ಯಾದಗಿರಿ: ಸರಕಾರಿ ಶಾಲೆಯ ಮಕ್ಕಳಿಗಾಗಿ ನಾವೆಲ್ಲರೂ ನಮ್ಮ ನಮ್ಮ ದಿನನಿತ್ಯದ ಪಾಠಾಗಳಾಚೆಗೆ ಕರೆದೊಯ್ಯೂವ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು, ಶಿಕ್ಷಕರಾದವರು ಪಾಠ ಮಾಡುವುದು ಸಾಮಾನ್ಯ ಆದರೆ ಪಾಠಗಳ ಜೊತೆಗೆ ಜೀವನ ಸಾಧನೆಯ ಹಾದಿಯನ್ನು ಪ್ರಮಾಣಿಕತೆಯನ್ನು ಕಲಿಸಬೇಕು. ಇಂದು ಸರಕಾರಿ ಪ್ರೌಢಶಾಲೆ ಕಂದಕೂರಿನಲ್ಲಿ ಶಿಕ್ಷಕಿ ಮಧುಮತಿ ಸಿಂಗೆ ಅವರು ಅತೀ ಕಡಿಮೆ ಸಮಯದಲ್ಲಿ ತಮ್ಮ ಸ್ವಂತ ಹಣದಲ್ಲಿ ವಿಜ್ಞಾನ ಪ್ರಯೋಗಾಲಯ ಕಟ್ಟಿದ್ದು ಶ್ಲಾಘನೀಯ ಕೆಲಸವಾಗಿದೆ. ಇಂತಹ ಸೇವೆಯ ಮನೋಭಾವವಿರುವ ಶಿಕ್ಷಕರ ಸಂಖ್ಯೆ ಹೆಚ್ಚಾಗಲಿ ಪ್ರತಿಯೊಬ್ಬ ಶಿಕ್ಷಕರಿಗೆ ಮಧುಮತಿ ಸಿಂಗೆ ಮಾದರಿಯಾಗಿದ್ದಾರೆ ಎಂದು ವೇದಿಕೆಯ ಮೇಲೆ ಶಿಕ್ಷಕಿಗೆ ಸನ್ಮಾನಿಸಿ ಪ್ರಶಂಸೆಯನ್ನು ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಯಾದಗಿರಿ ಜಿಲ್ಲಾಧಿಕಾರಿಗಳು ಇಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಪ್ರೌಢಶಾಲೆ ಕಂದಕೂರ ಇಲ್ಲಿ ವಿಜ್ಞಾನ ಪ್ರಯೋಗಾಲ ಉದ್ಘಾಟನೆ ಮಾಡಿ ಮಾತನಾಡಿದರು. ಮಕ್ಕಳ ಪರೀಕ್ಷೆಗಳು ಹತ್ತಿರ ಬಂದಿದ್ದು ಎಲ್ಲರೂ ಓದಿನ ಕಡೆಗೆ ಗಮನ ಕೊಡಬೇಕು. ಶಿಕ್ಷಕರೆಲ್ಲರೂ ಚೆನ್ನಾಗಿ ಪಾಠ ಮಾಡಬೇಕು. ಇವತ್ತಿನ ವಿಜ್ಞಾನ ಪ್ರಯೋಗಾಲವನ್ನು ಸರಿಯಾಗಿ ಬಳಕೆ ಮಾಡಬೇಕು. ಇಲ್ಲಿನ ಶಾಲೆಯ ಎಲ್ಲಾ ಶಿಕ್ಷಕರು ಮುಖ್ಯಗುರುಗಳು ಮಕ್ಕಳು ಅಭಿನಂದನೆಗೆ ಅರ್ಹರು ಎಂದು ಪ್ರೋತ್ಸಾಹಕ ನುಡಿಗಳನ್ನು ಆಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕಿ ಮಧುಮತಿಯವರು ಬದುಕಲ್ಲಿ ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ ಕಲಿಕಾ ಆಸಕ್ತಿಯನ್ನು ಹುಟ್ಟುಹಾಕುವ ಸೂತ್ರದಾರನೆ ಶಿಕ್ಷಕ. ನಾನು ಈ ಶಾಲೆಗೆ ಸೇರಿದ ಮೊದಲಬಾರಿಗೆ ಬಂದಾಗ ವಿಜ್ಞಾನ ಪ್ರಯೋಗಾಲಯದ ಕೊರತೆಯನ್ನು ಕಂಡು ನಾನು ಪಾಠಮಾಡುವುದಕ್ಕೆ ಕಷ್ಟವಾಗುತ್ತಿತ್ತು. ಮಕ್ಕಳಿಗೆ ವಿಜ್ಞಾನ ಹೇಳಿಕೊಡುವಾಗ ಪ್ರೋಗಾಲಯದ ಕೊರತೆ ಕಂಡು ಈ ಶಾಲೆಯ ಮಕ್ಕಳಿಗಾಗಿ ಏನಾದರು ಮಾಡಲೇಬೇಕು ಎಂಬ ಹಠತೊಟ್ಟು ನನಗೆ ಬರುವ ಸಂಬಳದಲ್ಲಿ ಪ್ರತಿತಿಂಗಳು ಉಳಿತಾಯ ಮಾಡಿ ಈ ಪ್ರಯೋಗಾಲಯವು ಶಾಲೆಯ ಹಾಗೂ ಊರಿನ ಎಲ್ಲರ ಸಹಕಾರ ಪಡೆದು ಇಂದು ಉದ್ಘಾಟನೆಯಾಗುತ್ತಿರುವುದು ಸಂತೋಷ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿ ಮಾತನಾಡಿದ ಉಪನಿರ್ದೇಶಕರು ಶಾಂತಗೌಡ ಪಾಟೀಲ್ ಅವರು ಮಕ್ಕಳಿಗೆ ವಿಜ್ಞಾನ ಪ್ರಯೋಗಾಲಯ ಅತ್ಯಂತ ಅವಶ್ಯಕವಾಗಿದೆ. ಶಾಲೆಯಲ್ಲಿ ಶಿಕ್ಷಕರೊಬ್ಬರೂ ಶಾಲೆಯಲ್ಲಿ ತಮ್ಮ ಸ್ವಂತ ಹಣದಿಂದ ಇಂತಹ ಕೆಲಸ ಮಾಡಿದ್ದು ಮಾದರಿಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಇಂತಹ ಹೊಸ ಹೊಸ ಪ್ರಯತ್ನಗಳು ಆಗುತ್ತಿರುವುದಕ್ಕೆ ಸಂತೋಷವಿದೆ ಮಧುಮತಿ ಟೀಚರ್ ಗೆ ಇಲಾಖೆ ಅಭಿನಂದಿಸಿ ಅವರ ಜೊತೆಗೆ ಪ್ರಯೋಗಾಲಯದ ಅಭಿವೃದ್ಧಿಗಾಗಿ ಕೈಜೋಡಿಸುತ್ತದೆ ಎಂದರು.
ಮುಖ್ಯ ಅಥಿತಿಯಾಗಿ ಆಗಮಿಸಿ ಮಾತನಾಡಿದ ಪ್ರಜ್ಞಾ ಫೌಂಡೇಷನ್ ನ ನಿರ್ದೇಶಕ ಕೆ.ಎಂ.ವಿಶ್ವನಾಥ ಮರತೂರ, ಮಧುಮತಿ ಶಿಕ್ಷಕರ ಇವತ್ತಿನ ಈ ಪ್ರಯೋಗಾಲಯದ ಕನಸು ಹಲವು ವರ್ಷಗಳದ್ದು, ಒಬ್ಬ ಶಿಕ್ಷಕ ತರಗತಿ ಕೋಣೆಯಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಪ್ರಯೋಗಾಲಯ ಮಾದರಿಯಾಗಿದೆ. ಸ್ವಂತ ಹಣದಲ್ಲಿ ಶಾಲೆಗಾಗಿ ಕೆಲಸ ಮಾಡಲು ಮಕ್ಕಳ ಮೇಲಿನ ಪ್ರೇಮ, ನೌಕರಿ ಮೇಲಿನ ಜವಾಬ್ದಾರಿ ಎದ್ದು ತೋರಿಸುತ್ತದೆ. ಶಾಲೆಯ ಮೇಲಿರುವ ಅವರ ಕಾಳಿಜಿ ಇವತ್ತಿನ ಎಲ್ಲಾ ಶಿಕ್ಷಕರು ಮಾದರಿಯಾಗಿದೆ. ನಾವೆಲ್ಲರೂ ಅವರೊಂದಿಗೆ ಕೈಜೋಡಿಸಿ ಇನ್ನಷ್ಟು ಪ್ರಯೋಗಾಲಯ ಅಭಿವೃದ್ಧಿಗಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಶಿಕ್ಷಕರಾದ ವಿನೋದಕುಮಾರ ಗುಡಿ ಮಾತನಾಡಿ ನಮ್ಮ ಶಾಲೆಯಲ್ಲಿ ಇಂದು ಉದ್ಘಾಟನೆಯಾಗುತ್ತಿರುವುದು ಬಹುದಿನಗಳ ಕನಸು ಈ ಪ್ರಯೋಗಾಲಯದ ಹಿಂದೆ ನಮ್ಮೆಲ್ಲರದ್ದು ಅತ್ಯಂತ ದೊಡ್ಡ ಶ್ರಮವಿದೆ. ಶಿಕ್ಷಕರಾದ ನಾವುಗಳು ನಮ್ಮ ನಮ್ಮ ಕರ್ಯವ್ಯದ ಜೊತೆಗೆ ಮಕ್ಕಳಿಗಾಗಿ ಒಂದಿಷ್ಟು ಸಮಯ ಮೀಸಲಿಟ್ಟು ತೊಡಗಿಸಿಕೊಂಡು ಕಲಿಸಬೇಕಿದೆ. ವಿಜ್ಞಾನ ಪ್ರಯೋಗಾಲಯಕ್ಕಾಗಿ ಹಗಲು ರಾತ್ರಿ ಶ್ರಮಿಸಿರುವ ಶಾಲೆಯ ನಾವೆಲ್ಲರೂ ಇಂದು ಸಂಭ್ರಮದಿಂಧ ಜಿಲ್ಲಾಧಿಕಾರಿ ಉದ್ಘಾಟನೆ ಮಾಡಿದ್ದು ನಮ್ಮೆಲ್ಲರ ಭಾಗ್ಯ ಇದನ್ನು ಶಾಲೆಯ ಎಲ್ಲಾ ಸಿಬ್ಬಂದಿಗಳು ಹಾಗೂ ಮಕ್ಕಳು ಜವಾಬ್ದಾರಿಯಿಂದ ಮುನ್ನಡೆಸೋಣ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳಾದ ಎಸ್.ಎಂ. ಬೂತಾಲ್ ಅವರು ಅಧ್ಯಕ್ಷತೆ ವಹಿಸಿದ್ದರು. ಗುರುಮಠಕಲ್ ತಹಶೀಲ್ದಾರ್ ಮೋಸಿನ್ ಅಹಮದ್, ಕಂದಕೂರನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹಮದ್ ಅಲಿ ಜಮಾದಾರ್, ಕಂದಕೂರನ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗಾರಾಜ್ ವಡ್ಡರ್, ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ, ಫಕೀರಸಾಬ್ , ಹಾಗೂ ಸದಸ್ಯರು ಶಾಲೆಯ ಸಿಬ್ಬಂದಿಗಳು ಹಾಜರಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…