ಬಿಸಿ ಬಿಸಿ ಸುದ್ದಿ

ಆಳಂಗಾ: ಕೆರೆ ನಿರ್ಮಾಣಕ್ಕೆ ಶಾಸಕ ಗುತ್ತೇದಾರ ಚಾಲನೆ

ಆಳಂದ; ತಾಲೂಕಿನ ಆಳಂಗಾ ಗ್ರಾಮದಲ್ಲಿ 2019-20ನೇ ಸಾಲಿನ ಡಿಎಂಎಫ್ ಯೋಜನೆಯಡಿ ಮಂಜೂರಾದ ರೂ. 114.00 ಲಕ್ಷಗಳ ನೂತನ ಕೆರೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕರಾದ ಸುಭಾಷ ಆರ್. ಗುತ್ತೇದಾರ ಅವರು ನೆರವೇರಿಸಿದರು.

ನಂತರ ಮಾತನಾಡಿದ ಅವರು, ಆಳಂದ ಕ್ಷೇತ್ರವನ್ನು ಸಂಪೂರ್ಣವಾಗಿ ನೀರಾವರಿ ಮಾಡುವ ಉದ್ದೇಶದಿಂದ ನಾನು ಶಾಸಕನಾಗಿ ಆಯ್ಕೆಯಾದ ದಿನದಿಂದಲೂ ಶ್ರಮಿಸುತ್ತಿದ್ದೇನೆ ಈ ಅವಧಿಯಲ್ಲಿ ಆಳಂದ ತಾಲೂಕಿಗೆ 8 ಹೊಸ ಕರೆಗಳನ್ನು ಮಂಜೂರಿ ಮಾಡಿಸಿದ್ದೇನೆ ನನ್ನ ಕ್ಷೇತ್ರವನ್ನು ನೀರಾವರಿ ಯೋಜನೆಗೆ ಜಾರಿಗೆ ತರಲು ಸತತವಾಗಿ ನನ್ನನ್ನು ಆಯ್ಕೆ ಮಾಡಿದ ದಿನದಿಂದಲೂ ಕ್ಷಮಿಸುತ್ತಿದ್ದೇನೆ ನಿಮ್ಮ ಋಣ ನಮ್ಮ ಮೇಲಿದೆ ಋಣ ತೀರಿಸಲು ಆಗುವುದಿಲ್ಲ, ನಿಮಗಾಗಿ ಕ್ಷೇತ್ರದ ಜನರಿಗಾಗಿ ದುಡಿಯುತ್ತೇನೆ ಎಂದು ಹೇಳಿದರು.

ರೈತರ ಆದಾಯ ದ್ವಿಗುಣಗೊಳ್ಳಬೇಕಾದರೆ ನೀರಾವರಿ ಸೌಲಭ್ಯ ಬಹಳ ಮಹತ್ವವಾಗಿದೆ ಅವಶ್ಯಕವಾಗಿರುತ್ತದೆ. ಈ ಭಾಗದ ಬಹುದಿನಗಳ ಬೇಡಿಕೆಯಾಗಿದ್ದು ಇಂದು ಕೆರೆ ನಿರ್ಮಾಣ ಯೋಜನೆಗೆ ಅಡಿಗಲ್ಲು ಮಾಡಲಾಗಿದೆ ಎಂದರು.

ಅಂತರ್ಜಾಲದ ಮಟ್ಟ ಕಡಿಮೆ ಇದೆ ಈ ಕೆರೆ ತುಂಬುವ ಯೋಜನೆಯಿಂದ ಬಹಳಷ್ಟು ಅನುಕೂಲವಾಗುತ್ತದೆ ಜೊತೆಗೆ ಅಂತರ್ಜಲದ ಮಟ್ಟವು ಕೂಡ ಹೆಚ್ಚುತ್ತದೆ ಎಂದು ನುಡಿದರು.

ಕಾಮಗಾರಿ ಪ್ರಾರಂಭವಾದಾಗ ರೈತರ ಹೊಲದಲ್ಲಿ ಪೈಪ್ ಹಾಕುವಾಗ ಪರಸ್ಪರ ಸಹಕಾರ ಮಾಡಬೇಕು ಜೊತೆಗೆ ನನ್ನ ರೈತರಿಗೆ ನೀರು ಲಭ್ಯವಾಗುತ್ತದೆ ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.

ಈ ಕೆರೆಯಿಂದ ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ ಇದು ಒಬ್ಬರಿಗೆ ಸೀಮಿತವಾದ ಯೋಜನೆ ಅಲ್ಲ ರೈತರಿಗೆ ತುಂಬಾ ಅನುಕೂಲವಾಗುತ್ತದೆ ಅಲ್ಲದೇ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ನಿರಂತರವಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದರ ಮೂಲಕ ಆಳಂದ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಸತತವಾಗಿ ದುಡಿಯುತ್ತೇನೆ ಎಂದರು.

ಪಂಚಾಯತ ರಾಜ ಇಂಜಿನಿಯರಿಂಗ್ ಇಲಾಖೆಯ ಕಿರಿಯ ಅಭಿಯಂತರರಾದ ಸಂದೀಪ ಪಾಟೀಲ, ಗುತ್ತಿಗೆದಾರರಾದ ಗಂಗಾರಾಮ ಲೆಂಗಟಿ, ಹಿರಿಯ ಮುಖಂಡರಾದ ವಿಠ್ಠಲರಾವ ಪಾಟೀಲ, ಮಾಣಿಕರಾವ ಕಾರಬಾರಿ, ಮಲ್ಲಿಕಾರ್ಜುನ ಕಂದಗೂಳೆ, ಶಿವಪ್ಪ ವಾರಿಕ, ಶರಣಪ್ಪ ಹೊಸಮನಿ, ಮಹಿಬುಬ ಶೇಖ, ಅಶೋಕ ಕೊರೆ, ದೊಂಡಿಬಾ ತಾತ್ಯಾ, ಬಾಬುರಾವ ಪಾಟೀಲ, ಗುರು ಪಾಟೀಲ, ಬಾಬುರಾವ ಮುಲಗೆ, ಬಜರಂಗ ಪಾಟೀಲ, ಇಂದ್ರಜಿತ ಕನಗರೆ, ಪ್ರಫುಲ್ಲ ಬಾಬಳಸುರೆ, ಸೂರಜ ಪಾಟೀಲ, ತಿಪ್ಪಣ್ಣ ಬಂಡೆ, ರಮೇಶ ಪೂಜಾರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

emedialine

Recent Posts

ಮಹಿಳೆಯರನ್ನು ಗೌರವಿಸುವ ಶ್ರೀಮಂತ ಸಂಪ್ರದಾಯ ಹೊಂದಿರುವ ದೇಶ ಭಾರತ

ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನ ಅಶೋಕ ಪಾಟೀಲ ಮಹಿಳೆ ಅಥವಾ ಸ್ತ್ರೀ ಪದವು ಸಂಸ್ಕøತದ್ದು, ಕನ್ನಡದಲ್ಲಿ ಈ…

5 days ago

ನಿಧನ ವಾರ್ತೆ: ಭೀಮರಾವ.ಸಿ.ಸುಗೂರ

ಶಹಾಬಾದ:ನಗರದ ಹಳೆಶಹಾಬಾದನ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಭೀಮರಾವ.ಸಿ.ಸುಗೂರ (77) ಶನಿವಾರದಂದು ನಿಧನರಾಗಿದ್ದಾರೆ. ಇವರಿಗೆ ಇಬ್ಬರು ಸುಪುತ್ರರು, ಇಬ್ಬರು ಸುಪುತ್ರಿಯರು…

1 week ago

ನೆಲೋಗಿ ಬಿ.ಆರ್.ಅಂಬೇಡ್ಕರ ಭವನದಲ್ಲಿ ಛತ್ರಪತಿ ಶಿವಾಜಿಯ ಮಹಾರಾಜರ ಜನ್ಮ ದಿನಾಚರಣೆ

ಜೇವರ್ಗಿ: ಇಂದು ನೆಲೋಗಿ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಸೇವಾ ಚಾರಿಟೇಬಲ್ ಟ್ರಸ್ಟ್ ನೆಲೋಗಿವತಿಯಿಂದ ಡಾ. ಬಿ.ಆರ್.ಅಂಬೇಡ್ಕರ ಸಮುದಾಯ ಭವನದಲ್ಲಿ ಛತ್ರಪತಿ…

3 weeks ago

ಸಮಾಜದಲ್ಲಿನ ಅನಿಷ್ಟ ಪದ್ಧತಿ ಹೋರಾಟ ಅಗತ್ಯ: ಮೇಯರ್

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಮೂಢನಂಬಿಕೆ, ಅನಿಷ್ಟ ಪದ್ಧತಿ, ಸಂವಿಧಾನದ ಆಶಯ ಈಡೇಸುವ ನಿಟ್ಟಿನಲ್ಲಿ ಜನ್ಮ ತಾಳಿದ ಮಾನವ ಬಂಧುತ್ವ…

4 weeks ago

ಕಲಬುರಗಿ; 200 ಶಾಲಾ ಮಕ್ಕಳಿಗೆ ಆನಾಪಾನ ಧ್ಯಾನ ಆಯೋಜನೆ

ಕಲಬುರಗಿ: ನಗರದ ಸೆಂಟ್ ಮೇರಿ ಶಾಲೆಯಲ್ಲಿ 5 ರಿಂದ 9 ನೇ ತರಗತಿಯ 200 ಶಾಲಾ ಮಕ್ಕಳಿಗೆ ಆನಾಪಾನ ಧ್ಯಾನ…

4 weeks ago

ಉಚಿತ ಆರೋಗ್ಯ ತಪಾಸಣೆ ಶಿಬಿರ

ಜೇವರ್ಗಿ: ತಾಲೂಕಿನ ಜನರ ಸೇವೆಗಾಗಿ ಕಲಬುರಗಿಯ ಇಸ್ಲಾಮಾಬಾದ ಕಾಲೋನಿಯ ಅಲ್ ಶಿಫಾ ಆಸ್ಪತ್ರೆಯ ಮುಖ್ಯಸ್ಥರು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು…

1 month ago