ಶಹಾಬಾದ: ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರ 43ನೇ ಹುಟ್ಟು ಹಬ್ಬದ ಪ್ರಯುಕ್ತ ಶುಕ್ರವಾರ ಶಹಾಬಾದ ನಗರದ ಮತ್ತಿಮಡು ಅಭಿಮಾನಿ ಬಳಗದವತಿಯಿಂದ ನಗರದ ಶರಣಬಸವೇಶ್ವರ ದೇವಾಲಯ, ರಾಘವೇಂದ್ರ ದೇವಾಲಯ, ವಿಠ್ಠಲ್ ರುಕ್ಮಾಯಿ ಮಂದಿರ, ಹನುಮಾನ ಮಂದಿರ ಸೇರಿದಂತೆ ವಿವಿಧ ಮಂದಿರಗಳಲ್ಲಿ ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ನಿಂಗಣ್ಣ ಹುಳಗೋಳಕರ್, ಶಾಸಕ ಬಸವರಾಜ ಮತ್ತಿಮಡು ಅವರು ತಮ್ಮ ಮತಕ್ಷೇತ್ರದ ಅಭಿವೃದ್ಧಿಯ ಜತೆಗೆ ಬಡವರ, ದೀನದಲಿತರ ಕಣ್ಣೀರು ಒರೆಸುವ ಕೆಲಸ ಮಾಡುವ ಮೂಲಕ ಜನಪ್ರೀಯತೆಯನ್ನು ಹೊಂದಿದ್ದಾರೆ.ಅವರಿಗೆ ದೇವರು ಆಯುಷ್ಯ ಹಾಗೂ ಆರೋಗ್ಯ ನೀಡಿ ಉತ್ತಮ ಸೇವೆ ನೀಡುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.ಅಲ್ಲದೇ ಅವರ 43ನೇ ಹುಟ್ಟು ಹಬ್ಬವಾಗಿದ್ದರಿಂದ ನಗರದ ಪ್ರತಿ ದೇವಾಲಯಕ್ಕೆ ಬೇಟಿ ನೀಡಿ 43 ಟೆಂಗಿನಕಾಯಿಗಳನ್ನು ಒಡೆದಿದ್ದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ಶಾಸಕರ ಭಾವಚಿತ್ರ ಹೊಂದಿದ ಪೋಸ್ಟರ್ ಹಿಡಿದು ಹುಟ್ಟು ಹಬ್ಬದ ಶುಭಾಶಯಳನ್ನು ಕೋರಿದರು.
ಈ ಸಂದರ್ಭದಲ್ಲಿ ಸದಾನಂದ ಕುಂಬಾರ, ಅರುಣ ಪಟ್ಟಣಕರ್,ಅಶೋಕ ಜಿಂಗಾಡೆ, ದತ್ತು ಘಂಟಿ, ರಾಜು ಕೋಬಾಳ,ಶ್ರೀನಿವಾಸ ನೇದಲಗಿ,ಶಿವಾನಂದ ಪಾಟೀಲ,ಅನೀಲ, ದೇವೆಂದ್ರಪ್ಪ ಯಲಗೋಡಕರ್, ಯಲಗೋಡಕರ್,ಜಗದೇವ ಸುಬೇದಾರ, ಶ್ರೀಧರ ಜೋಷಿ, ಯಲ್ಲಪ್ಪ ದಂಡಗುಲಕರ್, ಶಿವಶರಣಪ್ಪ, ಅಮರ ಕೋರೆ, ಕಾಶಣ್ಣ ಚನ್ನೂರ್,ಸತೀಶ ರ್ಯಾಪನೂರ್,ನಾಗಣ್ಣಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…