ಬಿಸಿ ಬಿಸಿ ಸುದ್ದಿ

ಲಿಂಗಾಯತ ಅಧಿವೇಶನಕ್ಕೆ ಎಂಟು ರಾಜ್ಯಗಳಿಂದ ಬಸವಭಕ್ತರ ಆಗಮನ

ಭಾಲ್ಕಿ; ಪಟ್ಟಣದ ಚನ್ನಬಸವಾಶ್ರಮದಲ್ಲಿ 285 ನೆಯ ಮಾಸಿಕ ಶರಣ ಸಂಗಮ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿರುವ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾರ್ಚ 04 ಮತ್ತು 05 ರಂದು ಬಸವಕಲ್ಯಾಣದಲ್ಲಿ ನಡೆಯುವ ರಾಷ್ಟ್ರೀಯ ಲಿಂಗಾಯತ ಅಧಿವೇಶನಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಲು ಕಲ್ಯಾಣ ನಾಡಿನ ಜನರಿಗೆ ಕರೆ ನೀಡಿದರು.

ಬಸವಕಲ್ಯಾಣ ಲಿಂಗಾಯತ ಧರ್ಮ ಉದಯವಾದ ಪುಣ್ಯಭೂಮಿ ಬಸವಾದಿ ಶರಣರ ವಾಸ್ತವ್ಯದಿಂದ ಪುನೀತವಾದ ಅವಿಮುಕ್ತ ಕ್ಷೇತ್ರ. ಅಂತಹ ನೆಲದಲ್ಲಿ ಲಿಂಗಾಯತ ಅಧಿವೇಶನ ಆಗುತ್ತಿರುವುದು ನಮ್ಮೆಲ್ಲರಿಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಜೊತೆಗೆ ಅದನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿಸುವ ಮಹೋನ್ನತ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಈ ಅಧಿವೇಶನಕ್ಕೆ ಎಂಟು ರಾಜ್ಯಗಳಿಂದ ಬಸವಭಕ್ತರು ಆಗಮಿಸುತ್ತಿದ್ದಾರೆ.

ನೂರಾರು ಮಠಾಧೀಶರು, ಸಾಹಿತ್ಯ ಸಂಶೋಧಕರು, ಚಿಂತಕರು, ನ್ಯಾಯವಾದಿಗಳು, ಲಿಂಗಾಯತ ಧರ್ಮದ ಕುರಿತು ತಮ್ಮ ಅನುಭಾವಗಳನ್ನು ನೀಡಲಿದ್ದಾರೆ. ನಮ್ಮ ಭಾಗದ ಜನರು ಈ ಅಧಿವೇಶನದಲ್ಲಿ ಹೋಗಿ ಬರಲು ನಾವು ನಮ್ಮ ಸಂಸ್ಥೆಯ ಎಲ್ಲಾ ಶಾಲಾ ವಾಹನಗಳನ್ನು ಉಚಿತವಾಗಿ ನೀಡುತ್ತಿದ್ದೇವೆ. ಈ ಅಧಿವೇಶನಕ್ಕೆ ಆಗಮಿಸುವರು ಈ ವಾಹನಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಪೂಜ್ಯರು ನುಡಿದರು.

ಅಧ್ಯಕ್ಷತೆಯನ್ನು ಕೀಶನರಾವ ಪಾಟೀಲ ಇಂಚೂರಕರ ವಹಿಸಿಕೊಂಡಿದ್ದರು. ಜನಾರ್ಧನ ಬಿರಾದಾರ ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಅನುಭಾವ ನೀಡಿದ ಅಶೋಕ ರಾಜೋಳೆ ಅವರು ಶಿವಾಜಿ ಮಹಾರಾಜರ ಜೀವನ ಸಂದೇಶವನ್ನು ಹೇಳಿದರು.

ಭಾಲ್ಕಿಯ ನಗರದಲ್ಲಿ ನಡೆಯುತ್ತಿರುವ ಮನೆಗೊಂದು ಅನುಭವಮಂಟಪ ಕಾರ್ಯಕ್ರಮವನ್ನು ತಮ್ಮ ಮನೆಯಲ್ಲಿ ಹಮ್ಮಿಕೊಂಡಿರುವ ಸವಿತಾ ಕಪಿಲ ಕಲ್ಯಾಣೆ, ವಿಜಯಲಕ್ಷ್ಮಿ ವಿಜಯಕುಮಾರ ರೇಖಾಬಾಯಿ ರಾಜಶೇಖರ ಅಷ್ಟೂರೆ, ಮಲ್ಲಮ್ಮ ಸನ್ಮುಖಪ್ಪ ಪಾವಶೆಟ್ಟೆ, ರೇಖಾ ಲಿಂಗರಾಜ ವಡಗೇರೆ, ವಿಜಯಲಕ್ಷ್ಮಿ ಸಂಗಮೆಶ ಬಿರಾದಾರ, ಶಾಮಲಾ ವೈಜಿನಾಥ ಮೇತ್ರೆ, ವಿದ್ಯಾವತಿ ಮಡಿವಾಳಯ್ಯ ಹಿರೇಮಠ, ಜಯಶ್ರೀ ಶಂಕರ ಕೆರೆ, ಜ್ಞಾನದೇವಿ ಬಸವರಾಜ ಮರೆ, ಸುನಂದಾ ಬಸವರಾಜ ಥಮಕೆ, ಶೋಭಾವತಿ ಶಿವರಾಜ ಚಿಂಚೋಳೆ, ಸುಮನಬಾಯಿ ಬಾಬುರಾವ ಜಲ್ದೆ, ಶ್ರೀದೇವಿ ಸಂಗಮೇಶ ಕುಂಬಾರ, ವಿಜಯಲಕ್ಷ್ಮಿ ಗಣಪತರಾವ ಬೋಚರೆ ಅವರಿಗೆ ಸನ್ಮಾನಿಸಲಾಯಿತು. ವೀರಣ್ಣ ಕುಂಬಾರ ದೀಪಕ ಥಮಕೆ ನಿರೂಪಿಸಿದರು. ಯಲ್ಲನಗೌಡ ಬಾಗಲಕೋಟ ವಚನ ಸಂಗೀತ ನಡೆಸಿಕೊಟ್ಟರು.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

44 mins ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

47 mins ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

50 mins ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

2 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

3 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

6 hours ago