ಬಿಸಿ ಬಿಸಿ ಸುದ್ದಿ

ಕಲಬುರಗಿ ಕಸಾಪ ಮಾಜಿ, ಹಾಲಿ ಹಸಾಪ ಅಧ್ಯಕ್ಷರ ನಡುವೆ ಪ್ರತ್ಯಾರೋಪ ಸಮರ

ಮೂರು ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ ನಿಕಟಪೂರ್ವ ಜಿಲ್ಲಾಧ್ಯಕ್ಷರು ಪರಿಷತ್ತಿನ ಇನ್ನೂ ಹೆಚ್ಚಿನ ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸಲು ಸಲಹೆ ನೀಡಲಿ, ತಪ್ಪು ಎಸಗಿದರೆ ಅವರ ಸಲಹೆ ಸ್ವೀಕರಿಸುತ್ತೇವೆ. ಹಾಗಂತ ರಾಜಕೀಯ ಪಕ್ಷದ ವಿರೋಧ ಪಕ್ಷದ ನಾಯಕನಂತೆ ಪ್ರತಿ ಸಲ ವಿರೋಧ ವ್ಯಕ್ತಪಡಿಸುವ ಕೆಲಸ ಮಾಡಬಾರದು. – ವಿಜಯಕುಮಾರ ತೇಗಲತಿಪ್ಪಿ, ಅಧ್ಯಕ್ಷ, ಜಿಲ್ಲಾ ಕಸಾಪ, ಕಲಬುರಗಿ.

ಕಲಬುರಗಿ: ಗಡಿ ಭಾಗದಲ್ಲಿ ಜಿಲ್ಲಾ ಮಟ್ಟದ ಸಮ್ಮೇಳನವೊಂದನ್ನು ಆಯೋಜಿಸಿ, ಗಡಿ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸುವ ಕಾರ್ಯ ಮಾಡಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷರು ಮಾಡಿರುವ ಆರೋಪದ ಬಗ್ಗೆ ಪತ್ರಿಕೆ ಹೇಳಿಕೆ ಕೊಟ್ಟಿರುವ ತೇಗಲತಿಪ್ಪಿ ಅವರು, ಕಳೆದ ಒಂದೂವರೆ ವರ್ಷದಲ್ಲೇ ಎರಡು ಜಿಲ್ಲಾ ಸಾಹಿತ್ಯ ಸಮ್ಮೇಳನಗಳು, 6-7 ತಾಲೂಕು ಮಟ್ಟದ ಸಮ್ಮೇಳನಗಳು, ಇದೇ ಮೊದಲ ಬಾರಿ ಪರಿಷತ್ತಿನ ವತಿಯಿಂದ ಸೌಹಾರ್ದತೆಯ ಭಾವೈಕ್ಯ ಸಮಾವೇಶ, ಸಗರನಾಡು ಸಾಂಸ್ಕøತಿಕ ಉತ್ಸವ, ಯುವ ಸಾಹಿತ್ಯ ಸಮ್ಮೇಳನ, ಮಕ್ಕಳ ಸಾಹಿತ್ಯ-ಸಾಂಸ್ಕøತಿಕ ಸಮಾವೇಶ, ವಿಭಾಗ ಮಟ್ಟದ ಪ್ರಥಮ ದಾಸ ಸಾಹಿತ್ಯ ಸಮ್ಮೇಳನ. ಹೀಗೆ ನಿತ್ಯ ನಿರಂತರ ದಿನಕ್ಕೊಂದು ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದರಿಂದ ನಿಕಟಪೂರ್ವ ಅಧ್ಯಕ್ಷರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಹತಾಶೆ ಭಾವನೆಯಿಂದ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ತಿರುಗೇಟು ನೀಡಿದ್ದಾರೆ.

ಅವರ ಮೂರು ಅವಧಿಯೊಳಗೆ ಮಾಡಿದ ಕಾರ್ಯಕ್ರಮಗಳು ನಾವು ಕೇವಲ ಒಂದೂವರೆ ವರ್ಷದಲ್ಲಿಯೇ ಮಾಡಿದ್ದೇವೆ. ಅವರು ಅಂದಿನ ದಿನಗಳಲ್ಲಿ ಮಾಡಿದ ಘನ ಕಾರ್ಯಗಳು ಹಾಗೂ ಈಗೀನ ಪರಿಷತ್ತು ಮಾಡಿದ ರಚನಾತ್ಮಕ ಕಾರ್ಯಗಳು ಜಿಲ್ಲೆಯ ಜನತೆಗೆ ಗೊತ್ತಿದೆ ಎಂದು ಹೇಳಿದ್ದಾರೆ.

ಅವರು ಹಿಂದೆ ಮಾಡಿದ ಹಾಗೇ ದಾನಿಗಳಿಂದ ಹಣ ಸಂಗ್ರಹ, ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಲಕ್ಷ ಲಕ್ಷ ಗಟ್ಟಲೇ ಹಣ ತೆಗೆದುಕೊಳ್ಳುವುದು ಸೇರಿದಂತೆ ಬೇರೆ ಬೇರೆ ಮೂಲಗಳಿಂದ ಹಣ ಸಂಗ್ರಹ ಮಾಡುವ ರೂಢಿ ಅವರಲ್ಲಿರಬಹುದು. ಆ ಸಂಪ್ರದಾಯ ನಾವು ಮುಂದುವರಿಸಲ್ಲ. ಆಡಂಬರದ ಕಾರ್ಯಕ್ರಮಗಳಿಗಿಂತ ಅರ್ಥಪೂರ್ಣ ಸಮ್ಮೇಳನ, ಕಾರ್ಯಕ್ರಮಗಳು ಪರಿಷತ್ತಿನ ಅನುದಾನದ ಇತಿಮಿತಿಯಲ್ಲೇ ಮಾಡುತ್ತಿದ್ದೇವೆ.

ಒಬ್ಬರ ಸ್ವಂತ ಆಸ್ತಿಯಂತಾಗಿದ್ದ ಪರಿಷತ್ತು ಇಂದು ಜನ ಸಾಮಾನ್ಯರ ಸ್ವತ್ತಾಗಿಸುತ್ತಿದ್ದೇವೆ. ಜಿಡಗಾ ಶ್ರೀಮಠದ ಆವರಣದಲ್ಲಿ ಸಮ್ಮೇಳನ ನಡೆಸಿರುವದರಿಂದ ಜಿಡಗಾ ಶ್ರೀಗಳು ತನು-ಮನದ ಸಹಕಾರ ನೀಡಿದ್ದಾರೆ. ಶಾಸಕರಿಂದ ಹಣ ಪಡೆದುಕೊಂಡಿದುದ್ದರ ಕುರಿತು ಆರೋಪಿಸಿರುವ ನಿಕಟಪೂರ್ವ ಅಧ್ಯಕ್ಷರು ಅದನ್ನು ಸಾಬೀತುಪಡಿಸಲಿ. ಇಲ್ಲದಿದ್ದಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಕನ್ನಡ ಭವನದ ಭೌತಿಕ ಸೌಂದರೀಕರಣವೂ ಇಂದು ಇಮ್ಮಡಿಗೊಂಡಿದೆ. ಈ ಎಲ್ಲಾ ಕ್ರಿಯಾಶೀಲತೆಯಿಂದ ಕೂಡಿದ ಕೆಲಸಗಳು ಅರಗಿಸಿಕೊಳ್ಳಲು ಆಗದೇ ಮನಬಂದಂತೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ಹೇಳಿಕೆಗಳನ್ನು ನೀಡುತ್ತಿರುವುದು ಹಿರಿಯರಾದ ಅವರಿಗೆ ಶೋಭೇ ತರುವಂತಹದ್ದಲ್ಲ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಯಶವಂತರಾಯ ಅಷ್ಠಗಿ ಜಂಟಿಯಾಗಿ ಪತ್ರಿಕಾ ಪ್ರಕಟಣೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್ಚಾಗಿ ನಗರ ಮತ್ತು ಪಟ್ಟಣ ಪ್ರದೇಶಕ್ಕೆ ಸೀಮಿತವಾಗಿದ್ದ ಪರಿಷತ್ತಿನ ಚಟುವಟಿಕೆಗಳು ಇಂದು ಗ್ರಾಮೀಣರ ಕಡೆಗೆ ತೆಗೆದುಕೊಂಡೊಯ್ಯುವ ಕಾರ್ಯ ಮಾಡುತ್ತಿದ್ದೇವೆ. ಆ ಮೂಲಕ ಜಿಲ್ಲೆಯನ್ನು ಸಾಂಸ್ಕøತಿಕ ಜಿಲ್ಲೆಯನ್ನಾಗಿಸುವ ಕಾರ್ಯ ಮಾಡಲು ಮುಂದಾಗಿದ್ದೇವೆ. ಇದಕ್ಕೆ ನಿಕಟಪೂರ್ವ ಜಿಲ್ಲಾಧ್ಯಕ್ಷರೂ ಸೇರಿದಂತೆ ಸರ್ವರ ಸಹಕಾರವೂ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

12 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

22 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

22 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

22 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago