ಬೇಸಿಗೆ ದಾಹ ತಣಿಸಲು, ಆರೋಗ್ಯಕರ ದೇಹಕ್ಕಾಗಿ ಕಲ್ಲಂಗಡಿಯ ಬೇಡಿಕೆ ಬಿಸಿಲನಾಡಿನಲ್ಲಿ ಹೆಚ್ಚುತ್ತಿದೆ.ಪ್ರತಿ ವರ್ಷ ಏರುತ್ತಿರುವ ಸೂರ್ಯನತಾಪಮಾನ ಮತ್ತುಉರಿಬಿಸಿಲುಗಳಿಂದ ರಕ್ಷಿಸಿಕೊಳ್ಳಲು ಮಕ್ಕಳಿಂದ ಹಿಡಿದು ಹಿರಿಯರಿಗೂ ಅಚ್ಚುಮೆಚ್ಚು. ಅತಿ ಹೆಚ್ಚು ನೀರಿನಂಶ, ವಿಟಾಮಿನ್ ಸಿ, ನಾರು, ಪೊಟ್ಯಾಷಿಯಂ, ಅಮೈನೋ ಆಸಿಡ್ ಹೊಂದಿರುವಂತಹ ಹಣ್ಣು.ರಕ್ತಒತ್ತಡ, ಮೂತ್ರಪಿಂಡಗಳ ಸಮಸ್ಯೆ ಮತ್ತುದೇಹದತಾಪಮಾನ ನಿವಾರಣೆ ಮತ್ತು ಇನ್ಸುಲೀನ್ ಉತ್ಪತ್ತಿಗೆ ಸಹಕಾರಿ. ಕರ್ನಾಟಕ ರಾಜ್ಯದ ಬಹುತೆಕ ಎಲ್ಲಾ ಪ್ರದೇಶಗಳಲ್ಲಿ ಈ ಬೆಳೆಯನ್ನು ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಾರೆ.

ನಾಟಿ ಕಾಲ : ಡಿಸೆಂಬರ್ ದಿಂದ ಮೇ ತಿಂಗಳು ತಳಿ ಶುಗರ್ ಬೇಬಿ, ಅರ್ಕಾ ಮಾಣಿಕ್, ಶುಗರುಕ್ವಿನ್, ಮೆಲ್ಲೋಡಿ, ಇತ್ಯಾದಿ
ಹತ್ತುಸೂತ್ರಗಳು : ಸೂಕ್ತ ತಳಿ ಹಾಗೂ ರೋಗರಹಿತ ಸಸಿಗಳ ಆಯ್ಕೆ. ಮಣ್ಣು ಮತ್ತು ನೀರಿನ ಲವಣಾಂಶ, ರಸಸಾರ ಪರೀಕ್ಷಿಸಿಕೊಳ್ಳುವುದು. ಜೈವಿಕಗೊಬ್ಬರ ಬಳಕೆ ಮತ್ತುಪ್ಲಾಸ್ಟಿಕ್ ಹೊದಿಕೆ ಅಳವಡಿಕೆ. ರಸಾವರಿ ಕ್ರಮ ಅನುಸರಿಸುವುದು. ಕುಡಿಚಿವುಟುವಿಕೆ ಮತ್ತು ಸಸ್ಯ ಪ್ರಚೋದಕಗಳ ಬಳಕೆ. ಜೇನುಪೆಟ್ಟಿಗೆಎಕರೆಗೆಎರಡು ಅಳವಡಿಸುವುದು. ಬೇಸಿಗೆ ಬಿಸಿಲಿಗೆ ತಕ್ಕಂತೆ ನೀರಾವರಿ ಮತ್ತು ಸಸ್ಯ ಸಂರಕ್ಷಣೆ. ಮಾಧ್ಯಮ, ಸೂಕ್ಷ್ಮ ಪೋಶಕಾಂಶ ನಿರ್ವಹಣೆ. ಕಾಯಿ ಹಂತದಲ್ಲಿ ಕೀಟಗಳ ನಿರ್ವಹಣೆ. ಸ್ಥಳೀಯ ಹಾಗೂ ದೂರದ ಮಾರುಕಟ್ಟೆಗೆ ಕಾಯಿ ವರ್ಗೀಕರಣ.

ಬೇಸಾಯ ಕ್ರಮಗಳು:ಎಕರೆಗೆ 10 ರಿಂದ 16 ಟನ್‍ಕೊಟ್ಟಿಗೆಗೊಬ್ಬರಅಥವಾ ಎರೆಹುಳು ಗೊಬ್ಬರ ಹಾಗೂ ಒಂದುಕೆ.ಜಿ. ಟ್ರೈಕೋಡರ್ಮಾಜೈವಿಕಗೊಬ್ಬರ ನಂತರ ಮೂರು ಅಡಿ ಅಗಲ, ಒಂದು ಅಡಿ ಎತ್ತರದಏರು ಮಡಿಗಳನ್ನು ತಯಾರಿಸಬೇಕು.

