ಕಲಬುರಗಿ: ಜಿಲ್ಲೆಯಲ್ಲಿ ನಗರ ಮತ್ತು ತಾಲೂಕುಗಳಲ್ಲಿ ಕೆಲಸ ಮಾಡುತ್ತಿರುವ ಅಂಗನವಾಡಿ ಸಹಾಯಕರಿಗೆ ಪದೋನ್ನತಿ ಮಾಡಿ ಅಂಗನವಾಡಿ ಕಾರ್ಯ ಕರ್ತೆಯರನ್ನಾಗಿಸುವಲ್ಲಿ ಅಧಿಕಾರಿಗಳು ವಹಿಸುತ್ತಿರುವ ನಿರ್ಲಕ್ಷ್ಯ ಮತ್ತು ಆಗುತ್ತಿರುವ ಅನ್ಯಾಯ ವಿರೋಧಿಸಿ ನಗರದ ಸಿಡಿಪಿ ಯೋಜನಾಧಿಕಾರಿ ಕಚೇರಿ ಎದುರು ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಪ್ರತಿಭಟನಾ ಧರಣಿ ನಡೆಸಿದರು.

ರಾಜ್ಯ ಕಾರಾಧ್ಯಕ್ಷೆ ಶಾಂತಾ ಘಂಟಿ, ಜಿಲ್ಲಾಧ್ಯಕ್ಷೆ ಗೌರಮ್ಮ ಪಾಟೀಲ ಮಾತನಾಡಿ, ಮೆಟ್ರಿಕ್ ಮುಗಿಸಿರುವ ಅಂಗನವಾಡಿ ಸಹಾಯಕಿಯರನ್ನು ವರ್ಗಾವಣೆ ಅಥವಾ ನಿವೃತ್ತಿಯಿಂದ ಖಾಲಿ ಆಗುವ ಸ್ಥಾನಕ್ಕೆ ಪದೋನ್ನಪತಿ ಮಾಡಿ ಅಂಗನವಾಡಿ ಕಾರ್ಯಕರ್ತೆ ಎಂದು ನೇಮಕ ಮಾಡಿಕೊಳ್ಳಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ, ನಮ್ಮ ಜಿಲ್ಲೆಯ ಅಧಿಕಾರಿಗಳಿಗೆ ಇದು ಪಥ್ಯವಾಗುತ್ತಿಲ್ಲ. ಇದರಿಂದಾಗಿ 24 ಮೆಟ್ರಿಕ್ ಮುಗಿಸಿರುವ ಅಂಗನವಾಡಿ ಸಹಾಯಕಿಯರಿದ್ದರೂ, ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ 24 ಸಹಾಯಕಿಯರಿಗೆ ಅನ್ಯಾಯವಾಗಿದೆ. 2-3 ವರ್ಷಗಳಿಂದ ಅರ್ಜಿ ಸಲ್ಲಿಸಲಾಗಿದೆ. ಕೊರೊನಾದಿಂದ ಸುಮ್ಮನಿದ್ದೆವು. ಇನ್ನೂ ಸುಮ್ಮನೇ ಕೂಡುವುದರಲ್ಲಿ ಅರ್ಥವಿಲ್ಲ ಎಂದು ನಗರ ಸಿಡಿಪಿಒ ಕಚೇರಿ ಎದುರು ಅನಿರ್ದಿಷ್ಟಾವಧಿವರೆಗೆ ಅಹೋರಾತ್ರಿ ಧರಣಿ ಮಾಡುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.

ಧರಣಿಯಲ್ಲಿ ರಾಜ್ಯ ಕಾರಾಧ್ಯಕ್ಷ ಶಾಂತಾ ಘಂಟಿ, ಜಿಲ್ಲಾಧ್ಯಕ್ಷೆ ಗೌರಮ್ಮ ಪಾಟೀಲ, ರತ್ನಾ ರೆಹೆಫತ್ ಬೇಗಂ, ಸಾಬಮ್ಮ ಶರಣಮ್ಮ ವನಿತಾ, ರೇಣುಕಾ, ನಾಗಮ್ಮ ಸೇರಿದಂತೆ ಇತರರಿದ್ದರು.

emedialine

Recent Posts

ಕಲಬುರಗಿ: ಸೆ. 13 ರಿಂದ “ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ್ಯವಂತ” ಅಭಿಯಾನ

ಕಲಬುರಗಿ: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಘಟಕದ ವತಿಯಿಂದ "ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ್ಯವಂತ" ಎಂಬ ಧ್ಯೇಯವಾಕ್ಯದಡಿ ರಾಜ್ಯವ್ಯಾಪಿ…

26 mins ago

ಅಜ್ಞಾನವೆಂಬ ಕತ್ತಲಿನಿಂದ ಜ್ಞಾನದ ಬೆಳಿಕಿನಡೆಗೆ ಕರೆದೊಯ್ಯುವ ಜ್ಯೋತಿಯೇ ಶಿಕ್ಷಕ

ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕೆ.ಹೆಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ತವಾಗಿ ಬುಧವಾರ ಗೆಳೆಯರ ಬಳಗದ ವತಿಯಿಂದ…

10 hours ago

ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಗಮನ ಸೆಳೆದ ಚೇತನ ಬಿ.ಕೋಬಾಳ್ ಸಂಗೀತ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ( ಸಮಾಜ ಕಲ್ಯಾಣ ಇಲಾಖೆ…

19 hours ago

15ರಂದು ಮಾನವ ಸರಪಳಿ: ನಾಳೆ ಪೂರ್ವ ಭಾವಿ ಸಭೆ

ಶಹಾಬಾದ :ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15ರಂದು ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ತಾಲೂಕಿನ ಪ್ರೌಢಶಾಲಾ ಮುಖ್ಯ…

20 hours ago

ಸೆಪ್ಟೆಂಬರ್ 17ರಂದು ವಿಮೋಚನಾ ದಿನ ರದ್ದುಪಡಿಸಿ, ಪ್ರಜಾಸತ್ತಾತ್ಮಕ ದಿನ ಆಚರಿಸಿ: ಕೆ ನೀಲಾ

ಕಲಬುರಗಿ: ಹೈದ್ರಾಬಾದ್ ಕರ್ನಾಟಕದಲ್ಲಿ ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತಿರುವ ವಿಮೋಚನಾ ದಿನವಲ್ಲ, ಅದು ವಿಲೀನಿಕರಣದ ಅಥವಾ ಪ್ರಜಾಸತ್ತಾತ್ಮಕ ದಿನವಾಗಿದ್ದು, ವಿಮೋಚನಾ…

20 hours ago

ಸಮಿತಿಗಳ ಕಾರ್ಯ ಪರಾಮರ್ಶಿಸಿದ ಕಲಬುರಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ

ಕಲಬುರಗಿ; ಕಲಬುರಗಿಯಲ್ಲಿ ಇದೇ ಸೆ.17 ರಂದು ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿದ್ದರಿಂದ ಸಭೆ ಯಶಸ್ಸಿಗೆ ರಚಿಸಲಾಗಿರುವ ವಿವಿಧ ಸಮಿತಿಗಳ…

23 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420