ಬಿಸಿ ಬಿಸಿ ಸುದ್ದಿ

ದಾದಾಸಾಹೇಬ್ ಕಾನ್ಷಿರಾಂಜಿಗೆ ಭಾರತರತ್ನಕ್ಕೆ ಒತ್ತಾಯ

ಕಲಬುರಗಿ : ನಗರದ ನಿರಾಶ್ರಿತರ ಕೇಂದ್ರದಲ್ಲಿ ಪ್ರಬುದ್ಧ ಸಾಂಸ್ಕøತಿಕ ವೇದಿಕೆ ವತಿಯಿಂದ ಬಹುಜನ ಚಳುವಳಿಯ ರಾಷ್ಟ್ರಿಯ ನಾಯಕರಾದ ಮಾನ್ಯವರ್ ದಾದಾಸಾಹೇಬ್ ಕಾನ್ಷಿರಾಂಜಿ ಅವರ 89ನೇ ಜಯಂತೋತ್ಸವ ನಿಮಿತ್ತ ನಿರಾಶ್ರಿತರಿಗೆ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಯುವ ಚಿಂತಕರಾದ ಡಾ. ಅನಿಲ ಟೆಂಗಳಿ ಮಾತನಾಡಿ, ಅಂಬೇಡ್ಕರ್ ವಾದವನ್ನು ಅಂಬೇಡ್ಕರ್ ಅವರ ನೈಜ ಮಾರ್ಗವನ್ನು ರಾಷ್ಟ್ರಕ್ಕೆ ಬಾಮ್ಸೆಫ ಡಿಎಸ್4 ಮತ್ತು ಬಿಎಸ್‍ಪಿ ಸ್ಥಾಪನೆ ಮಾಡುವುದರ ಮೂಲಕ, ಇಡೀ ರಾಷ್ಟ್ರಕ್ಕೆ ಅಂಬೇಡ್ಕರವಾದವನ್ನು ಪರಿಚಯಿಸಿದ ರಾಷ್ಟ್ರ ನಾಯಕರು ದಾದಾಸಾಹೇಬ್ ಕಾನ್ಷಿರಾಂಜಿ ಅವರು ಅಂಬೇಡ್ಕರ್ ವಾದವನ್ನು ಗೆಲ್ಲಿಸುವುದಕ್ಕಾಗಿ ಸರ್ವ ತ್ಯಾಗವನ್ನು ಮಾಡಿ, ತಮ್ಮ ಜೀವನದುದ್ದಕ್ಕೂ ನಿಸ್ವಾರ್ಥದಿಂದ ದುಡಿದ ಏಕೈಕ ಬಹುಜನ ನಾಯಕ ಹಾಗೂ ಶೋಷಿತ ಸಮುದಾಯಗಳು ತಮ್ಮ ಸ್ವಂತ ಶಕ್ತಿಯ ಮೇಲೆ ರಾಜಾಧಿಕಾರ ಹಿಡಿಯಬಹುದು ಎಂಬುವುದನ್ನು ಸಾಧಿಸಿ ತೋರಿಸಿದ ಮುತ್ಸದ್ದಿ ರಾಜಕಾರಣಿ ಬೇರೆ ಬೇರೆ ಪಕ್ಷಗಳು ಜಾತಿಗಳ ಹೆಸರಿನಲ್ಲಿ ಜನರನ್ನು ಒಡೆದು, ರಾಜಕೀಯ ಮಾಡಿದರೆ ಮಾನ್ಯವರ್ ಕಾನ್ಷಿರಾಂ ಅವರು ಸಾವಿರಾರು ಜಾತಿಗಳನ್ನು ಒಗ್ಗೂಡಿಸುವ ಮೂಲಕ ರಾಜಾಧಿಕಾರಿ ಹಿಡಿದ ಪ್ರಜಾಪ್ರಭುತ್ವವಾದಿಯಾಗಿ ಕಂಡಿದ್ದಾರೆ.

ಅಲ್ಲದೆ ಈ ದೇಶದಲ್ಲಿ ಹುದುಗಿ ಹೋಗಿದ್ದ,ಸಾಮಾಜಿಕ ಪರಿವರ್ತನೆಗಾಗಿ ದುಡಿದ ಅನೇಕ ಮಹಾನ್ ಪುರುಷರ ಚರಿತ್ರೆಯನ್ನು ಹೊರ ತೆಗೆಯುವ ಮೂಲಕ ನೈಜ ಇತಿಹಾಸ ಈ ದೇಶದ ಜನರಿಗೆ ತಿಳಿಸಿದ ಕೀರ್ತಿ ದಾದಾಸಾಹೇಬ್ರಿಗೆ ಸಲ್ಲುತ್ತದೆ. ಆದ್ದರಿಂದ ಬಾಬಾಸಾಹೇಬರ ತರುವಾಯದ ನಂತರ ಬಾಬಾ ಸಾಹೇಬರ ಮಾರ್ಗದಲ್ಲಿ ಬಹುಜನರ ಆಶಾಕಿರಣವಾಗಿ ಕಂಡವರು ದಾದಾಸಾಹೇಬ್ ಕಾನ್ಷಿರಾಂಜಿ, ಇಷ್ಟೆಲ್ಲ ಕೊಡುಗೆ ನೀಡಿದ ಇಂತಹ ದಿಮಂತ ನಾಯಕನಿಗೆ ಭಾರತ ಸರ್ಕಾರ ಭಾರತ ರತ್ನ ನೀಡುವ ಮೂಲಕ ಆ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ದಾದಾಸಾಹೇಬ್ ಕಾನ್ಷಿರಾಂಜಿ ಅವರಿಗೆ ಭಾರತ ರತ್ನ ನೀಡಬೇಕೆಂದು ಒತ್ತಾಯಿಸಿದರು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಪ್ರಬುದ್ಧ ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಅಲ್ಲಮಪ್ರಭು ನಿಂಬರ್ಗಾ ವಹಿಸಿದರು, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಡಾ. ಚಿದಾನಂದ ಕುಡನ್, ಡಾ. ಸಂದೀಪ್ ಹೋಲ್ಕರ್, ಪಂಡಿತ ಮದಗುಣಕಿ, ಮಡಿವಾಳಪ್ಪ ನಿಂಬರ್ಗಾ, ವಿಕಾಸ ಸವರಿಕರ್, ಮಲ್ಲಿಕಾರ್ಜುನ ಸಿಂಗೆ, ಗಣೇಶ ಕಾಂಬಳೆ, ಬ್ರಹ್ಮನಂದ ಮಿಂಚಾ ಸೇರಿದಂತೆ ಇತರರು ಇದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

3 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

14 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

14 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

16 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

17 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

17 hours ago