ಜೇವರ್ಗಿ: ಯಡ್ರಾಮಿ ಹಾಗೂ ಜೇವರ್ಗಿ ತಾಲೂಕಿನ ಲಕ್ಷಾಂತರ ಎಕರೆ ರೈತರ ಜಮೀನಿಗೆ ನೀರು ಉಣಿಸುವ ಮಲ್ಲಾಬಾದ ಏತ ನೀರಾವರಿ ಚಾಲನೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರವು 81ನೇ ದಿನಕ್ಕೆ ಕಾಲಿಟ್ಟಿದೆ.
ಧರಣಿ ಸ್ಥಳಕ್ಕೆ ಆಗಮಿಸಿದ ಶಾಸಕರು ಸತ್ಯಾಗ್ರಹ ಹಿಂದೆ ಪಡೆಯುವಂತೆ ಮನವೊಲಿಸಲು ಪ್ರಯತ್ನ ಮಾಡಿದಾಗ, ಹಿಂಬಾಲಕರು ಹಾಗೂ ಶಾಸಕರ ಆಪ್ತರು ಮಧ್ಯಪ್ರವೇಶ ಮಾಡಿ ಮಾತನಾಡಲು ಮುಂದೆ ಬಂದಾಗ ಧರಣಿ ನಿರತ ರೈತ ಮುಖಂಡರು ಶಾಸಕರ ಹಿಂಬಾಲಕರ ಮಧ್ಯೆ ವಾಕ್ ಸಮರ ನಡೆಯಿತು. ಈ ಕುರಿತಂತೆ ಸದನದಲ್ಲಿ ಮಾತನಾಡಿ ಮಲ್ಲಾಬಾದ ಏತ ನೀರಾವರಿ ಚಾಲನೆಗೆ ಬೇಕಾದ ಹಣಕಾಸಿನ ನೆರವನ್ನು ನೀಡುವಲ್ಲಿ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದಾಗ ಧರಣಿ ನಿರತರು, ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರೆ ಇಲ್ಲಿವರೆಗೂ ಕಾಮಗಾರಿ ಆರಂಭವಾಗುತ್ತಿತ್ತು. ಈ ಕುರಿತಂತೆ ಅಧಿಕೃತ ಆದೇಶವನ್ನು ಯಾವಾಗ ತರುತ್ತೀರಿ ಎಂದು ಪ್ರಶ್ನೆ ಮಾಡಿದರು.
ಧರಣಿ ಸ್ಥಳಕ್ಕೆ ಭೇಟಿ ನೀಡಿದ ಬಿ.ಎಸ್.ಸ್ಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ದಸ್ತಗಿರ್ ಮುಲ್ಲಾ ಸೇರಿದಂತೆ ವ್ಹಾಯ್.ಸಿ ಮಯೂರ ಜಿಲ್ಲಾ ಸಂಚಾಲಕರು ಡಿ.ಎಸ್.ಎಸ್ ವಿಜಯಪುರ ಹೋರಾಟಕ್ಕೆ ಬೆಂಬಲವನ್ನು ವ್ಯಕ್ತಪಡಿಸಿ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಈ ಕುರಿತಂತೆ ಮಲ್ಲಾಬಾದ್ ಏತ ನೀರಾವರಿಯ ಜಾರಿಗೆ ಒತ್ತಾಯಿಸಿ ಸರಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಇಲ್ಲಿನ ಜೇವರ್ಗಿ ತಸಿಲ್ ಕಾರ್ಯಾಲಯದ ಎದುರು ನಡೆಯುತ್ತಿರುವ ರೈತರ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ರೈತ ಮುಖಂಡರಾದ, ಆದರ್ಶ ಗ್ರಾಮ ಸಮಿತಿ ಯಾಳವಾರ ಅಧ್ಯಕ್ಷರಾದ ಇಬ್ರಾಹಿಂ ಪಟೇಲ್, ಬಾಬು ಪಾಟೀಲ್ ಮುತ್ತುಕೊಡ, ರಾಜ ಪಟೇಲ್ ಪೊಲೀಸ್ ಪಾಟೀಲ್, ನಿಂಗಪ್ಪ ಪೂಜಾರಿ, ಶಾಂತಯ್ಯ ಗುತ್ತೇದಾರ್, ಗುರುನಾಥ್ ಸಾಹೂ ರಾಜವಾಳ, ಫಜಲ್ ಬಾಬಾ, ದೇವು ದೊರೆ, ಸಲೀಂ ಪಟೇಲ್ ಬೋಸ್ಗಾ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…