ಕಲಬುರಗಿ: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಅಂಗವಾಗಿ ಸೋಮವಾರ ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಗಂಜ್ ಪ್ರದೇಶದ ನಗರೇಶ್ವರ ಶಾಲೆ ವರೆಗೆ ಆಯೋಜಿಸಿದ ಬೈಕ್ ರ್ಯಾಲಿನಲ್ಲಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಬುಲೆಟ್ ಓಡಿಸುವ ಮೂಲಕ ಗಮನ ಸೆಳೆದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ವೀಪ್ ಸಮಿತಿ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಸಂಜೆ ಕಲಬುರಗಿ ನಗರದಲ್ಲಿ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು.
ರ್ಯಾಲಿಗೆ ಚಾಲನೆ ನೀಡಿದ ನಂತರ ಯಶವಂತ ವಿ. ಗುರುಕರ್ ಅವರು ಬುಲೆಟ್ ಹತ್ತಿದಲ್ಲದೆ ಹಿಂಬದಿ ಜಿ.ಪಂ. ಸಿ.ಇ.ಓ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಗಿರೀಶ್ ಡಿ. ಬದೋಲೆ ಅವರನ್ನು ಕೂರಿಸಿಕೊಂಡು ರೈಡ್‍ಗೆ ಇಳಿದರು. ಎಸ್.ಪಿ. ಇಶಾ ಪಂತ್ ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಅವರು ಸ್ಕೂಟಿ ಓಡಿಸುವ ಮೂಲಕ ಡಿ.ಸಿ.ಗೆ ಸಾಥ್ ನೀಡಿದರು. ರ್ಯಾಲಿಯು ಗಂಜ್ ಪ್ರದೇಶದ ನಗರೇಶ್ವರ ಶಾಲೆ ವರೆಗೆ ಸಾಗಿ ಮರಳಿ ಜಗತ್ ವೃತ್ತಕ್ಕೆ ಬಂದು ಸಂಪನ್ನಗೊಂಡಿತ್ತು.
ಓಟ್ ಮಾಡುವಂತೆ ಡಿ.ಸಿ. ಮನವಿ: ಜಗತ್ ವೃತ್ತದಲ್ಲಿ ನೌಕರರಿಗೆ ಮತದಾನ ಪ್ರತಿಜ್ಞೆ ಬೋಧಿಸಿದ ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಅವರು, ಕಲಬುರಗಿ ನಗರದಲ್ಲಿ ಮತದಾನ ಪ್ರಮಾಣ ಶೇ.49 ಇದ್ದು, ಇಬ್ಬರಲ್ಲಿ ಒಬ್ಬರು ಮಾತ್ರ ಮತದಾನ ಮಾಡುತ್ತಿದ್ದಾರೆ. ಸದೃಢ ಭಾರತಕ್ಕೆ ಸಂವಿಧಾನಬದ್ದ ಹಕ್ಕಾಗಿರುವ ಮತವನ್ನು ಕಡ್ಡಾಯವಾಗಿ ಚಲಾಯಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ ಮಾತನಾಡಿ, ಈ ಬಾರಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಶೇ.75ಕ್ಕಿಂತ ಹೆಚ್ಚಿಸುವ ಗುರಿ ಹೊಂದಿದ್ದು, ಇದಕ್ಕಾಗಿ ಸ್ವೀಪ್ ಚಟುವಟಿಕೆ ತೀವ್ರಗೊಳಿಸಿದೆ. ಮೇ 10 ರಂದು ನಡೆಯುವ ಮತದಾನ ದಿನದಂದು ನಗರ ವಾಸಿಗಳು ತಪ್ಪದೆ ಮತ ಚಲಾಯಿಸಬೇಕು. ಮುಂದೆ ತಾಲೂಕಾ ಹಂತದಲ್ಲಿ ಸ್ವೀಪ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಡಿ.ಡಿ.ಪಿ.ಐ ಸಕ್ರೆಪ್ಪಗೌಡ ಬಿರಾದಾರ, ಡಿ.ಎಚ್.ಓ ಡಾ.ರಾಜಶೇಖರ ಮಾಲಿ, ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಆರ್.ಸಿ.ಹೆಚ್.ಓ ಡಾ.ಪ್ರಭುಲಿಂಗ ಮಾನಕರ್, ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಸಿದ್ದಲಿಂಗಯ್ಯ ಮಠಪತಿ, ಸತೀμï ಸಜ್ಜನ್, ಬಾಬು ಮೌರ್ಯ, ನಾಗೇಂದ್ರಪ್ಪ ಅವರಾದಿ, ರವಿ ಮಿರಸ್ಕರ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ನೌಕರರು, ಶಿಕ್ಷಕರು ಭಾಗವಹಿಸಿದ್ದರು. ರ್ಯಾಲಿನಲ್ಲಿ ಭಾಗವಹಿಸಿದವರಿಗೆ ಟಿ.ಶರ್ಟ್, ಕ್ಯಾಪ್ ವಿತರಿಸಲಾಯಿತು.
ಕಲಬುರಗಿ: ಮಕ್ಕಳ ದಿನಾಚರಣೆ ನಿಮಿತ್ತ ಇಂದು ಸಂಜು ನಗರದಲ್ಲಿರುವ ಕಲಿಕಾ ಕೇಂದ್ರದಲ್ಲಿ ಮನ್ನೂರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಫಾರೂಕ್ ಮನ್ನೂರ್…
ಕಲಬುರಗಿ: ಜಾನಪದ ಸಾಹಿತ್ಯ ಸಂಸ್ಕೃತಿ ಹಾಗೂ ಜಾನಪದ ಕಲೆ ಪ್ರಕಾರಗಳಲ್ಲಿ ಮಾನವಿಯ ಮೌಲ್ಯ ಅಡಕವಾಗಿದೆ ಎಂದು ಮಹಾಪೌರರಾದ ಯಲ್ಲಪ್ಪ ನಾಯ್ಕೊಡಿ…
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಲ್ಯಾಣ ಕರ್ನಾಟಕದ ಜನರ ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಾ ಬಂದಿದ್ದಾರೆ, ಅದರ ಮುಂದುವರೆದ ಭಾಗವಾಗಿ…
ಕಲಬುರಗಿ: ಕೆ ಪಿ ಆರ್ ಸಕ್ಕರೆ ಕಾರ್ಖಾನೆಯಿಂದ ಹೊರಬಿಡುತ್ತಿರುವ ಕಲುಷಿತ ನೀರು ಮತ್ತು ಕಲುಷಿತ ಗಾಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರ ಜಮೀನುಗಳಿಗೆ…
ಕಲಬುರಗಿ; ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ’ಗೆ ವಿದ್ಯಾರಶ್ಮಿ…
ವಾಡಿ: ಮಾಜಿ ಪ್ರಧಾನಿ ಪಂಡೀತ್ ಜವಾಹರಲಾಲ್ ನೆಹರು ಅವರ ಜನ್ಮದಿನ ಪ್ರಯುಕ್ತ ಪಟ್ಟಣದ ವಿವಿಧ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.…