ಕಲಬುರಗಿ: ಕಾಂಗ್ರೇಸ್ ಸರಕಾರ ತಾಂಡಗಳ ಅಭಿವೃದ್ದಿಗೆ ಕ್ರಮ ಕೈಗೊಂಡಿದೆ ಪರಿಣಾಮವಾಗಿ ತಾಂಡಗಳು ಇಂದು ಶೈಕ್ಷಣಿಕವಾಗಿ ಸಬಲವಾಗಿವೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.
ಬಂಜಾರ ಸಮುದಾಯ ಎಸ್ ಸಿ ಗೆ ಸೇರಿಸಿದ್ದು ಕಾಂಗ್ರೇಸ್ ಸರಕಾರದ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಕಾಲದಲ್ಲಿ ಆಗ ನಾನೂ ಕೂಡಾ ಅವರ ಸಂಪುಟದಲ್ಲಿ ಮಂತ್ರಿಯಾಗಿದ್ದೆ. ಹಾಗಾದರೆ ನಾನು ಬಂಜಾರ ವಿರೋಧಿ ಹೇಗಾಗುತ್ತೇನೆ. ಸಮುದಾಯದ ಕೆಲವರು ಖರ್ಗೆ ಗೆದ್ದು ಬಂದರೆ ಬಂಜಾರ ಸಮುದಾಯವನ್ನು ಎಸ್ ಸಿ ಯಿಂದ ತೆಗೆಸುತ್ತಾರೆ ಎಂದು ತಪ್ಪು ಪ್ರಚಾರ ಮಾಡುತ್ತಿದ್ದಾರೆ. ಆಗ ಸೇರಿಸುವಾಗಲೇ ನಾನು ವಿರೋಧಿಸಲಿಲ್ಲ ಈಗೇಕೆ ತೆಗೆದುಹಾಕಿಸಲಿ. ಭೋವಿ ಹಾಗೂ ಬಂಜಾರ ಸಮುದಾಯಗಳು ಸಂವಿಧಾನದ ಅಡಿಯಲ್ಲಿ ಮೀಸಲಾತಿ ಪಡೆಯುತ್ತಿವೆ ಹಾಗಾಗಿ ಯಾರೇ ಬಂದರೂ ಅದನ್ನು ತೆಗೆಸಲಾಗಲ್ಲ ಎಂದು ದೃಢವಾಗಿ ಹೇಳಿದರು.
ನಾನು ನನ್ನ ರಾಜಕೀಯ ಜೀವನ ಆರಂಭಿಸಿದ್ದೇ ಗುರುಮಠಕಲ್ ನಿಂದ. ಅಲ್ಲಿ ಬಂಜಾರ ಜನಾಂಗದವರೇ ಜಾಸ್ತಿ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಯಾರಾದರೂ ತೊಂದರೆ ಕೊಟ್ಟಾಗೆಲ್ಲ ರಕ್ಷಣೆ ಮಾಡಿದ್ದೇನೆ. ರೆವೆನ್ಯೂ ಮಿನಿಸ್ಟರ್ ಆಗಿದ್ದಾಗ ಹಲವಾರು ತಾಂಡಾಗಳನ್ನು ರೆವೆನ್ಯೂ ವಿಲೇಜ್ ಗಳಾಗಿ ಪರಿವರ್ತಿಸಿದ್ದೇ. ಇಷ್ಟೆಲ್ಲ ಮಾಡಿದ ಮೇಲೆ ನಾನೇಗೆ ಬಂಜಾರ ಸಮುದಾಯದ ವಿರೋಧಿಯಾಗುತ್ತೇನೆ ಎಂದು ರಾಜಕೀಯ ವಿರೋಧಿಗಳಿಗೆ ಪ್ರಶ್ನಿಸಿದರು.
ಬಿಜೆಪಿಯವರು ದೇಶಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಈ ಚುನಾವಣೆ ಸಂವಿಧಾನ ಉಳಿಸುವ ಚುನಾವಣೆ. ಹಾಗಾಗಿ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಸಂವಿಧಾನ ಉಳಿಸಿ ಎಂದು ಕರೆ ನೀಡಿದರು. ಬಿಜೆಪಿಯರು ಬಂಜಾರ ಸಮುದಾಯವನ್ನು ಒಡೆದರು. ದೊಡ್ಡ ಮರವನ್ನು ( ಬೆಳಮಗಿ)ಕಡಿದ ಗೊಡ್ಡುಮರ ( ಜಾಧವ್) ನೆಟ್ಟರು. ಇಂತ ಮನೆಹಾಳ ಕೆಲಸವನ್ನು ಕೇಶವ ಕೃಪ ಮಾಡಿದೆ ಎಂದು ಮಾಜಿ ಕೇಂದ್ರಸಚಿವ ಸಿ ಎಂ ಇಬ್ರಾಹಿಂ ಆರೋಪಿಸಿದರು. ಬಂಜಾರ ಸಮುದಾಯ ನಂಬಿದವರನ್ನು ಕೈಬಿಡುವುದಿಲ್ಲ ಎಂದು ಹೇಳಿದ ಇಬ್ರಾಹಿಂ, ಬಂಜಾರ ಸಮುದಾಯದವರು ಕಾಂಗ್ರೇಸ್ ಪರವಾಗಿದ್ದಾರೆ ಯಾಕೆಂದರೆ ಸಂವಿಧಾನ ಉಳಿಸುತ್ತಿದ್ದಾರೆ ಎಂದರು.
ಮೋದಿ ಬಗ್ಗೆ ಮುಸಲ್ಮಾನರಿಗೇನು ಭಯವಿಲ್ಲ. ಹಿಂದೂ ಮುಸ್ಲಿಂರ ನಡುವೆ ಬಿರುಕು ತಂದ ಮೋದಿ ಮನೆಗೆ ಹೋಗಬೇಕು ಎಂದರು. ನಾವು ಅನ್ನಭಾಗ್ಯ ಯೋಜನೆ ತಂದು ಅಕ್ಕಿ ಫ್ರಿ ಕೊಟ್ಟೆವು, ಮೊಟ್ಟೆ ಫ್ರೀ ಕೊಟ್ಟೆವು, ಯಡಿಯೂರಪ್ಪ ಏನ್ ಕೊಟ್ಟ? ನಾವು ಅಧಿಕಾರದಲ್ಲಿದ್ದರೆ ಮೊಟ್ಟೆ ಭಾಗ್ಯ ಅಷ್ಟೆ ಅಲ್ಲದೇ ಯಾರು ಚಿಕನ್ ತಿಂತಾರೋ ಅವರಿಗೆಲ್ಲ ಕೋಳಿ ಭಾಗ್ಯ ಯೋಜನೆಯನ್ನು ಜಾರಿಗೆ ತರುತ್ತಿದ್ದೆವು ಎಂದರು. ಮಾತ್ರ ಅಧಿಕಾರದಲ್ಲಿದ್ದರೇ ಕೋಳಿ ಯೋಜನೆಯನ್ನೂ ಜಾರಿಗೆ ತರುತ್ತಿದ್ದೆವು ಎಂದರು.
ಮಾಜಿ ಸಚಿವ ಬಾಬುರಾವ್ ಚವ್ಹಾಣ್ ಮಾತನಾಡಿ ಬಂಜಾರ ಸಮುದಾಯ ಕಾಂಗ್ರೇಸ್ ಪರವಾಗಿದೆ ಎಂದರು. ಸುಭಾಷ್ ರಾಠೋಡ್ ಮಾತನಾಡಿ ಉಮೇಶ್ ಜಾಧವ್ ಅವರಿಗೆ ಸೇವಾಲಾಲ್ ಅವರ ಇತಿಹಾಸ ಗೊತ್ತಿಲ್ಲ. ಬಂಜಾರ ಆಚಾರ ವಿಚಾರಗಳು ಭಜನೆಗಳು ಗೊತ್ತಿಲ್ಲ ಎಂದು ಟೀಕಿಸಿದರು. ಸಂವಿಧಾನದ ಉಳಿವಿಗೆ ಬಂಜಾರ ಸಮುದಾಯ ಕಾಂಗ್ರೇಸ್ ಗೆ ಓಟು ಹಾಕಬೇಕೇ ಹೊರತು ಬಿಜೆಪಿಗಲ್ಲ. ನಾವು ಮೀಸಲಾತಿ ಅನುಭವಿಸುತ್ತಿದ್ದೇವೆ ಎಂದರೆ, ಅದಕ್ಕೆ ಕಾರಣ ಬಾಬಾಸಾಹೇಬ್ ಅಂಬೇಡ್ಕರ್ ಅವರು. ಹಾಗಾಗಿ ಸಂವಿಧಾನದ ಅಳಿವಿಗೆ ಪ್ರಯತ್ನಿಸುತ್ತಿರುವ ಬಿಜೆಪಿ ಅಧಿಕಾರಕ್ಕೆ ಬಂದರೆ, ನಮಗೆ ಮೀಸಲಾತಿ ರದ್ದಾಗಲಿದೆ ಎಂದು ಹೇಳಿದರು.
ರೇವೂನಾಯಕ್, ಬಾಬುರಾವ್ ಚವ್ಹಾಣ್ ಹಾಗೂ ನನ್ನ ಮೇಲೆ ತಾಂಡಾದವರು ಯಾರೂ ಹಲ್ಲೆ ಮಾಡಿಲ್ಲ ಮಾಡಿದ್ದು ಜಾಧವ್ ಅವರ ಬೆಂಬಲಿಗರು ದರೋಡಕೋರರ ರೀತಿ ಪ್ರಚಾರಕ್ಕೆ ಹೋಗಿದ್ದಾಗ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದರು. ಮಾಜಿ ಸಚಿವ ರೇವೂ ನಾಯಕ್ ಬೆಳಮಗಿ ಮಾತನಾಡಿ, ಖರ್ಗೆ ಅವರು ಮುಖ್ಯಮಂತ್ರಿಯಾಗಬೇಕಿತ್ತು. ದುರ್ದೈವವಶಾತ್ ಆಗಲಿಲ್ಲ. ದೈವೇಚ್ಚೆ ಮುಂದೊಂದು ದಿನ ಕೇಂದ್ರದಲ್ಲಿ ಉನ್ನರ ಹುದ್ದೆಗೆ ಹೋಗಬಹುದು ಎಂದು ದೇವೇಗೌಡರು ಹೇಳಿದ್ದಾರೆಂದು ಹೇಳಿದರು. ಬಂಜಾರ ಸಮುದಾಯದವರು ಮಾತು ತಪ್ಪುವುದಿಲ್ಲ. ಭಾಷೆ ಕೊಟ್ಟರೆ ಅದನ್ನು ಉಳಿಸುತ್ತಾರೆ. ಬಿಜೆಪಿಯವರು ರೇವೂ ನಾಯಕ್ ಅವರ ಕುತ್ತಿಗೆ ಕೋಯ್ದಾಗ ಜಾಧವ್ ಸುಮ್ಮನಿದ್ದರು ಆಗ ಜಾತಿ ಇರಲಿಲ್ಲವೇ? ಎಂದು ಪ್ರಶ್ನಿಸಿದರು. ನಮ್ಮ ಮೇಲೆ ದಾಳಿ ಮಾಡಿದವರು ಕ್ಷಮೆ ಕೋರಿದ್ದಾರೆ. ಅವರನ್ನು ಕ್ಷಮಿಸಿದ್ದೇವೆ. ಕಾರಣ ಅವರು ಸ್ವಂತ ಆಲೋಚನೆಯಿಂದ ಮಾಡಿಲ್ಲ ಅದಕ್ಕೆ ಜಾಧವ್ ಕಾರಣ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷರಾದ ಲತಾ ರಾಠೋಡ್ ಅವರು ಮಾತನಾಡುತ್ತಾ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡುವಂತೆ ಸಮುದಾಯದವರಿಗೆ ಸೆರಗೊಡ್ಡಿ ಬೇಡಿಕೊಂಡರು.
ಬಾಬು ಹೊನ್ನಾನಾಯಕ್, ಅಲ್ಲಮಪ್ರಭು ಪಾಟೀಲ್, ಮಲ್ಲಮ್ಮ ವಳಕೇರಿ, ಜಗದೇವ್ ಗುತ್ತೇದಾರ್, ಲತಾ ರಾಠೋಡ್, ಕಿಶನ್ ರಾಠೋಡ್ ಹಾಗೂ ಮತ್ತಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…