ಬಿಸಿ ಬಿಸಿ ಸುದ್ದಿ

ನೌಕರರ ಸಂಘದಿಂದ ಏ.3ಕ್ಕೆ ಮತದಾನ ಜಾಗೃತಿಯ ಬೈಕ್ Rally

  • ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ರಾಜು ಲೇಂಗಟಿ ಮನವಿ

ಕಲಬುರಗಿ.ಏ.1: ಸಾರ್ವತ್ರಿಕ ವಿದಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವಂತೆ ಮತದಾರರಲ್ಲಿ ಜಾಗೃತಿ ಮೂಡಿಸಲು ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 3ಕ್ಕೆ ಕಲಬುರಗಿ ನಗರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು, ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಅವರು ಮನವಿ ಮಾಡಿದ್ದಾರೆ.

ಅಂದು ಸಾಯಂಕಾಲ 5 ಗಂಟೆಗೆ ಸರ್ದಾರ ವಲ್ಲಭಭಾಯ್ ಪಟೇಲ್ ವೃತ್ತದಿಂದ ಆರಂಭವಾಗುವ ಬೈಕ್ ರ್ಯಾಲಿಗೆ ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರಕರ್, ಜಿಲ್ಲಾ ಪಂಚಾಯತ್ ಸಿ.ಇ.ಓ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಗಿರೀಶ್ ಡಿ. ಬದೋಲೆ, ನಗರ ಪೋಲೀಸ್ ಆಯುಕ್ತ ಚೇತನ್ ಆರ್. ಎಸ್.ಪಿ. ಇಶಾ ಪಂತ್ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಅವರು ಹಸಿರು ನಿಶಾನೆ ತೋರುವರು.

ಬೈಕ್ ರ್ಯಾಲಿ ಎಸ್.ವಿ.ಪಿ. ವೃತ್ತದಿಂದ ಆರಂಭವಾಗಿ ಜಗತ್ ವೃತ್ತ- ಸೂಪರ್ ಮಾರ್ಕೆಟ್-ಗಂಜ್ ಪ್ರದೇಶದ ನಗರೇಶ್ವರ ಶಾಲೆ ಮಾರ್ಗವಾಗಿ ಚಡ್ಡಿ ಹೋಟೆಲ್-ಮುಸ್ಲಿಂ ಚೌಕ್-ಸಾತ್ ಗುಂಬಜ್-ಸಂತ್ರಾಸವಾಡಿ-ಎಸ್.ಟಿ.ಬಿ.ಟಿ. ಕ್ರಾಸ್ ಮಾರ್ಗವಾಗಿ ಜಗತ್ ವೃತ್ತಕ್ಕೆ ಮರಳಿ ಕೊನೆಗೊಳ್ಳಲಿದೆ.

ಪ್ರಜಾಪ್ರಭುತ್ವದಲ್ಲಿ ಮತದಾನ ಅತ್ಯಂತ ಪವಿತ್ರ ಕಾರ್ಯ. ಯಾವುದೇ ಆಸೆ, ಆಮೀಷಕ್ಕೆ ಒಳಗಾಗದೇ ನಿರ್ಭೀತಿಯಿಂದ ಬರುವಂತಹ ವಿಧಾನಸಭೆ ಚುನಾವಣೆಯ ಮತದಾನ ದಿನದಂದು ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸುವಂತೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸುಶಿಕ್ಷಿತ ನೌಕರ ಬಂಧುಗಳು ರ್ಯಾಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಕೋರಿದ್ದಾರೆ.

emedialine

Recent Posts

ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ

ಶಹಾಬಾದ: ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ಖುಷಿಯಿಂದ ಆಟವಾಡಿ ಎಂದು ತಹಸೀಲ್ದಾರ ಜಗದೀಶ ಚೌರ್ ಹೇಳಿದರು. ಅವರು…

10 hours ago

ಪಾಲಿಕೆ ಸದಸ್ಯ ಸಚಿನ್ ಶಿರವಾಳಗೆ ಭೀಮನಗೌಡ ಪರಗೊಂಡ ಸನ್ಮಾನ

ಕಲಬುರಗಿ: ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಮಹಾನಗರದ ವಿದ್ಯಾನಗರ ವಾರ್ಡ್ ದ ಮಹಾನಗರ ಪಾಲಿಕೆಯ ಸದಸ್ಯ ಆಗಿರುವ ಸಚಿನ್ ಶಿರವಾಳ ಅವರು…

12 hours ago

ಕಲಬುರಗಿ ನೂತನ ಪೊಲೀಸ್ ಆಯುಕ್ತರಾಗಿ ಡಾ. ಶರಣಪ್ಪ ಎಸ್.ಡಿ ನೇಮಕ

ಕಲಬುರಗಿ: 2009 ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಡಾ. ಶರಣಪ್ಪ ಎಸ್.ಡಿ ಅವರು ಕಲಬುರಗಿ ನೂತನ ಪೊಲೀಸ್ ಆಯುಕ್ತರಾಗಿ ನಿಯೋಕ್ತಗೊಂಡಿದ್ದಾರೆ.…

13 hours ago

ಪ್ರಾಧ್ಯಾಪಕಿ ಡಾ.ಜಯಶ್ರೀ ಅಗರಖೇಡ್ ಗೆ ಪೆÇ್ರ.ಸತೀಶ್ ಧವನ್ ಪ್ರಶಸ್ತಿ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ ಕಾಲೇಜಿನ ಕಂಪ್ಯೂಟರ್ ಸಾಯಿನ್ಸ್ ಇಂಜಿನಿಯರಿಂಗ (ಸಿಎಸ್‍ಇ) ವಿಭಾಗದ…

15 hours ago

ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ: ಎರಡು ಪದಕಗೆದ್ದ ಲೋಕೇಶ್ ಪೂಜಾರ್

ಕಲಬುರಗಿ: ರಾಜ್ಯಮಟ್ಟದ ಸರ್ಕಾರಿ ನೌಕರರಕ್ರೀಡಾಕೂಟದಈಜು ಸ್ಪರ್ಧೆಯಲ್ಲಿ ಕಲಬುರಗಿಯ ವಿಭಾಗೀಯಆಹಾರ ಪ್ರಯೋಗಾಲಯದ ಹಿರಿಯಆಹಾರ ವಿಶ್ಲೇಷಣಅಧಿಕಾರಿ ಲೋಕೇಶ್ ಪೂಜಾರ್‍ಅವರುಉತ್ತಮ ಪ್ರದರ್ಶನ ನೀಡಿಒಂದು ಬಂಗಾರ…

15 hours ago

ತೊಗರಿ ಬೆಳೆಯಲ್ಲಿ ಗೊಣ್ಣೆ ಹುಳದ ಭಾದೆ ಹತೋಟಿಗೆ ಡಾ. ಮಲ್ಲಪ್ಪ ಅವರಿಂದ ಸಲಹೆ

ಕಲಬುರಗಿ: ತಾಲೂಕಿನಲ್ಲಿ ತೊಗರಿ ಬೆಳೆಗೆ ಅಲ್ಲಲ್ಲಿ ಗೊಣ್ಣೆ ಹುಳದ ಭಾದೆ ಕಂಡು ಬಂದಿದ್ದು ರೈತಾಪಿ ಜನರು ಹತೋಟಿಗೆ ಕೃಷಿ ವಿಜ್ಞಾನ…

15 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420