ಸುರಪುರ: ನಗರಸಭೆ ವ್ಯಾಪ್ತಿಯ ವಾರ್ಡ ನಂ 10 ಸುರಪುರ ಸೀಮೆಯ ಸರಕಾರಿ ಗೈಯರಾಣು ಸರ್ವೆ ನಂಬರ್ 23/7 ರಲ್ಲಿ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಹೆಸರಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ವಿವಿಧ ಅಭಿವೃದ್ಧಿ ಮತ್ತು ಧಮ್ಮ ಚಟುವಿಟಿಕೆಗಳ ಸಲುವಾಗಿ ನಗರಸಭೆಯಿಂದ ನಿವೇಶನ ಪತ್ರ ಪಡೆದ ಆಸ್ತಿ ಸಂಖ್ಯೆ 3-1-75/ 51ಎ ಯಾವೂದೇ ಕಾರಣಕ್ಕು ರದ್ದುಪಡಿಸಬಾರದು ಎಂದು ಆಗ್ರಹಿಸಿ ನಗರಸಭೆ ಕಾರ್ಯಾಲಯದ ಮುಂದೆ ದಲಿತ ಸಾಮೂಹಿಕ ಸಂಘಟನೆಗಳ ಒಕ್ಕೂಟ ದಿಂದ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ, ಕೆಲ ದಿನಗಳ ಹಿಂದೆ ಕೆಲ ವ್ಯಕ್ತಿಗಳು ಗೋಲ್ಡನ್ ಕೇವ್ ಬುದ್ಧ ವಿಹಾರ ಜಾಗದ ಕುರಿತು ಆಧಾರ ರಹಿತ ತಕರಾರು ಅರ್ಜಿಯನ್ನು ಕೂಡಲೇ ವಜಾಗೋಳಿಸಬೇಕು ಹಾಗೂ ಟ್ರಸ್ಟ್ ಹೆಸರಲ್ಲಿ ಸರ್ವೆ ನಂ 23/7 ರಲ್ಲಿ ಪಡೆದಿರುವ ಆಸ್ತಿ ಸಂಖ್ಯೆಯನ್ನು 3-1-75/ 51ಎ ಯತಾವತ್ತಾಗಿ ಮುಂದುವರೆಸಬೇಕು ಒಂದು ವೆಳೆ ಆಸ್ತಿ ನಂಬರ್ ಕಂದಾಯ ಇಲಾಖೆಗೆ ಸಂಬಂದಿಸಿದ್ದು ಎಂದು ರದ್ದು ಪಡಿಸಿದರೆ ಉಳಿದ ಇದೇ ರಿತಿಯಾಗಿ ಕಂದಾಯ ಇಲಾಖೆಯ ಜಾಗದಲ್ಲಿ ನಿರ್ಮಿಸಿಕೊಂಡಿರುವ ತಕರಾರು ಎತ್ತಿದ ಮನೆಗಳ ಆಸ್ತಿಗಳ ನಂಬರ್ ಕೂಡಾ ಕಡ್ಡಾಯವಾಗಿ ರದ್ದು ಪಡಿಸಲೂ ನಗರಸಭೆ ವತಿಯಿಂದ ಪ್ರಾದೇಶಕ ಆಯುಕ್ತರಿಗೆ ಶಿಫಾರಸ್ಸು ಮಾಡಬೆಕು.ಗೋಲ್ಡನ್ ಕೇವ್ ಬುದ್ಧ ವಿಹಾರದ ಆಸ್ತಿ ನಂಬರ್ ರದ್ದು ಪಡಿಸುವದಕ್ಕಿಂತ ಮುಂಚೆ ಸರಕಾರಿ ಜಾಗವಾದ ಬಿ.ಸಿ.ಎಮ್ ಹಾಸ್ಟೆಲ್ ಆವರಣದಲ್ಲಿ ನಿರ್ಮಿಸಿದ ಅನಧಿಕೃತ ಮನೆ ಹಾಗೂ ಹೊಸಭಾವಿ ಹತ್ತಿರವಿರುವ ಕಂದಾಯ ಇಲಾಖೆಯ ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಕೆಲ ಮುಖಂಡರುಗಳ ಮನೆಗಳ ಆಸ್ತಿ ನಂಬರ್ ಇವುಗಳನ್ನು ಮೊದಲು ರದ್ದುಪಡಿಸಬೇಕು. ಇಲ್ಲದಿದ್ದರೆ ನಗರ ಸಭೆ ಕಾರ್ಯಾಲಯದ ಮುಂದೆ ನ್ಯಾಯಕ್ಕಾಗಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸುತ್ತಾ ನ್ಯಾಯ ಸಮ್ಮತ ನಮ್ಮ ಬೇಡಿಕೆಗಳನ್ನು ಈಡೇರಿಸಬೆಕೆಂದು ಒತ್ತಾಯಿಸುವುದಾಗಿ ತಿಳಿಸಿದರು.
ನಂತರ ನಗರಸಭೆ ಪೌರಾಯುಕ್ತರಿಗೆ ಬರೆದ ಮನವಿಯನ್ನು ನಗರಸಭೆ ವ್ಯವಸ್ಥಾಪಕರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ, ವೆಂಕಟೇಶ ಹೊಸಮನಿ, ರಾಹುಲ್ ಹುಲಿಮನಿ, ರಾಮಣ್ಣ ಕಲ್ಲದೇವನಹಳ್ಳಿ, ಮಾಳಪ್ಪ ಕಿರದಳ್ಳಿ, ರಮೇಶ ಅರಿಕೇರಾ, ಹಣಮಂತ ಭದ್ರಾವತಿ, ಮಲ್ಲಿಕಾರ್ಜುನ್ ವಾಗಣಗೇರಾ, ಸಾಹೇಬಗೌಡ ಟಣೆಕೆದಾರ, ಮಲ್ಲಪ್ಪ ತಳವರಗೇರಾ, ಶರಣಪ್ಪ ತಳವರಗೇರಾ, ರಾಜು ಕಟ್ಟಿಮನಿ, ಎಮ್,ಡಿ ಗೌಸ್, ಶಿವಣ್ಣ ಸಾಸಗೇರಿ,ವಿಕ್ರಮ್ ಕರಡಕಲ್,ಮಲ್ಲಿಕಾರ್ಜುನ್ ಹಾದಿಮನಿ, ನಾಗು ಪಾಳೆದಕೆರಾ, ವಾಸು ನಾಯಕ, ಗೊಲ್ಲಾಲಪ್ಪ ಕಟ್ಟಿಮನಿ, ನಾಗರಾಜ್ ಬೇವಿನಗಿಡ, ಹಣಮಂತ ಕೊಡ್ಲಿ, ಗಜ ತಳವಾರ, ಸುರೇಶ ಚಿಕ್ಕನಳ್ಳಿ, ಸತೀಶ ಯಡಿಯಾಪುರ, ಮಲ್ಲನಗೌಡ ಪೋಲಿಸ್ ಪಾಟೀಲ್, ಮಾನಪ್ಪ ಮೂಲಿಮನಿ, ಮಂಜುನಾvಥ ಕಟ್ಟಿಮನಿ, ಸಲೀಂ, ಮಾನಪ್ಪ ಚಂದಲಾಪುರ, ತೌಫಿಕ್, ಅವಿನಾಶ ಚಿಕ್ಕನಹಳಿ, ಇತರರು ಬಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…