ಕಲಬುರಗಿ: ಕೇಂದ್ರ ಕಾರಾಗೃಹ ಕಲಬುರಗಿಯಲ್ಲಿನ ಸಿಬ್ಬಂದಿ ವರ್ಗ ಹಾಗೂ ಬಂದಿಗಳಿಗೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಹಾಗೂ ಪ್ರಾಣಿ ದಯಾ ಸಂಘ ಕಲಬುರಗಿರವರ ವತಿಯಿಂದ ಪ್ರಾಣಿ ಹಿಂಸೆ ತಡೆ ಕಾಯ್ದೆ ಅರಿವು ಹಾಗೂ ಅವುಗಳ ಸಂರಕ್ಷಣೆ ಬಗ್ಗೆ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಡಾ.ಸಿರಾಜುದ್ದಿನ್ ಅವಟಿ, ಉಪನಿರ್ದೇಶಕರು, ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆ ಕಲಬುರಗಿರವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಪ್ರತಿಯೊಂದು ಜೀವಿ ಸಂಕುಲಗಳಿಗೆ ಈ ಭೂಮಿಯ ಮೇಲೆ ಬದುಕುವುದಕ್ಕೆ ಸಮಾನವಾದ ಹಕ್ಕುಗಳಿವೆ. ಹಾಗಾಗಿ ಪ್ರಾಣಿಗಳಿಗೆ ಹಿಂಸಿಸುವುದು, ಹೊಡೆಯುವುದು, ಒದೆಯುವುದು ಇನ್ನಿತರೇ ಕಾರ್ಯಕ್ಕೆ ಮುಂದಾದಲ್ಲಿ ಕಾನೂನಿನ ಪ್ರಕಾರ ಅವುಗಳೆಲ್ಲವು ಅಪರಾಧಗಳಾಗಿ ಗುರುತಿಸಿ ದಂಡ ಹಾಗೂ ಶಿಕ್ಷೆಯನ್ನು ನೀಡಲಾಗುವುದು. ಅದಕ್ಕಾಗಿ ತಾವುಗಳು ಈ ತರಬೇತಿಯಲ್ಲಿ ಪ್ರಾಣಿಗಳ ಮೇಲಿನÀ ಕ್ರೌರ್ಯ ತಡೆ ಕಾಯ್ದೆ ಹಾಗೂ ಸಂರಕ್ಷಣೆ ಬಗ್ಗೆ ವಿವರವಾದ ಮಾಹಿತಿಗಳನ್ನು ಒದಗಿಸಲಾಗುವುದು. ಅದಕ್ಕನುಗುಣವಾಗಿ ತಾವುಗಳು ನಡೆದು ಇತರರಿಗೆ ತಿಳಿಸುವಂತಹ ಪ್ರಯತ್ನ ಮಾಡಬೇಕೆಂದು ತಿಳಿಸಿದರು. ಹಾಗೂ ಮುಂದಿನ ದಿನಗಳಲ್ಲಿ ಬಂದಿಗಳಿಗೆ ಹೈನುಗಾರಿಕೆಯ ಬಗ್ಗೆ ತರಬೇತಿಯನ್ನು ನೀಡಲಾಗುವುದು ಎಂದು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ ಡಾ.ಯಲ್ಲಪ್ಪ ಎಸ್. ಇಂಗಳೆ, ಮುಖ್ಯ ಪಶು ವೈದ್ಯಾಧಿಕಾರಿಗಳು, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಕಲಬುರಗಿರವರು ಉಪನ್ಯಾಸವನ್ನು ನೀಡುತ್ತಾ ಪ್ರಸ್ತುತ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 ರ ಸೆಕ್ಷನ್ 11 (1) ಅಡಿಯಲ್ಲಿ ಪ್ರಾಣಿಗಳನ್ನು ಕ್ರೂರವಾಗಿ ನಡೆಸಿಕೊಳ್ಳುವುದು, ಉದ್ದೇಶಪೂರ್ವಕವಾಗಿ ಮತ್ತು ಅಸಮಂಜಸವಾಗಿ ಹಾನಿಯನ್ನುಂಟು ಮಾಡುವುದು ಪ್ರಾಣಿಗಳನ್ನು ಕಾಳಗಕ್ಕಾಗಿ ಉಪಯೋಗಿಸುವುದು, ಜಾನುವಾರಗಳ ಕೊಂಬನ್ನು ಕತ್ತರಿಸುವುದು, ಹಸುವಿನಿಂದ ಬಳಲಿಸುವುದು ಇವೆಲ್ಲವುಗಳ ಸೆಕ್ಷನ 11 (1) ರಡಿ ಬರುತ್ತದೆಂದು ಹೇಳಿದರು.
ಕಳೆದ ಕೆಲವು ವರ್ಷಗಳಿಂದ ಮನುಷ್ಯ ನಿರಂತರವಾಗಿ ಪ್ರಕೃತಿಯನ್ನು ನಾಶಮಾಡುತ್ತಿದ್ದಾನೆ. ಈ ಕಾರಣಕ್ಕಾಗಿ ಪ್ರಸ್ತುತ ಭಾರತದಲ್ಲಿ 20% ಸಸ್ತನಿ ಪ್ರಾಣಿಗಳು ಮತ್ತು 100% ಸಸಿ ಪ್ರಭೇದಗಳು ಅಳಿವಿನ ಅಂಚಿನಲ್ಲಿವೆ. ಇದು ನಮಗೆ ತುಂಬಾ ಸವಾಲಿನ ಸಮಸ್ಯೆಯಾಗಿದೆ. ಅದಕ್ಕಾಗಿಯೇ ಇಂದು ವನ್ಯ ಜೀವಿಗಳನ್ನು ಸಂರಕ್ಷಿಸುವುದು ನಮಗೆ ಬಹಳ ಮುಖ್ಯವಾಗಿದೆ. ಏಕೆಂದರೆ ನಾವು ವನ್ಯ ಜೀವಿಗಳನ್ನು ಸಂರಕ್ಷಿಸದಿದ್ದರೆ ಭೂಮಿಯ ಪರಿಸರ ವ್ಯವಸ್ಥೆಯಲ್ಲಿ ಅಸಮತೋಲನ ಉಂಟಾಗುತ್ತದೆ. ದುಷ್ಪರಿಣಾಮವನ್ನು ಮನುಷ್ಯರಾದ ನಾವೇ ಅನುಭವಿಸಬೆಕಾಗುತ್ತದೆ. ಈ ಭೂಮಿಯಲ್ಲಿ ಮನುಷ್ಯ ಮತ್ತು ಇತರೇ ಜೀವಿಗಳಿಗೆ ಸಮಾನ ಹಕ್ಕುಗಳಿವೆ ಎಂಬುವದನ್ನು ಗೋಡೆಯ ಮೇಲೆ ಸ್ಕ್ರೀನ್ (ಪ್ರಾಜೆಕ್ಟರ್) ಗಳ ಮುಖಾಂತರ ವಿವರವಾಗಿ ತಿಳಿಸಿದರು. (ಸರ್ಕಾರವು ವಿವಿಧ ಯೋಜನೆಗಳು ಮತ್ತು ನೀತಿಗಳನ್ನು ಜಾರಿಗೊಳಿಸುತ್ತದೆ).
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಬಿ ಎಂ. ಕೊಟ್ರೇಶ್, ಅಧೀಕ್ಷಕರು, ಕೇಂದ್ರ ಕಾರಾಗೃಹ ರವರು ಮಾತನಾಡುತ್ತಾ ಪ್ರತಿಯೊಬ್ಬ ಮನುಷ್ಯನು ನಿಸರ್ಗದ ಆರಾಧಕನಾಗಿರಬೇಕು. ಭಾರತಿಯರು ಅನಾದಿಕಾಲದಿಂದಲೂ ಪ್ರಕೃತಿಯನ್ನು ಸಂರಕ್ಷಿಸುತ್ತಾ ಬಂದಿದ್ದಾರೆ. ಪ್ರಾಣಿ ಪಕ್ಷಿ ಸಸ್ಯ ಪ್ರಭೇದಗಳು ನಮ್ಮ ಸಂಸ್ಕøತಿಯಲ್ಲಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ಪ್ರಾಣಿಗಳು ಮನುಷ್ಯರ ಜೊತೆಗಿನ ಹತ್ತಿರದ ಸಂಬಂಧÀವನ್ನು ಹಲವು ಸನ್ನಿವೇಶಗಳಲ್ಲಿ ನಾವು ನೋಡಬಹುದು ಎಂದು ಈ ಕುರಿತಂತೆ ರಾಮಾಯಣ ಮತ್ತು ಮಹಾಭಾರತದ ನಿದರ್ಶನಗಳನ್ನು ಉಲ್ಲೇಖಿಸಿದರು. ದೇವ-ದೇವತೆಯರು ಸಹ ಪ್ರಾಣಿಗಳನ್ನು ಸಂರಕ್ಷಿಸಿಕೊಂಡು ಬಂದಿರುವ ಭವ್ಯ ಪರಂಪರೆ ನಮ್ಮದು.
ನಮ್ಮ ಸಂಸ್ಕøತಿಯಲ್ಲಿ ಹಸುವಿನ ಪಾತ್ರ ಬಹುದೊಡ್ಡದು. ಪ್ರಕೃತಿಯಲ್ಲಿಯ ಜೀವರಾಶಿಗಳನ್ನು ನಮ್ಮಿಂದ ಪ್ರತ್ಯೇಕಗೊಳಿಸಿ ಬದುಕುವುದು ಕಪ್ಪೆ, ನರಿ, ಹುಲಿ, ಪ್ರಾಣಿಗಳು ಕೂಡ ನಡೆಯುತ್ತವೆ. ಹಾಗಾಗಿ ಪ್ರಕೃತಿಯಲ್ಲಿಯ ನೈಸರ್ಗಿಕ ಸಂಪತ್ತು ಜೀವರಾಶಿಗಳನ್ನು ಸಂರಕ್ಷಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಡಾ.ವೈಜನಾಥ ಮಮ್ಮಣಿ, ಮುಖ್ಯ ವೈದ್ಯಾಧಿಕಾರಿಗಳು, ಡಾ.ಸಭಾಷಚಂದ್ರ ಟಕಳಕಿ ಮುಖ್ಯ ಪಶು ವೈದ್ಯಾಧಿಕಾರಿಗಳು, ಡಾ.ದೇವಿಂದ್ರ ಬಿರಾದಾರ, ಮುಖ್ಯ ಪಶು ವೈದ್ಯಾಧಿಕಾರಿಗಳು, ಹುಸೇನ್ ಪೀರ್, ಸಹಾಯಕ ಅಧೀಕ್ಷಕರು, ಕೇಂದ್ರ ಕಾರಾಗೃಹ, ಡೈರಿ ವಿಭಾಗದ ಜೈಲರಾದ ಶ್ರೀಮತಿ ಸುನಂದಾ ವಿ. ಮೀರ್ ಮಂಜುರ ಅಲಿಖಾನ್, ಪಶು ಪರಿವೀಕ್ಷಕರು, ಕೇಂದ್ರ ಕಾರಾಗೃಹ ರವರು ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ 150 ಜನ ಸಿಬ್ಬಂದಿ ವರ್ಗ ಹಾಗೂ ಬಂದಿಗಳು ಭಾಗವಹಿಸಿದ್ದರು. ನಿರೂಪಣೆಯನ್ನುನಾಗರಾಜ ಮುಲಗೆ, ಶಿಕ್ಷಕರು ನಡೆಸಿಕೊಟ್ಟರು. ಸ್ವಾಗತವನ್ನು ಶ್ರೀಮತಿ ಮಹಾದೇವಿ, ಕೌನ್ಸಲರ್ ನಡೆÀಸಿದರು. ಪ್ರಾರ್ಥನಾ ಗೀತೆಯನ್ನು ವಿಚಾರಣಾ ಬಂದಿ ಹಾಡಿದರು.
ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನ ಅಶೋಕ ಪಾಟೀಲ ಮಹಿಳೆ ಅಥವಾ ಸ್ತ್ರೀ ಪದವು ಸಂಸ್ಕøತದ್ದು, ಕನ್ನಡದಲ್ಲಿ ಈ…
ಶಹಾಬಾದ:ನಗರದ ಹಳೆಶಹಾಬಾದನ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಭೀಮರಾವ.ಸಿ.ಸುಗೂರ (77) ಶನಿವಾರದಂದು ನಿಧನರಾಗಿದ್ದಾರೆ. ಇವರಿಗೆ ಇಬ್ಬರು ಸುಪುತ್ರರು, ಇಬ್ಬರು ಸುಪುತ್ರಿಯರು…
ಜೇವರ್ಗಿ: ಇಂದು ನೆಲೋಗಿ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಸೇವಾ ಚಾರಿಟೇಬಲ್ ಟ್ರಸ್ಟ್ ನೆಲೋಗಿವತಿಯಿಂದ ಡಾ. ಬಿ.ಆರ್.ಅಂಬೇಡ್ಕರ ಸಮುದಾಯ ಭವನದಲ್ಲಿ ಛತ್ರಪತಿ…
ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಮೂಢನಂಬಿಕೆ, ಅನಿಷ್ಟ ಪದ್ಧತಿ, ಸಂವಿಧಾನದ ಆಶಯ ಈಡೇಸುವ ನಿಟ್ಟಿನಲ್ಲಿ ಜನ್ಮ ತಾಳಿದ ಮಾನವ ಬಂಧುತ್ವ…
ಕಲಬುರಗಿ: ನಗರದ ಸೆಂಟ್ ಮೇರಿ ಶಾಲೆಯಲ್ಲಿ 5 ರಿಂದ 9 ನೇ ತರಗತಿಯ 200 ಶಾಲಾ ಮಕ್ಕಳಿಗೆ ಆನಾಪಾನ ಧ್ಯಾನ…
ಜೇವರ್ಗಿ: ತಾಲೂಕಿನ ಜನರ ಸೇವೆಗಾಗಿ ಕಲಬುರಗಿಯ ಇಸ್ಲಾಮಾಬಾದ ಕಾಲೋನಿಯ ಅಲ್ ಶಿಫಾ ಆಸ್ಪತ್ರೆಯ ಮುಖ್ಯಸ್ಥರು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು…