ಬಿಸಿ ಬಿಸಿ ಸುದ್ದಿ

ಕಸಾಪ ಉತ್ತರ ವಲಯದಿಂದ ಭಾವೈಕ್ಯ ಸಮಾವೇಶ | ವಿನಯ-ಸಹಭಾಳ್ವೆಯಿಂದ ಬಾಳು ಬಂಗಾರ

ಕಲಬುರಗಿ; ಸಮಾಜದಲ್ಲಿ ಶಾಂತಿ ಸೌಹಾರ್ದತೆಯಿಂದ ಜೀವಿಸಲು ಪ್ರತಿಯೊಬ್ಬರು ವಿದ್ಯೆ, ವಿನಯ ಸಹಬಾಳ್ವೆ ಅತಿ ಅವಶ್ಯಕವಾಗಿದೆ ಎಂದು ಪಾಳಾ ಸಂಸ್ಥಾನಮಠದ ಶ್ರೀ ಷ.ಬ್ರ. ಗುರುಮೂರ್ತಿ ಶಿವಾಚಾರ್ಯರು ತಮ್ಮ ಆಶೀರ್ವಚನದಲ್ಲಿ ನುಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ವಲಯ ವತಿಯಿಂದ ನಗರದ ಶ್ರೀ ಚನ್ನಮಲ್ಲೇಶ್ವರ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಭಾವ್ಯಕ್ಯ ಸಮಾವೇಶದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ ಇಂದು ಎಲ್ಲಡೆ ಧರ್ಮ, ಜಾತಿ ಎಂದು ಬೇದ -ಭಾವದಿಂದ ಸಮಾಜದಲ್ಲಿ ಅಶಾಂತಿ ನೆಲೆಸಲು ಕಾರಣವಾಗುತ್ತಿದೆ ಇದನ್ನು ಹೋಗಲಾಡಿಸಲು ಎಲ್ಲರೂ ವಿನಯ ಸಹಬಾಳ್ವೆಯಿಂದ ಜೀವಿಸಿದರೆ ಬಾಳು ಬಂಗಾರವಾಗುತ್ತದೆ ಎಂದರು.

ವಿದ್ಯಾರ್ಥಿಗಳು ತಮ್ಮ ಭವಿಷ್ಯ ಉಜ್ವಲೊಳ್ಳಲು ಕಠಿಣ ಪರಿಶ್ರಮ, ಶ್ರದ್ದೆಯಿಂದ ಜೀವನ ಸಾಗಿಸಿದೆ ತಮ್ಮ ಜೀವನದ ಕನಸು ಸಾಕಾರಗೊಳಿಸಲು ಸಾಧ್ಯವೆಂದು ನುಡಿದರು.

ಇತ್ತೀಚಿನ ದಿನಗಳಲ್ಲಿ ಕೆಲ ಕಿಡಿಗೇಡಿಗಳಿಂದ ಶಿಕ್ಷಣ ಸಂಸ್ಥೆಗಳಲ್ಲು ಜಾತಿ, ಧರ್ಮ ವಿಷ ಬೀಜಗಳನ್ನು ಬಿತ್ತಿ ಭಾವ್ಯಕ್ಯತೆಗೆ ತೊಂದರೆಯಾಗಿದ್ದು ಮಕ್ಕಳು ಓದಿನ ಕಡೆಗೆ ಹೆಚ್ಚುಗಮನ ನೀಡಿ ಜೀವನ ಸಾಧನೆಗೈಲು ಸಲಹೆ ನೀಡಿದರು.

ಉದ್ಘಾಟಕರಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಹೇಶ ಹೂಗಾರ ಮಾತನಾಡಿ ನಾವು ವಿದ್ಯಾರ್ಥಿಗಳಲ್ಲಿ ಭಾವೈಕ್ಯ ಗುಣಗಳನ್ನುಬೆಳೆಸಬೇಕಾದರೆ ಮೊದಲು ನಾವು ಭಾವೈಕ್ಯತೆಯಿಂದ ಬದುಕಿದಾಗ ಮಕ್ಕಳು ಅದನ್ನು ಅನುಸರಿಸುತ್ತಾರೆ ಎಂದು ನುಡಿದರು.

ನಮ್ಮ ದೇಶದಲ್ಲಿ ಎಲ್ಲ ಧರ್ಮ, ಜಾತಿ ಜನಾಂಗ ಒಟ್ಟಿಗೆ ಜೀವನ ಸಾಗಿಸುತ್ತಿರುವುದು ಜಗತ್ತಿಗೆ ಮಾದರಿಯಾಗಿದೆ ಎಂದರು.
ಆಶಯ ನುಡಿಗಳನ್ನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷರಾದ ಡಾ.ವಿಜಯಕುಮಾರ ತೇಗಲತಿಪ್ಪಿ ಅವರು ಮಾತನಾಡುತ್ತಾ ಇಂದು ಎಲ್ಲಡೆ ಭಾವೈಕ್ಯದ ಕೊರತೆ ಇದ್ದು ಮಕ್ಕಳು ಓದಿನೊಂದಿಗೆ ಸಾಮಾಜಿಕ ಚಿಂತನೆ ಮಾಡಿದರೆ ಸಮಾಜದಲ್ಲಿ ಭಾವೈಕ್ಯವನ್ನು ಮೂಡಿಸಲು ಸಾಧ್ಯವೆಂದು ಹೇಳಿದರು.

ಯುವಕರಿಗೆ ಅಧಿಕಾರ ಸಿಕ್ಕರೆ ಹೊಸ ಸಮಾಜ ನಿರ್ಮಾಣ ಸಾಧ್ಯವೆಂದು ನುಡಿದ ಅವರು ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹೊಸ ಹೊಸ ಕಾರ್ಯಕ್ರಮಗಳನ್ನು ಹಾಕಿಕೊಂಡು ಕನ್ನಡ ಭಾಷೆ, ನಾಡು, ನುಡಿಯನ್ನು ಬೆಳೆಸುವ ಗುರಿಯನ್ನು ಹೊಂದಲಾಗಿದೆ ಎಂದರು.

ಭೀಮಳ್ಳಿ ದರ್ಗಾದ ಶ್ರೀ ಶೇಖ ಸೈಯದ ಇಶಾಕ್ ಹುಸೇನಿಸಾಹೇಬ ಇವರು ಮಾತನಾಡುತ್ತಾ ಭಾವೈಕ್ಯ ಮೂಡಿಸಲು ಭಾವನೆಗಳು ಶುದ್ದ ಮಡುವುದು ಅತಿ ಅವಶ್ಯ, ಪ್ರಕೃತಿಯಲ್ಲಿ ಸೂರ್ಯ, ಚಂದ್ರ, ಆಕಾಶ ಯಾವುದೇ ಬೇಧ ಭಾವವನ್ನು ಮಾಡದೆ ಎಲ್ಲರಿಗೂ ಒಂದೇ ರೀತಿಯಾಗಿ ಬೆಳಕು, ಗಾಳಿ, ವಾಸಿಸಲು ನೆಲೆ ಒದಗಿಸಿರುವಾಗ ಮನುಷ್ಯ ಮನುಷ್ಯರಲ್ಲಿ ಭಾವೈಕ್ಯದ ಕೊರತೆ ಉಂಟಾಗಿದ್ದು, ಮನುಷ್ಯರು ಭಾವೈಕ್ಯತೆಯಿಂದ ಬದುಕಿದಾಗ ದೇಶ ಅಭಿವೃದ್ಧಿ ಹೊಂದುವುದು ಎಂದರು. ನಾನು ಶ್ರೇಷ್ಟ ಎಂಬ ಭಾವನೆಯನ್ನು ಬಿಟ್ಟು ಎಲ್ಲರು ಸಹಬಾಳ್ವೆಯಿಂದ ಬದುಕಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಿದ್ರಾಮಪ್ಪ ಉಕಲಿ ಮಾತನಾಡಿ ಭಾವೈಕ್ಯತೆ ಭಾಷಣದಿಂದ ಸಾಧ್ಯವಿಲ್ಲ. ವಿದ್ಯಾರ್ಥಿ ಒಳ್ಳೆಯವರಾದ ದೇಶಕ್ಕೆ ಒಳಿತು ಎಲ್ಲರು ಒಂದೇ ಎಂದು ತಿಳಿಯಬೇಕು ಎಂದು ಜಗಜ್ಯೋತಿ ಬಸವೇಶ್ವರರ ವಚನ ಇವನಾರವ ಇವನಾರವ ಇವ ನಮ್ಮ ಇವ ನಮ್ಮ ಎಂಬ ವಚನದ ಸಾಲುಗಳನ್ನುಹೇಳಿದರು.

