ಬಿಸಿ ಬಿಸಿ ಸುದ್ದಿ

ಅಮರ ಬಲಿದಾನ ದಿನಾಚರಣೆ; ಐದು ಸಾವಿರ ಕಿ.ಮೀ.ದೇಶಭಕ್ತಿ ಯಾತ್ರೆಯ ಸಮಾರೋಪ

ಕಲಬುರಗಿ: ಹವಾ ಮಲ್ಲಿನಾಥ ಮಾಹಾರಾಜರ ನೇತ್ರತ್ವದ ಅಮರ ಬಲಿದಾನ ದಿನಾಚರಣೆಯ ಐದು ಸಾವಿರ ಕಿ.ಮೀ.ದೇಶಭಕ್ತಿ ಯಾತ್ರೆಯ ಸಮಾರೋಪ ಬೀದರನಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ ಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಪರಮ ಪೂಜ್ಯ ಸದ್ಗುರು ಶ್ರೀ ಹವಾ ಮಲ್ಲಿನಾಥ ಮಾಹಾರಾಜ ನಿರಗುಡಿ ಯವರ ದಿವ್ಯ ನೇತ್ರತ್ವದಲ್ಲಿ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಭಾರತ ಮಾತಾ ಮಂದಿರ ದಿಂದ 15 ರಂದು ಶಹೀದ ಭಗತ ಸಿಂಗ ರವರ ಪೂರ್ವಜರ ಗ್ರಾಮವಾದ ಪಂಜಾಬನ ಖಟ್ಕರ್ ಕಲಾನ ನಲ್ಲಿ ಅಮರ ಬಲಿದಾನ ದಿನಾಚರಣೆ ಮಾಡುವ ಪ್ರಯುಕ್ತ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನೂರಾರು ವಾಹನಗಳೊಂದಿಗೆ ತೆರಳಿದ ದೇಶ ಭಕ್ತಿ ಯಾತ್ರೆಯು ಕನಾ9ಟಕ, ಮಾಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣಾ ಮಾರ್ಗವಾಗಿ ಸಂಚರಿಸಿ ಪಂಜಾನ ಖಟ್ಕರ್ ಕಲಾನ ನಲ್ಲಿನ ಶಹೀದ್ -ಏ-ಆಜಮ್ ಭಗತಸಿಂಗ ಸ್ಮಾರಕ ತಲುಪಿ ಪೂಜ್ಯರು ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.ನಂತರ ಶಹೀದ ಭಗತ್ ಸಿಂಗ್ ರವರ ಪೂರ್ವಜರ ಮನೆ,ಶಹೀದ ಭಗತ್ ಸಿಂಗ್ ಗ್ರಂಥಾಲಯ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿ ಸ್ಥಾಪಿಸಿರುವ ದೇಶಕ್ಕಾಗಿ ಅಮರ ಬಲಿದಾನ ಗೈದ ಹುತಾತ್ಮರ ಪ್ರತಿಮೆ ಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.

ನಂತರ ಅಲ್ಲಿನ ರಾಜ ಪ್ಯಾಲೇಸ ಸಭಾಂಗಣದಲ್ಲಿ ಆಯೋಜಿಸಲಾದ ಅಮರ ಬಲಿದಾನ ದಿನಾಚರಣೆ ಸಂದರ್ಭದಲ್ಲಿ ಆಮಂತ್ರಿತರಾಗಿ ಬಂದಿದ್ದ ಶಹೀದ ಭಗತ್ ಸಿಂಗ್,ರಾಜಗುರು, ಸುಖದೇವ್, ಚಂದ್ರಶೇಖರ ಆಜಾದ,ಅಷ್ಫಾಕ ಉಲ್ಲಾ ಖಾನ್,ಶಹೀದ ಉಧ್ಧಮ ಸಿಂಗ ರವರ ಕುಟುಂಬದ ವಂಶಸ್ಥರನ್ನು ಪೂಜ್ಯ ಸದ್ಗುರು ಶ್ರೀ ಹವಾ ಮಲ್ಲಿನಾಥ ಮಾಹಾರಾಜರು ಅದ್ಧೂರಿಯಾಗಿ ಸನ್ಮಾನ ಮಾಡಿದ್ದಲ್ಲದೇ ಅವರೆಲ್ಲರಿಗೂ ಹೋಳಿಗೆ ಊಟ ಮಾಡಿಸಿದರು.ಈ ಸಂಧರ್ಭದಲ್ಲಿ ದೇಶ ಭಕ್ತಿ ಯಾತ್ರೆಗೆ ಆಗಮಿಸಿದ ನಾಂದೇಡ ಸಚಖಂಡ ಶ್ರೀ ಹಜೂರ ಸಾಹೇಬ ಗುರುದ್ವಾರದ ಪ್ರಮುಖರಾದ ಸರದಾರ ರಣಜೀತಸಿಂಗ ಚಿರಾಗಿಯಾ,ಸರದಾರ ಪರಮ್ಜೋತ ಸಂಗ ಚತ್ತಾಲ,ಸರದಾರ ನವಲಸಿಂಗ ಜಾಹಗೀರದಾರರನ್ನೊಳಗೊಂಡು ಮಾತನಾಡಿದ ಎಲ್ಲಾ ಮಹನೀಯರು ಶ್ರೀ ಹವಾ ಮಲ್ಲಿನಾಥ ಮಾಹಾರಾಜರು ಕೈಕೊಳ್ಳುತ್ತಿರುವ ಅಧ್ಭುತ ದೇಶ ಭಕ್ತಿ ಕಾರ್ಯಗಳು ಶ್ಲ್ಯಾಘನೀಯ ಎಂದು ಬಣ್ಣಿಸಿದರು.

ಅಮರ ಬಲಿದಾನದ ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸಿದ ನಂತರ ಪೂಜ್ಯರ ನೇತ್ರತ್ವದಲ್ಲಿ ದೇಶ ಭಕ್ತಿ ಯಾತ್ರೆಯು ಪುನಃ ಪ್ರಾರಂಭಗೊಂಡು ಹರಿಯಾಣಾ, ಮಧ್ಯಪ್ರದೇಶ, ಮಾಹಾರಾಷ್ಟ್ರ ರಾಜ್ಯ ಗಳ ಮೂಲಕ ಸಂಚರಿಸಿ ಇಂದು 28 ರಂದು ಬೆಳಗಿನಜಾವ ಬೀದರ ಹತ್ತಿರದ ಮಲ್ಕಾಪೂರ ರಸ್ತೆಯ ಶ್ರೀ ಭಾವಲಿಂಗ ಮಲ್ಲಿನಾಥ ಆಶ್ರಮಕ್ಕೆ ಆಗಮಿಸಿತು.

ಪೂಜ್ಯರು ಅಲ್ಲಿ ದೇಶ ಭಕ್ತಿ ಯಾತ್ರೆಯೊಂದಿಗೆ ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದ ಎಲ್ಲರಿಗೂ ಮಾಹಾ ಪ್ರಸಾದದ ವ್ಯವಸ್ಥೆ ಮಾಡಿದ್ದರು.
ನಂತರ ದೇಶ ಭಕ್ತಿ ಯಾತ್ರೆಯು ಪುನಃ ಪ್ರಾರಂಭಗೊಂಡು ಬೀದರ ನಗರದ ಶ್ರೀ ಬಸವೇಶ್ವರ ವ್ರುತ್ತ,ಡಾ!! ಅಂಬೇಡ್ಕರ್ ವ್ರುತ್ತ,ಮಡಿವಾಳ ಮಾಚಿದೇವರ ವ್ರುತ್ತ, ಗುರುದ್ವಾರ ಮುಖ್ಯ ಕಮಾನು ,ಶಿವನಗರ,ಪ್ರತಾಪ ನಗರ,ನೌಬಾದ ಮೂಲಕ ಸಂಚರಿಸಿ ಸಂಜೆ ಹೊತ್ತಿಗೆ ಭಾಲ್ಕಿ ರಸ್ತೆಯ ನರ್ಸರಿ ಯಲ್ಲಿದ್ದ ಶ್ರೀ ಔದುಂಬರ ಲಿಂಗ ಮಲ್ಲಿನಾಥ ಆಶ್ರಮಕ್ಕೆ ತಲುಪಿರುತ್ತದೆ.

ಬೀದರ ನಗರದಲ್ಲಿ ದೇಶ ಭಕ್ತಿ ಯಾತ್ರೆಯು ಹಾದು ಹೋಗುವಾಗ ಶ್ರೀ ನಾನಕ ಝೀರಾ ಸಾಹೇಬ ಗುರುದ್ವಾರ ಪ್ರಬಂಧಕ ಕಮೀಟಿ ವತಿಯಿಂದ ಸಿಖ್ ಸಮುದಾಯದ ಪ್ರಮುಖರಾದ ಸರದಾರ ರಾಜವಿಂದರಸಿಂಗ,ಸರದಾರ ತೇಜಪಾಲಸಿಂಗ,ಸರದಾರ ಕಮಲಸಿಂಗ ಹಾಗೂ ಇತರರು ದೆಶ ಭಕ್ತಿ ಯಾತ್ರೆಗೆ ಅದ್ದೂರಿಯಾಗಿ ಸ್ವಾಗತಿಸಿ ಪೂಜ್ಯರಿಗೆ ಶಾಲು ಹೂಗುಚ್ಛ ನೀಡಿ ದರ್ಶನ ಪಡೆದುಕೊಂಡರು.

ಅದರಂತೆ ಜೈ ಭಾರತ ಮಾತಾ ಸೇವಾ ಸಮಿತಿಯ ತೆಲಂಗಾಣ ರಾಜ್ಯ ಅಧ್ಯಕ್ಷ ರಾದ ಲದ್ದೆ ನಾಗರಾಜ್, ಕಾಂಗ್ರೆಸ್ ಮುಖಂಡರಾದ ಚಂದ್ರಾಸಿಂಗ, ಜನತಾದಳ ಮುಖಂಡರಾದ ಮಾರುತಿ ಭೌದ್ದೆ,ಜೈ.ಭಾ.ಮಾ.ಸೇ.ಸ.ಯ ಜಿಲ್ಲಾ ಅದ್ಯಕ್ಷರಾದ ನಾಗೇಶ್ ಕಡೆಮನಿ,ಜಿಲ್ಲಾ ಸಂಚಾಲಕರಾದ ಆಕಾಶ ಜನವಾಡಕರ, ಭಾಲ್ಕಿ ತಾಲೂಕಾ ಘಟಕದ ಅಧ್ಯಕ್ಷರಾದ ಪಪ್ಪು ಪಾಟೀಲ ಖಾನಾಪೂರ,ಮಾದಿಗ ದಂಡೋರ ಸಂಘಟನೆಯ ರಾಜ್ಯ ಮುಖಂಡರಾದ ಫರ್ನಾಂಡಿಸ್ ಹಿಪ್ಪಳಗಾಂವ, ಕಾಂಗ್ರೆಸ್ ಮುಖಂಡರಾದ ಜೇಮ್ಸ್ ಕೊಳಾರ,ಡಿ.ಸಿ.ಸಿ.ಬ್ಯಾಂಕನ ನಿವ್ರುತ್ತ ಜನರಲ್ ಮ್ಯಾನೇಜರರಾದ ಶೀನಿಜಪ್ಪಾ ಪತ್ರಿ , ಜೆಸ್ಕಾಂ ನಿವ್ರುತ್ತ ಅಧಿಕಾರಿಗಳಾದ ಅಡವೆಪ್ಪಾ ಹೂಗಾರ ಸೇರಿದಂತೆ ಅನೇಕರು ದೇಶ ಭಕ್ತಿ ಯಾತ್ರೆಗೆ ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಜೈ ಭಾರತ ಮಾತಾ ಸೇವಾ ಸಮಿತಿ ಯ ರಾಷ್ಟ್ರೀಯ ವಕ್ತಾರ ರಾದ ಶ್ರೀ ವೈಜಿನಾಥ ಝಳಕೀಯವರು “ಈ ದೇಶ ಭಕ್ತಿ ಯಾತ್ರೆಯು ಯಶಸ್ವಿಯಾಗಿ ಜರುಗಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸವ9ರಿಗೂ ಅನಂತ ಧನ್ಯವಾದಗಳನ್ನು ತಿಳಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago