ಪುಣ್ಯಸ್ಮರಣೆ ನಿಮಿತ್ಯ ಉಚಿತ ಆರೋಗ್ಯ ತಪಾಸಣಾ ಶಿಬಿರ

ಆಳಂದ; ತಾಲೂಕಿನ ತಡಕಲ ಗ್ರಾಮದಲ್ಲಿ ದಿ. ಮಾತೋಶ್ರೀ ಸರೋಜಾ ಸುಭಾಷ್ ಗುತ್ತೇದಾರ ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ಯ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಶಿಬಿರಕ್ಕೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಚಾಲನೆ ನೀಡಿ ಮಾತನಾಡಿ, ತಮ್ಮ ಕುಟುಂಬದಿಂದ ಅನೇಕ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಸಮಾಜಕ್ಕೆ ಅಗತ್ಯವಿರುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಆರೋಗ್ಯ ಶಿಬಿರ ಉದ್ಘಾಟನೆಗೂ ಮುನ್ನ ದಿ. ಮಾತೋಶ್ರೀ ಸರೋಜಾ ಸುಭಾಷ್ ಗುತ್ತೇದಾರ ಅವರ ಪುತ್ಥಳಿಯನ್ನು ನಂದಗಾಂವನ ರಾಜಶೇಖರ ಮಹಾಸ್ವಾಮೀಜಿ, ಕೇಸರ ಜವಳಗಾದ ವಿರಂತೇಶ್ವರ ಸ್ವಾಮೀಜಿ, ತಡಕಲನ ಸಿದ್ಧಮಲ್ಲ ಶಿವಾಚಾರ್ಯರು ಅನಾವರಣಗೊಳಿಸಿದರು.

ಆಳಂದ ತಾಲೂಕಿನ ತಡಕಲ ಗ್ರಾಮದ ಮಾತೋಶ್ರೀ ಅಂಬವ್ವಾ ರುಕ್ಮಯ್ಯ ಗುತ್ತೇದಾರ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಎಸ್‍ಆರ್‍ಜಿ ಫೌಂಡೇಷನ್ ಹಾಗೂ ಯುನೈಟೆಡ್ ಆಸ್ಪತ್ರೆಯ ಸಹಯೋಗದೊಂದಿಗೆ ವಿವಿಧ ಆರೋಗ್ಯ ಸಂಬಂಧಿ ವಿಷಯಗಳ ಕುರಿತು ನುರಿತ ವೈದ್ಯರು ತಪಾಸಣೆ ನೀಡಿದರು.

ಉಚಿತ ಆರೋಗ್ಯ ಶಿಬಿರದಲ್ಲಿ ಸಿಬಿಸಿ, ಆರ್‍ಎಫ್‍ಟಿ, ಎಲ್‍ಎಫ್‍ಟಿ, ಎಲೆಕ್ಟ್ರೋಲೈಟ್ಸ್, ಯುರೈನ್ ರೂಟಿನ್, ವೈಡಲ್, ವೈರಲ್ ಮೇಕರ್ಸ, ಹೆಚ್‍ಐವಿ, ಹೆಚ್‍ಬಿಎ1ಸಿ, ಎಫ್‍ಬಿಎಸ್, ಪಿಪಿಬಿಎಸ್, ಸಿಟಿ ಸ್ಕ್ಯಾನ್, ಇಸಿಜಿ, 2ಡಿ, ಇಕೋ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೇರಿದಂತೆ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಕಣ್ಣಿನ ಪರೀಕ್ಷೆ ನಡೆಸಲಾಯಿತು ನಂತರ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಅಗತ್ಯ ಇರುವವರಿಗೆ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಲಾಯಿತು.

ಬೃಹತ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಜನರಲ್ ಫಿಸಿಷಿಯನ, ಆರ್ಥೋಪೇಡಿಕ್ ತಜ್ಞ ವೈದ್ಯರು, ಆಪ್ತಮಾಲಾಜಿಸ್ಟ್, ಗೈನಕಾಲಾಜಿಸ್ಟ್ ಸೇರಿದಂತೆ ಇತರೆ ತಜ್ಷ ವೈದ್ಯರು ಭಾಗವಹಿಸಿದ್ದರು. ತಾಲೂಕಿನ ಜನತೆ ಈ ಬೃಹತ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗವನ್ನು ಪಡೆದರು.

ಈ ಸಂದರ್ಭದಲ್ಲಿ ವಿಠ್ಠಲರಾವ ಪಾಟೀಲ, ಮಲ್ಲಣ್ಣಾ ನಾಗೂರೆ, ಶಿವಪುತ್ರಪ್ಪ ಬೆಳ್ಳೆ, ಸಂತೋಷ ಗುತ್ತೇದಾರ, ಹರ್ಷಾನಂದ ಗುತ್ತೇದಾರ, ರಿತೇಶ ಗುತ್ತೇದಾರ, ಮಾರುತರಾವ ಕುಲಕರ್ಣಿ, ಬಾಬುಗೌಡ ಪಾಟೀಲ, ಶಿವಪ್ಪ ವಾರಿಕ, ಅಶೋಕ ಹೊಸಮನೆ, ವಿಠ್ಠಲ ಪೂಜಾರಿ, ರಾಜಶೇಖರ ಮಲಶೆಟ್ಟಿ, ಅಪ್ಪಾಸಾಬ ಗುಂಡೆ, ಶ್ರೀಮಂತ ನಾಮಣೆ, ಸಿ ಕೆ ಪಾಟೀಲ, ನಿಜಲಿಂಗಪ್ಪ ಕೋರಳ್ಳಿ, ಚೆನ್ನಪ್ಪ ಹತ್ತರಕಿ, ಸಿದ್ದು ಹಿರೋಳಿ, ಶಿವಪುತ್ರ ನಡಗೇರಿ, ಸಿದ್ದಾರೂಢ ಬುಜುರ್ಕೆ ಸೇರಿದಂತೆ ಗುತ್ತೇದಾರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

emedialine

Recent Posts

ಕಲಬುರಗಿ: ಹಜರತ್ ಲಾಡ್ಲೆ ಮಶಾಕ(ರ.ಅ) ದರ್ಗಾದ 669ನೇ ಉರುಸ್ 13 ರಿಂದ

ಕಲಬುರಗಿ: ಇಲ್ಲಿನ ಪ್ರಸಿದ್ಧಿ ಸೂಫಿ ಸಂತ ಹಜರತ್ ಖಾಜಾ ಶೇಖ ಮಗದೂಮ್ ಅಲ್ಲಾವುದ್ದೀನ್ ಅನ್ಸಾರಿ ಚಿಸ್ತಿ ಲಾಡ್ಲೆ ಮಶಾಕ ಅನ್ಸಾರಿ…

11 mins ago

ಪತ್ರಕರ್ತ ಮಣೂರರಿಗೆ ಟಿಎಸ್‍ಆರ್ ಪ್ರಶಸ್ತಿ ಪ್ರದಾನ

ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…

1 hour ago

ನವರಾತ್ರಿ ಮಹೋತ್ಸವದ ನಿಮಿತ್ತ ದೇವಿ ಪೂಜಾ ಕಾರ್ಯಕ್ರಮ

ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…

1 hour ago

ಶ್ರೀ ಭವಾನಿ 1ನೇ ದಿನದ ಪುರಾಣ, ಕಳಸ ರೋಹಣ

ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…

1 hour ago

ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲ: ಮುದ್ದಾ

ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…

1 hour ago

ಅಹಿಂಸೆಯ ದಾರಿಯಲ್ಲಿ ನಡೆದಾಗ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯ

ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…

1 hour ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420