ನೀತಿ ಇಲ್ಲದ ಇಂದಿನ ಶಿಕ್ಷಣ ದೇವರಿಲ್ಲದ ಗುಡಿಯಂತೆ ಆದ್ದರಿಂದ ಮಕ್ಕಳಿಗೆ ನೀತಿ ಪಾಠ ಹೇಳಿಕೊಡುವುದು ತಂದೆ,ತಾಯಿ, ಪೋಷಕರು, ಶಿಕ್ಷಕರ ಪಾತ್ರವನ್ನು ವಿವರಿಸಿದರು.

ವೇದಿಕೆ ಮೇಲೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಾಬುರಾವ ಯಡ್ರಾಮಿ, ಮಹಾನಗರ ಪಾಲಿಕೆ ಸದಸ್ಯರಾದ ಪ್ರಭುಲಿಂಗ ಹಾದಿಮನಿ, ಸಿದ್ರಾಮಪ್ಪ ಉಕಲಿ, ಧೂಳಪ್ಪ ಹಾದಿಮನಿ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಶಿವರಾಜ ಅಂಡಕಿ, ಪ್ರೊ. ಯಶ್ವಂತ ಅಷ್ಟಗಿ, ಡಾ.ಶರಣರಾಜ ಛಪ್ಪರಬಂದಿ, ಉತ್ತರ ವಲಯ ಪದಾಧಿಕಾರಿಗಳಾದ ಶಿವಯೋಗೆಪ್ಪಾ ಬಿರಾದಾರ, ಹಣಮಂತರಾಯ ದಿಂಡೂರೆ, ನಾಗೇಶ ತಿಮ್ಮಾಜಿ, ಶ್ರೀಕಾಂತ ಪಾಟೀಲ ದಿಕ್ಸಂಗಾ, ಶ್ರೀಶೈಲ ಹೊದಲೂರ, ವಿಜಯಕುಮಾರ ಬಂಗಾರಿ, ಕೃಷ್ಣಪ್ಪ ನಾಯಕ, ಹೇಮಂತ ಸರದಾರ, ಕಾಶಿನಾಥ ಮಾಳಗೆ, ಶ್ರೀಮತಿ ಶಿವಕನ್ಯಾ ಬಿಸಿ ಬಿಸಿ, ಶ್ರೀಮತಿ ಶರಣಮ್ಮಾ ಹಿರೇಮಠ, ಶಿವಲಿಂಗಪ್ಪ ಟೆಂಗಳಿ, ಬಸವರಾಜ ಹೆಳವಾರ, ಬಸವರಾಜ ಮಳ್ಳಿ, ಶ್ರೀಮತಿ ಕವಿತಾ ದೇಗಾಂವ, ಸುಧಾಕರ ದಣ್ಣುರ, ನವಾಬ ಖಾನ್, ಉಪಸ್ಥಿತರಿದ್ದರು.

ಉತ್ತರ ವಲಯ ಅಧ್ಯಕ್ಷರಾದ ಪ್ರಬುಲಿಂಗ ಮುಲಗೆ ಸ್ವಾಗತಿಸಿದರು, ಕಸಾಪ ಉತ್ತರ ವಲಯ ಸಂಚಾಲಕರಾದ ಮಲ್ಲಿನಾಥ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ವಿಜಯಕುಮಾರ ಬಂಗಾರೆ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ನಂತರ ಗೋಷ್ಠಿಗಳು ಜರುಗಿದವು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

13 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

23 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

23 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

23 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago