ಕಲಬುರಗಿ: ಬಿಜೆಪಿ ಶಾಸಕ ವಿರುಪಾಕ್ಷಪ್ಪಾ ಮಾಡಾಳ ಹಾಗೂ ಅವರ ಪುತ್ರ ಸಂತೋಷ ಮಾಡಾಳ ಲಂಚ ಪಡೆದು,ಲೋಕಾಯುಕ್ತರ ಬಂಧನಕೊಳಪಟ್ಟಿದ್ದು,ಕೂಡಲೇ ಶಾಸಕ ಹಾಗೂ ಅವರ ಪುತ್ರ, ನನ್ನು ಬಂಧನ ಮಾಡಬೇಕೆಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ಮಾಡಲಾಯಿತು.
ನಗರದ ಜಗತ್ ವೃತ್ತದಲ್ಲಿ ಶಾಸಕ ವಿರುಪಾಕ್ಷಪ್ಪಾ ಮಾಡಾಳ ಹಾಗೂ ಪುತ್ರ ಸಂತೋಷ ಮಾಡಾಳ ವಿರುದ್ಧ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ಇತಿಹಾಸದ ಪುಟಗಳಲ್ಲಿ ಬರೆದಿಡುವಂತೆ ಬಿಜೆಪಿ ಸಕಾ9ರದ ಲಂಚದ ಹಗರಣಗಳು ಮತ್ತು ಭ್ರಷ್ಟಾಚಾರದ ಹಗರಣಗಳು ಬಹಿರಂಗವಾಗಿ ಎತ್ತಿ ತೋರಿಸುತ್ತಿದ್ದು,ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಲೋಕಾಯುಕ್ತ ದಾಳಿಯಲ್ಲಿ ಬಿಜೆಪಿ ಶಾಸಕರ ಮನೆಯಲ್ಲಿ ಲಂಚದ ಎಂಟು ಕೋಟಿ ಹಣ ಹಾಗೂ ಸಾಕಷ್ಟು ಚಿನ್ನ ದೊರೆತ್ತಿದ್ದು ನೋಡಿದರೆ,ಬಿಜೆಪಿ ಸಕಾ9ರ ಯಾವ ರೀತಿಯ ಕೀಳು ಮಟ್ಟಿಗೆ ಇಳಿದಿದೆ ಎಂದು ಗೊತ್ತಾಗುತ್ತದೆ ಎಂದರು.
ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಈ ಹಗರಣ 8 ಕೋಟಿ ರೂಪಾಯಿಗಳದ್ದಲ್ಲ,ಇದು 800 ಕೋಟಿ ರೂಪಾಯದ್ದಾಗಿದೆ.ಈ ಹಗರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಪ್ರಮುಖವಾಗಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಸಕಾ9ರದಲ್ಲಿ ಮಠಕ್ಕೆ ಹಣ ತರಲು 30% ಲಂಚ ನೀಡಬೇಕಾಗಿದೆ ಎಂದು ಮಠಾಧೀಶರು ಒಬ್ಬರು ಹೇಳಿದ್ದಾರೆ. ಗುತ್ತೀಗೆದಾರ ಸಂತೋಷ ಪಾಟೀಲ್, ಈಶ್ವರಪ್ಪ ಮೇಲೆ ಡೆತ್ ನೋಟ್ ಬರೆದಿಟ್ಟು ಮೃತಪಟ್ಟಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಕಡಿವಾಣ ಹಾಕಿ, ನ್ಯಾಯ ಎತ್ತಿ ಹಿಡಿಯಲು ಘನವೆತ್ತ ರಾಜ್ಯಪಾಲರಾದ ತಾವು ಕೂಡಲೇ ಬಿಜೆಪಿ ಸಕಾ9ರವನ್ನು ವಜಾಗೊಳಿಸಬೇಕು.ಮತ್ತು ಲಂಚದ ಹಗರಣವನ್ನು ಕನಾ9ಟಕದ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ವಿಚಾರಣೆಗೆ ಒಳಪಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾಯ9ನಿವಾ9ಹಕ ಅಧಿಕಾರಿಗಳಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಾಸಕಿ ಖನೀಜ್ ಫಾತಿಮಾ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗರಾಜ ತಾರಫೈಲ್ ಗ್ರಾಮೀಣ ಅಧ್ಯಕ್ಷ ಲಿಂಗರಾಜ ಕಣ್ಣಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಹ್ಮದ್ ಸಂತೋಷ್ ಬಿಲಗುಂದಿ ಶಣಕುಮಾರ್ ಮೋದಿ ಸಂತೋಷ್ ಡನ್ನೂರು ಸಂತೋಷ್ ಪಾಟೀಲ್ ದುದನಿ ಮುಖಂಡರುಗಳಾದ ಪ್ರವೀಣ್ ಪಾಟೀಲ್ ಶಿವಾನಂದ ಮರತೂರು ಅರವಾಳ ಡಾ. ಕಿರಣ್ ದೇಶಮುಖ್ ಮಾಂತಪ್ಪ ಸಂಗವಿ ಭೀಮರಾವ್ ಟಿ ಪವನ್ ಕುಮಾರ್ ವಳಕೇರಿ ಅಶೋಕ್ ವೀರ ನಾಯಕ್ ಫಾರೂಕ್ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ್ ಹೊನಗುಂಟಿ ನಗರ ಅಧ್ಯಕ್ಷ ಪರಶುರಾಮ್ ನಾಟೇಕರ್ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಈರಣ್ಣ ಪಾಟೀಲ್ ಜಳಕಿ ಸೋಶಿಯಲ್ ಮಿಡಿಯ ಅಧ್ಯಕ್ಷ ವಿನೀಶ್ ಶಹಾಬಾದ್ ಕರ್ ಅಶ್ವಿನ್ ಸಂಕ ಆವೇಜ್ ಶೇಕ್ ಧರ್ಮರಾಜ್ ಅವಿನಾಶ್ ಮಹಂತ್ ಗೌಡ ಅಪ್ಪಾರಾವ್ ಕಿರಣ್ ಪಂಡಿತ್ ಅಭಿಷೇಕ್ ಕಿವುಡ ಗೀತಾ ಮುದುಗಲ್ ಸಂಗೀತ ಅನುರಾಧ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…