ಅಂತರ :ಒಂದೂವರೆ ಅಡಿ ಗಿಡದಿಂದಗಿಡಕ್ಕೆ (ಜಿಗ್‍ಜಾಗ್ ನಾಟಿ ಪದ್ಧತಿ) ಬೀಜ :350 ಗ್ರಾಂ. ಪ್ರತಿ ಎಕರೆಗೆ. 6000 ಸಸಿಗಳು ಪ್ರತಿ ಬಳ್ಳಿಯಲ್ಲಿ 3-4 ಕಾಯಿಗಳನ್ನು ಮಾತ್ರ ಬಿಟ್ಟು ಉಳಿದ ಕಾಯಿಗಳನ್ನು ತೆಗೆಯುವುದರಿಂದಉತ್ತಮಗಾತ್ರದ ಹಣ್ಣು ಪಡೆಯಬಹುದು.ಹೆಚ್ಚಿನ ಇಳುವರಿ ಪಡೆಯಲುಎಕರೆಗೆ 2 ಜೇನು ಪೆಟ್ಟಿಗೆಇಡುವುದರಿಂದ ಹೆಚ್ಚಿನ ಪರಾಗಸ್ಪರ್ಶಕ್ಕೆ ನೇರ. ಕಾಯಿ ಗಾತ್ರ ಹೆಚ್ಚಿಸಲು– ಕಾಯಿ ನಿಂಬೆ ಗಾತ್ರವಿರುವಾಗ 20 ಮಿ.ಲೀ. ಜಿಬ್ಬರ್‍ಲಿಕ್ ಆಸಿಡ್ ಒಂದು ಲೀಟರ್ ನೀರಿಗೆಅದ್ದುವುದರಿಂದ ಹಣ್ಣಿನಗಾತ್ರ ಮತ್ತು ಗುಣಮಟ್ಟ ಹೆಚ್ಚುವುದು. ನಾಟಿ ಮಾಡಿದ 10 ದಿನಗಳ ನಂತರ ಚಳಿ ಹಾಗೂ ಬಿಸಿಲು ಸನ್ನಿವೇಶಕ್ಕೆತಕ್ಕಂತೆ ರಸವಾರಿಕ್ರಮ ಅನುಸರಿಸಬೇಕು.

ಸಸ್ಯ ಸಂರಕ್ಷಣೆ:ಸಸ್ಯಹೇನು ಎಲೆಗಳನ್ನು ತಿನ್ನುವುದರಿಂದ ಮರಿ ಹುಳುಗಳ ನಿರ್ವಹಣೆಅತ್ಯಗತ್ಯ. ನುಸಿ ಎಲೆ ಹಾಗೂ ಕಾಯಿಗಳ ರಚನೆಗೆಧಕ್ಕೆಉಂಟು ಮಾಡುತ್ತವೆ. ಎಕರೆಗೆ 5 ರಿಂದ 8 ಹಳದಿ ಅಂಟಿನ ಬಲೆ ಹಾಕಬೇಕು. ಹೇನು ಥ್ರಿಪ್ಸ್ ನುಸಿ ನಿರ್ವಹಣೆಗೆ ಇಮಿಡಾಕ್ಲೋಪ್ರಿಡ್ 0.5 ಮಿ.ಲಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಬೂದಿರೋಗ:ಬಿಳಿ ಬಣ್ಣದ ಬೂದಿ ಚುಕ್ಕೆಗಳು ಎಲೆ ಮತ್ತುಕಾಂಡದಲ್ಲಿ ಕಾಣಿಸಿಕೊಂಡು ಎಲೆ ಉದುರುವ ಸಾಧ್ಯತೆ. ಹೆಕ್ಸಾಕೊನಾಜೋಲ್ 1 ಮಿ.ಲಿ. ಅಥವಾಕಾರ್ಬೆಂಡಾಜಿಮ್ 0.5 ಗ್ರಾಂ.ಪ್ರತಿ ಲೀಟರ್ ನೀರಗೆ ಬೆರೆಸಿ ಸಿಂಪಡಿಸಿದಲ್ಲಿ ಈ ರೋಗದ ನಿರ್ವಹಣೆ ಮಾಡಬಹುದು.
ಮುಟುರುರೋಗ:ಇ ದು ವೈರಸ್‍ರೋಗವಾಗಿದ್ದು, ಥ್ರಿಪ್ಸ್ ನುಸಿಯಿಂದ ಗಿಡದಿಂದಗಿಡಕ್ಕೆ ಹರಡುತ್ತದೆ. ಅತಿ ಮುದುಡಕಂಡು ಬಂದಲ್ಲಿ ಸಂಪೂರ್ಣರೋಗ ಪೀಡಿತಗಿಡವನ್ನುಕಿತ್ತು, ಬೇರೆಆರೋಗ್ಯವಂತ ಗಿಡಗಳಿಗೆ ಹರಡದಂತೆ ನೋಡಿಕೊಳ್ಳಬೇಕು.

ಕೊಯ್ಲು ಮತ್ತುಇಳುವರಿ: ಕಲ್ಲಂಗಡಿ ಬಳ್ಳಿಯ ಹಣ್ಣಿನ ಹತ್ತಿರದ ಲತತಂತುಒಣಗಲು ಪ್ರಾರಂಭಿಸಿದಾಗ ಅಥವಾ ಹಣ್ಣನ್ನು ಬೆರಳಿನಿಂದಲೇ ಬಾರಿಸಿದರೆ ಮಂದ ಶಬ್ದ ಬರುವುದು.ಸರಾಸರಿ25 ರಿಂದ35ಟನ್‍ಪ್ರತಿಎಕರೆಗೆಇಳುವರಿ ಪಡೆಯಬಹುದು.ಸ್ಥಳಿಯ ಹಾಗೂ ದೂರದ ಮಾರುಕಟ್ಟೆಗೆ ತಕ್ಕಂತೆ ಕಾಯಿ ವರ್ಗೀಕರಣ ಮಾಡಿ ಉತ್ತಮ ದರ ಪಡೆದುಕೊಳ್ಳಬಹುದು.

ಡಾ. ಪಿ. ವಾಸುದೇವ್ ನಾಯ್ಕ್, ಡಾ.ಜಹೀರ್‍ಅಹಮ್ಮದ್, ಡಾ.ರಾಜು ಜಿ. ತೆಗ್ಗಳ್ಳಿ, ಕೆ.ವಿ.ಕೆ. ವಿಜ್ಞಾನಿಗಳು

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

19 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago