ಬಿಸಿ ಬಿಸಿ ಸುದ್ದಿ

7UP ಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ರಶ್ಮಿಕಾ ಮಂದಣ್ಣ ನೇಮಕ

ಬೆಂಗಳೂರು: ಈ ಬಾರಿಯ ಪ್ರೇಮಿಗಳ ದಿನದಂದು ರೀಫ್ರೆಶ್ ಮಾಡುವ ಹೊಸದಾದ ಪ್ರೇಮಕಥೆಯನ್ನು 7UP ಬಹಿರಂಗಪಡಿಸಿದ ಈ ಸಂದರ್ಭದಲ್ಲಿ ಯುವ ಪೀಳಿಗೆಯ ಐಕಾನ್ ಮತ್ತು ಸೂಪರ್ ಸ್ಟಾರ್ ರಶ್ಮಿಕಾ ಮಂದಣ್ಣ ಅವರನ್ನು ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಘೋಷಣೆ ಮಾಡಿದೆ.

ವಿಶಿಷ್ಟವಾದ ಮತ್ತು ವಿನೋದದಿಂದ ಕೂಡಿದ ವಿಡಿಯೋ ಸಹಯೋಗವನ್ನು ಹೊಂದಿದ್ದು, ರಶ್ಮಿಕಾ ಅವರು ತಮ್ಮ ವ್ಯಾಲೆಂಟೈನ್ ಆಗಿ 7UPನ Fido Dido ದೊಂದಿಗೆ ಒಪ್ಪಂದವನ್ನು ಸೀಲಿಂಗ್ ಮಾಡುವುದನ್ನು ಇದು ಒಳಗೊಂಡಿರುತ್ತದೆ ಹಾಗೂ ತನ್ನ ಪ್ರಿಯಕರನಿಗೆ ಕ್ಷಿಪ್ರಗತಿಯಲ್ಲಿ ಫ್ಲೈಯಿಂಗ್ ಕಿಸ್ ಮಾಡುವ ದೃಶ್ಯವನ್ನು ಒಳಗೊಂಡಿದೆ.

ರಶ್ಮಿಕಾ ಮಂದಣ್ಣ ಅವರು ಬಹುಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿ ದೇಶಾದ್ಯಂತ ಲಕ್ಷಾಂತರ ಯುವಕರ ನೆಚ್ಚಿನ ನಾಯಕ ನಟಿಯಾಗಿದ್ದಾರೆ. ಅವರ ಈ ಜನಪ್ರಿಯತೆ ಮತ್ತು ಯಶಸ್ಸು ದೇಶದಲ್ಲಿ ಪ್ರಸ್ತುತ ಅವರನ್ನು ಸೂಪರ್ ಸ್ಟಾರ್ ಅನ್ನಾಗಿ ಮಾಡಿದೆ. ಅವರೊಂದಿಗಿನ ಸಹಭಾಗಿತ್ವದಿಂದ ದೇಶದಲ್ಲಿ 7UP ನೊಂದಿಗಿನ ಯುವ ಪೀಳಿಗೆಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.

ರಶ್ಮಿಕಾ ಮಂದಣ್ಣ ಅವರ ನೇಮಕದ ಬಗ್ಗೆ ಮಾತನಾಡಿದ ಪೆಪ್ಸಿಕೊ ಇಂಡಿಯಾದ ಎನರ್ಜಿ, ಹೈಡ್ರೇಶನ್ & ಫ್ಲೇವರ್ಸ್ ನ ಸೀನಿಯರ್ ಮಾರ್ಕೆಟಿಂಗ್ ಡೈರೆಕ್ಟರ್ ನಸೀಬ್ ಪುರಿ ಅವರು, “ರಶ್ಮಿಕಾ ಮಂದಣ್ಣ ಅವರು ತಮ್ಮ ಉಲ್ಲಾಸಕರ ಮತ್ತು ಉತ್ಸಾಹಭರಿತ ವ್ಯಕ್ತಿತ್ವದೊಂದಿಗೆ ಕಡಿಮೆ ಅವಧಿಯಲ್ಲಿ ದೇಶದ ಅತ್ಯಂತ ಪ್ರೀತಿಯ ಯೂತ್ ಐಕಾನ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅವರ ಈ ವ್ಯಕ್ತಿತ್ವ ಮತ್ತು ಜನಪ್ರಿಯತೆ 7UP ಗೆ ನಿಜವಾಗಿಯೂ ಉತ್ತಮ ಹೊಂದಾಣಿಕೆಯಾಗುತ್ತದೆ. ಅವರು ದೇಶಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವುದರಿಂದ ನಮ್ಮ ಗ್ರಾಹಕ ವ್ಯಾಪ್ತಿಯನ್ನು ವಿಸ್ತರಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಸದಾ ಮಂದಸ್ಮಿತವಾದ ಮುಖವನ್ನು ಹೊಂದಿರುವ ಅವರು ನಮ್ಮ ಜೊತೆ ಸಹಭಾಗಿತ್ವ ಹೊಂದಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ’’ ಎಂದರು.

*ಈ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ,* “ನಾನು 7UP ಗೆ ಬ್ರ್ಯಾಂಡ್ ಅಂಬಾಸಿಡರ್ ಆಗುತ್ತಿರುವುದಕ್ಕೆ ಅತ್ಯಂತ ಸಂತಸವಾಗುತ್ತಿದೆ. ಇದು ನಿಜಕ್ಕೂ ರೀಫ್ರೆಶ್ ನೀಡುವ ಪೇಯವಾಗಿದೆ. ನಾನು ಈ ಡ್ರಿಂಕ್ ನ ಜಾಹೀರಾತು ಅಭಿಯಾನಗಳಲ್ಲಿ ನಟಿಸಲಿದ್ದೇದ್ದೇನೆ ಮತ್ತು ನನ್ನ ಅಭಿಮಾನಿಗಳಿಗೆ ಹೊಸ ರೀಫ್ರೆಶಿಂಗ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದೇನೆ’’ ಎಂದು ತಿಳಿಸಿದರು.

ರಶ್ಮಿಕಾ ನಟಿಸಲಿರುವ 7UP ನ ಹೊಸ ಜಾಹೀರಾತು ಸದ್ಯದಲ್ಲೇ ಎಲ್ಲಾ ಸಾಂಪ್ರದಾಯಿಕ ಮತ್ತು ಡಿಜಿಟಲ್ ಪ್ಲಾಟ್ ಫಾರ್ಮ್ ಗಳಲ್ಲಿ ಪ್ರಸಾರಗೊಳ್ಳಲಿದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

22 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago