ಬಿಸಿ ಬಿಸಿ ಸುದ್ದಿ

ಸೀತನೂರ ಗ್ಯಾಲರಿ ಲೋಕಾರ್ಪಣೆ

ಕಲಬುರಗಿ: ನಗರದ ಸೀತನೂರ ಸೀತನೂರ ಆರ್ಟ ಗ್ಯಾಲರಿ ಈಚೆಗೆ ಲೋಕಾರ್ಪಣೆಗೊಂಡಿತು. ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದ ಕರ್ನಾಟಕ ಲಲಿಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ ಎಂ.ಎಸ್.ಮೂರ್ತಿ ಮಾತನಾಡಿ, ಕಲಾವಿದರೂ ಕುಟುಂಬದ ಕಡೆಗೆ ಗಮನ ಹರಿಸದೆ ಉತ್ತಮ ಚಿತ್ರಗಳನ್ನು ಬಿಡಿಸುತ್ತಾರೆ. ಒಂದು ಚಿತ್ರ ಬಿಡಿಸಲು ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ಚಿತ್ರಕಲಾವಿದರ ಶ್ರಮಕ್ಕೆ ತಕ್ಕಂತೆ ಫಲ ಸಿಗುತ್ತಿಲ್ಲ ಕಳವಳ ವ್ಯಕ್ತಪಡಿಸಿದರು.

ಆನೆಗುಂದಿ ಮಹಾ ಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮೀಜಿ, ಬ್ರಹ್ಮಪೂರ ಏಕದಂಡಿ ಮಠದ ಶ್ರೀ ಸುರೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಜಯನಗರ ಸಾಮ್ರಾಜ್ಯದ ವಂಶಸ್ಥ ಶ್ರೀಕೃಷ್ಣದೇವರಾಯಲು ಅವರು ಗ್ಯಾಲರಿ ಲೋಕಾರ್ಪಣೆ ಮಾಡಿದರು.
ಅಂತರಾಷ್ಟ್ರೀಯ ಕಲಾವಿದ ವಾಸುದೇವ ಕಾಮತ, ರಾಘವೇಂದ್ರ ಮೈಲಾಪುರ ಮೋಹನ ಸೀತನೂರ ವೇದಿಕೆ ಮೇಲೆ ಇದ್ದರು. ನಾಡೋಜ ಡಾ ಜೆ.ಎಸ್.ಖಂಡೇರಾವ ಅಧ್ಯಕ್ಷತೆವಹಿದ್ದರು. ಶಾಂತಾ ಭೀಮಸೇನರಾವ ಹಾಗೂ ಡಾ ಅಶೋಕ ಶಟಕಾರ ಕಾರ್ಯಕ್ರಮ ನಿರೂಪಿಸಿದರು.

ಸೀತನೂರ ಪರಿವಾರದವರು ನಗರದ ಹಿರಿಯ ಕಿರಿಯ ಚಿತ್ರಕಲಾವಿದರು,ಸಾಹಿತಿಗಳು, ಗಣ್ಯರು ಮುಂತಾದವರು ಇದ್ದರು.
ಮೋಹನ ಸೀತನೂರ ಅವರ ಕಲಾಯಾನ ಹಿನ್ನೋಟ ಪ್ರದರ್ಶನವು ಏಪ್ರಿಲ್4 ರವರೆಗೆ ಬೆಳ್ಳಗ್ಗೆ 11-00ಗಂಟೆಯಿಂದ ಸಂಜೆ 7-00ಗಂಟೆವರೆಗೆ ಸಾರ್ವಜಿಕರು ಕಲಾಸ್ತಕರು ವಿಕ್ಷೀಸಬಹುದು.

emedialine

Recent Posts

ಅನರ್ಹ ಬಿ.ಪಿ.ಎಲ್ ಪಡಿತರ ಚೀಟಿ ಪತ್ತೆ ಹಚ್ಚಿ: ಅಕ್ರಮ‌ ಮದ್ಯ ಮಾರಾಟಕ್ಕೆ ಬ್ರೆಕ್ ಹಾಕಿ| ಡಿ.ಸಿ. ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಉಳ್ಳವರು ಸಹ ಸರ್ಕಾರಿ ಸೌಲಭ್ಯ ಪಡೆಯಲು ಬಿ‌.ಪಿ‌.ಎಲ್ ಪಡಿತರ ಚೀಟಿ ಪಡೆದಿರುವ ಸಾಧ್ಯತೆ ಇದ್ದು, ಕೂಡಲೆ ಇಂತಹ ಅನರ್ಹ…

6 hours ago

ಕುಂಬಾರ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ನೀಡಲು ಒತ್ತಾಯ

ಶಹಾಬಾದ: ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಕುಂಬಾರ ಸಮಾಜದ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ಅನುದಾನ ನೀಡುವ ಮೂಲಕ ಕಲಬುರಗಿ…

7 hours ago

ಪರಿಸರಸ್ನೇಹಿ ಪರ್ಯಾಯ ಇಂಧನಗಳ ಬಳಕೆ ಅಗತ್ಯ

ಶಹಬಾದ: ಪರಿಸರ ಮಾಲಿನ್ಯ ಉಂಟು ಮಾಡುವ ಇಂಧನಗಳ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸ್ನೇಹಿಯಾಗುವ ಪರ್ಯಾಯ ಇಂಧನಗಳ ಬಳಕೆ ಮಾಡಿದಲ್ಲಿ…

7 hours ago

ಕೊಲುವೆನೆಂಬ ಭಾಷೆ ದೇವನದಾದರೆ ಗೆಲುವೆನೆಂಬ ಭಾಷೆ ಭಕ್ತನದಾಗಬೇಕು

ಬಸವಾದಿ ಶರಣರ ರಚನೆಯ ವಚನ ಎನ್ನುವುದು ಬಹಳ ಮೌಲಿಕವಾದ ನುಡಿ. 'ವ' ಎಂಬ ಸೂತ್ರವನ್ನು ಬಿಡಿಸುವುದಾದರೆ, ವ ಎಂಬ ಮೊದಲ…

7 hours ago

ಮೋಹರಂ ಭಾವೈಕ್ಯತೆಯ ಸಂಕೇತದ ಉತ್ಸವ

ಕಲಬುರಗಿ: ಭಾರತ ಅನೇಕ ಜಾತಿ, ಧರ್ಮಗಳಿಂದ ಕೂಡಿದ್ದ ದೇಶವಾಗಿದ್ದು, ಹಬ್ಬ, ಜಾತ್ರೆ, ಉತ್ಸವಗಳು ಪರಸ್ಪರ ಬೆಸೆಯುತ್ತವೆ. ತ್ಯಾಗ, ಭಾವೈಕ್ಯತೆಯ ಸಂಕೇತವಾಗಿ…

7 hours ago

ತಾಜಸುಲ್ತಾನಪುರ: ಶಾಲಾ ಸಂಸತ್ತು ರಚನೆ

ಕಲಬುರಗಿ: ನಗರ ಹೊರವಲಯದ ತಾಜಸುಲ್ತಾನಪುರ ಗ್ರಾಮದ ಕೆಎಸ್ ಆರ್ ಪಿ ಸರಕಾರ ಪ್ರೌಢ ಶಾಲೆ ಕೆ. ಎಸ್. ಆರ್. ಪಿ…

8 hours ago