ಕಲಬುರಗಿ:ಶಿವಸಂಗ ಸಂಸ್ಕೃತಿಕ ಸೇವಾ ಸಂಘ ನಗರದ ರಾಮ್ ಮಂದಿರ್ ರಿಂಗ ರಸ್ತೆಯಲ್ಲಿರುವ ಕಾರ್ತಿಕ್ ಹೈಟ್ಸ್ ಅಪಾರ್ಟ್ಮೆಂಟ್ ನಲ್ಲಿ ಯುಗಾದಿ ಪ್ರಯುಕ್ತ ಬೇವಿನೊಳಗಣ ಬೆಲ್ಲ ಅನ್ನೋ ವಿಶೇಷ ಉಪನ್ಯಾಸ ಮತ್ತು ಕವಿಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ತಿಕ್ ಹೈಟ್ಸ್ ನ ಹಿರಿಯರಾದ ಡಾ. ರಘುವೀರ್ ಸೃಷ್ಟಿ ಅವರು ವಹಿಸಿದ್ದರು. ಅದೇರೀತಿ ಗೌರವ ಉಪಸ್ಥಿತಿಯಲ್ಲಿ ಹಿರಿಯರಾದ ಶ್ರೀ ಭೀಮರಾವ್ ಕೊಗನೂರ್ ಮತ್ತು ಭೋದಿವೃಕ್ಷ ಸಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಸುಭಾಷ್ ಚಕ್ರವರ್ತಿ ಅವರು ಭಾಗವಹಿಸಿದ್ದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಡಾ. ವಾಸುದೇವ ಸೇಡಂ ಅವರು ಯುಗಾದಿ ವಿಶೇಷತೆ, ಈ ಹಬ್ಬದ ಆದಿ ಮತ್ತು ಯುಗಾದಿ ಮೊಟ್ಟ ಮೊದಲಿಗೆ ಎಂದು ಮತ್ತು ಎಲ್ಲಿಂದ ಆಚರಣೆಗೆ ಬಂತು ಎಂಬ ಬಗ್ಗೆ ವಿವರವಾಗಿ ಪ್ರಸ್ತಾಪ ಮಾಡಿದರು ಮತ್ತು ಯುಗಾದಿ ಕಾವ್ಯದ ಪ್ರಕಾರಗಳು ಕುರಿತು ಅಧ್ಭುತವಾಗಿ ಮಾತನಾಡಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಪಿ.ಡಿ.ಎ ಇಂಜಿನಿಯರಿಂಗ್ ಕಾಲೇಜ್ ನ ಪ್ರಾದ್ಯಾಪಕಿ ಹಾಗೂ ಸಾಹಿತಿ ಡಾ. ಗೀತಾ ಪಾಟೀಲ್ ಮಾತನಾಡಿತ್ತ ಈ ಯುಗಾದಿ ಸಂದರ್ಭದಲ್ಲಿ ಪ್ರಕೃತಿ ಅಷ್ಟೇ ಬದಲಾದರೆ ಸಾಲದು ನಮ್ಮೆಲ್ಲರ ದೃಷ್ಟಿ ಬದಲಾಗುವ ಅವಶ್ಯಕತೆ ಇದೇ ಎನ್ನುತ್ತಾ ಹಲವಾರು ಮಹಿಳೆಯರ ಯಶೋಗಾತೆಯನ್ನು ಮನವರಿಕೆ ಮಾಡಿಕೊಟ್ಟರು.
ಮಹಿಳೆಯರ ಬಗ್ಗೆ ಇರುವ ಹಲವು ಅನಿಷ್ಟ ಪದ್ಧತಿಗಳ ಕುರಿತು ವಿವರವಾಗಿ ಮಾತನಾಡಿದ ಅವರು ಅದೆಷ್ಟೋ ಪುರುಷರು ಕೂಡ ಮಹಿಳೆಯರಿಗೆ ಸಾಥ್ ನೀಡಿ ಅಂಥ ಮಹಿಳೆಯರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಲ್ಲುವಲ್ಲಿ ಸಹಕರಿಸಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಇದೇ ಸಂಧರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಶಿವಲೀಲಾ ಹಳ್ಳದಮಠ, ಮಂಗಳಾ ಶಟಕಾರ, ಡಾ. ಬಾಬುರಾವ ಶೇರಿಕಾರ, ಕವಿರಾಜ್ ನಿಂಬಾಳ,ಕಿರಣ್ ಪಾಟೀಲ್ ಮತ್ತು ನಾಗೇಂದ್ರಪ್ಪಾ ಮಾಡ್ಯಾಳೆ ಅವರು ತಮ್ಮ ಸ್ವರಚಿತ ಕವನದಲ್ಲಿ ಯುಗಾದಿ ವಿಶೇಷತೆಯನ್ನು ತಮ್ಮದೇ ಆದ ಶೈಲಿಯಲ್ಲಿ ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಗಯ್ಯ ಹಳ್ಳದಮಠ ಪ್ರಾಥನೆ ಗೀತೆಯನ್ನು ಹಾಡಿದರು, ಸಂಘದ ಅಧ್ಯಕ್ಷರಾದ ಪರಮೇಶ್ವರ ಶಟಕಾರ ಅವರು ಪ್ರಾಸ್ತವಿಕ ನುಡಿಗಳ ಜೊತೆಗೆ ಎಲ್ಲರಿಗೂ ಸ್ವಾಗತವನ್ನು ಕೋರಿದರು, ಕಾರ್ಯಕ್ರಮದ ನಿರೂಪಣೆ ಡಾ. ಅಶೋಕ್ ಶಟಕಾರ ಅವರು ಅಧ್ಭುತವಾಗಿ ನಡೆಸಿಕೊಟ್ಟರು.
ಸಂಪೂರ್ಣ ಕಾರ್ಯಕ್ರಮದ ನಿರ್ವಹಣೆ ಜವಾಬ್ದಾರಿಯನ್ನು ಡಾ. ಸಂಜೀವ್ ಶಟಕಾರ, ಶರಣು ಪಟ್ಟಣ ಶೆಟ್ಟಿ, ವಿನೋದ ಮಾಶೇಟ್ಟೆ ಮತ್ತು ಮಹೇಶ್ ಚಿದ್ರಿ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಇದೇ ಸಂಧರ್ಭದಲ್ಲಿ ಶ್ರೀಕಾಂತ್ ಪಾಟೀಲ್, ವೆಂಕಟೇಶ್ ಗಡಕರ್, ಅಯ್ಯಣ್ಣ ನಂದಿ, ಪ್ರಸನ್ನ ವಾಂಜರಖೆಡೆ, ಗಾಯತ್ರಿ ಚಿದ್ರಿ, ವಿಜಯಲಕ್ಷ್ಮಿ ಪುಲ್ಸೇ, ರೇಣುಕಾ ಮಾಶೇಟ್ಟೆ, ಚಂದ್ರಿಕಾ, ಜ್ಯೋತಿ ಪಾಟೀಲ್, ಶ್ರೀದೇವಿ ಶಟಕಾರ, ವೈಶಾಲಿ ಪಟ್ಟಣಶೆಟ್ಟಿ ಮತ್ತು ಕಾರ್ತಿಕ್ ಹೈಟ್ಸ್ ಎಲ್ಲಾ ಹಿರಿಯರು ಹಾಗೂ ಯುವಕರು ಭಾಗವಹಿಸಿ ಕಾರ್ಯಕ್ರಮದ ಯಶಸ್ವೀಗೆ ಕಾರಣರಾದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…