ಬಿಸಿ ಬಿಸಿ ಸುದ್ದಿ

ಹಾಗರಗುಂಡಗಿಯ ಶಿಕ್ಷಣ ಪ್ರೇಮಿಗಳ ಬಳಗಕ್ಕೆ ಷ್ಲಾಘನೆ

ಫರಹತಾಬಾದ : ಕಲಬುರಗಿ ತಾಲೂಕಿನ ಹಾಗರಗುಂಡಗಿ ಗ್ರಾಮದಲ್ಲಿ ಶಿಕ್ಷಣ ಪ್ರೇಮಿಗಳ ಬಳಗದ ವತಿಯಿಂದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ನಿರ್ಮಿಸಲ್ಪಟ್ಟ ಮುಖ್ಯದ್ವಾರದ ಉದ್ಘಾಟನೆ, ಗ್ರಾಮ ಮೆಚ್ಚಿದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ, ವಾರ್ಷಿಕ ಸ್ನೇಹ ಸಮ್ಮೇಳನ, ಜೊತೆಗೆ ಮಹಾದಾನಿಗಳಿಗೆ ಅಭಿನಂದನಾ ಸಮಾರಂಭವು ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿತ್ತು.

ಮುಖ್ಯದ್ವಾರದ ಉದ್ಘಾಟನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕರಾದ ಶ್ರೀ ಸಕ್ರೆಪ್ಪಗೌಡ ಬಿರಾದಾರ ರವರು ಹಾಗು ಕೆ.ಕೆ.ಆರ್.ಡಿ.ಬಿ ವತಿಯಿಂದ ನೀಡಿದ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆಯನ್ನು ಕಲಬುರಗಿ ಗ್ರೇ2 ತಹಶೀಲ್ದಾರರಾದ ಶ್ರೀ ವೆಂಕಣ್ಣಗೌಡ ಪಾಟೀಲ ರವರು ಉದ್ಘ್ಘಾಟಿಸಿ. ಬಾಬುರಾವ ಪಡಶೆಟ್ಟಿ ರವರನ್ನು ಒಳಗೊಂಡು ಹಾಗರಗುಂಡಗಿಯ ಶಿಕ್ಷಣ ಪ್ರೇಮಿಗಳ ಬಳಗದ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ದಿವ್ಯ ಸಾನಿಧ್ಯ ವಹಿಸಿದ ಜಗದ್ಗುರು ಡಾ. ಶ್ರೀ ಸಾರಂಗಧರ ದೇಶಿ ಕೇಂದ್ರ ಮಹಾಸ್ವಾಮಿಗಳು ಹಾಗರಗುಂಡಗಿಯ ಜನರ ಕಾರ್ಯವನ್ನು ಮೆಚ್ಚುತ್ತಾ ಗ್ರಾಮದ ವಿರಕ್ತ ಮಠದ ಪೀಠಾದಿಪತಿಗಳಾದ ಶ್ರೀ.ಮ.ನಿ.ಪ್ರ. ಶಿವಾನಂದ ಮಹಾಸ್ವಾಮಿಗಳು. ಹಾಗು ಹಾಗರಗುಂಡಗಿ ಶಾಲೆಯಲ್ಲಿ ಜ್ಞಾನಾರ್ಜನೆ ಪಡೆದ ಕೊಪ್ಪಳದ ಅಭಿನವ ಶ್ರೀ ಗವಿಶಿದ್ಧೇಶ್ವರ ಮಹಾಸ್ವಾಮಿಗಳು ಇಬ್ಬರೂ ಊರಿನ ಎರಡು ಕಣ್ಣುಗಳು ಇದ್ದ ಹಾಗೆ ಎಂದು ಹೇಳುತ್ತಾ ಸಮಸ್ಥ ಗ್ರಾಮಸ್ಥರಲ್ಲಿ ಭಾವಭಕ್ತಿಯನ್ನು ಮೊಳಗಿಸಿದರು. ಸಮ್ಮುಖವಹಿಸಿದ ಕಟ್ಟಿಮನಿ ಹಿರೇಮಠ ಮುಗಳನಾಗಾಂವ ಶ್ರೀಗಳಾದ ಶ್ರೀ.ಷ.ಬ್ರ ಅಭಿನವ ಸಿದ್ಧಲಿಂಗ ಶಿವಾಚಾರ್ಯರು. ಶಿಕ್ಷಣ ಪ್ರೇಮಿಗಳ ಬಳಗ ಕಟ್ಟಿಕೊಂಡು ಸರಕಾರಿ ಶಾಲೆಯನ್ನು ಖಾಸಗಿ ಶಾಲೆಗೂ ಕಡಿಮೆ ಇಲ್ಲದ ಹಾಗೆ ಕಂಗೊಳಿಸುವಂತೆ ಮಾಡಿದ್ದನ್ನು ಕಂಡು ಮುಕ್ತ ಕಂಠದಿಂದ ಹಾಡಿ ಹೊಗಳಿದರು.

ನೇತೃತ್ವವನ್ನು ಶ್ರೀ.ಮ.ನಿ.ಪ್ರ. ಶಿವಾನಂದ ಮಹಾಸ್ವಾಮಿಗಳು. ವಿರಕ್ತ ಮಠ, ಹಾಗರಗುಂಡಗಿ ಹಾಗು ಶ್ರೀ.ಮ.ನಿ.ಪ್ರ ಷಣ್ಮುಖ ಶಿವಯೋಗಿಗಳು. ವಿರಕ್ತ ಮಠ ಕವಲಗಾ(ಕೆ) ರವರು ವಹಿಸಿದ್ದರು. ಜ್ಯೋತಿ ಬೆಳಗಿಸುವ ಮುಖಾಂತರ ಉಭಯ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಆಧ್ಯಕ್ಷರಾದ ಲಕ್ಷ್ಮೀ. ಆರ್. ಘಾಲಿ ಹಾಗು ಅಶ್ವಿನಿ. ಎಸ್ ಕಂಟಿಕಾರ ಚಾಲನೆ ನೀಡಿದರು. ಶಾಲೆಯ ಭೂದಾನಿಗಳಾದ ಶಾಂತಾಬಾಯಿಗೌಡ್ತಿ ಎಸ್ ಪೋಲೀಸ ಪಾಟೀಲ. ಈರಮ್ಮ ಎನ್ ಹಿರೇಮಠ ಶಾಲಾ ಅಭಿವೃದ್ಧಿ ಕಾರ್ಯದಲ್ಲಿ ತನು,ಮನ,ದನ ಸಹಾಯ ನೀಡಿದ ಎಲ್ಲಾ ಮಹಾದಾನಿಗಳಿಗೆ ಸನ್ಮಾನಿಸಲಾಯಿತು.

ಗ್ರಾಮ ಮೆಚ್ಚಿದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಪೌಢಶಾಲೆಯಿಂದ ಶಿಕ್ಷಕಿಯಾದ ಜಯಶ್ರೀ ಆನಂದ ಪಾಟೀಲ ಹಾಗು ಪ್ರಾಥಮಿಕ ಶಾಲೆಯಿಂದ ಶ್ರೀಮತಿ ಲಲಿತಾ ರಾಜು ಚವ್ಹಾಣ ರವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನದ ಪ್ರಯುಕ್ತ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯಗುರುಗಳಾದ ವೀಣಾ ನಾಯ್ಕರ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ. ಪ್ರಕಾಶ ರಾಠೋಡ.ಕ್ಷೇತ್ರ ಸಮನ್ವಯಾಧಿಕಾರಿಗಳು, ಶರಣು ಸಾಳೇರ. ಶಿಕ್ಷಣ ಸಂಯೋಜಕರು. ಸೋಮನಾಥ ಬಿರಾದಾರ. ಕಂದಾಯ ಇಲಾಖೆ ಅಧಿಕಾರಿಗಳು. ರವಿ ಸಣ್ಣದನಿ. ಪಂಚಾಯತ ಅಭಿವೃದ್ಧಿ ಅಧಿಕಾರಿಗಳು. ಸೋಮಶೇಖರ ಸಜ್ಜನ. ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಉಭಯ ಶಾಲೆಯ ಶಿಕ್ಷಕರು, ಪಾಲಕ/ಪೋಷಕರು, ಸಾರ್ವಜನಿಕರು, ಗ್ರಾ.ಪಂ ಸದಸ್ಯರು, ಎಸ್.ಡಿ.ಎಮ್.ಸಿ ಅಧ್ಯಕ್ಷರು ಮತ್ತು ಸದಸ್ಯರು, ದಾನಿಗಳು, ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು. ನಿರೂಪಣೆ ಶ್ರೀ ರಘುನಾಥ ಮಸರಬೊ. ದೈಹಿಕ ಶಿಕ್ಷಕರು. ಪ್ರಾಸ್ಥಾವಿಕ ಕು. ಗುರುಲತಾ ರಾವೂರ. ವಂದನಾರ್ಪಣೆ ಗುರುಬಸಯ್ಯಾ ಹಿರೇಮಠ ಮಾಡಿದರು.

emedialine

Recent Posts

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

37 mins ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

2 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

5 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

6 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

19 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

19 hours ago