ಚಿತ್ತಾಪುರ: ಮಾಜಿ ಎಂಎಲ್‍ಸಿ ಬಾಬುರಾವ್ ಚಿಂಚನಸೂರ್ ಒಬ್ಬ ಸುಳ್ಳು,ಕಳ್ಳ,ದರೊಡೆಕೋರ ನಾಯಲಕ್ ರಾಜಕಾರಣಿ ಎಂದು ಕೂಲಿ ಸಮಾಜದ ಯುವ ಗೌರವ ಅಧ್ಯಕ್ಷ ಶಿವಕುಮಾರ ಸುಣಗಾರ್ ಟೀಕಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಅಷ್ಟೇ ಬಿಜೆಪಿ ತೊರೆಸು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಎಂ.ಎಲ್.ಸಿ ಬಾಬುರಾವ್ ಚಿಂಚನಸೂರ್ ಅವರಿಗೆ ಅಧಿಕಾರದ ವ್ಯಾಮೋಹವಿದೆ.ಕೋಲಿ ಸಮಾಜದ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ನಮ್ಮ ಕೋಲಿ ಸಮಾಜದ ಹೆಸರು ದುರ್ಬಳಕೆ ಮಾಡಿಕೊಂಡು ರಾಜಕೀಯ ಮಾಡಿತಿದ್ದಾರೆ ಎಂದು ಚಿಂಚನಸೂರ್ ಅವರ ವಿರುದ್ಧ ಹರಿಹಾಯ್ದರು.
ಸುಮಾರು 30 ರಿಂದ 35 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರವನ್ನು ಅನುಭವಿಸಿ ಆಗ ಕೋಲಿ ಸಮಾಜ ಎಸ್.ಟಿ ಸೇರ್ಪಡೆ ವಿಚಾರ ಧ್ವನಿ ಎತ್ತಲಿಲ್ಲ ಕೇವಲ 4 ವರ್ಷಗಳ ಹಿಂದೆ ತಮ್ಮ ಅಧಿಕಾರದ ಆಸೆಗಾಗಿ ಬಿಜೆಪಿ ಸೇರ್ಪಡೆ ಆಗಿ ಕೋಲಿ ಸಮಾಜವನ್ನು ಎಸ್.ಟಿ ಸೇರ್ಪಡೆ ಮಾಡಲು ಬಿಜೆಪಿ ಹಿಂದೇಟು ಹಾಕುತ್ತಿದ್ದೆ ಎಂದು ಸುಳ್ಳು ಮತ್ತೆ ಅಧಿಕಾರದ ಆಸೆಗಾಗಿ ಸಮಾಜದ ಹೆಸರು ಬಳಕೆ ಮಾಡಿಕೊಂಡು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದರು.
ಕೋಲಿ ಸಮಾಜಕ್ಕೆ ವಿಠಲ ಹೇರೂರು, ಅಲ್ಲೂರ್ ಹಣಮಂತರಾಯ,ಕಾಮಣಪ್ಪ ವಚ್ಛಾ ಸೇರಿದಂತೆ ಅನೇಕರು ನಿಸ್ವಾರ್ಥ ಮನೋಭಾವದೊಂದಿಗೆ ಸಮಾಜವನ್ನು ಕಟ್ಟಿ ಬೆಳೆಸಿ ಒಗ್ಗೂಡಿಸಿದ್ದಾರೆ ನಾವೆಲ್ಲ ಅವರ ಅನುಯಾಯಿಗಳು ಆದರೆ ಬಾಬುರಾವ್ ಚಿಂಚನಸೂರ್ ಒಬ್ಬ ಸುಳ್ಳಿನ ಕಂತೆ ಕಟ್ಟಿ ಎಲ್ಲರಿಗೂ ಹಂಚ್ಚುವುದರಲ್ಲಿ ನಿಪುಣ ಮುಂದಿನ ದಿನಗಳಲ್ಲಿ ಇಂತವರಿಂದ ನಮ್ಮ ಕೋಲಿ ಸಮಾಜದ ಭಾಂದವರು ಎಚ್ಚರಿಕೆಯಿಂದ ಇರಬೇಕು ಬಾಬುರಾವ್ ಚಿಂಚನಸೂರ್ ಹಠಾವೋ ಕೋಲಿ ಸಮಾಜ ಬಚಾವೋ ಎಂದರು.
ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಾಬುರಾವ್ ಚಿಂಚನಸೂರ್ ಮೇಲೆ ಭರವಸೆ ಇಲ್ಲಾ.ಖರ್ಗೆ ನನ್ನ ಸಂಬಂಧ ತಂದೆ ಮಗನ ಸಂಬಂಧ ಎನ್ನುವ ಚಿಂಚನಸೂರ್ ಅವರು ತಮ್ಮ ಪ್ರಿಯಾಂಕ್ ಖರ್ಗೆ ಅವರನ್ನು ಪರೋಕ್ಷವಾಗಿ ಸೋಲಿಸಲು ಪ್ಲಾನ್ ಇರಬಹುದು ಎಂದು ಗೇಲಿ ಮಾಡಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…