ಕಲಬುರಗಿ: ಮಕ್ಕಳ ಎಲ್ಲೆಲ್ಲೂ ಮೊಬೈಲ್‍ಗಳು ಹರಿದಾಡುತ್ತಿರುವಾಗ, ಟಿವಿಯ ಧಾರಾವಾಹಿಗಳು ಮನಸ್ಸನ್ನು ಕೆಡಿಸುತ್ತಿರುವಾಗ ಎಳೆಯ ಮನಸ್ಸುಗಳಿಗೆ ಎಂದಿಗಿಂತಲೂ ಇಂದು ಸಂಸ್ಕಾರ ಬಹಳ ಅಗತ್ಯವಿದೆ ಎಂದು ಬಿಜೆಪಿ ಮುಖಂಡೆ ಜಯಶ್ರೀ ಬಸವರಾಜ ಮತ್ತಿಮಡು ಹೇಳಿದರು.
ಅವರು ಶಹಾಬಾದ ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮದ ಕಾಶಿ ವಿಶ್ವನಾಥ ಟ್ರಸ್ಟ್, ಶಿವಸಾಯಿ ಪೀಠ ಮತ್ತು ಶ್ರೀ ಶರಣ ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಮಹಾಶಿವರಾತ್ರಿ ಜಾಗರಣೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದರು.
ಶ್ರೀ ಶರಣ ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆ ಅಡಿಯ ಕೊತ್ತಲಪ್ಪ ಮುತ್ಯಾ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಹೇಳಿಕೊಟ್ಟು ಬದುಕನ್ನು ಪ್ರೀತಿ ವಿಶ್ವಾಸಗಳಿಂದ ಸುಂದರಗೊಳಿಸುವ ಪ್ರಕ್ರಿಯೆಯನ್ನು ಹೇಳಿಕೊಡುತ್ತಿರುವುದು ಶ್ಲಾಘನೀಯವಾದುದು ಎಂದರು.
ಈ ಕಂಪ್ಯೂಟರ್ ಯುಗದಲ್ಲಿ ಹೆಚ್ಚು ಗಳಿಸಬೇಕೆನ್ನುವ ಭರದಲ್ಲಿ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೆವೆ. ಮಕ್ಕಳಿಗೂ ಒಳ್ಳೆಯ ಸಂಸ್ಕಾರ ಕೊರತೆಯಿಂದ ಸಮಾಜ ಅಧಃಪತನದತ್ತ ಸಾಗುತ್ತ ಹೊರಟಿದೆ.ಆದ್ದರಿಂದ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದರೆ ಸುಂದರ ಸಮಾಜವನ್ನು ನಿರ್ಮಾಣವಾಗುತ್ತದೆ.ಆ ನಿಟ್ಟಿನಲ್ಲಿ ಕೊತ್ತಲಪ್ಪ ಮುತ್ಯಾ ಅವರು ಶಾಲೆಯ ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ನೀಡುತ್ತಿರುವುದು ಉತ್ತಮ ಕೆಲಸವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ವಿಜಯಕುಮಾರ ಹಂಚಿನಾಳ, ಶಾಲೆ ಎನ್ನುವುದು ನೆಲದ ಮೇಲಿನ ಮರದಂತೆ ಇದ್ದರೆ, ಸಂಸ್ಕಾರ ಎನ್ನುವುದು ನೆಲದ ಆಳದಲ್ಲಿರುವ ಮರದ ಬೇರಿನಂತೆ ಇರುತ್ತದೆ.ಬದುಕು ಸುಂದರವಾಗಿರಬೇಕೆಂದರೆ ಬದುಕಿನಲ್ಲಿ ಸಂಸ್ಕಾರ ಅಳವಡಿಸಿಕೊಳ್ಳೇಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಲೇಬೇಕು. ಪರಿಮಳ ಸೂಸುವ ಹೂವು ಅರಳಿದಾಗ ಅದನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ.ಪರಿಮಳವಿಲ್ಲದ ಹೂವು ಯಾರಿಗೂ ಇಷ್ಟವಾಗುವುದಿಲ್ಲ. ಹಾಗೆಯೇ ಶಾಲೆಯ ವಿದ್ಯಾರ್ಥಿಗಳಿಗೆ ವಿದ್ಯೆಯ ಜತೆಗೆ ಸಂಸ್ಕಾರ ಇದ್ದರೇ ಎಲ್ಲರೂ ಆ ಶಾಲೆಯನ್ನು ಇಷ್ಟಪಡುತ್ತಾರೆ ಹಾಗೂ ಗೌರವಿಸುತ್ತಾರೆ.ಅಂತಹ ಉತ್ತಮ ಶಾಲೆ ಶರಣ ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆ ನಡೆಸುತ್ತಿದೆ ಎಂದರು.
ಕೋಲಿ ಸಮಾಜದ ಮುಖಂಡ ಬಸವರಾಜ ಬೂದಿಹಾಳ ಮಾತನಾಡಿದರು.ಸಂಸ್ಥೆಯ ಅಧ್ಯಕ್ಷರಾದ ಕೊತ್ತಲಪ್ಪ ಮುತ್ಯಾ ಅಧ್ಯಕ್ಷತೆ ವಹಿಸಿದ್ದರು. ಹೂಗಾರ ಸಮಾಜದ ಶ್ರೀಗಳು, ಅಂಬಿಗರ ಚೌಡಯ್ಯ ನಿಗಮದ ನಿರ್ದೇಶಕ ನಿಂಗಣ್ಣ ಹುಳಗೋಳಕರ್,ರಾಜಶೇಖರ ಮಾಲಿ ಪಾಟೀಲ,ಮಲ್ಲುಗೌಡ ಬುಟ್ನಾಳ, ಡಾ.ಸರ್ದಾರ ರಾಯಪ್ಪ,ಗ್ರಾಪಂ ಅಧ್ಯಕ್ಷೆ ಕಾವೇರಿ ಮಹಾಲಿಂಗ ಪೂಜಾರಿ, ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಭಾಗಿರಥಿ ಗುನ್ನಾಪೂರ,ಶಾಂತಮಲ್ಲ ಶಿವಭೋ, ಗ್ರಾಮದ ಮುಖಂಡ ಮಹಾದೇವ ಬಂದಳ್ಳಿ, ಗ್ರಾಮದ ಮುಖಂಡರಾದ ಬಸವರಾಜ ಮದ್ರಿಕಿ, ಬೆಳಪ್ಪ ಖಣದಾಳ, ಸಿದ್ದು ಖಣದಾಳ,ಮಹಾದೇವಿ ಗೊಬ್ಬೂರ್,ರೇವಣಸಿದ್ದಪ್ಪ ಕೆಲ್ಲೂರ್, ಅಂಬರೀಷ ಬಂಗಾರಶೆಟ್ಟಿ, ಸೇರಿದಂತೆ ಮಕ್ಕಳು, ಪಾಲಕರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…