾಗಿದೆ. ನಗರ ಪ್ರದೇಶಗಳಲ್ಲಿ ಇದರ ಪ್ರಮಾಣವು ಶೇ.8-ಶೇ10 ರಷ್ಟು ಏರಿಕೆ ಕಂಡಿದೆ. ರಾಜ್ಯದಲ್ಲಿ ಕೆಲಸ ದೊರಕದೆ ಜನರು ಗುಳೆ ಹೋಗುತ್ತಿದ್ದಾರೆ. ದುಡಿಮೆಯಲ್ಲಿ ಉತ್ಪಾದನಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಜನಸಂಪನ್ಮೂಲದ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಹೇಳಿದ ಕೇಂಧ್ರ ಸರಕಾರವು ಒಂದೇ ಒಂದು ಉದ್ಯೋಗ ಸೃಷ್ಟಿ ಮಾಡಿಲ್ಲ. ಕೇಂದ್ರ ಸರಕಾರದಡಿಯ 10 ಲಕ್ಷ ನೌಕರಿಗಳು ಖಾಲಿ ಇವೆ. ಭರ್ತಿ ಮಾಡಿಕೊಂಡಿಲ್ಲ. ಪ್ರದಾನ ಮಂತ್ರಿಗಳು ಮಾತ್ರ ಸುಳ್ಳು ಭರವಸೆಗಳನ್ನು ಕೊಡುತ್ತಲೇ ಇದ್ದಾರೆ. ಅವರ ಹಸಿ ಸುಳ್ಳುಗಳನ್ನು ಬಯಲು ಮಾಡಿದ್ದು ಈಚೆಗೆ ಮಂಡಿಸಲಾದ ಬಜೆಟ್ಟು. ಜನಕಲ್ಯಾಣದ ಎಲ್ಲ ಯೋಜನೆಗಳಿಂದ ಅನುದಾನ ಕಡಿತ ಮಾಡಲಾಗಿದೆ. ಇದರ ನೇರ ಪರಿಣಾಮಕ್ಕೆ ತ್ರಿಪುರಾವೂ ಬಲಿಯಾಗಲಿದೆ. ರಾಜ್ಯದಲ್ಲಿ ಇಂಡಸ್ಟ್ರಿಗಳು, ಕೃಷಿ ಸಂಪೂರ್ಣ ಬಿಕ್ಕಟ್ಟಿನಲ್ಲಿದೆ ಎಂದು ಅಸಮಧಾನ ಹೊರಹಾಕಿದರು.

ಬಿಜೆಪಿ-ಐಪಿಎಫ್ಟಿ ಆಡಳಿತದ ಸರ್ವಾಧಿಕಾರಿ ಫ್ಯಾಸಿಸ್ಟ್ ಧೋರಣೆಯಿಂದ ರಾಜ್ಯದಲ್ಲಿ ಬಿಜೆಪಿ-ಐಪಿಎಫ್ಟಿ ಸರಕಾರವು ಸಂಪೂರ್ಣ ಸರ್ವಾಧಿಕಾರಿತ್ವ ನಡೆಸುತ್ತಿದೆ. ರಾಜ್ಯದಲ್ಲಿ ತೀವ್ರ ಮೂಢನಂಬಿಕೆ ಹುಟ್ಟು ಹಾಕುತ್ತಿದೆ. ಅಕ್ಷರಶಃ ಅದೊಂದು ದೌರ್ಜನ್ಯಗಳ ದುಶ್ಯಾಸನ ರಾಜ್ಯವಾಗಿ ಮಾರ್ಪಡಿಸಲಾಗಿದೆ. ಈ ಆಡಳಿತದಲ್ಲಿ ಜನರು ಕಂಗಾಲಾಗಿದ್ದಾರೆ.

ಅಲ್ಪಸಂಖ್ಯಾತರ ಮೇಲೆ ದಾಳಿಗಳು ಹೆಚ್ಚುತ್ತಿವೆ. ಪರಿಶಿಷ್ಟ ಜಾತಿ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಜನತೆಗೆ ಆರ್ಥಿಕ ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಕುಸಿಯುತ್ತಿರುವ ಕೊಳ್ಳುವ ಶಕ್ತಿ ಇದೆಲ್ಲದರಿಂದ ಭವಿಷ್ಯದ ಯುವಜನತೆಯು ಅರಾಜಕತೆಯತ್ತ ಹೊರಳುವಂತಾಗಿದೆ. ಯುವಜನರನ್ನು ಮಾದಕ ನಶೆಯು ಸೆಳೆಯುವಂತೆ ಮಾಡಲಾಗಿದೆ.

ಈ ವಾತಾವರಣಕ್ಕೆ ಸರಕಾರವೇ ನೇರ ಹೊಣೆಯಾಗಿದೆ. ಇಂತಹ ಅತ್ಯಂತ ಚಿಂತಾಜನಕವಾದ ಪರಿಸ್ಥಿತಿಯನ್ನು ಬಿಜೆಪಿ-ಐಪಿಎಫ್ಟಿ ಸರಕಾರವು ಸೃಷ್ಟಿ ಮಾಡಿದೆ. ಇಂತಹ ದುರಾಡಳಿತ ಕೈವಶ ಮಾಡಿಕೊಳ್ಳಲು ಕಳೆದ ಬಾರಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯು ತನ್ನ ಗೂಂಡಾ ಪಡೆಗಳ ಮೂಲಕ ಎಲ್ಲ ರೀತಿಯ ಅನಾಚಾರಕ್ಕೆ ಇಳಿದಿತ್ತು. ಜನರನ್ನು ಭಯಭೀತರನ್ನಾಗಿಸಿ ಅವರ ಮೇಲೆ ಹಲ್ಲೆ ಮಾಡಿ, ಕೊಲೆ, ದಬ್ಬಾಳಿಕೆ ನಡೆಸಿ, ಮನೆಯಿಂದ ಹೊರಬರಲು ಸಹ ಬಿಡದೆ ಮತಗಳನ್ನು ಹಾಕಲು ಸಹ ಬಿಡದೆ ಚುನಾವಣೆ ಎಂಬ ಪ್ರಜಾಪ್ರಭುತ್ವೀಯ ಪ್ರಕ್ರಿಯೆಯನ್ನು ಸಂಪೂರ್ಣ ಹಿಮ್ಮೆಟ್ಟಿಸಿ ಅಟ್ಟಹಾಸ ಮೆರೆದಿತ್ತು. ಸಾಮಾನ್ಯ ಜನತೆಯ ಗುಡಿಸಲುಗಳಿಗೆ, ಮನೆಗಳಿಗೆ ಬೆಂಕಿ ಇಟ್ಟಿತ್ತು.

ಮಹಿಳೆಯರ ಮೇಲೆಯೂ ದೌರ್ಜನ್ಯ ನಡೆಸಿತ್ತು. ಈ ಬಾರಿಯೂ ಬಿಜೆಪಿ ಇಂತಹದೇ ಗೂಂಡಾಗಿರಿ ನಡೆಸಿ ಚುನಾವಣೆ ಗೆಲ್ಲಬೇಕೆನ್ನುತ್ತಿದೆ. ಸೌಹಾರ್ದ ಸಾಂಸ್ಕೃತಿಕ ಪರಂಪರೆಯು ತ್ರಿಪುರ ರಾಜ್ಯದ ಘನತೆಯಾಗಿದೆ. ಆದರೆ ಬಿಜೆಪಿಯು ಅಲ್ಲಿಯೂ ಕೋಮುಭಾವನೆಗಳನ್ನು ಉದ್ಧೀಪನಗೊಳಿಸಿ ಸೌಹಾರ್ದತೆಗೆ ಧಕ್ಕೆ ಮಾಡುವ ಎಲ್ಲ ದುಷ್ಟ ಷಡ್ಯಂತ್ರಗಳನ್ನು ಜಾರಿ ಮಾಡುತ್ತಿದೆ. ಆದಿವಾಸಿಗಳು ಮತ್ತು ಆದಿವಾಸಿಯೇತರರ ನಡುವೆ ಕಂದರ ಸೃಷ್ಟಿಸಿ ಪ್ರತ್ಯೇಕತಾ ವಾದಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ.

ಭ್ರಷ್ಟಾಚಾರವಂತೂ ಇನ್ನಿಲ್ಲದಂತೆ ವ್ಯಾಪಕವಾಗಿ ಹೆಡೆಯೆತ್ತಿದೆ. ಅತ್ಯಂತ ಸರಳ ಸಜ್ಜನಿಕೆಯ, ಜನತೆಯ ಪರವಾಗಿ ಧೀಮಂತಿಕೆಯಿಂದ ಆಡಳಿತ ನಡೆಸಿಕೊಂಡು ಬಂದ ಎಡರಂಗದ ಸರಕಾರದ ಆಡಳಿತ ಕಂಡಿದ್ದ ತ್ರಿಪುರದ ಜನತೆಯು ಇದಕ್ಕೆ ತದ್ವಿರುದ್ಧವಾಗಿ ಬಿಜೆಪಿಯ ಮತ್ತು ಸಂಘಪರಿವಾದ ಧಾಳಿಯಿಂದ ನಲುಗಿ ಹೋಗುತ್ತಿದ್ದಾರೆ. ನಿಷ್ಪಕ್ಷಪಾತವಾದ ಚುನಾವಣೆ ನಡೆದಲ್ಲಿ ಖಂಡಿತ ಬಿಜೆಪಿಗೆ ಸೋಲು ಇದೆ.

ಜನತೆಯು ನಿಷ್ಪಕ್ಷಪಾತವಾದ ಚುನಾವಣೆ ಬಯಸುತ್ತಾರೆ. ಪ್ರಜಾಪ್ರಭುತ್ವ ಮತ್ತೆ ಅಲ್ಲಿ ಕಾಲೂರಬೇಕೆಂಬುದು ಜನರ ಬಯಕೆಯಾಗಿದೆ. ಬಿಜೆಪಿಯ ದುರಾಡಳಿತದಿಂದ ಶಾಂತ ಮತ್ತು ಸೌಹಾರ್ದ ತ್ರಿಪುರವು ಗಾಯಗೊಂಡಿದೆ. ಈಗ ಅದಕ್ಕೆ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಬಲಿಷ್ಠಗೊಳಿಸುವ ಮುಲಾಮು ಅಗತ್ಯವಿದೆ. ಆದ್ದರಿಂದ ಭಾರತದ ಜನತೆಯು ತ್ರಿಪುರದಲ್ಲಿ ಮತ್ತೆ ಶಾಂತಿ, ಸುವ್ಯವಸ್ಥೆ, ಪ್ರಜಾಪ್ರಭುತ್ವ, ಸೌಹಾರ್ದತೆ, ನೆಮ್ಮದಿ ಬರಲೆಂಬ ಬದ್ಧತಾಪೂರ್ಣ ಇಚ್ಛೆ ತೋರಬೇಕಿದೆ.  ಭಾರತದ ಪ್ರಜೆಗಳಾದ ನಾವು ದೇಶವನ್ನು ಆರ್ಥಿಕ ಸಮೃದ್ಧಿ, ಸೌಹಾರ್ದತೆಯ ಬಹುಸಾಂಸ್ಕೃತಿ ಪರಂಪರೆಯ ಸಂರಕ್ಷಣೆಯೊಂದಿಗೆ ಗಟ್ಟಿಗೊಳಿಸಲು ಐಕ್ಯತೆಯಿಂದ ಮುನ್ನಡೆಯಬೇಕಿದೆ. ಅದಕ್ಕಾಗಿ ಸಿಪಿಐ(ಎಂ) ಮತ್ತು ಎಡ ಪಕ್ಷಗಳು ಹೋರಾಡುತ್ತಿವೆ.  ಆದ್ದರಿಂದ ಆ ಜನತೆಗೆ ಸೌಹಾರ್ದತೆ ವ್ಯಕ್ತಪಡಿಸೋಣ. ಶಾಂತಿ, ಸೌಹಾರ್ದತೆಗಾಗಿ ಆಗ್ರಹಿಸೋಣ; ತ್ರಿಪುರದಲ್ಲಿ ನಿಷ್ಪಕ್ಷಪಾತವಾದ ಚುನಾವಣೆ ನಡೆಯಬೇಕೆಂದು, ಭಯೋತ್ಪಾದನಾ, ಬೂತ್ ವಶಪಡಿಸಿಕೊಳ್ಳುವುದನ್ನು ತಡೆಯಬೇಕೆಂದು, ಹಲ್ಲೆ ದೊಂಬಿಗಳು ನಡೆಯಬಾರದೆಂದು ಮತ್ತು ಜನತೆಯು ಧೈರ್ಯದಿಂದ ತಮ್ಮ ಮತದಾನದ ಹಕ್ಕನ್ನು ಜಾರಿಗೊಳಿಸಲು ಶಾಂತ ವಾತಾವರಣ ಸೃಷ್ಟಿಸಬೇಕೆಂದು ಒಕ್ಕೊರಲಿನಿಂದ ಆಗ್ರಹಿಸೋಣ.” ಎಂದು ಹೇಳಿದರು.

ಕಾಂ.ಶ್ರೀಮಂತ ಬಿರಾದಾರ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾಂ.ಪಾಂಡುರಂಗ ಮಾವಿನಕರ್ ಅವರು ವಂದನಾರ್ಪಣೆ ಮಾಡಿದರು. ಕಾಂ.ಕೋದಂಡರಾಮಪ್ಪ, ಕಾಂ.ಸುಜಾತಾ ಕ್ರಾಂತಿಗೀತೆ ಹಾಡಿದರು. ಕಾರ್ಯಕ್ರಮದಲ್ಲಿ  ಕಾಂ.ಯಶವಂತ ಪಾಟಿಲ್ , ಕಾಂ.ಬಾಬು ಹಿರಮಶೆಟ್ಟಿ, ಕಾ.ಜಗದೇವಿ ನೂಲಕರ್, ಉಮಾದೇವಿ, ಕಾಂ.ಸೀತಾಬಾಯಿ. ಕಾಂ.ಫಯಾಜ್, ಕಾಂ.ಬೃಂದಾ ಸೇರಿದಂತೆ ಹಲವರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

15 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

15 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

15 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago