ಬಿಸಿ ಬಿಸಿ ಸುದ್ದಿ

ಜನರಲ್ ಮೆರಿಟ್ ಹೊರತುಪಡಿಸಿ 371 ಜೆ ಮಿಸಲಾತಿ; ಶಶೀಲ್ ನಮೋಶಿ ಹೇಳಿಕೆ

ಕಲಬುರಗಿ: ನೇಮಕಾತಿ ಪ್ರಕ್ರಿಯೆಯಲ್ಲಿ ಸಾಮಾನ್ಯ ವರ್ಗ ಮತ್ತು ಮೆರಿಟ್ ಪಡೆದವರು ಮೊದಲು ಮೆರಿಟ್‍ನಲ್ಲಿ ಸ್ಥಾನ ನೀಡಬೇಕು. ಉಳಿದಂತೆ ವರ್ಟಿಕಲ್ ಮೀಸಲಾತಿ ಅನುಸರಿಸಿ ಉಳಿದವರಿಗೆ 371 (ಜೆ) ಅಡಿಯಲ್ಲಿ ಮೀಸಲು ಕಲ್ಪಿಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ ತಿಳಿಸಿದರು.

ಬಡ್ತಿ ನೀಡುವ ಪ್ರಕ್ರಿಯೆಯಲ್ಲಿಯೂ ಇದನ್ನು  ಅನುಸರಿಸಬೇಕು. ಅಲ್ಲದೆ ಕಲ್ಯಾಣ ಕರ್ನಾಟಕ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಶೇ.8 ರಷ್ಟು ಮೀಸಲಾತಿ ಕಲ್ಪಿಸಲು ಸಹ  ಸೂಚಿಸಲಾಗಿದೆ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದರಿಂದಾಗಿ ಸಾಕಷ್ಟು ಜನರಿಗೆ  ಹೆಚ್ಚಿನ ಲಾಭ ಸಿಗಲಿದೆ.

ಸರ್ಕಾರವು ಈ ಕುರಿತು 24-3-2023 ರಂದೇ ಆದೇಶ ಹೊರಡಿಸಿದೆ. ಇದಕ್ಕೂ ಮುನ್ನ  1-2-2023 ರಂದು ಸುತ್ತೋಲೆ ಹೊರಡಿಸಿ, ಗೊಂದಲ ನಿವಾರಣೆ ಮಾಡಲಾಗಿದೆ. ಅಲ್ಲದೆ ಈ ಹಿಂದೆ 6-6-2020 ರಂದು ಹೊರಡಿಸಿದ ಸುತ್ತೋಲೆಯನ್ನು ಹಿಂದಕ್ಕೆ ಪಡೆದುಕೊಂಡಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೆಎಟಿ ನ್ಯಾಯಾಧೀಶರಾದ ಕೆ.ಭಕ್ತವತ್ಸಲಂ ಅವರಿದ್ದ ನ್ಯಾಯಪೀಠದ  ಆದೇಶದಂತೆ ಸರ್ಕಾರವು ಪರಿಷ್ಕರಣೆ ಮಾಡಿ ಹೊಸ  ಆದೇಶ ಹೊರಡಿಸಿದೆ. ಈ ಮೊದಲು ಕಲ್ಯಾಣ ಕರ್ನಾಟಕದವರು ಆ ಭಾಗದಲ್ಲಿ ಮತ್ತು ನಿಗದಿತ ಮೀಸಲಾತಿ ಪಡೆದುಕೊಳ್ಳಲು ಅವಕಾಶವಿತ್ತು. ಆದರೆ, ಮೆರಿಟ್ ಪಡೆದವರಿಗೂ ಅದೇ ಅನ್ವಯ ಆಗುತ್ತಿತ್ತು. ಅವರು ಜನರಲ್ ಮೆರಿಟ್ ಕೋಟಾದಲ್ಲಿ ಸ್ಥಾನ ನೀಡದೆ, 371 ಜೆ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿತ್ತು.

ಆದರೆ, ಇನ್ಮುಂದೆ ಯಾವ ಮೀಸಲು ಪಡೆಯಬೇಕು ಎಂಬುದನ್ನು ಅಜಿಯಲ್ಲಿ ಕೇಳುವಂತಿಲ್ಲ. ಬದಲಿಗೆ ಎಸ್ಸಿ ಮೀಸಲಾತಿ ಪಡೆಯುವರು ಹೆಚ್ಚಿನ ಅಂಕ ಪಡೆದು ಮೆರಿಟ್ ಕೋಟಾದಲ್ಲಿ ಬರುವಂತೆ, ಈಗ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಲಾಭ ಸಿಗಲಿದೆ. ಇದರಿಂದಾಗಿ ಕಡಿಮೆ ಅಂಕ ಪಡೆದವರಿಗೆ ಮೀಸಲಾತಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಪದವಿ ಕಾಲೇಜು ಶಿಕ್ಷಕರ ನೇಮಕ ಪಟ್ಟಿಯ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸಿ ಮೊರೆ ಹೋಗಿದ್ದಾಗ,  ಈ ಆದೇಶ ಬಂದಿರುವುದರಿಂದ 1218 ಶಿಕ್ಷಕರ ಪಟ್ಟಿ ಮರು ಪರಿಷ್ಕರಣೆ  ಆಗುವುದರಿಂದ ಅಂದಾಜು ನೂರು ಅಭ್ಯರ್ಥಿಗಳು ಹೆಚ್ಚುವರಿಯಾಗಿ ನೇಮಕಗೊಳ್ಳಲಿದ್ದಾರೆ ಎಂದು ನಮೋಶಿ ವಿವರಿಸಿದರು.

ಮೀಸಲಾತಿ ನಿರ್ಧಾರ ಸ್ವಾಗತ: ದಲಿತ ಸಮುದಾಯದವರಿಗೆ ಒಳಮೀಸಲಾತಿ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕೈಗೊಂಡಿರುವ ನಿರ್ಧಾರ ಸೂಕ್ತವಾಗಿದೆ. ಇದನ್ನು ಎಲ್ಲರು ಸ್ವಾಗಿಸಿದ್ದಾರೆ ಎಂದು ನಮೋಶಿ ತಿಳಿಸಿದರು. ಇದರಿಂದಾಗಿ ಎಲ್ಲ ದಲಿತ ಸಮುದಾಯದವರಿಗೆ ಅನುವು ಆಗಲಿದೆ ಎಂದು ಹೇಳಿದರು. ಹೀಗಾಗಿ  ಸುಳ್ಳು ಹೇಳುವವರ ಬಗ್ಗೆ ಗಮನ ನೀಡಬಾರದು ಎಂದು ಮನವಿ ಮಾಡಿದರು.

ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದÉೀವಾಡಗಿ, ಮುಖಂಡರಾದ ಡಾ.ಶಂಭುಲಿಂಗ ಬಳಬಟ್ಟಿ ಇತರರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

24 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

24 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

24 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago