ಬಿಸಿ ಬಿಸಿ ಸುದ್ದಿ

ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಅಭಿವೃದ್ಧಿಯಾಗಿದೆಂಬುದಕ್ಕೆ ಜನತೆಯೇ ಸಾಕ್ಷಿ; ಶಾಸಕ ಮತ್ತಿಮಡು

ಶಹಾಬಾದ: ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಸದಾ ದುಡಿಯುವ ಮೂಲಕ ಸಾಕಷ್ಟು ಬದಲಾವಣೆ ಕಂಡಿದೆ ಎಂಬುದಕ್ಕೆ ಕ್ಷೇತ್ರದ ಜನತೆಯೇ ಸಾಕ್ಷಿ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಅವರು ಮಂಗಳವಾರ ನಂದೂರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಆಯೋಜಿಸಲಾದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಕಳೆದ ಐದು ವರ್ಷದ ಅವಧಿಯಲ್ಲಿ ತಮ್ಮ ಆಶೀರ್ವಾದದಿಂದ ಕ್ಷೇತ್ರದ ಅಭಿವೃದ್ಧಿ ಮಾಡಬೇಕೆಂಬ ಹಂಬಲದಿಂದ ಒಂದು ದಿನವೂ ವಿಶ್ರಾಂತಿ ಪಡೆಯದೇ ದುಡಿದಿದ್ದೆನೆ. ಕ್ಷೇತ್ರದ ವ್ಯಕ್ತಿಯೂ ಅಲ್ಲದಿದ್ದರೂ ಕಳೆದ ಚುನಾವಣೆಯಲ್ಲಿ ತಾವು ನನ್ನನ್ನು ಅಣ್ಣ, ತಮ್ಮ ಹಾಗೂ ತಮ್ಮ ಮನೆಯ ಮಗನೆಂದು ತಿಳಿದು ನನ್ನನ್ನು ಗೆಲ್ಲಿಸಿದ್ದೀರಿ.ಆ ಋಣವನ್ನು ನಾನು ಎಂದಿಗೂ ತೀರಿಸುವುದಕ್ಕೆ ಆಗುವುದಿಲ್ಲ. ಬಹಳ ಜನರು ಬರ್ತಾರೆ ಗ್ಯಾರಂಟಿ ಕಾರ್ಡ ಹಿಡಿದು ಕರೆಂಟ್ ಉಚಿತವಾಗಿ ಕೊಡುತ್ತೆವೆ.ತಿಂಗಳಿಗೆ ಹಣ ನೀಡುತ್ತೆವೆ ಎಂದು ನಾನಾ ರಿತೀಯ ಆಸೆಯನ್ನು ತೋರಿಸುತ್ತಾರೆ. ಇಷ್ಟೊಂದು ಉಚಿತ ಹಣ, ಕರೆಂಟ್ ನೀಡಿದರೇ ರಾಜ್ಯದ ಬಜೆಟ್‍ಗಿಂತ ಹೆಚ್ಚಾಗುತ್ತದೆ.ಇದನ್ನು ಹೇಗೆ ಕೊಡುತ್ತಾರೆ ಎಂದು ಜನರು ತಿಳಿದುಕೊಳ್ಳಬೇಕು.ಬಂದ ಸಂದರ್ಭದಲ್ಲಿ ನೀವು ಕೇಳಿ. ಅಧಿಕಾರ ಬರಬಹುದು ಮತ್ತೆ ಹೋಗಬಹುದು.ಆದರೆ ಜನರಿಗೆ ಯಾಮಾರಿಸುವ ಕೆಲಸ ಮಾಡಬಾರದು.

ಇಂತ ಸುಳ್ಳು ಆಶ್ವಾಸನೆಯನ್ನು ನಾನು ಐದು ವರ್ಷದಲ್ಲಿ ಎಂದು ಮಾಡಿಲ್ಲ. ಪ್ರತಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಿದ್ದೆನೆ.ಅದನ್ನು ನಾನು ಹೇಳುವುದಕ್ಕಿಂತ ನಿವೇ ನೋಡಿದ್ದೀರಿ.ಸುಮಾರು 1500 ಕೋಟಿ ರೂ. ಅನುದಾನದಲ್ಲಿ ಕ್ಷೇತ್ರ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ.ಇದನ್ನೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಲ್ಲೇಖಿಸಿ, ಮಹಾಗಾಂವನಲ್ಲಿ ಮುಂದೆ 25 ಸಾವಿರ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದ್ದು ಕಂಡಿದ್ದಾರೆ. ಚಿತ್ತಾಪೂರ ಮತಕ್ಷೇತ್ರದವನಾದರೂ ಏನಾದರೂ ಅಭಿವೃದ್ಧಿ ಮಾಡುತ್ತಾನೆ ಎಂದು ತಿಳಿದು ನನ್ನನ್ನು ಮತದಾರರು ಗೆಲ್ಲಿಸಿದ್ದಾರೆ.ಕೆಲವೇ ದಿನಗಳಲ್ಲಿ ಚುನಾವಣೆ ಬರಲಿದೆ. ಕಳೆದ ಬಾರಿ ನನಗೆ ಆಶೀವಾರ್ದ ಮಾಡಿದಂತೆ ಮುಂದಿನ ಐದು ವರ್ಷದ ಅವಧಿಯವರೆಗೆ ಮತ್ತೊಮ್ಮೆ ಗೆಲ್ಲಿಸಿ.ನಿಮ್ಮ ಮನೆಯ ಮಗನಾಗಿ ದುಡಿಯುವ ಮೂಲಕ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಲು ಮುಂದಾಗುತ್ತೆನೆ ಎಂದರು.

ಪಾಳಾ ಗ್ರಾಮದ ಗುರುಮೂರ್ತಿ ಶಿವಾಚಾರ್ಯರು, ನಂದೂರ ಗ್ರಾಮದ ಗಂಗಾಧರ ಹಿರೇಮಠ, ಗ್ರಾಮೀಣ ಅಧ್ಯಕ್ಷ ಸಂಗಮೇಶ ವಾಲಿ,ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬಸವರಾ ಪಾಟೀಲ, ಗ್ರಾಪಂ ಅಧ್ಯಕ್ಷ ನಿಂಗಪ್ಪ ದೊಡ್ಡಮನಿ,ಸಂಗಮೇಶ ನಾಗನಳ್ಳಿ, ರೇಣುಕಾ ರಾಠೋಡ,ಶಾಂತಮಲ್ಲಪ್ಪ ಪಾಟೀಲ,ವೀರಣ್ಣಗೌಡ ಪಾಟೀಲ,ಗೌಡಪ್ಪಗೌಡ ಪಾಟೀಲ,ನಾಗರಾಜ ಕಲ್ಲಾ, ಸಯ್ಯದ್ ಅಕ್ಬರ್ ಹುಸೇನಿ,ಡಾ.ಶಾಂತಪ್ಪ ಹೂಗಾರ,ರೇವಣಸಿದ್ದಯ್ಯಸ್ವಾಮಿ, ಶಿವಕುಮಾರ ಗುತ್ತೆದಾರ, ಶಿವಕುಮಾರ ಹಿರೇಗೌಡ, ರಮೇಶ ತೆಗ್ಗಿನಮನಿ,ಬಸವರಾಜ ಪಾಟೀಲ ಕೆಸರಟಗಿ, ಬಸವರಾಜ ಪಾಟೀಲ ನಂದೂರ, ಗ್ರಾಪಂ ಸದಸ್ಯರಾದ ಶಿವಕುಮಾರ ಅಂಬಲಗಿ, ಜಗನ್ನಾಥ ಹರಳಯ್ಯ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ಲೋಕೋಪಯೋಗಿ ಇಲಾಖೆಯಿಂದ ಕುಸನೂರ ತಾಂಡಾ ಮುಖ್ಯ ರಸ್ತೆಯಿಂದ ಜೋಕ್ಲಾ ನಾಯಕ ತಾಂಡಾವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ 2021-22ನೇ ಸಾಲಿನ 5054 ಅಪಂಡಿಕ್ಸ್ ಇ ಯೋಜನೆ ಅಡಿಯಲ್ಲಿ 170 ಲಕ್ಷ, ಜಾಪೂರ ಮುಖ್ಯ ರಸ್ತೆಯಿಂದ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ 2022-23ನೇ ಸಾಲಿನ 3054 ಯೋಜನೆಯಡಿ 100 ಲಕ್ಷ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಜಲಜೀವನ ಮಿಷನ್-ಮನೆ ಮನೆಗೆ ಗಂಗೆ ಯೋಜನೆಯಡಿ ಕುಡಿಯುವ ನೀರು ಸರಬರಾಜು ಕಾಮಗಾರಿ ನಂದೂರ(ಬಿ) ಗ್ರಾಮದಲ್ಲಿ 112 ಲಕ್ಷ,ಬಾಪು ನಾಯಕ ಹಾಗೂ ಕಾನುನಾಯಕ ತಾಂಡಾದಲ್ಲಿ 87 ಲಕ್ಷ, ಸ್ಟೇಷನ ತಾಂಡಾ35 ಲಕ್ಷ, ಜೋಕ್ಲಾ ತಾಂಡಾದಲ್ಲಿ 45 ಲಕ್ಷ, ಫೈಲ್ ತಾಂಡಾದಲ್ಲಿ 41 ಲಕ್ಷ ಅನುದಾನ ಸೇರಿದಂತೆ ಒಟ್ಟು 8 ಕೋಟಿ ಅನುದಾನದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. – ಬಸವರಾಜ ಮತ್ತಿಮಡು, ಶಾಸಕ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

4 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

14 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

14 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

14 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago