ಬಿಸಿ ಬಿಸಿ ಸುದ್ದಿ

ಜನತೆಯ ಮೇಲೆ ಸಾಲದ ಹೊರೆ ಹೇರುವ, ಜನವಿರೋಧಿ ಬಜೆಟ್; ಸಿಪಿಐಎಂ

ಕಲಬುರಗಿ: ಕರ್ನಾಟಕ ಸರಕಾರ ಮಂಡಿಸಿದ 2023-24 ರ ಸಾಲಿನ ಸುಮಾರು ಮೂರು ಲಕ್ಷ ಕೋಟಿ ರೂಗಳ ಬಜೆಟ್ ಜನ ವಿರೋಧಿಯಾದ ಬಜೆಟ್ ಆಗಿದೆ. ಅದಾಗಲೇ ನವ ಉದಾರೀಕರಣದ ನೀತಿಗಳ ಜಾರಿಗೆ ಕ್ರಮವಹಿಸಿ, ಕಾರ್ಪೊರೇಟ್ ಕಂಪನಿಗಳ ಲೂಟಿಗೆ ರಾಜ್ಯವನ್ನು ತೆರೆದಿದ್ದು ಅದರ ವಿರುದ್ದ ಪ್ರತಿರೋದ ವ್ಯಾಪಕಗೊಳ್ಳದಂತೆ ಜನತೆಯನ್ನು ಒಡೆದಾಳುವ, ಕೋಮುವಾದ ಹಾಗೂ ಜಾತಿವಾದದ ಬೆಳವಣಿಗೆಗೆ ಒತ್ತು ನೀಡಲು ಸಹಾಯಕವಾದ ಬಜೆಟ್ ಆಗಿದೆ ಎಂದು ಸಿಪಿಐಎಂ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ ನೀಲಾ ಟೀಕಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಬಜೆಟ್ ಪ್ರಜಾಪ್ರಭುತ್ವ ವಿರೋಧಿ ಬಜೆಟ್ ಆಗಿದ್ದು, ಅದಾಗಲೇ ಒಕ್ಕೂಟ ಸರಕಾರದ ಬಜೆಟ್ ಕೃಷಿ ಹಾಗೂ ಬಡವರ ಮೇಲೆ ಸಹಾಯಧನಗಳನ್ನು ಕಡಿತ ಮಾಡುವ ಮೂಲಜ ತೀವ್ರ ದಾಳಿ ನಡೆಸಿದೆ. ರಾಜ್ಯ ಬಜೆಟ್ ಪ್ರವಾಹ, ಅತೀವೃಷ್ಠಿ, ಹಾಗೂ ಕೃಷಿ ಉತ್ಪನ್ನಗಳ ಬೆಲೆ ಕುಸಿತದ  ಕಷ್ಠದಲ್ಲಿರುವ ರೈತರ ಸಾಲ ಮನ್ನಾ ಘೋಷಿಸಲಿಲ್ಲ. ಸಂಕಷ್ಟದಲ್ಲಿರುವ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಗಳಿಂದ ತತ್ತರಿಸಿರುವ  ರಾಜ್ಯದ ಶೇ 90 ಜನತೆಯ ಮೇಲೆ ರಾಜ್ಯ ಸರಕಾರ ಈ ಬಜೆಟ್ ಮೂಲಕ ಒಟ್ಟು ಬಜೆಟ್ ನ ಶೇ. 26 ರಷ್ಟು ಅಂದರೆ ಸುಮಾರು 77,000 ಕೋಟಿ ರೂ ಸಾಲದ ಹೊರೆಯನ್ನು ಹೇರಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಮಠಗಳಿಗೆ ಸಮುದಾಯಗಳ ಭಾವನಾತ್ಮಕ ವಿಚಾರಗಳಿಗೆ ನೆರವು ಘೋಷಿಸುವ ಮೂಲಕ ಜಾತಿ ಭಾವನೆಗಳ ಬೆಳವಣಿಗೆಗೆ ಕುಮ್ಮಕ್ಕು ನೀಡಿದೆ. ರಾಮನಗರದಲ್ಲಿ ರಾಮ ಮಂದಿರ ನಿರ್ಮಾಣದ ಘೋಷಣೆ ಮೂಲಕ ದಕ್ಷಿಣ ಕರ್ನಾಟಕದಲ್ಲಿ ಮತೀಯ ಭಾವನೆಗಳನ್ನು ಹರಡುವ ವೇದಿಕೆಯನ್ನು ಯೋಜನೆಯಂತೆ ಜಾರಿಗೊಳಿಸಲು ಕ್ರಮವಹಿಸಿದೆ. ಅದಾಗಲೇ ಶ್ರೀ ರಂಗ ಪಟ್ಟಣದ ಟಿಪ್ಪು ಮಸೀದಿಯ ಒಡೆಯುವ ಸಂಚು ನಡೆದಿರುವಾಗ ಇದು ಅದಕ್ಕೆ ಕುಮ್ಮಕ್ಕಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಲೆ ಏರಿಕೆಯ ಈ ದಿನಗಳಲ್ಲಿ ಯೋಜನಾ ಕೆಲಸಗಾರರಿಗೆ ಘೋಷಿಸಿದ ಒಂದು ಸಾವಿರ ಹೆಚ್ಚಳ ಹೆಚ್ಚಳವೇ ಅಲ್ಲವಾಗಿದೆ. ಕೆಲವು ಕ್ರಮಗಳನ್ನು  ಮತದಾರರ ಗಮನ ಸೆಳೆಯಲು ರೂಪಿಸಲಾಗಿದೆ. ತಕ್ಷಣವೇ ರಾಜ್ಯ ಸರಕಾರ ಈ ಜನ ವಿರೋದಿ ಬಜೆಟ್ ವಾಪಾಸು ಪಡೆದು ಬಡವರು, ರೈತರು ಹಾಗೂ ಕಾರ್ಮಿಕರು, ನಾಗರೀಕರ ಐಕ್ಯತೆ ಮತ್ತು ಹಿತ ರಕ್ಷಣೆಯ ಬಜೆಟ್ ಆಗಿ ಬದಲಾಯಿಸಬೇಕೆಂದು ಸಿಪಿಐಎಂ ಒತ್ತಾಯಿಸಿದೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

6 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

23 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago